July 23, 2026
Mumbai News Kannada
ಮುಂಬಯಿ

ಡೊಂಬಿವಲಿ ಶ್ರೀ ಜಗದಂಬಾ ಮಂದಿರದ 11ನೇ ವಾರ್ಷಿಕ ಮಹೋತ್ಸವ ಸಂಪನ್ನ







ಡೊಂಬಿವಲಿ: ಇಲ್ಲಿನ ನ್ಯೂ ದೇವೀಚಪಾಡಾ, ಜಗದಂಬಾ ರೋಡ್‌ನಲ್ಲಿರುವ ಶ್ರೀ ಜಗದಂಬಾ ಮಂದಿರದ (ರಿ.) 11ನೇ ವಾರ್ಷಿಕ ಮಹೋತ್ಸವ ಹಾಗೂ ಪಲ್ಲಕ್ಕಿ ಉತ್ಸವವು ಏಪ್ರಿಲ್ 4 ಮತ್ತು 5ರಂದು ಅತ್ಯಂತ ಸಡಗರ-ಸಂಭ್ರಮದಿಂದ ಜರುಗಿತು. ಯಕ್ಷಕಲಾ ಸಂಸ್ಥೆಯ (ರಿ.) ಸ್ಥಾಪಕತ್ವದಲ್ಲಿ, ಶ್ರೀ ಜಗದಂಬಾ ಚಾರಿಟೇಬಲ್ ಟ್ರಸ್ಟ್ (ರಿ.) ವತಿಯಿಂದ ಆಯೋಜಿಸಲಾಗಿದ್ದ ಈ ಧಾರ್ಮಿಕ ಕಾರ್ಯಕ್ರಮಗಳು ಸುಬ್ರಮಣ್ಯ ರಾವ್ ಅವರ ಸಾರಥ್ಯದಲ್ಲಿ ಹಾಗೂ ಮಂದಿರದ ಪ್ರಧಾನ ಅರ್ಚಕ ಶ್ರೀ ಜಗದೀಶ ಭಟ್ ಅವರ ನೇತೃತ್ವದಲ್ಲಿ ನೆರವೇರಿದವು.

​ಶನಿವಾರ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ದಿನೇಶ್ ಪೂಜಾರಿ ಮತ್ತು ಪರಿವಾರದವರಿಂದ ಗಣಪತಿ ಹೋಮ, ವಿಕಾಸ್ ಶೆಟ್ಟಿ ಮತ್ತು ಕುಟುಂಬದವರಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಹರೀಶ್ ಕೋಟ್ಯಾನ್ ಮತ್ತು ಕುಟುಂಬದವರಿಂದ ಶನಿ ಪೂಜೆ ನೆರವೇರಿತು. ವಿಶೇಷವಾಗಿ, ಸುರೇಶ್ ಟಿ. ಅಂಚನ್ ಅವರಿಂದ ಕಲಶ ಪ್ರತಿಷ್ಠಾಪನೆ ನಡೆಯಿತು.

​ಮಧ್ಯಾಹ್ನ ಶನಿಗ್ರಂಥ ಪಾರಾಯಣವು ‘ಯಕ್ಷಗಾನ ತಾಳಮದ್ದಳೆ’ ರೂಪದಲ್ಲಿ ಜರುಗಿತು. ಪ್ರಕಾಶ್ ಭಂಡಾರಿ, ವಾಸು ಮೊಗವೀರ, ಗೀತಾ ಮೆಂಡನ್, ಸುಜಾತ, ಶಾಂತ ಅಮೀನ್, ಶರತ್ ಮೆಂಡನ್, ಅಜಕಾರು ಜಯ ಶೆಟ್ಟಿ, ಚಂದ್ರಹಾಸ ರೈ ಹಾಗೂ ರಾಜೇಶ್ ಕೋಟ್ಯಾನ್ ಪಾರಾಯಣದಲ್ಲಿ ಸಹಕರಿಸಿದರು. ಉದಯಾನಂದ ಕರುಣಾಕರ್, ಭಾಸ್ಕರ್ ಅಮೀನ್, ಪ್ರಕಾಶ್ ಭಟ್, ಸೋಮನಾಥ ಪೂಜಾರಿ, ಸುರೇಶ್ ಅಂಚನ್ ಮತ್ತು ಎಮ್. ಎಸ್. ಕೋಟ್ಯಾನ್ ಅವರು ಅರ್ಥದಾರಿಗಳಾಗಿ ಭಾಗವಹಿಸಿದ್ದರು. ಹಿಮ್ಮೇಳದಲ್ಲಿ ಭಾಗವತರಾಗಿ ಜಗದೀಶ್ ನಿಟ್ಟೆ, ಮೋಹನ್ ದಾಸ್ ರೈ ಹಾಗೂ ಮದ್ದಳೆ-ಚಂಡೆಯಲ್ಲಿ ವರುಣ್ ಪೂಜಾರಿ ಮತ್ತು ಚಂದ್ರಹಾಸ ರೈ ಸಹಕರಿಸಿದರು.

​ಆದಿತ್ಯವಾರ ಬೆಳಿಗ್ಗೆ 25 ಕಲಶಗಳ ಆರಾಧನೆ, ಪ್ರಧಾನ ಹೋಮ ಹಾಗೂ ಶ್ರೀ ದೇವಿಯ ಬಲಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ಸಂಜೆ ಲಕ್ಷ್ಮಿ ನಾರಾಯಣ ಮತ್ತು ಕುಟುಂಬದವರಿಂದ ವಿಶೇಷ ಸೇವೆಯಾಗಿ ‘ದುರ್ಗಾ ನಮಸ್ಕಾರ ಪೂಜೆ’ ಜರುಗಿತು.

