
ಮುಂಬಯಿ : ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿ ಇವರ ನೇತೃತ್ವದಲ್ಲಿ, ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಸ್ವರೂಪ್ ಹೆಗ್ಡೆಯವರ ಮಾರ್ಗದರ್ಶನದಲ್ಲಿ ಮಹಾರಾಷ್ಟ್ರದಲ್ಲಿ ಹೆಸರಾಂತ ಆಸ್ಪತ್ರೆಗಳ ಸಾಲಿಗೆ ಸೇರಿದ ತುಂಗಾ ಆಸ್ಪತ್ರೆಯಲ್ಲಿ ವೈದ್ಯಕೀಯ ಶಿಬಿರ ನಡೆಯುತ್ತಿದ್ದು ಉತ್ತಮ ಆರೋಗ್ಯವಿದ್ದಲ್ಲಿ ಎಲ್ಲವನ್ನೂ ಸಾಧಿಸಲು ಸಾದ್ಯ. ಆದುದರಿಂದ ಆರೋಗ್ಯದ ಕಡೆ ಗಮನಹರಿಸುವುದು ಅಗತ್ಯ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ನುಡಿದರು






ಬಂಟರ ಸಂಘ ಜೋಗೇಶ್ವರಿ-ದಹಿಸರ್ ಸಮಿತಿಯ ವತಿಯಿಂದ ಜು. 6 ರಂದು ಬೆಳಿಗ್ಗೆ ಬಂಟ್ಸ್ ಹೆಲ್ತ್ ಕೇರ್ ಸಮಿತಿ ಹಾಗೂ ತುಂಗಾ ಆಸ್ಪತ್ರೆಗಳ ಸಮೂಹದ ಸಹಭಾಗಿತ್ವದಲ್ಲಿ ಮಲಾಡ್ ಪಶ್ಚಿಮದ ತುಂಗಾ ಮಲ್ಟಿ ಸ್ಪೆಶಾಲಿಟಿ ಹಾಸ್ಪಟಲ್, ನಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು ಕೊರೋನಾ ಕಾಲದಲ್ಲಿ ತುಂಗಾ ಆಸ್ಪತ್ರೆಗಳ ಕಾರ್ಯ ಪಶಂಸನೀಯ. ಅದರಲ್ಲೂ ತುಂಗಾ ಗ್ರೂಪ್ ನ ರಾಜೇಶ್ ಶೆಟ್ಟಿ ಯವರ ಕಾರ್ಯ ಮೆಚ್ಚತಕ್ಕದ್ದು. ಪ್ರತಿಯೊಬ್ಬರು ತನ್ನ ಒಂದು ದಿನದ ಒಂದು ಗಂಟೆಯನ್ನಾದರೂ ತಮ್ಮ ಆರೋಗ್ಯಕ್ಕಾಗಿ ಮೀಸಲಾಗಿಟ್ಟಲ್ಲಿ ಉತ್ತಮ ಆರೋಗ್ಯವನ್ನು ಕಾಪಾಡಬಹುದು. ಬಂಟರ ಸಂಘವು ಸಮಾಜ ಕಲ್ಯಾಣಕ್ಕಾಗಿ ಮಹತ್ವ ನೀಡುತ್ತಿದೆ. ಒಂದು ಕುಟುಂಬದಲ್ಲಿ ಒಂದು ನ್ಯಾಯವಾದಿ, ಒಂದು ಸಿ.ಎ. ಮತ್ತು ಒಂದು ಡಾಕ್ಟರ್ ಇರಬೇಕು.
ತುಂಗಾ ಆಸ್ಪತ್ರೆಯು ನಮ್ಮ ಆಸ್ಪ್ರತ್ರೆಯಾಗಿದ್ದು ಈಗ ಇರುವ ಐದು ಆಸ್ಪತ್ರೆಗಳು ಮುಂದೆ ಐವತ್ತು ಆಗಲಿ ಎನ್ನುತ್ತಾ ಆರೋಗ್ಯ ತಪಾಸಣಾ ಶಿಬಿರವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಉಪಸ್ಥಿತರಿದ್ದ ಎಲ್ಲಾ ಗಣ್ಯರನ್ನು, ವೈದ್ಯಕೀಯ ಶಿಭಿರದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರನ್ನು ಸ್ವಾಗತಿಸಿದರು.
