September 6, 2026
Mumbai News Kannada
ಪ್ರಕಟಣೆ

ಕುಲಾಲ ಸಂಘ ಮುಂಬಯಿ: ಮಾರ್ಚ್ 28ರಂದು ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಸತ್ಯನಾರಾಯಣ ಪೂಜೆ ಮತ್ತು 150ನೇ ತಿಂಗಳ ಭಜನಾ ಸಂಕೀರ್ತನೆ





ನವಿ ಮುಂಬಯಿ: ಕುಲಾಲ ಸಂಘ ಮುಂಬಯಿಯ ನವಿ ಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಶ್ರೀ ಸತ್ಯನಾರಾಯಣ ಪೂಜೆ, 150ನೇ ತಿಂಗಳ ಭಜನಾ ಸಂಕೀರ್ತನೆ, ಮಂಗಳಾರತಿ ಮತ್ತು ಹಳದಿ ಕುಂಕುಮ ಕಾರ್ಯಕ್ರಮವು ಮಾರ್ಚ್ 28ರಂದು ಶನಿವಾರ ಸಂಜೆ 2:30 ರಿಂದ ಖರ್ಘರ್‌ನ ಸೆಕ್ಟರ್-7, ಪ್ಲಾಟ್ ನಂಬರ್ 15 ಮತ್ತು 17ರಲ್ಲಿರುವ ಪಟೇಲ್ ಹೆರಿಟೇಜ್ ಸೊಸೈಟಿ ಹಾಲ್‌ನಲ್ಲಿ ನಡೆಯಲಿದೆ.

​ಶ್ರೀ ಸತ್ಯನಾರಾಯಣ ಪೂಜೆ ಮತ್ತು ಭಜನಾ ಸಂಕೀರ್ತನೆಯ ನಂತರ ನಡೆಯಲಿರುವ ಸಭಾ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ರಘು ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಲಿದೆ. ಮುಖ್ಯ ಅತಿಥಿಗಳಾಗಿ ಸಾನ್ಪಾಡದ ನಗರ ಸೇವಕಿ ಶೈಲಾ ಜೆ. ಕುಲಾಲ್ (ಪಾಟೀಲ್) ಮತ್ತು ನೆರೂಲ್ ಶ್ರೀ ಶನಿ ಮಂದಿರದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸರೋಜಿನಿ ಜೆ. ಪೂಜಾರಿ ಆಗಮಿಸಲಿದ್ದಾರೆ.

​ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್, ನವಿ ಮುಂಬಯಿ ಕಾರ್ಯಾಧ್ಯಕ್ಷರಾದ ಸದಾನಂದ ಕುಲಾಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸುಚಿತಾ ಬಂಜನ್, ನವಿ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಬೇಬಿ ಬಂಗೇರ ಉಪಸ್ಥಿತರಿರುವರು.

​ಈ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಸಂಘದ ಉಪಾಧ್ಯಕ್ಷ ಡಿ. ಐ. ಮೂಲ್ಯ, ಗೌರವ ಪ್ರಧಾನ ಕಾರ್ಯದರ್ಶಿ ಕರುಣಾಕರ್ ಸಾಲಿಯಾನ್, ಗೌರವ ಪ್ರಧಾನ ಕೋಶಾಧಿಕಾರಿ ಜಯ ಅಂಚನ್, ಆಧ್ಯಾತ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಮೂಲ್ಯ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಕೃಪೇಶ್ ಕುಲಾಲ್, ಪ್ರಸಾದ್ ಮೂಲ್ಯ, ಸಿ.ಎ. ಅಕ್ಷತ್ ಮೂಲ್ಯ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಶೋಭಾ ಎನ್. ಬಂಗೇರ, ಕಾರ್ಯದರ್ಶಿ ಉಷಾ ಆರ್. ಮೂಲ್ಯ, ಕೋಶಾಧಿಕಾರಿ ಪ್ರೇಮಾ ಮೂಲ್ಯ ಮತ್ತು ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ಹಾಗೂ ಉಪ ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.



Related posts

ಕರ್ನಾಟಕ ಸಮಾಜ ಸೂರತ್ : ಜೂ29 ತುಳು ಪರ್ಬ”, ಸಾಧಕರಿಗೆ ಸನ್ಮಾನ, ನೃತ್ಯ‌, ತುಳು ನಾಟಕ.

Mumbai News Desk

ಗೋರೆಗಾಂವ್ ಕರ್ನಾಟಕ ಸಂಘದ ವತಿಯಿಂದ ಮಾರ್ಚ್ 8ರಂದು ಮಹಿಳಾ ದಿನಾಚರಣೆ: ಪ್ರೊ. ನಳಿನಿ ವಿಶ್ವನಾಥ ಕಾರ್ನಾಡ್ ಸಂಸ್ಮರಣ ಪ್ರಶಸ್ತಿಗೆ ಅಮಿತಾ ಭಾಗ್ವತ್ ಆಯ್ಕೆ

Mumbai News Desk

ಪತ್ರಕರ್ತ ಪ್ರದೀಪ್ ಕುಮಾರೈ ಐಕಳಬಾವರವರಿಗೆ ಸುಳ್ಯ ಬಂಟರ ಸಂಘದಿಂದ ಸನ್ಮಾನ

Mumbai News Desk

   ನ. 19 ;   ಕುಲಾಲ ಸಂಘ ಮುಂಬಯಿ  93ನೇ ವಾರ್ಷಿಕ ಮಹಾಸಭೆ.

Mumbai News Desk

ಸಾಫಲ್ಯ ಸೇವಾ ಸಂಘ, ಮುಂಬಯಿ ಇದರ ದೀಪಾವಳಿ ಸಾಹಿತ್ಯ ಸ್ಪರ್ಧೆ 2024 : ಸಣ್ಣ ಕಥೆ ಮತ್ತು ಲೇಖನಗಳ ಸ್ಪರ್ಧೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಜ. 5ರಂದು ವಾರ್ಷಿಕ ಸ್ನೇಹ ಮಿಲನ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk