28.1 C
Mumbai
July 21, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ ಸಂಪನ್ನ







ಚಿತ್ರ : ಧನಂಜಯ್ ಪೂಜಾರಿ

ಡೊಂಬಿವಲಿ ಅಜ್ಜೆಗಾಂವ್ ತಿಲಕ ಕಾಲೇಜ ಹತ್ತಿರದ
ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವವು 29-02-2024ನೇ ಗುರುವಾರ ಸಂಜೆ ಯಿಂದ ತಾ. 02.03.2024ರ ಶನಿವಾರ ರಾತ್ರಿ ಯ ತನಕ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಕಾಶ ಭಟ್ ಕಾನಂಗಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳೊಂದಿಗೆ ಶ್ರದ್ಧೆ ಭಕ್ತಿಯಿಂದ ಜರಗಿತು.

ಫೆಬ್ರವರಿ 29 ರ ಗುರುವಾರ ಸಂಜೆ ವಾಸ್ತುಹೋಮ, ವಾಸ್ತುಪೂಜೆ, ಪ್ರಕಾರ ಬಲಿ, ಬಿಂಭ ಶುದ್ಧಿ ನಡೆಯಿತು.

ಮಾರ್ಚ್ 1 ರ ಶುಕ್ರವಾರ ಬೆಳಿಗ್ಗೆ ತೋರಣ ಮುಹೂರ್ತ, ಪುಣ್ಯಾಹವಾಚನ, ನವಕ ಪ್ರದಾನ ಹೋಮ, ಗಣಹೋಮ, ಬಿಂಬ ಶುದ್ಧಿ ನಂತರ ಮಹಾಗಣಪತಿ, ಜೈ ಭವಾನಿ ಹಾಗೂ ಶನೀಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ ನಡೆದು, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ನವಕ ಕಲಶಾಭಿಷೇಕ ಹಾಗೂ ಅಷ್ಟಬಂಧ, ನಡೆಯಿತು.
ನಂತರ ದೇವರಿಗೆ ಪ್ರಭಾವಳಿ ಅರ್ಪಣೆ, ಅಲಂಕಾರ ಪೂಜೆ, ಅಷ್ಟೋತ್ತರ ಸೇವೆ ಹಾಗೂ ಮಹಾ ಮಂಗಳಾರತಿ ನಡೆದು ತೀರ್ಥ ಪ್ರಸಾದ ತದನಂತರ ಮಹಾಪ್ರಸಾದ ನಡೆಯಿತು.

ಮಧ್ಯಾಹ್ನ ದ ನಂತರ ಶ್ರೀ ಜೈ ಭವಾನಿ ಶನೀಶ್ವರ ಮಂದಿರ,ಡೊಂಬಿವಲಿ (ಪೂ.), ಶ್ರೀ ಭ್ರಮರಾಂಬಿಕೆ ಭಜನಾ ಮಂಡಳಿ, ಡೊಂಬಿವಲಿ (ಪೂ.), ಶ್ರೀ ರಾಧಾಕೃಷ್ಣ ಮತ್ತು ಶನೀಶ್ವರ ಮಂದಿರ, ಡೊಂಬಿವಲಿ (ಪ.), ಶ್ರೀ ಮಹಾವಿಷ್ಣು ಮಂದಿರ, ಸಂಚಾಲಕರು ಮುಂಬ್ರಾ ಮಿತ್ರ ಭಜನಾ ಮಂಡಳಿ, ಡೊಂಬಿವಲಿ (ಪ.) ಇವರಿಂದ ಭಜನೆ ನಡೆಯಿತು.

ಸಂಜೆ ಮಹಾ ರಂಗಪೂಜೆ ನಡೆಯಿತು. ನಂತರ ರಾತ್ರಿ ಮಂದಿರದ ಅಧ್ಯಕ್ಷರಾದ ರವಿ ಸುವರ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮಕ್ಕೆ ವೇದಿಕೆಯ ಗಣ್ಯರು ದೀಪ ಪ್ರಜ್ವಲಿಸಿ ಚಾಲನೆ ನೀಡಿದರು.

