September 6, 2026
Mumbai News Kannada
ಪ್ರಕಟಣೆ

ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್: ಜುಲೈ 26 ರಂದು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ






​ಭಾಯಂದರ್: ಶ್ರೀ ಗುರು ನಾರಾಯಣ ಭಜನಾ ಮಂಡಳಿ ಮೀರಾ-ಭಾಯಂದರ್ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶೈಕ್ಷಣಿಕ ಆರ್ಥಿಕ ನೆರವು ವಿತರಣೆ ಸಮಾರಂಭವನ್ನು ಜುಲೈ 26 ರಂದು ಸಂಜೆ 5.30ರಿಂದ ಭಾಯಂದರ್ (ಪೂರ್ವ) ಬಿ.ಪಿ. ರಸ್ತೆಯ ಗೊಡೆವ್ ನಾಕಾದಲ್ಲಿರುವ ಭಾರತ್ ಬ್ಯಾಂಕ್ ಮೇಲ್ಭಾಗದ ‘ಮಂಗಳಮೂರ್ತಿ ಸಭಾಂಗಣ’ದಲ್ಲಿ ಆಯೋಜಿಸಲಾಗಿದೆ.
​ಕಾರ್ಯಕ್ರಮದಲ್ಲಿ ಮೀರಾ-ಭಾಯಂದರ್ ಶಾಸಕ ನರೇಂದ್ರ ಎಲ್. ಮೆಹ್ತಾ, ಭಾರತ್ ಬ್ಯಾಂಕ್ ಅಧ್ಯಕ್ಷ ಸೂರ್ಯಕಾಂತ್ ಜಯ ಸುವರ್ಣ, ಸುಮತಿ ಶಿಕ್ಷಣ ಸಂಸ್ಥೆಯ ಅರುಣೋದಯ ರೈ ಬೆಳ್ಳಿಯೂರು ಗುತ್ತು, ಮಾಜಿ ಕಾರ್ಪೊರೇಟರ್ ಅರವಿಂದ್ ಎ. ಶೆಟ್ಟಿ, ‘ಅರುಣ್ ಕಾಮರ್ಸ್ ಕ್ಲಾಸ್’ನ ಅರುಣ್ ಪಕ್ಕಳ ಶೆಟ್ಟಿ, ಬಂಟ್ಸ್ ಸಂಘ ಮುಂಬಯಿಯ ಜಂಟಿ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಮೀರಾ-ಭಾಯಂದರ್ ಪ್ರದೇಶ ಬಂಟ್ಸ್ ಸಂಘ ಮುಂಬಯಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ, ಬಂಟ್ಸ್ ಫೋರಂ ಮೀರಾ-ಭಾಯಂದರ್ ಅಧ್ಯಕ್ಷ ಉದಯ ಶೆಟ್ಟಿ ಮಲ್ಲಾರು ಬೀಡು ಹಾಗೂ ‘ನಾಮ ಜವಾನರ್ (ರಿ.)’ ಮೀರಾ-ಭಾಯಂದರ್ ಅಧ್ಯಕ್ಷ ಚೇತನ್ ಎಸ್. ಶೆಟ್ಟಿ ಮೂಡಬಿದ್ರಿ ಭಾಗವಹಿಸಲಿದ್ದಾರೆ.
​ಇದಲ್ಲದೆ, ಸ್ಟಾರ್‌ವೇಸ್ ಎಲೆಕ್ಟ್ರಾನಿಕ್ಸ್‌ನ ತಿಮ್ಮಪ್ಪ ಪೂಜಾರಿ, ತುಳು ಕನ್ನಡ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಹರೀಶ್ ಸುವರ್ಣ, ಕರ್ನಾಟಕ ಮಹಾ ಮಂಡಲ ಮೀರಾ-ಭಾಯಂದರ್ ಕಾರ್ಯದರ್ಶಿ ನಯನಾ ಆರ್. ಶೆಟ್ಟಿ, ಮಹಿಳಾ ಸಮಾಜದ ಶೋಭಾ ಶೇಖರ್ ಶೆಟ್ಟಿ (ಭಾಯಂದರ್), ಲತಾ ಸಂತೋಷ್ ಶೆಟ್ಟಿ (ಭಾಯಂದರ್), ದೇವಿಕಾ ಸದಾಶಿವ ಕರ್ಕೇರ (ನಲಸೋಪರ) ಹಾಗೂ ಸಬಿತಾ ಜಿ. ಪೂಜಾರಿ (ಕಾಂದಿವಲಿ) ಅವರು ಗೌರವ ಉಪಸ್ಥಿತಿ ವಹಿಸಲಿದ್ದಾರೆ.
​ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಮತ್ತು ಅವರ ಶೈಕ್ಷಣಿಕ ಬೆಳವಣಿಗೆಗೆ ನೆರವು ನೀಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಶ್ರೀ ಗುರು ನಾರಾಯಣ ಭಜನಾ ಮಂಡಳಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
​ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀ ಗುರುನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸಮಿತಿ ಸದಸ್ಯರು ಹಾಗೂ ಮಹಿಳಾ ವಿಭಾಗದ ಸದಸ್ಯರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ : ಅ. 9ರಂದು ನಾಗರಪಂಚಮಿ ಉತ್ಸವ.

Mumbai News Desk

ಬೊಯಿಸರ್ ಸೋಮೇಶ್ವರ ಮಂದಿರ ನಾಳೆ (ಮಾ. 1)17ನೇ ವರ್ಧಂತ್ಯುತ್ಸವ

Mumbai News Desk

ಡಿ.14 ರಂದು ದಹಿಸರ್ ಹೊಟೇಲ್ ನವರತ್ನದಲ್ಲಿ 16ನೇ ವಾರ್ಷಿಕ ಅಯ್ಯಪ್ಪ ಮಹಾ ಪೂಜೆ

Mumbai News Desk

ಶ್ರೀ ದುರ್ಗಾ ಭಜನಾ ಸೇವಾ ಮಂಡಳ, ಜ.21ಕ್ಕೆ 17ನೇ ವಾರ್ಷಿಕ ಮಹಾಪೂಜೆ.

Mumbai News Desk

ಎ. 25, ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ

Mumbai News Desk

ಆಗಸ್ಟ್ 2: ಶ್ರೀ ರಾಮಾಭಿವಂದ್ಯ ಯಕ್ಷ ಸೇವಾ ಬಳಗ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಜಂಟಿ ಆಶ್ರಯದಲ್ಲಿ 12ನೇ ಸರಣಿ ತಾಳಮದ್ದಳೆ ಪ್ರಸ್ತುತಿ, ಕಲಾವಿದರಿಗೆ ಸನ್ಮಾನ

Mumbai News Desk