July 23, 2026
Mumbai News Kannada
ಪ್ರಕಟಣೆ

ಶ್ರೀ ಅಯ್ಯಪ್ಪ ಸೇವಾ ಸಮಿತಿ ಕಿಸಾನ್ ನಗರ ಥಾಣೆ ಆಗಸ್ಟ್ 17ರಂದು 19ನೇ ವಾರ್ಷಿಕ ರಕ್ತದಾನ ಶಿಬಿರ







ಥಾಣೆ ಪಶ್ಚಿಮ ಕಿಸಾನ್ ನಗರದ ಶ್ರೀ ಅಯ್ಯಪ್ಪ ಸೇವಾ ಸಮಿತಿಯು 25 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದು, ಇದೀಗ ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಪ್ರಸಿದ್ಧಿಯನ್ನು ಪಡೆದ ಈ ಸಂಸ್ಥೆಯು ಸಮಾಜಪರ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದು, ಕಳೆದ 18 ವರ್ಷಗಳಿಂದ ಸತತವಾಗಿ ರಕ್ತದಾನ ಶಿಬಿರವನ್ನು ಆಯೋಜಿಸುತ್ತಾ ಬಂದಿದೆ.
19ನೇ ವರ್ಷದ ರಕ್ತದಾನ ಶಿಬಿರವು ಆಗಸ್ಟ್ 17ರ ರವಿವಾರದಂದು ಬೆಳಿಗ್ಗೆ 9:00ಗಂಟೆಯಿಂದ ಸಾಯಂಕಾಲ 4 ಗಂಟೆತನಕ, ಕಿಸನ್ ನಗರ ನಂ. 1, ಮುನ್ಸಿಪಲ್ ಮೈದಾನದ ಹತ್ತಿರದ ಓಧವ್ ಬಾಗ್ ಹಾಲ್ ನಲ್ಲಿ ನಡೆಯಲಿದೆ.
ಕೇವಲ ಮುಂಬೈ ಮತ್ತು ಥಾಣೆ ಈ ಎರಡು ಜಿಲ್ಲೆಗಲ್ಲಿಯೇ ಥಲಲ್ಸೇಮಿಯ ಮೇಜರ್ ( Thalassemia Major )ಎಂಬ ರಕ್ತದ ಕೊರತೆಯಿಂದ ಆಗುವ ಕಾಯಿಲೆಯಿಂದ ಸಾವಿರಾರು ಮಂದಿ ಬಳಲುತ್ತಿದ್ದಾರೆ. ಅವರಿಗೆ ಸರಾಸರಿ 21 ದಿನಗಳ ಅಂತರದಲ್ಲಿ ರಕ್ತ ನೀಡಬೇಕಾಗುತ್ತದೆ. ರಕ್ತದ ಕೊರತೆಯಾದಲ್ಲಿ ಪ್ರಾಣಕ್ಕೆ ಅಪಾಯವಿರುತ್ತದೆ . ಮುಲುಂಡ್ ಮತ್ತು ಥಾಣೆ ಪರಿಸರದ ಖ್ಯಾತ ಶಿಶು ಸದ್ಯ ಡಾ. ಸತ್ಯಪ್ರಕಾಶ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಮತ್ತು ಸಾರ್ವಜನಿಕ ಮಕ್ಕಳ ಮತ್ತು ಪರಿಸರದ ಕಲ್ಯಾಣ ಚಟುವಟಿಕೆಗಳಿಗೆ ಸ್ವಯಂಪ್ರೇರಿತ ಸಂಸ್ಥೆಯಾದ ಥಿಂಕ್ ಫೌಂಡೇಶನ್ ಸಂಸ್ಥೆಯ ಉಪಾಧ್ಯಕ್ಷ ವಿನಯ್ ಶೆಟ್ಟಿ ಅವರ ಸಹಕಾರದೊಂದಿಗೆ ಶ್ರೀ ಅಯ್ಯಪ್ಪ ಸೇವಾ ಸಮಿತಿ ಆಯೋಜಿಸುತ್ತಿರುವ ರಕ್ತದಾನ ಶಿಬರದಲ್ಲಿ ರಕ್ತದಾನಿಗಳು ಪಾಲ್ಗೊಂಡು ಸಹಕರಿಸಬೇಕಾಗಿ ಸಮಿತಿಯ ಅಧ್ಯಕ್ಷ ಜಯರಾಮ್ ಪೂಜಾರಿ ಮತ್ತು ಪದಾಧಿಕಾರಿಗಳು, ಸದಸ್ಯರು ವಿನಂತಿಸಿಕೊಂಡಿದ್ದಾರೆ.
ಹೆಚ್ಚಿನ ವಿವರಗಳಿಗೆ : 7021869714/ 7498169626 ಸಂಪರ್ಕಿಸಬಹುದು.



Related posts

ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಡಿ 7ರಂದು “ಕುರ್ಲಾ ಬಂಟರ ಭವನದಲ್ಲಿ ” ವಿಶ್ವಬಂಟರ ಸಮಾಗಮ “ಜಾಗತಿಕ ಮಟ್ಟದ ಕಾರ್ಯಕ್ರಮದ ವಿಶೇಷ ಸಭೆ.

Mumbai News Desk

ಓಂ ಶ್ರೀ ಜಗದೀಶ್ವರಿ ದೇವಸ್ಥಾನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೊರಿವಲಿಜ.20ಕ್ಕೆ ಸುವರ್ಣ ಮಹೋತ್ಸವದ ನಿಮ್ಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ.

Mumbai News Desk

ನಾಳೆ (ಫೆ. 23) ಶ್ರೀಮದ್ಭಾರತ ಮಂಡಳಿಯ 147ನೇ ವಾರ್ಷಿಕ ಮಂಗಳೋತ್ಸವ ಹಾಗೂ 23ನೇ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಜೂನ್ 20ರಿಂದ 149ನೇ ಪುಣ್ಯ ಗ್ರಂಥ ಪಾರಾಯಣ ಪ್ರಾರಂಭ

Mumbai News Desk

ಫೆ 29 ರಿಂದ ಮಾ 2 ರ ವರಗೆ ಡೊಂಬಿವಲಿ ಶ್ರೀ ಜೈ ಭವಾನಿ ಶನೀಶ್ವರ ಮಂದಿರದ ಅಷ್ಟಬಂಧ ಪುನರ್‌ ಪ್ರತಿಷ್ಠಾ ಮಹೋತ್ಸವ

Mumbai News Desk

ಶ್ರೀ ಶ್ರೀ ರಮಾನಂದ ಗುರೂಜಿ ಮುಂಬೈ ಭೇಟಿ

Mumbai News Desk