ಪ್ರಧಾನ ಅರ್ಚಕರಾದ ಪುರೋಹಿತ ಪ್ರಕಾಶ್ ಭಟ್ ಕಾನಂಗಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಈ ಸಂದರ್ಭದಲ್ಲಿ ಮಂದಿರದ ಕಾರ್ಯದಲ್ಲಿ ಅವಿರತ ಶ್ರಮ ವಹಿಸಿದ್ದ ಸಚಿನ್ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಹಾಗೂ ಮಂದಿರ ನಿರ್ಮಾಣಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಕರ್ನಾಟಕ ಸಂಘ ಡೊಂಬಿವಲಿಯ ಕಾರ್ಯಾಧ್ಯಕ್ಷರಾದ ದಿವಾಕರ್ ಶೆಟ್ಟಿ ಇಂದ್ರಾಲಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಜೊತೆ ಕಾರ್ಯದರ್ಶಿ ರವಿ ಸನಿಲ್, ಮಂದಿರದ ಜಾಗದ ಮಾಲಕರಾದ ಸಿದ್ದೇಶ್ ಪಾಟೀಲ್, ಸಂಧರ್ಬೋಚಿತವಾಗಿ ಮಾತನಾಡಿದರು.

ಕರ್ನಾಟಕ ಸಂಘ ಡೊಂಬಿವಲಿ ವಚನಾಲಯ ಸಮಿತಿಯ ಕಾರ್ಯಾಧ್ಯಕ್ಷ ರಾಜೀವ್ ಭಂಡಾರಿ, ಬಿಲ್ಲವರ ಅಸೋಸಿಯೇಷನ್ ಡೊಂಬಿವಲಿ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷ ಚಂದ್ರಹಾಸ್ ಪಾಲನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಧ್ಯಕ್ಷ ರವಿ ಸುವರ್ಣ ಅಧ್ಯಕ್ಷೀಯ ನುಡಿಗಳನ್ನಾಡುತ್ತ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೋ ಧನ್ಯವಾದ ಸಮರ್ಪಿಸಿದರು.

ಮೊದಲಿಗೆ ಆಶಾ ರವಿ.ಸುವರ್ಣ ಪ್ರಾರ್ಥನೆ ಗೈದರೆ, ಸಮಾಜ ಸೇವಕ, ಡೊಂಬಿವಲಿಯ ಮುತ್ತು ವಸಂತ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು, ಸಚಿನ್ ಪೂಜಾರಿ ಫಲಿಮಾರು ಸಹಕರಿಸಿದರು.

ಸಾವಿರಾರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಅನ್ನ ಸಂತರ್ಪಣೆ ಯಲ್ಲಿ ಪಾಲ್ಗೊಂಡರು.

ಮಾರ್ಚ 2 ರ ಶನಿವಾರ ಬೆಳಿಗ್ಗೆ ಪ್ರಾತಃಕಾಲ ಪೂಜೆ, ಅಲಂಕಾರ ಪೂಜೆ ನಡೆದು ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ನಂತರ
ಮಹಾ ಮಂಗಳಾರತಿ ನಡೆದು, ತೀರ್ಥಪ್ರಸಾದ ವಿತರಿಸಲಾಯಿತು.

ಸಚಿವ ರವೀಂದ್ರ ಚವ್ಹಾಣ್, ಭರತ್ ಬ್ಯಾಂಕಿನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ ಸುವರ್ಣ, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರಾದ ಆನಂದ್ ಶೆಟ್ಟಿ ಎಕ್ಕಾರು, ಮತ್ತಿತರ ಗಣ್ಯರು, ವಿವಿಧ ಸಂಘಟನೆಗಳ ಮುಖಂಡರು ತೀರ್ಥ ಪ್ರಸಾದ ಸ್ವೀಕರಿಸಿದರು.

ಮಧ್ಯಾಹ್ನ ಶ್ರೀ ಶನಿದೇವರ ಕಲಶ ಪ್ರತಿಷ್ಠೆ ನಡೆದು ಸಾಮೂಹಿಕ ಶನೀಶ್ವರ ಗ್ರಂಥ ಪಾರಾಯಣ ಪೂಜೆ ಯಕ್ಷಗಾನ ತಾಳಮದ್ದಳೆ ಶೈಲಿಯಲ್ಲಿ ನಡೆಯಿತು.