ಸಂಘದ ಪಶ್ಚಿಮ ವಲಯದ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಖಾಂದೇಶ್ ಭಾಸ್ಕರ್ ಶೆಟ್ಟಿ ಯವರು ಮಾತನಾಡುತ್ತಾ ಸಮಿತಿಯ ಕ್ರಿಯಾಶೀಲ ಕಾರ್ಯಧ್ಯಕ್ಷರಾದ ಪ್ರೇಮನಾಥ್ ಕೊಂಡಾಡಿಯವರ ನೇತೃತ್ವದಲ್ಲಿ ಇಂದಿನ ಕಾರ್ಯಕ್ರಮವು ಬಹಳ ಉತ್ತಮವಾಗಿ ನಡೆಯುತ್ತಿದೆ. ಈ ಪ್ರಾದೇಶಿಕ ಸಮಿತಿಯು ಯಾವುದೇ ಕಾರ್ಯಕ್ರಮ ನಡೆಸಲು ಸಾಮರ್ಥ್ಯ ಹೊಂದಿದೆ. ಕೊರೋನಾ ಸಮಯದಲ್ಲಿ ಸಾವಿರಾರು ಜನರನ್ನು ರಕ್ಷಿಸಿದ ಹೆಗ್ಗಳಿಕೆ ತುಂಗಾ ಹಾಸ್ಪಿಟಲ್ ಗೆ ಇದೆ. ಉತ್ತಮ ಆರೋಗ್ಯದಿಂದ ಮಾತ್ರ ನೆಮ್ಮದಿಯ ಜೀವನ ನಡೆಸಲು ಸಾಧ್ಯ. ಎಲ್ಲದಕ್ಕೂ ಹಣವೇ ಮುಖ್ಯವಲ್ಲ ಆದದರಿಂದ ಐವತ್ತು ವರ್ಷ ದಾಟಿದವರು ಹಣಕ್ಕಿಂತ ಮುಖ್ಯವಾಗಿ ಆರೋಗ್ಯದ ಕಡೆ ಹೆಚ್ಚಿನ ಗಮನವನ್ನು ನೀಡಬೇಕೆಂದು ಕಿವಿಮಾತನ್ನು ಹೇಳಿದರು.
ತುಂಗಾ ಆಸ್ಪತ್ರೆಯ ನಿರ್ದೇಶಕರು ಜವಾಬ್ ನ ಅಧ್ಯಕ್ಷರೂ ಆದ ರಾಜೇಶ್ ಶೆಟ್ಟಿ ಅವರು ಮಾತನಾಡುತ್ತಾ ಆಸ್ಪತ್ರೆಯನ್ನು ನಡೆಸಲು ಸಮಾಜ ಬಾಂಧವರ ಪ್ರೋತ್ಸಾಹ ಕೂಡ ಅಗತ್ಯವಿದ್ದು, ಬಂಟರ ಸಮಾಜವೂ ನಮಗೆ ಪ್ರೋತ್ಸಾಹ ನೀಡಿದೆ. ಆರೋಗ್ಯ ತಪಾಸಣೆಯಿಂದ ಏನಾದರೂ ರೋಗವಿದ್ದಲ್ಲಿ ಅದನ್ನು ಪತ್ತೆಹಚ್ಚಿ ಆರಂಭದ ಹಂತದಲ್ಲೇ ಗುಣಪಡಿಸಲು ಸಾದ್ಯವಾಗುತ್ತದೆ. ಇಂತಹ ಶಿಬಿರದ ಪ್ರಯೋಜನನ್ನು ಪಡೆಯುತ್ತ ಬಂಟರ ಸಮಾಜವು ಆರೋಗ್ಯವಂತ ಸಮಾಜವಾಗಲಿ ಎಂದರು.
ಬಂಟ್ಸ್ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ.ಸ್ವರೂಪ್ ಹೆಗ್ಡೆಯವರು ತುಂಗಾ ಹಾಸ್ಪಿಟಲ್ ಬಗ್ಗೆ ಮಾತನಾಡಿ ಅಭಿನಂದನೆಯನ್ನು ವ್ಯಕ್ತಪಡಿಸಿತ್ತಾ ಈಗಾಗಲೇ ಕಳೆದ ಆರು ತಿಂಗಳಿಂದ ಮೆಡಿಕಲ್ ಕ್ಯಾಂಪಗಳನ್ನು ಮಾಡಿದ್ದು 600 ರಿಂದ 700 ಬಾಟ್ಲಿ ರಕ್ತವನ್ನು ಸಂಗ್ರಹಿಸಿದ್ದೇವೆ, ಸುಮಾರು 600 ರಷ್ಟು ವ್ಯಾಕ್ಸಿನೇಷನ್ ಮಾಡಿದ್ದೇವೆ 2000 ಕ್ಕೂ ಅಧಿಕ ರೋಗಿಗಳ ತಪಾಸಣೆಯನ್ನು ಮಾಡಲಾಗಿದೆ. ಇದಲ್ಲದ್ದೆ ಇನ್ನೂ ಹಲವಾರು ಯೋಜನೆಗಳನ್ನು ನಾವು ಹಮ್ಮಿಕೊಂಡಿದ್ದು ಶ್ರೀಘ್ರದಲ್ಲೇ ಕಾರ್ಯರೂಪಕ್ಕೆ ತರಲಿದ್ದೇವೆ ಎಂದರು.
ಕೇಂದ್ರ ವಾಣಿಜ್ಯ ಸಚಿವ ಪಿಯೂಶ್ ಗೋಯಲ್ ಅವರು ಈ ಸಂದರ್ಭದಲ್ಲಿ ಆಗಮಿಸಿ ಬಂಟರ ಸಂಘದ ಜನಪರನ ಕಾರ್ಯಚಟುವಟಿಕೆಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಾ ಶುಭ ಕೋರಿದರು.
ತುಂಗಾ ಆಸ್ಪತ್ರೆಯ ನಿರ್ದೇಶಕರಾದ ಉಮೇಶ್ ಶೆಟ್ಟಿ, ಡಾ. ಚಿಂತನ್ ಹೆಗ್ಡೆ, ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟಿ, ಉಪಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ, ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ, ಕೋಶಾಧಿಕಾರಿ ಸಂಕೇತ್ ಎಸ್. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುನಿತಾ ಎನ್. ಹೆಗ್ಡೆ, ಯುವ ವಿಭಾಗದ ಕಾರ್ಯಾಧ್ಯಕ್ಷ ಅಕ್ಷಜ್ ಆರ್. ಶೆಟ್ಟಿ, ಮುಖ್ಯ ಸಲಹೆಗಾರರಾದ ಮುಂಡಪ್ಪ ಎಸ್. ಪಯ್ಯಡೆ, ಮನೋಹರ ಎನ್. ಶೆಟ್ಟಿ, ರವೀಂದ್ರ ಎಸ್. ಶೆಟ್ಟಿ , ಸಂಘದ ಬೋರಿವಿಲಿ ಶಿಕ್ಷಣ ಸಮಿತಿಯ ಕಾರ್ಯ ಧ್ಯಕ್ಷ ಡಾ. ಪಿ ವಿ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಶಿಭಿರದಲ್ಲಿ ನೂರಕ್ಕಿಂತಲೂ ಹೆಚ್ಚು ಮಂದಿಯ ಆರೋಗ್ಯ ತಪಾಸಣೆಯನ್ನು ಮಾಡಲಾಯಿತು.
ಸಭಾ ಕಾರ್ಯಕ್ರಮವನ್ನು ಜೊತೆ ಕಾರ್ಯದರ್ಶಿ ರಘುನಾಥ್ ಎನ್ ಶೆಟ್ಟಿ ಅವರು ಅರ್ಥಪೂರ್ಣವಾಗಿ ನಿರ್ವಹಿಸಿದರು. ಸಮಿತಿಯ ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ. ಶೆಟ್ಟಿ, ಯವರ ಸ್ಲೋಕದ ಮೂಲಕ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜೋಗೇಶ್ವರಿ-ದಹಿಸರ್ ಸಮಿತಿಯ ಮೆಡಿಕಲ್ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷರಾದ ರಾಜಶೇಖರ್ ಶೆಟ್ಟಿಯವರು ಧನ್ಯವಾದ ಸಮರ್ಪಿಸಿದರು.
