September 6, 2026
Mumbai News Kannada
ಪ್ರಕಟಣೆ

ಜಯ ಸಿ. ಸುವರ್ಣ ಅಭಿಮಾನಿಗಳು ಹಾಗೂ ಮುಂಬಯಿ ಬಿಲ್ಲವರಿಂದ ಎ. 25ರಂದು ಭಜನಾ ಮಂಡಳಿ ಉದ್ಘಾಟನೆ





ಮುಂಬಯಿ: ಮಹಾರಾಷ್ಟ್ರದಾದ್ಯಂತ ನೆಲೆಸಿರುವ ಜಯ ಸಿ. ಸುವರ್ಣ ಅಭಿಮಾನಿಗಳು ಮತ್ತು ಮುಂಬಯಿ ಬಿಲ್ಲವರು ಒಂದಾಗಿ ಆರು ವಲಯಗಳ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಈ ಯೋಜನೆಯ ಭಾಗವಾಗಿ ಫೋರ್ಟ್‌ನಿಂದ ಜೋಗೇಶ್ವರಿ ತನಕದ ವ್ಯಾಪ್ತಿಯಲ್ಲಿ ಪ್ರಾದೇಶಿಕ ಸಮಿತಿಯನ್ನು ರಚಿಸಲಾಗುತ್ತಿದ್ದು, ಸಾಂತಾಕ್ರೂಜ್ ಪರಿಸರದ ‘ಶ್ರೀ ನಾರಾಯಣ ಗುರು ಭಜನಾ ಮಂಡಳಿ’ಯ ಉದ್ಘಾಟನಾ ಕಾರ್ಯಕ್ರಮವು ಏಪ್ರಿಲ್ 25ರ ಶನಿವಾರ ಸಂಜೆ 4 ಗಂಟೆಗೆ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದಲ್ಲಿ ನಡೆಯಲಿದೆ.ಕಾರ್ಯಕ್ರಮದ ವಿವರ:ಸಂಜೆ 4.00 – 5.00: ಭಜನಾ ಕಾರ್ಯಕ್ರಮಸಂಜೆ 5.00 – 6.00: ಕುಣಿತ ಭಜನೆಸಂಜೆ 6.00 – 6.30: ಶ್ರೀ ನಾರಾಯಣ ಗುರು ಭಜನಾ ಮಂಡಳಿ (ಸಾಂತಾಕ್ರೂಜ್ ಘಟಕ) ಉದ್ಘಾಟನೆಸಂಜೆ 6.30 – 7.30: ಸಭಾ ಕಾರ್ಯಕ್ರಮಸಂಜೆ 7.30ಕ್ಕೆ: ಪ್ರೀತಿ ಭೋಜನಮುಂಬಯಿ ಫೋರ್ಟ್‌ನಿಂದ ಜೋಗೇಶ್ವರಿ ತನಕದ ಜಯ ಸಿ. ಸುವರ್ಣ ಅಭಿಮಾನಿಗಳು, ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಸದಸ್ಯರು ಹಾಗೂ ಮುಂಬಯಿ ಬಿಲ್ಲವರು ಈ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಕ್ತ ಸಲಹೆ-ಸೂಚನೆಗಳನ್ನು ನೀಡುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಜಯ ಸಿ. ಸುವರ್ಣ ಅಭಿಮಾನಿಗಳ ಬಳಗದ ಅಧ್ಯಕ್ಷರಾದ ಸೂರ್ಯಕಾಂತ್ ಜಯ ಸುವರ್ಣ ವಿನಂತಿಸಿದ್ದಾರೆ.