ನಗರದ ಹೆಸರಾಂತ ವಾಚಕರು, ಅರ್ಥಧಾರಿಗಳು, ಭಾಗವತರು, ಹಿಮ್ಮೇಳ ಕಲಾವಿದರು ಗ್ರಂಥ ಪ್ರಯಾಣದಲ್ಲಿ ಪಾಲ್ಗೊಂಡರು.

ನಂತರ ಮಹಾ ಮಂಗಳಾರತಿ ನೆರವೇರಿತು.

ರಾಜಕೀಯ ನೇತಾರರು, ಉದ್ಯಮಿಗಳು, ಸಮಾಜ ಸೇವಕರು, ಹಾಗೂಸಾವಿರಾರು ಭಕ್ತರು ತೀರ್ಥ ಪ್ರಸಾದ ಸ್ವೀಕರಿಸಿ ಮಹಾ ಪ್ರಸಾದದಲ್ಲಿ ಸಹಬಾಗಿಗಳಾದರು.

ಎಲ್ಲಾ ಕಾರ್ಯಕ್ರಮ ಗಳು ಯಶಸ್ವಿಯಾಗಿ ನೆರವೇರುವಲ್ಲಿ
ಮಂದಿರದ ಅಧ್ಯಕ್ಷರಾದ ರವಿ ಎಂ.ಸುವರ್ಣ, ಕಾರ್ಯದರ್ಶಿ ಸೂರಜ್ ಡಿ. ಸಪಲಿಗ ಕೋಶಾಧಿಕಾರಿ ರಂಜಿತ್ ಕೆ. ಶೆಟ್ಟಿ , ಪ್ರಧಾನ ಅರ್ಚಕರಾದ ಪ್ರಕಾಶ್ ಭಟ್ ಕಾನಂಗಿ, ಕಾರ್ಯಕಾರಿ ಸಮಿತಿಯ ಸದಸ್ಯರು, ಸರ್ವ ಸದಸ್ಯರು, ಮಹಿಳಾ ವಿಭಾಗ ಮತ್ತು ಯುವವಿಭಾಗದ ಸದಸ್ಯರು ಅಭಿನಂದನಾರ್ಹರು.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ – ವಿಜೃಂಭಣೆಯಿಂದ ಜರಗಿದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170ನೇ ಜಯಂತ್ಯುತ್ಸವ

Mumbai News Desk

ಮೀರಾ ರೋಡ್ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಭಕ್ತಿ ಸಡಗರದ  ಶ್ರೀ  ಸಾರ್ವಜನಿಕ ಸತ್ಯ ನಾರಾಯಣ ಮಹಾಪೂಜೆ. ಸಂಪನ್ನ

Mumbai News Desk

ಎಸ್ ಎಸ್ ಸಿ ಪರೀಕ್ಷೆಯಲ್ಲಿ ದಿಶಾ ಬಂಗೇರ ಗೆ ಶೇ. 94.60 ಅಂಕ.

Mumbai News Desk

ಬಂಟರ ಸಂಘ ಮುಂಬಯಿಯ ಡೊಂಬಿವಲಿ ಪ್ರಾದೇಶಿಕ ಸಮೀತಿಯ ಮಹಿಳಾ ವಿಭಾಗದ ವತಿಯಿಂದ ಅರಷಿಣ ಕುಂಕುಮ ಹಾಗೂ ಆರೋಗ್ಯಕುರಿತು ವಿಚಾರ ಸಂಕಿರಣ.

Mumbai News Desk

ಗೋರೆಗಾಂವ್ ಶ್ರೀ ಶಾಂತ ದುರ್ಗಾ ದೇವಿ ದೇವಸ್ಥಾನ, ಬ್ರಹ್ಮಕಲಶೋತ್ಸವ ವೈದಿಕ ವಿಧಿ ವಿಧಾನಗಳಿಗೆ ಚಾಲನೆ 

Mumbai News Desk

ಬಾಂಬೆ ಬಂಟ್ಸ್ ಅಸೋಸಿಯೇಶನ್‌ನ ಮಹಿಳಾ ವಿಭಾಗದಿಂದ ಭಜನೆ – ಕುಣಿತ ಭಜನ ಸ್ಪರ್ಧೆ

Mumbai News Desk