July 23, 2026
Mumbai News Kannada
ಪ್ರಕಟಣೆ

ಎ. 25, ತುಳು ಸಂಘ, ಬೋರಿವಲಿ16ನೇ ವಾರ್ಷಿಕೋತ್ಸವ, ಸಾಂಸ್ಕೃತಿಕ ವೈಭವ, ತುಳು ನಾಟಕ ಪ್ರದರ್ಶನ







ಮುಂಬಯಿ: ತುಳು ಸಂಘ, ಬೊರಿವಲಿ ಯ 16ನೇ ವಾರ್ಷಿಕೋತ್ಸವ ಸಮಾರಂಭವು ಎ. 25, ರಂದು ಶನಿವಾರ ಸಂಜೆ 5 ಗಂಟೆಯಿಂದ ಗ್ಯಾನ್ ಸಾಗರ್ ಅಂಪಿ ಥೀಯೇಟರ್, ಬೋರಿವಲಿ ಸಂಸ್ಕೃತಿ ಕೇಂದ್ರ, (ಅದಾನಿ ಇಲಿಕ್ಟ್ರಿಸಿಟಿ ಎದುರು) ಬೋರಿವಲಿ (ಪ.) ಮುಂಬಯಿ ಇಲ್ಲಿ ಸಂಘದ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಬಿ. ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಸಂಘದ ಅಧ್ಯಕ್ಷರಾದ ಹರೀಶ್ ಮೈಂದನ್ ರ ಉಪಸ್ಥಿತಿಯಲ್ಲಿ ಜರಗಲಿದೆ.

ಮುಖ್ಯ ಅತಿಥಿಯಾಗಿ ಸಮಾಜ ಸೇವಕ, ಸಾಫಲ್ಯ ಸೇವಾ ಸಂಘ ಮುಂಬಯಿಯ ಅಧ್ಯಕ್ಷ ಶ್ರೀನಿವಾಸ ಪಿ. ಸಾಫಲ್ಯ ಆಗಮಿಸಲಿದ್ದು ಸಮಾರಂಭದ ಗೌರವ ಅಥಿತಿಗಳಾಗಿ ಖ್ಯಾತ ಹೋಟೇಲು ಉದ್ಯಮಿ, ಶಿವ ಸಾಗರ್ ಫುಡ್ಸ್ & ರಿಸಾರ್ಟ್ಸ್ ಸಮೂಹದ ಎಂ.ಡಿ. ಎನ್. ಟಿ. ಪೂಜಾರಿ, ಬಾಗ್ಯ ಗ್ರೂಪ್ ಸಂಸ್ಥೆಯ ಸ್ಥಾಪಕ ಮತ್ತು ಮುಖ್ಯಸ್ಥ ಸಮಾಧಾನ್ ಪೂಜಾರಿ ಮತ್ತು ಗೋಕುಲ್ ಎಂಟರ್ಪ್ರೈಸಸ್ ಇದರ ಎಂ.ಡಿ. ಗೋಪಾಲಕೃಷ್ಣ ಜಿ. ಗಾಣಿಗ ಆಗಮಿಸಲಿರುವರು.ಸಂಘದಲ್ಲಿ ವಿವಿಧ ಜವಾಬ್ಧಾರಿಯನ್ನು ವಹಿಸಿ ಸುದೀರ್ಘ ಕಾಲದಿಂದ ಸೇವೆ ಮಾಡುತ್ತಾ ಬಂದಿರುವ ಸಂಘದ ಮಾಜಿ ಕೋಶಾಧಿಕಾರಿ ಚಂದ್ರಹಾಸ ಬೆಳ್ಚಡ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಗೌ. ಕೋಶಾಧಿಕಾರಿ ದಿವಾಕರ ಬಿ. ಕರ್ಕೇರ ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸವಿತ ಸಿ. ಶೆಟ್ಟಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಮನೋರಂಜನೆಯ ಅಂಗವಾಗಿ ಕರುಣಾಕರ ಕಾಪು ನಿರ್ದೇಶನದ ಯು. ಅರ್. ಚಂದನ್ ಬರೆದ “ಕೋರ್ದಬ್ಬು ತನಿಮಾನಿಗ”, ತುಳು ನಾಟಕ, ಸಂಘದ ಸದಸ್ಯರಿಂದ, ಮಕ್ಕಳಿಂದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮದಲ್ಲಿ ತುಳು – ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹಿಸಬೇಕಾಗಿ ತುಳು ಸಂಘ ಬೊರಿವಲಿ ಪರವಾಗಿ ಉಪಾಧ್ಯಕ್ಷ ರಜಿತ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಜೊತೆ ಕೋಶಾಧಿಕಾರಿ ಟಿ. ವಿ. ಪೂಜಾರಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಎಸ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ., ಮಹಿಳಾ ವಿಭಾಗದ ಕಾರ್ಯದರ್ಶಿ ವಿಜಯಲಕ್ಷ್ಮೀ ದೇವಾಡಿಗ, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಕಸ್ತೂರಿ ಎಸ್. ಶೆಟ್ಟಿ, ರಾಜೇಶ್ವರಿ ಜಿ. ಸುವರ್ಣ, ಜಯಂತಿ ಕೆ. ಶೆಟ್ಟಿ, ಸುಮತಿ ಸಾಲ್ಯಾನ್, ವಿಜಯಕುಮಾರ್ ಮೂಲ್ಕಿ, ಕುಸುಮ ಬಿ. ಶೆಟ್ಟಿ, ಪೂರ್ಣಿಮಾ ಆರ್. ಪೂಜಾರಿ, ವೇದ ಶೆಟ್ಟಿ, ಅಶೋಕ್ ಪೂಜಾರಿ, ಲಕ್ಷ್ಮಿ ದೇವಾಡಿಗ, ಜಯರಾಮ್ ಶೆಟ್ಟಿ, ಸರಸ್ವತಿ ರಾವ್, ಸುನಂದ ಶೆಟ್ಟಿ, ಪ್ರವೀಣ್ ಶೆಟ್ಟಿ, ವಿಶೇಷ ಆಮಂತ್ರಿತರಾದ ಈಶ್ವರ ಎಂ. ಐಲ್, ಯಶವಂತ್ ಪೂಜಾರಿ, ಬಾಲಕೃಷ್ಣ ಬಂಗೇರ, ವತ್ಸಲ ಪೂಜಾರಿ, ನಿತ್ಯಾನಂದ ಶೆಟ್ಟಿ , ಪ್ರಿಯ ಲಕ್ಷ್ಮಿ ಡಿ. ಉಪ್ಪೂರು ಮತ್ತು ವತ್ಸಲ ಪೈ ಗಡೇಕರ್. ಸಂಘದ ಸಲಹೆಗಾರರಾದ ವಾಸು ಕೆ. ಪುತ್ರನ್, ಪ್ರಕಾಶ್ ಶೆಟ್ಟಿ ಪೇಟೆಮನೆ, ಪ್ರದೀಪ್ ಶೆಟ್ಟಿ, ಕರುಣಾಕರ ಶೆಟ್ಟಿ, ಮುಂಡಪ್ಪ ಪಯ್ಯಡೆ ಮತ್ತು ಉಪಸಮಿತಿಗಳ ಎಲ್ಲಾ ಸದಸ್ಯರುಗಳು ವಿನಂತಿಸಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಗೈದ ಬೊರಿವಲಿ ಪರಿಸರದ ತುಳು ಕನ್ನಡಿಗರ ಮಕ್ಕಳನ್ನು ಗೌರವಿಸಲಾಗುತ್ತಿದ್ದು ಅಂತಹ ವಿದ್ಯಾರ್ಥಿಗಳ ವಿವರವನ್ನು ಸೂಕ್ತ ದಾಖಲೆಯೊಂದಿಗೆ ಸಮಾರಂಭಕ್ಕೆ ಐದು ದಿನ ಮೊದಲು ಸಂಘದ ಕಾರ್ಯಕರ್ತರನ್ನು ಸಂಪರ್ಕಿಸಿ ಸಂಘಕ್ಕೆ ತಲಪಿಸಬೇಕಾಗಿ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.



