September 6, 2026
Mumbai News Kannada
ಸುದ್ದಿ

ಖ್ಯಾತ ಆರ್ಥಿಕ ಸಲಹೆಗಾರ ಡಾ. ಆರ್. ಕೆ. ಶೆಟ್ಟಿಯವರಿಗೆ “ಸಂಸ್ಕೃತಿ ಸಿರಿ” ಪ್ರಶಸ್ತಿ





ಮುಂಬಯಿ : ಕನ್ನಡ ನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಪರಿಚಾರಿಕೆಯ ಪರಮೊಧ್ಯೇಯ ಹೊಂದಿರುವ ಡಾ. ವೇಮಗಲ್ ನಾರಾಯಣ ಸ್ವಾಮೀ ಅವರ ಒತ್ತಾಸೆಯಿಂದ ಆರಂಭವಾದ “ಡಾ. ವೇಮಗಲ್ ನಾರಾಯಣ ಸ್ವಾಮಿ ಸಾಂಸ್ಕೃತಿಕ ಪ್ರತಿಷ್ಠಾನ” ವು ಕಳೆದ ನಾಲ್ಕು ವರ್ಷಗಳಿಂದ ರಾಷ್ಟ್ರೀಯ ಮಟ್ಟದ ಸಾಹಿತ್ತಿಕ ಹಾಗು ಸಾಂಸ್ಕೃತಿಕ ಸೇವೆಯಲ್ಲಿ ತೊಡಗಿದ್ದು ಪ್ರತೀ ವರ್ಷ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆ ಮಾಡುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ. “ಸಂಸ್ಕೃತಿ ಸಿರಿ” ಈ ಪ್ರಶಸ್ತಿಯು 25 ಸಾವಿರ ರೂಪಾಯಿ ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಬಂಟರ ಸಂಘ ಮುಂಬಯಿಯ ಪ್ರಧಾನ ಕಾರ್ಯದರ್ಶಿ, ಖ್ಯಾತ ಆರ್ಥಿಕ ಸಲಹೆಗಾರ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕರಿತ. ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಅಧ್ಯಕ್ಷ ಡಾ. ಆರ್. ಕೆ. ಶೆಟ್ಟಿಯವರು ಈ ಸಲದ “ಸಂಸ್ಕೃತಿ ಸಿರಿ ,”ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ .
ನ. 8 ರಂದು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ನಡೆಯಲಿರುವ ಪ್ರಶಸ್ತಿ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ಪ್ರಧಾನಿಸಿ ಗೌರವಿಸಲಾಗುತ್ತದೆ.

ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಆಡಳಿತ ನಿರ್ದೇಶಕ ಡಾ. ಆರ್ ಕೆ ಶೆಟ್ಟಿಯವರು ಜೀವವಿಮಾ ಕ್ಷೇತ್ರದ ಸಲಹೆಗಾರರಾಗಿ ಮುಂಬಯಿ ಮಾತ್ರವಲ್ಲದೇ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಪರಿಚಿತರು. ಹಲವಾರು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿರಿಸಿದವರು ಇವರು. ಮಹಾರಾಷ್ಟ್ರ ಸರಕಾರದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರು ರಾಜಭವನದಲ್ಲಿ ಆರ್ ಕೆ ಶೆಟ್ಟಿಯವರನ್ನು ಗೌರವಿಸಿದ್ದಾರೆ. ಎಂ.ಡಿ.ಆರ್.ಟಿ ರಿಜಿಯನಲ್ ಚೇರ್ಮೆನ್ ಆಗಿ ನಿಯುಕ್ತಿ ಗೊಂಡ ಪ್ರಥಮ ಭಾರತೀಯ ಇವರು. ಎಂ.ಡಿ.ಆರ್.ಟಿ. ಯ ಹದಿನೇಳು ಸದಸ್ಯರ ತಂಡದ ಮ್ಯಾನೇಜ್ಮೆಂಟ್ ಕೌನ್ಸಿಲ್ ನ ಸದಸ್ಯರಾಗಿಯೂ ಕಾರ್ಯನಿರ್ವಹಣೆ. ಗ್ಲೋಬಲ್ ಇಂಡಿಯನ್ ಅಚೀವರ್ ಪ್ರಶಸ್ತಿ. ಸಮಾಜ ರತ್ನ, ಸಮಾಜ ಸೇವಾ ಧುರೀಣ, ಸರ್ವಕಾಲಿಕ ಉತ್ತೇಜಕ, ಹೀಗೆ ವಿವಿಧ ಸಂಘಟನೆಗಳಿಂದ ಅನೇಕ ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳನ್ನು ಪಡೆದಿರುವರು. ಅರ್ಥಶಾಸ್ತ್ರದಲ್ಲಿ ಬಿ ಕಾಂ ಮತ್ತು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ನಲ್ಲಿ ವಿಶೇಷ ಡಿಪ್ಲೋಮಾ ಪಡೆದಿದ್ದಾರೆ. ಅಮೆರಿಕಾದ ಇನ್ಸೂರೆನ್ಸ್ ಕಾಲೇಜಿನಿಂದ ಎಲ್.ಟಿ.ಯು.ಸಿ, ಎಲ್. ಎಲ್. ಬಿ ಹಾಗು ಎಂ. ಬಿ. ಎ. ಪದವಿ, ಶ್ರೀಲಂಕಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಇವರು ಎಂ.ಡಿ.ಆರ್.ಟಿ. ವಾರ್ಷಿಕ ಸಮಾವೇಶದಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ ತನ್ನ ರಾಷ್ಟ್ರ ಪ್ರೇಮವನ್ನು ಮೆರೆದಿದ್ದಾರೆ.
ತನ್ನ ಆರ್ಥಿಕ ಸಂಸ್ಥೆಯ ಮೂಲಕ ಬಂಟ ಸಮಾಜದ ಬಂಧುಗಳಿಗೆ ಮತ್ತು ವಿಶೇಷ ಆರ್ಥಿಕ ನೆರವು ನೀಡುವ ಯೋಜನೆಯೊಂದನ್ನು ರೂಪಿಸಿಕೊಂಡಿದ್ದಾರೆ. ಈಗಾಗಲೇ ಬಹಳಷ್ಟು ಬಂಟ ಸಮಾಜದ ಬಂಧುಗಳಿಗೆ ಲಕ್ಷಾಂತರ ರೂಪಾಯಿಯನ್ನು ನೀಡಿ ಅವರ ಸಂಕಷ್ಟಗಳಿಗೆ ದುಃಖಗಳಿಗೆ ಸ್ಪಂದನೆ ಮಾಡಿ ಎಲ್ಲರೂ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನಿರ್ದೇಶಕರಾಗಿ. ಮಾತೃಭೂಮಿ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಉಪ ಕಾರ್ಯಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.


ಟೈಂಮ್ಸ್ ಆಪ್ ಇಂಡಿಯಾ ಪತ್ರಿಕೆಯು ’ಲೀಡರ್ ಆಫ್ ಚೇಂಜ್’ಪ್ರಶಸ್ತಿ

ಡಾ.ಆರ್ ಕೆ ಶೆಟ್ಟಿ ‌ಇವರ ಸಾಧನೆಯನ್ನು ಗುರುತಿಸಿ ಕೆಲವು ದಿನಗಳ ಹಿಂದೆ ಟೈಂಮ್ಸ್ ಆಪ್ ಇಂಡಿಯಾ ಪತ್ರಿಕೆಯು ’ಲೀಡರ್ ಆಫ್ ಚೇಂಜ್’ ಆಗಿ ದೇಶದ 20 ಮಂದಿ ಸಾಧಕರನ್ನು ಆಯ್ಕೆ ಮಾಡಿದ್ದು ಇದರಲ್ಲಿ ತುಳು ಕನ್ನಡಿಗರಾದ ಡಾ. ಅರ್. ಕೆ. ಶೆಟ್ಟಿಯವರೂ ಒಬ್ಬರಾಗಿದ್ದಾರೆ. ಇವರ ಸಾಧನೆ ಬಗ್ಗೆ ಪತ್ರಿಕೆಯ ಲೀಡರ್ ಆಫ್ ಚೇಂಜ್ ವಿಭಾಗದಲ್ಲಿ ಲೇಕನ ಪ್ರಕಟವಾಗಿದೆ.



Related posts

ಸನಾತನ ಧರ್ಮ ಬಲಿಷ್ಠಗೊಳಿಸೋಣ: ಹರಿನಾರಾಯಣದಾಸ ಅಸ್ರಣ್ಣ

Mumbai News Desk

ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಸಂಸದ ಡಾ. ಶ್ರೀಕಾಂತ್ ಶಿಂಧೆ ಭೇಟಿ: ದೇವಿಯ ದರ್ಶನ ಪಡೆದು ವಿಶೇಷ ಪೂಜೆ

Mumbai News Desk

“ಡ್ರಾಗನ್–ಆನೆ ಒಗ್ಗಟ್ಟಿಗೆ ಕರೆಯೊಡ್ಡಿದ ಷಿ, ಸಹಕಾರಕ್ಕೆ ಬದ್ಧತೆ ತೋರಿದ ಮೋದಿ”

Mumbai News Desk

ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನ ತೃತೀಯ ವಾರ್ಷಿಕ ಪ್ರತಿಷ್ಠ ಮಹೋತ್ಸವ.

Mumbai News Desk

ಮೊಳಹಳ್ಳಿ ಶಿವರಾವ್ ಸಹಕಾರಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯ ಸಮಗ್ರ ದಾಖಲೀಕರಣ: ‘ತ್ಯಾಗಮಯಿ ಮೊಳಹಳ್ಳಿ’ ಗ್ರಂಥ ಯುವಪೀಳಿಗೆಗೆ ಸ್ಫೂರ್ತಿ – ಡಾ. ಎಂ.ಎನ್. ರಾಜೇಂದ್ರ ಕುಮಾರ್

Mumbai News Desk

ಹಾಸ್ಯ ನಟ ರಾಕೇಶ್‌ ಪೂಜಾರಿ ಮನೆಗೆ ಕೊನೆಗೂ ರಿಷಬ್‌ ಶೆಟ್ಟಿ ದಂಪತಿ ಭೇಟಿ

Mumbai News Desk