ಉಪಾಧ್ಯಕ್ಷರುಗಳಾದ ಗಂಗಾಧರ್ ಜೆ. ಪೂಜಾರಿ, ಭಾಸ್ಕರ್ ಎಂ. ಸಾಲ್ಯಾನ್, ಹರೀಶ್ ಪೂಜಾರಿ, ಸುರೇಂದ್ರ ಎ. ಪೂಜಾರಿ, ಸದಾಶಿವ ಎ. ಕರ್ಕೇರ, ಸಂತೋಷ್ ಪೂಜಾರಿ; ಗೌರವ ಪ್ರಧಾನ ಕಾರ್ಯದರ್ಶಿ ಮೋಹನ್‌ದಾಸ್ ಜಿ. ಪೂಜಾರಿ; ಗೌರವ ಪ್ರಧಾನ ಕೋಶಾಧಿಕಾರಿ ಶಿವರಾಂ ಪೂಜಾರಿ, ಆರು ವಲಯಗಳ ಕಾರ್ಯಾಧ್ಯಕ್ಷರು ಹಾಗೂ ಉಪ ಕಾರ್ಯಾಧ್ಯಕ್ಷರುಗಳಾದ ಉಮೇಶ್ ಕಾಪು, ನಾರಾಯಣ್ ಪೂಜಾರಿ, ರವೀಂದ್ರ ಶಾಂತಿ, ಪ್ರಶಾಂತ್ ಪೂಜಾರಿ, ಅಶೋಕ್ ಕೋಟ್ಯಾನ್, ಸುರೇಶ್ ಸುವರ್ಣ, ನಿರಂಜನ್ ಪೂಜಾರಿ, ನರೇಶ್ ಪೂಜಾರಿ, ಉದಯ್ ಸುವರ್ಣ, ಶಶಿಕಲಾ ಕೋಟ್ಯಾನ್, ಪುಷ್ಪ ಅಮೀನ್, ಎ.ಕೆ. ಹರೀಶ್, ಚಂದ್ರಶೇಖರ್ ಪೂಜಾರಿ, ಗಣೇಶ್ ಡಿ. ಪೂಜಾರಿ, ಪ್ರದೀಪ್ ಪೂಜಾರಿ, ಮೋಹನ್ ಕೋಟ್ಯಾನ್, ರಮೇಶ್ ಸುವರ್ಣ, ನವೀನ್ ಪೂಜಾರಿ, ಸಂಜೀವ ಪೂಜಾರಿ, ಕೃಷ್ಣ ಪೂಜಾರಿ, ನಾರಾಯಣ ಸುವರ್ಣ, ದಯಾನಂದ್ ಪೂಜಾರಿ, ಹರೀಶ್ ಪೂಜಾರಿ, ರಂಜನ್ ಅಮೀನ್, ಶಿವಾಜಿ ತಲ್ವಾರ್, ದಿವಾಕರ್ ಸಾಲ್ಯಾನ್, ಸದಾಶಿವ ಸುವರ್ಣ, ಯುವರಾಜ್, ಸುಧಾಕರ್ ಕೆಂಮ್ತೂರು, ಬೇಬಿರಾಜ್ ಮತ್ತು ಶ್ರೀ ನಾರಾಯಣ ಗುರು ಭಜನಾ ಮಂಡಳಿಯ ಅಧ್ಯಕ್ಷ ಅಶೋಕ್ ಕುಖ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಕೇಶವ್ ಪೂಜಾರಿ, ಕೋಶಾಧಿಕಾರಿ ಸಬಿತಾ ಜಿ. ಪೂಜಾರಿ ಹಾಗೂ ವಲಯದ ಸಂಘಟಕರು ಮತ್ತು ಸಲಹೆಗಾರರು ಪ್ರಕಟಣೆಯಲ್ಲಿ ಭಾಗವಹಿಸುವಂತೆ ಕೋರಿದ್ದಾರೆ.



Related posts

ಮೇ 24: ಭಾಸ್ಕರ ರೈ ಕುಕ್ಕುವಳ್ಳಿ ಅವರಿಗೆ ಹುಟ್ಟೂರ ಸಮ್ಮಾನ –  ತಾಳಮದ್ದಳೆ

Mumbai News Desk

ಶ್ರೀ ಜಗದಂಬಾ ಮಂದಿರ, ಡೊಂಬಿವಲಿ (ಪ.): ಸೆ. 28ಕ್ಕೆ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಯಕ್ಷಗಾನ.

Mumbai News Desk

ಮೆಹತಾ ಕಾಲೇಜ್ ಐರೋಲಿ: ಜೂನ್ 27 ರಂದು ಬೆಳ್ಳಿ ಹಬ್ಬದ ನಿಮಿತ್ತ ವಿಶೇಷ ಕಾರ್ಯಕ್ರಮ: ಪರಂಪರೆಯಿಂದ ಪ್ರಗತಿಗೆ ಸಂವಾದ, ಸಾಧಕರಿಗೆ ಗೌರವಾರ್ಪಣೆ

Mumbai News Desk

ಇಂದು ಡೊಂಬಿ‌ವಲಿಯಲ್ಲಿ ಕಲಾ ಪ್ರಕಾಶ್ ಪ್ರತಿಷ್ಠಾನದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ

Mumbai News Desk

ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ ಕಾಪು : ಅ. 3ರಿಂದ ಶರನ್ನವತಾತ್ರಿ ಮಹೋತ್ಸವ.

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk