29.9 C
Mumbai
August 12, 2026
Mumbai News Kannada
ಮುಂಬಯಿ

ಮುಂಬಯಿ: ಮಾಟುಂಗದ ಮೈಸೂರು ಅಸೋಸಿಯೇಷನ್‌ನಲ್ಲಿ ‘ಕನ್ನಡ ಕಂಪು ಸರಣಿ-10’ ಸಂಭ್ರಮ; ಸತೀಶ್ ಎನ್. ಬಂಗೇರ ಕುರಿತ ಕೃತಿ ಲೋಕಾರ್ಪಣೆ





ಸಾಹಿತ್ಯ ಮತ್ತು ಸಂಸ್ಕೃತಿಯ ತವರೂರಾದ ಮಾಟುಂಗದ ಮೈಸೂರು ಅಸೋಸಿಯೇಷನ್ ಸಭಾಂಗಣದಲ್ಲಿ ಇತ್ತೀಚೆಗೆ ಕಥಾಬಿಂದು ಪ್ರಕಾಶನದ ‘ಕನ್ನಡ ಕಂಪು ಸರಣಿ-10’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಈ ಶುಭ ಸಂದರ್ಭದಲ್ಲಿ ಲೇಖಕ, ಸಾಹಿತಿ, ಡಾ. ಕೊಳ್ಚಪ್ಪೆ ಗೋವಿಂದ ಭಟ್ ಅವರು ರಚಿಸಿದ ಹಾಗೂ ಬ್ಯಾಂಕೋ ಪಬ್ಲಿಕೇಶನ್ ಮೂಡಬಿದಿರೆ ಪ್ರಕಾಶಿಸಿದ ‘ಸಾಟಿಯಿಲ್ಲದ ಸಾಧಕ ಡಾ. ಸತೀಶ್ ಎನ್. ಬಂಗೇರ’ ಎಂಬ ವ್ಯಕ್ತಿಚಿತ್ರಣದ ಕೃತಿಯನ್ನು 2025ರ ಆರ್ಯಭಟ ಪ್ರಶಸ್ತಿ ವಿಜೇತರಾದ ಶಂಭು ಸನಿಲ್ ಅವರು ಲೋಕಾರ್ಪಣೆಗೊಳಿಸಿದರು.

ಈ ಕೃತಿಯ ಕಥಾನಾಯಕರಾದ ಡಾ. ಸತೀಶ್ ಎನ್. ಬಂಗೇರ ಅವರು ಮೂಲತಃ ಮೂಡಬಿದಿರೆಯವರಾಗಿದ್ದು, ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಮುಂಬಯಿಯ ನಿವೃತ್ತ ಪ್ರಬಂಧಕರಾಗಿದ್ದಾರೆ. ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಚಿತ್ರನಿರ್ಮಾಣ, ರಂಗಭೂಮಿ, ಸಾಹಿತ್ಯ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಅವರ ಜೀವನ ಹಾದಿಯನ್ನು ಈ ಪುಸ್ತಕವು ಮನೋಜ್ಞವಾಗಿ ಕಟ್ಟಿಕೊಟ್ಟಿದೆ. ವೇದಿಕೆಯಲ್ಲಿ ಮುಂಬಯಿ ಬಂಟ್ಸ್ ಸಂಘದ ಅಧ್ಯಕ್ಷ ಪ್ರವೀಣ್ ಬಿ. ಶೆಟ್ಟಿ, ಬಾಂಬೆ ಬಂಟ್ಸ್‌ನ ನಿಕಟಪೂರ್ವ ಅಧ್ಯಕ್ಷ ಸಿಎ ಸುರೇಂದ್ರ ಕೆ. ಶೆಟ್ಟಿ, ಕನ್ನಡ ಕಲಾಕೇಂದ್ರದ ಅಧ್ಯಕ್ಷ ಮಧುಸೂಧನ ಟಿ.ಆರ್., ದಿ. ಚಂದ್ರಶೇಖರ ರಾವ್ ಮೆಮೋರಿಯಲ್ ಟ್ರಸ್ಟ್ ನ ಮುಖ್ಯಸ್ತೆ ಶ್ರೀದೇವಿ ಸಿ. ರಾವ್, ಕವಯಿತ್ರಿ ವಾಣಿ ಶೆಟ್ಟಿ ಮೂಡಬಿದಿರೆ ಹಾಗೂ ಕಥಾಬಿಂದು ಪ್ರಕಾಶನದ ಟಿ.ವಿ. ಪ್ರದೀಪ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಕಳೆ ನೀಡಿದರು.ಕನ್ನಡ ನಾಡು-ನುಡಿಯ ಸೇವೆಯಲ್ಲಿ ನಿರತವಾಗಿರುವ ಮಂಗಳೂರಿನ ಕಥಾಬಿಂದು ಪ್ರಕಾಶನವು ಮುಂಬಯಿಯ ನೆಲದಲ್ಲೂ ಕನ್ನಡದ ಕಂಪನ್ನು ಪಸರಿಸುತ್ತಿದ್ದು, ಅಂದಿನ ಸಮಾರಂಭದಲ್ಲಿ ಗೀತಾ ಕೊಂಕೋಡಿ ಅವರ ‘ಭಾವವೀಚಿ” ‘, ವಿ . ಲಕ್ಷ್ಮಣ ಮೂರ್ತಿ ಅವರ ‘ಮಕರಂದ’, ಗಾಯತ್ರಿ ನಾಗೇಶ್ ಅವರ ‘ಗೊಂಚಲು’ ಹಾಗೂ ಶಂಕರಪುರ ನಿಮಾಲೋಬೋ ಅವರ ‘ಮನಸ್ಸೇ ಜೋಪಾನ’ ಎಂಬ ನಾಲ್ಕು ನೂತನ ಕೃತಿಗಳೂ ಸಹ ಅನಾವರಣಗೊಂಡವು.