​ಮಹೋತ್ಸವದ ಸಂದರ್ಭದಲ್ಲಿ ಅನೇಕ ಗಣ್ಯರು ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಶಿವಸೇನೆ ಶಿಂಧೆ ಬಣದ ಗೋಪಾಲ್ ಲಾಂಡ್ಗೆ, ಶಾಸಕ ರಾಜೇಶ್ ಮೋರೆ, ಶಿವಸೇನೆ ಸೌತ್ ಸೆಲ್‌ನ ಸುಭಾಷ್ ಶೆಟ್ಟಿ ಇನ್ನಂಜೆ ಮತ್ತು ಅನುಪಮಾ ಶೆಟ್ಟಿ, ಸಮಾಜ ಸೇವಕ ಬಾಲಾ ಮಾತ್ರೆ ಪಾಲ್ಗೊಂಡಿದ್ದರು.

​ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಎಕ್ಕಾರು, ಬಿಲ್ಲವರ ಅಸೋಸಿಯೇಷನ್ ಮುಂಬೈ ಕೋಶಾಧಿಕಾರಿ ರವಿ ಸನಿಲ್, ಕುಲಾಲ ಸಂಘದ ಲಕ್ಷ್ಮಣ್ ಮೂಲ್ಯ, ಶಹಡ್ ಮೂಕಾಂಬಿಕಾ ಮಂದಿರದ ಕರುಣಾಕರ್ ಶೆಟ್ಟಿ, ಶಬರಿ ಭಜನಾ ಮಂಡಳಿಯ ದಿನೇಶ್ ಮೊಗವೀರ, ರಾಧಾಕೃಷ್ಣ ಭಜನಾ ಮಂಡಳಿಯ ಸೋಮನಾಥ ಪೂಜಾರಿ ಮತ್ತು ಪ್ರಕಾಶ್ ಭಟ್, ದೇವಡಿಗ ಸಂಘದ ಸುರೇಶ್ ದೇವಡಿಗ ಮತ್ತು ಹೇಮಾನಂದ ದೇವಡಿಗ, ಅಂಬರನಾಥ್‌ನ ಜಗದೀಶ್ ಬಂಜನ್ ಸೇರಿದಂತೆ ಸಾಯಿನಾಥ ಮಿತ್ರ ಮಂಡಳಿಯ ವಾಸು ಮೊಗವೀರ ಮತ್ತು ಸಿರಿನಾಡ ವೆಲ್ಫೇರ್ ಅಸೋಸಿಯೇಷನ್‌ನ ಅಜಕಾರು ಜಯ ಶೆಟ್ಟಿ ಉಪಸ್ಥಿತರಿದ್ದರು.

​ಟ್ರಸ್ಟ್‌ನ ಅಧ್ಯಕ್ಷ ದಿವಾಕರ್ ರೈ, ಉಪಾಧ್ಯಕ್ಷರಾದ ರವೀಂದ್ರ ವೈ. ಶೆಟ್ಟಿ ಮತ್ತು ದಿನೇಶ್ ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್ ಕೋಟ್ಯಾನ್, ಮಾಜಿ ಗೌರವಾನ್ವಿತ ಅಧ್ಯಕ್ಷ ಹರೀಶ್ ಡಿ. ಶೆಟ್ಟಿ, ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ವಿಜಯ್ ಶೆಟ್ಟಿ ಸಜೀಪಗುತ್ತು ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಯಶಸ್ವಿಯಾಯಿತು. ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ಪಲಿಮಾರು ವಂದಿಸಿದರು. ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ವ್ಯವಸ್ಥಾಪಕ ಸಮಿತಿಯ ಎಲ್ಲಾ ಸದಸ್ಯರು ಮತ್ತು ಡೊಂಬಿವಲಿ-ಕಲ್ಯಾಣ್ ಪರಿಸರದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.



Related posts

ಕಾಂದಿವಲಿ ಕನ್ನಡ ಸಂಘದ ಮಹಿಳಾ ವಿಭಾಗದ ಸಂಯೋಜನೆಯಲ್ಲಿ ಯಕ್ಷಗಾನ ತಾಳಮದ್ದಳೆ,

Mumbai News Desk

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಸಿಯೇಶನ್‌ ಬದ್ಲಾಪುರದ ಮೋಯಾ ನಗರಿಯಲ್ಲಿ ಗಣ-ಹೋಮ, ಸಾಮೂಹಿಕ ಸತ್ಯನಾರಾಯಣ ಮಹಾಪೂಜೆ

Mumbai News Desk

ಭಾರತ್ ಕೋ-ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ -ಖೋಪರ್‌ಖೈರ್ನೆ ಶಾಖೆಯಲ್ಲಿ ವಿಜೃಂಭಣೆಯಿಂದ ಜರಗಿದ ದಶಮಾನೋತ್ಸವ ಆಚರಣೆ

Mumbai News Desk

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.

Mumbai News Desk

ಎಸ್ ಎಸ್ ಸಿ ಯಲ್ಲಿ ಅದಿತಿ ಆರ್ ಶೆಟ್ಟಿ ಯವರಿಗೆ ಶೇಕಡಾ 96.20 ಅಂಕ

Mumbai News Desk