July 23, 2026
Mumbai News Kannada
ಪ್ರಕಟಣೆ

ಮಾ.29 : ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಜೀರ್ಣೋದ್ಧಾರ ಸಮಿತಿಯಿಂದ ಮುಂಬಯಿಯಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಕಾರ್ಯಕ್ರಮ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನೆ







ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಹೆಜಮಾಡಿ ಇದರ ಜೀರ್ಣೋದ್ಧಾರ ಸಮಿತಿ, ಮುಂಬಯಿ ಆಶ್ರಯದಲ್ಲಿ “ಸಿರಿ-ನುಡಿ” ವಿಶೇಷ ಉಪನ್ಯಾಸ ಹಾಗೂ ಜೀರ್ಣೋದ್ಧಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆಯು ದಿನಾಂಕ 29.03.2026ರ ಆದಿತ್ಯವಾರ ಸಾಯಂಕಾಲ 4.00 ಗಂಟೆಗೆ ಮುಂಬಯಿಯ ಸಾಂತಾಕ್ರೂಜ್ ಪೂರ್ವದಲ್ಲಿರುವ ಬಿಲ್ಲವ ಭವನದಲ್ಲಿ ನಡೆಯಲಿದೆ. ಅಂದು “ಒರಿಕುಮಾರೆ – ಬಿಲ್ಲೇರ್ ಸಿರಿಕುಲು” ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ.
​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬ್ರಹ್ಮಲಿಂಗೇಶ್ವರ ಅಬ್ಬಗದಾರಗ ಆಲಡೆ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಪುಷ್ಪರಾಜ್ ಎಸ್. ಶೆಟ್ಟಿ, ಪಟೇಲರ ಮನೆ ಹೆಜಮಾಡಿ ಅವರು ವಹಿಸಲಿದ್ದಾರೆ. ಆಡಳಿತ ಮೋಕ್ಷೇಸರರಾದ ಸುರೇಶ್ ಕೆ. ಶೆಟ್ಟಿ ಅವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಪ್ರಖ್ಯಾತ ಸಾಹಿತಿ, ತುಳು ಜಾನಪದ ತಜ್ಞ ಹಾಗೂ ರಂಗಕರ್ಮಿಗಳಾದ ಶಿಮಂತೂರು ಚಂದ್ರಹಾಸ ಸುವರ್ಣ ಅವರು ಉಪನ್ಯಾಸ ನೀಡಲಿದ್ದಾರೆ.
​ಅತಿಥಿಗಳಾಗಿ ಪ್ರಸಿದ್ಧ ಉದ್ಯಮಿ ಹಾಗೂ ಸಮಾಜ ಸೇವಕ ದಿನೇಶ್ ಕೆ. ಶೆಟ್ಟಿ ಕಾವೇರಿ ನಿವಾಸ ಹೆಜಮಾಡಿ, ಸಮಾಜ ಸೇವಕ ಮತ್ತು ಸಂಘಟಕ ಸಿ.ಎ. ಪ್ರಕಾಶ್ ಶೆಟ್ಟಿ ಕಲೀನಾ ಹಾಗೂ ಉದ್ಯಮಿ ಮತ್ತು ಸಮಾಜ ಸೇವಕ ಶ್ರೀ ಸದಾನಂದ ಕೆ. ಅಂಚನ್ ಥಾಣೆ ಅವರು ಭಾಗವಹಿಸಲಿದ್ದಾರೆ. ಜೀರ್ಣೋದ್ಧಾರ ಸಮಿತಿ ಮುಂಬಯಿ, ಅಧ್ಯಕ್ಷರಾದ ರತ್ನಾಕರ್ ಶೆಟ್ಟಿ ಮಟ್ಟಿಮನೆ ಅವರು ಉಪಸ್ಥಿತರಿರುವರು.
​ಸಮಿತಿಯ ಉಪಾಧ್ಯಕ್ಷರಾದ ರವೀಂದ್ರ ಜಿ. ಶೆಟ್ಟಿ ಗರಡಿಮನೆ, ಉಪಾಧ್ಯಕ್ಷ ಅಶೋಕ್ ದಾಸು ಶೆಟ್ಟಿ ಪಡುಮನೆ, ಸಿವಿ ಅಶ್ವಜಿತ್ ಹೆಜಮಾಡಿ, ಗೌರವ ಕಾರ್ಯದರ್ಶಿ ಓಂದಾಸ್ ಕಣ್ಣಂಗಾರ್ ಹಾಗೂ ಗೌರವ ಕೋಶಾಧಿಕಾರಿ ಹರೀಶ್ ಹೆಜಮಾಡಿ ಮತ್ತು ಸರ್ವ ಸದಸ್ಯರು ಕಾರ್ಯಕ್ರಮಕ್ಕೆ ಎಲ್ಲರಿಗೂ ಆದರದ ಸ್ವಾಗತವನ್ನು ಕೋರಿದ್ದಾರೆ.




Related posts

ಜ.14 ರಂದು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಜಯ ಸಿ.ಸುವರ್ಣ ಸಭಾಂಗಣದಲ್ಲಿಸುವರ್ಣಯುಗ ಗ್ರಂಥ ಬಿಡುಗಡೆ ಸಮಾರಂಭ

Mumbai News Desk

ಕರ್ನಾಟಕ ಸಂಘ, ಕಲ್ಯಾಣ: ಮಾ.8 ರಂದು ಮಹಿಳಾ ದಿನಾಚರಣೆ

Mumbai News Desk

ಶ್ರೀ ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್ ಇಲ್ಲಿ ನವೆಂಬರ್ 13 ರಂದುತುಳಸೀ ಪೂಜೆ ಹಾಗೂ ಕಾರ್ತಿಕ ದೀಪೋತ್ಸವ

Mumbai News Desk

ದಿ ಯಂಗ್ ಮೆನ್ಸ್ ಬೋವಿ ಅಸೋಷಿಯೇಶನ್, ಜ. 12 ರಂದು 88 ನೇ ವಾರ್ಷಿಕೋತ್ಸವ,

Mumbai News Desk

ಮಲಾಡ್ ಕುರಾರ್  ಶ್ರೀ ಮಹತೋಭಾರ ಶನೀಶ್ವರ ದೇವಸ್ಥಾನ: ಡಿ.1ರಂದು ಅಖಂಡ ಹರಿನಾಮ ಸಂಕೀರ್ತನೆ

Mumbai News Desk

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಜ. 16ಕ್ಕೆ ವರ್ದಂತಿ ಉತ್ಸವ ಮತ್ತು ಪ್ರಾಣ ಪ್ರತಿಷ್ಠಾ ಮಹೋತ್ಸವ

Mumbai News Desk