October 12, 2026
Mumbai News Kannada
ಸುದ್ದಿ

ಜೀವನ್ ಸೇವಾ ಬ್ರಿಗೇಡ್‌ ಪಡುಬಿದ್ರಿ: ವೈದ್ಯಕೀಯ ಆರ್ಥಿಕ ನೆರವು ವಿತರಣೆ




​”ಸೇವಾ ಬ್ರಿಗೇಡ್‌ನ ಕಾರ್ಯ ಸಮಾಜಕ್ಕೆ ಆದರ್ಶ” – ವಿಜಯ ಕೆ. ಸಾಲ್ಯಾನ್


​ಉಡುಪಿ (ಮೇ 24): ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವವರಿಗೆ ಸಹಾಯಹಸ್ತ ನೀಡುವ ಸದುದ್ದೇಶದೊಂದಿಗೆ, ಮೂರು ವರ್ಷಗಳ ಹಿಂದೆ ಆರಂಭಗೊಂಡ ದಿವಂಗತ ಜೀವನ್ ಎಸ್. ಸ್ಮರಣಾರ್ಥದ ‘ಪಡುಬಿದ್ರಿ-ಕಾಡಿಪಟ್ನ ಜೀವನ್ ಸೇವಾ ಬ್ರಿಗೇಡ್’ ವತಿಯಿಂದ ಫಲಾನುಭವಿಗಳಿಗೆ ಆರ್ಥಿಕ ನೆರವು ವಿತರಿಸಲಾಯಿತು.
​ಮೊಗವೀರ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವಿಜಯ ಕೆ. ಸಾಲ್ಯಾನ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅನಾರೋಗ್ಯ ಪೀಡಿತರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದಿಸುತ್ತಿರುವ ಜೀವನ್ ಸೇವಾ ಬ್ರಿಗೇಡ್‌ನ ಕಾರ್ಯಚಟುವಟಿಕೆಗಳು ಸಮಾಜಕ್ಕೆ ಆದರ್ಶಪ್ರಾಯವಾಗಿವೆ” ಎಂದು ಶ್ಲಾಘಿಸಿದರು.
​ಕಾರ್ಯಕ್ರಮದಲ್ಲಿ ಸಸಿಹಿತ್ಲು ಕದಿಕೆ ಮೊಗವೀರ ಸಭಾದ ಅಧ್ಯಕ್ಷರಾದ ಗಿರೀಶ್ ಕುಮಾರ್ ಶ್ರೀಯಾನ್, ಶಾಯನ್ ರಿಚರ್ಡ್ ಕೈಪುಂಜಾಲು, ಸಂತೋಷ್ ಶ್ರೀಯಾನ್ ಕೈಪುಂಜಾಲು ಹಾಗೂ ಶಶಿಕಾಂತ್ ಪಡುಬಿದ್ರಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.



​ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಒಟ್ಟು 8 ಮಂದಿ ಫಲಾನುಭವಿಗಳಿಗೆ ಈ ಬಾರಿ ನೆರವು ವಿತರಿಸಲಾಯಿತು. ಸಂಸ್ಥೆಯು ಮೊದಲ ವರ್ಷ ಇಬ್ಬರಿಗೆ, ಕಳೆದ ವರ್ಷ ಆರು ಮಂದಿಗೆ ಸಹಾಯಹಸ್ತ ಚಾಚಿತ್ತು. ಈ ಬಾರಿ 8 ಮಂದಿಗೆ ಒಟ್ಟು 1.20 ಲಕ್ಷ ರೂ. ಸಹಾಯಧನ ವಿತರಿಸಲಾಗಿದೆ. ಮುಂದಿನ ವರ್ಷ 10 ಮಂದಿ ಫಲಾನುಭವಿಗಳಿಗೆ ಸಹಾಯಹಸ್ತ ನೀಡಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಕಿಶೋರ್ ಕಾಂಚನ್ ತಿಳಿಸಿದರು.
​ಕಾರ್ಯಕ್ರಮದ ಆರಂಭದಲ್ಲಿ ದಿವಂಗತ ಜೀವನ್ ಅವರ ಮಿತ್ರರಾದ ಶಯನ್ ರಿಚರ್ಡ್ ಮತ್ತು ಸಂತೋಷ್ ಶ್ರೀಯಾನ್ ಜಂಟಿಯಾಗಿ ದೀಪ ಬೆಳಗಿಸಿ, ದಿ. ಜೀವನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು.