ಇದೇ ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಡಾ. ಜೋಸೆಫ್ ಲೋಬೋ, ರಕ್ತದಾನಿ ಮಂಜು, ಸತೀಶ್ ಆಚಾರ್ಯ ಹಾಗೂ ಉದಯೋನ್ಮುಖ ಪ್ರತಿಭೆಗಳಾದ ಕುಮಾರಿ ರಿಶಾಲ್ ಮೆಲ್ಬಾ ಕ್ಯಾಸ್ಟ್ರಾ ಮತ್ತು ಕುಮಾರ್ ಆಯುಷ್ ರೇಗನ್ ಮನೇಜಸ್ ಅವರಿಗೆ ‘ಸಾಧನಶ್ರೀ’ ರಾಷ್ಟ್ರಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ನಡೆದ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಾಣಿ ಶೆಟ್ಟಿ ವಹಿಸಿದ್ದರು. ಪಿ .ವಿ. ಪ್ರದೀಪ್ ಕುಮಾರ್ ಅವರ ಸ್ವಾಗತ ಭಾಷಣದೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಗೀತಾ ಕೊಂಕೋಡಿ ಅಚ್ಚುಕಟ್ಟಾಗಿ ನಿರೂಪಿಸಿದರೆ, ಅನಿತಾ ಶೆಟ್ಟಿ ಧನ್ಯವಾದ ಸಮರ್ಪಿಸಿದರು.



Related posts

ಬಿಲ್ಲವರ ಅಸೋಸಿಯೇಶನ್ ಭಾಯಂದರ್ ಸ್ಥಳೀಯ ಕಚೇರಿಯಲ್ಲಿ ವಿಜ್ರಂಭಣೆಯ ಶ್ರೀ ಸತ್ಯನಾರಾಯಣ ಮಹಾಪೂಜೆ.

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ, ಮಹಿಳಾ ವಿಭಾಗದ ವತಿಯಿಂದ ಆಟಿದ ಸೊಗಸ್ ಮತ್ತು ” ಸಂಜೀವಿನಿ ” ಯೋಜನೆಯ ಉದ್ಘಾಟನೆ

Mumbai News Desk

ಗೋರೆಗಾಂವ್ ಪೂರ್ವ  ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವಜ್ರ ಮಹೋತ್ಸವ, 

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಪ್ರೀಕ್ಷಾ ಪುಷ್ಪರಾಜ್ ಪೂಂಜಾ ಗೆ ಶೇ 93.20 ಅಂಕ.

Mumbai News Desk

ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ ವಾರ್ಷಿಕ ಪೂಜಾ ಮಹೋತ್ಸವ ಸಂಪನ್ನ ,

Mumbai News Desk

ಸಾಯನ್,ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾಪನಾ ದಿನ

Mumbai News Desk