ತುಂಗಾ ಆಸ್ಪತ್ರೆಯ ಎಂ.ಡಿ., ಸಿ.ಎಂ.ಡಿ, ಹಾಗೂ ಸಂಸ್ಥಾಪಕರಾದ ಡಾ. ಸತೀಶ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಸಲಹೆಗಾರರಾದ ಎರ್ಮಾಳು ಹರೀಶ್ ಶೆಟ್ಟಿ, ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ಮತ್ತು ವಿಜಯ ಆರ್. ಭಂಡಾರಿ , ಪ್ರಾದೇಶಿಕ ಸಮಿತಿಯ ಸಂಚಾಲಕ ನಿಟ್ಟೆ ಎಂ.ಜಿ. ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಸಲಹಾ ಸಮಿತಿಯ, ಚಂದ್ರಿಕಾ ಶೆಟ್ಟಿ, ಪದ್ಮಾವತಿ ಬಿ ಶೆಟ್ಟಿ, ವಿನೋದಾ ಡಿ. ಶೆಟ್ಟಿ, ವಿನೋದಾ ಎ. ಶೆಟ್ಟಿ, ಯವ ವಿಭಾಗದ ಸಲಹಾ ಸಮಿತಿಯ ಶಿಮಂತೂರು ಪ್ರವೀಣ್ ಶೆಟ್ಟಿ, ವಿಕಾಸ್ ಶೆಟ್ಟಿ, ಸಂಕೇಶ್ ಶೆಟ್ಟಿ ಮತ್ತು ಧೀರಜ್ ಡಿ. ರೈ., ಸಮಾಜ ಕಲ್ಯಾಣ ಸಮಿತಿಯ ಹರೀಶ್ ಶೆಟ್ಟಿ , ಕ್ರೀಡಾ ಸಮಿತಿಯ ಧೀರಜ್ ರೈ , ಸಾಂಸ್ಕೃತಿಕ ಸಮಿತಿಯ ಗೀತಾ ಎಸ್. ಶೆಟ್ಟಿ, ಸದಸ್ಯತನ ಸಮಿತಿಯ ಪ್ರವೀಣ್ ಜೆ. ಶೆಟ್ಟಿ , ಪ್ರಜ್ವಲ್ ಬಿ ಶೆಟ್ಟಿ (ಐಟಿ), ಸುನಿಲ್ ಶೆಟ್ಟಿ (ಇ ಎಂಪ್ಲಾಯ್ಮೆಂಟ್), ವಿದ್ಯಾ ಆರ್ ಶೆಟ್ಟಿ (ಮ್ಯಾರೇಜ್ ಸೆಲ್) ಮಹಿಳಾ ವಿಭಾಗದ ಉಪಕಾರ್ಯಧ್ಯಕ್ಷೆ ರೇಖಾ ವೈ. ಶೆಟ್ಟಿ, ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆಕೋಶಾಧಿಕಾರಿಯಾಗಿ ಪ್ರಭಾವತಿ ಎಚ್ ಶೆಟ್ಟಿ, ಯುವ ವಿಭಾಗದ ಕಾರ್ಯದರ್ಶಿ ಸಮೀಕ್ಷ ಶೆಟ್ಟಿ ಕೋಶಾಧಿಕಾರಿ ರಿನಿತ್ ಶೆಟ್ಟಿ ಬಂಟರ ಸಂಘದ ಹಾಗೂ ಪ್ರಾದೇಶಿಕ ಸಮಿತಿಯ ಇತರ ಎಲ್ಲಾ ಪದಾಧಿಕಾರಿಗಳು, ಹಾಗೂ ಎಲ್ಲಾ ಉಪಸಮಿತಿಗಳ ಸದಸ್ಯರುಗಳು ಶಿಭಿರದ ಯಶಸ್ಸಿಗೆ ಸಹಕರಿಸಿದರು,