ಜೀವನ್ ಸೇವಾ ಬ್ರಿಗೇಡ್‌ನ ಪದಾಧಿಕಾರಿಗಳಾದ ನಾಗೇಶ್ ಪೂಜಾರಿ, ಲೋಹಿತಾಕ್ಷ ಎಸ್. ಅಂಚನ್, ರಾಘವೇಂದ್ರ ಪ್ರಸಾದ್ ಸಾಲ್ಯಾನ್, ಸುನೀಲ್ ಪುತ್ರನ್, ಸುರೇಶ್ ಮೆಂಡನ್, ಹೇಮಚಂದ್ರ ಏರ್ಮಳ್, ದೇವದಾಸ್ ಕರ್ಕೇರ್ ಹಾಗೂ ಧನರಾಜ್ ಕುಂದರ್ ಅವರು ಅತಿಥಿಗಳನ್ನು ಗೌರವಿಸಿದರು. ಕುಮಾರಿ ಸಹನಾ ಆರ್. ಮೆಂಡನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
​
​ಈ ಸಹಾಯಹಸ್ತ ಯೋಜನೆಗೆ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಕಾರ್ಯಾಧ್ಯಕ್ಷರು ಹಾಗೂ ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ, ಮುಂಬೈ ನಲ್ಲಾಸೋಪಾರ ತುಳುಕೂಟ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ಶಶಿಧರ್ ಕೆ. ಶೆಟ್ಟಿ ಇನ್ನಂಜೆ, ಕಾಂದಿವಲಿಯ ಬಾಲಾಜಿ ಆಟೋ ಕಮರ್ಷಿಯಲ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಶಿವರಾಮ್ ಸಿ. ಪೂಜಾರಿ, ವಸಯಿ ಪೂರ್ವದ ಓಂ ಸಾಯಿ ಸಾಗರ್ ರೆಸ್ಟೋರೆಂಟ್‌ನ ಕೇಶವ್ ಎಸ್. ಸಾಲ್ಯಾನ್, ಹೋಟೆಲ್ ಡ್ರೀಮ್ ಲ್ಯಾಂಡ್‌ನ ರತ್ನಾಕರ್ ಶೆಟ್ಟಿ ಮತ್ತು ಸ್ನೇಹ ಕಂಟ್ರಿ ಬಾರ್‌ನ ಸತೀಶ್ ಆರ್. ಶೆಟ್ಟಿ ಅವರು ಆರ್ಥಿಕವಾಗಿ ಸಹಕರಿಸಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.



Related posts

ತುಂಬು ಗರ್ಭಿಣಿ ನೇಣು ಬಿಗಿದು ಆತ್ಮಹತ್ಯೆಗೆ ಶರಣು.

Mumbai News Desk

ಕುಲಾಲ ಸಮಾಜದ ಮಹಾದಾನಿ ಸುನಿಲ್ ಸಾಲ್ಯಾನ್ ಪ್ರಾಯೋಜಕತ್ವದಲ್ಲಿ ಬ್ಯಾಂಕಾಕ್, ಥೈಲ್ಯಾಂಡ್ ಪ್ರವಾಸ

Mumbai News Desk

ತೆಂಕು ತಿಟ್ಟು ಯಕ್ಷಗಾನದ ಅಗ್ರಮಾನ್ಯ ಭಾಗವತರಾದ ದಿನೇಶ್ ಅಮ್ಮಣ್ಣಾಯರು ಇನ್ನಿಲ್ಲ

Mumbai News Desk

ಸುರತ್ಕಲ್: ಸಿಲಿಂಡರ್ ಸ್ಫೋಟ ಪ್ರಕರಣ ತೀವ್ರವಾಗಿ ಗಾಯಗೊಂಡ ಮಹಿಳೆಯರಿಬ್ಬರ ಸಾವು

Mumbai News Desk

ಅಂತಾರಾಷ್ಟ್ರೀಯ ಮಾನವಾಧಿಕಾರ ಫೆಡರೇಶನ್ ಮಹಾರಾಷ್ಟ್ರ : ಪಾಲ್ಘರ್ ಜಿಲ್ಲಾ ಉಪಾಧ್ಯಕ್ಷರಾಗಿ ಪತ್ರಕರ್ತ ಯೋಗೇಶ್ ಪುತ್ರನ್ ನಿಯುಕ್ತಿ.

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನನೂತನ ಗುಡಿಯೊಳಗೆ ಗೋನಿವಾಸ ಸಂಪನ್ನ

Mumbai News Desk