Related posts

ಶ್ರೀ ಕ್ಷೇತ್ರ ಶಂಕರಪುರದಲ್ಲಿ ನಾಳೆ (ಮಾ.16) ವಿಶ್ವ ಪ್ರಾಣಿ ಪಕ್ಷಿ ಮೋಕ್ಷ ದಿನಾಚರಣೆ.

Mumbai News Desk

ಕುಲಾಲ ಸಂಘ ಮುಂಬಯಿ, ಸಿ.ಎಸ್.ಟಿ. – ಮುಲುಂಡ್ – ಮಾನ್ ಖುರ್ಡ್ ಸಮಿತಿ, ಡಿ. 1 ರಂದು ವಾರ್ಷಿಕ ಸ್ನೇಹ ಸಮ್ಮಿಲನ, ಕಿರು ನಾಟಕ ಸಾಧಕರಿಗೆ ಸನ್ಮಾನ,

Mumbai News Desk

ದಹಿಸರ್: ಜುಲೈ 19ರಂದು ಶ್ರೀ ಶನಿಮಹಾತ್ಮಾ ಸೇವಾ ಸಮಿತಿಯ 40ನೇ ವಾರ್ಷಿಕ ಮಹಾಸಭೆ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಶ್ರೀ ಮಹಾವಿಷ್ಣು ಮಂದಿರ – ಡೊಂಬಿವಲಿ, ತಾ.26 ಮತ್ತು 27 ಅಕ್ಟೋಬರ್ ರಂದು 47ನೇ ವಾರ್ಷಿಕ ಭಜನಾ ಮಂಗಲೋತ್ಸವ ಮತ್ತು ಏಕಾಹ ಭಜನಾ ಕಾರ್ಯಕ್ರಮ

Mumbai News Desk

ಮುಂಬೈ: ಜೂನ್ 14ರಂದು ಶ್ರೀ ಭುವನೇಶ್ವರಿ ಸೇವಾ ಸಮಿತಿಯಿಂದ 43ನೇ ವಾರ್ಷಿಕ ಮಹೋತ್ಸವ ಮತ್ತು ಮೂರ್ತಿ ಪ್ರತಿಷ್ಠಾಪನಾ ಪೂಜೆ

Mumbai News Desk