28 C
Mumbai
September 18, 2026
Mumbai News Kannada
ಮುಂಬಯಿ

ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲ ಡೊಂಬಿವಿಲಿ : ವಾರ್ಷಿಕ ಮಹಾಸಭೆ





ತನ್ನ ಉತ್ತಮ ಕಾರ್ಯವೈಖರಿಯಿಂದ ಸಂಸ್ಥೆಯು ಉತ್ತಮ ಹೆಸರು ಗಳಿಸಬೇಕು ” ಮಾಧವ್ ಪಿ.ನಾಯ್ಕ್.

ಸುದ್ದಿ ವಿವರ : ಪಿ.ಆರ್.ರವಿಶಂಕರ್.8483980035

*****************************

ಡೊಂಬಿವಿಲಿ ಪೂರ್ವದ ಶ್ರೀ ವರದ ಸಿದ್ಧಿ ವಿನಾಯಕ ಸೇವಾ ಮಂಡಳಿಯ 37ನೇ ವಾರ್ಷಿಕ ಮಹಾಸಭೆಯು ಶ್ರೀ ಮಾಧವ್ ಪಿ.ನಾಯ್ಕ್ ಇವರ ಅಧ್ಯಕ್ಷತೆಯಲ್ಲಿ

ಭಾನುವಾರ, 14 ಜೂನ್ 2026 ರಂದು ಶ್ರೀ ವರದ ಸಿದ್ಧಿವಿನಾಯಕ ಸೇವಾ ಭವನದಲ್ಲಿ ಜರಗಿತು

ಕು. ದ್ರುವಿಕಾ ಭಟ್, ಕು. ದೃಶಾನಿ ಭಟ್ ಮತ್ತು ಕು. ಅಧ್ಯಾ ಭಟ್ ಇವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು.

ಮಂಡಲದ ಗತವರ್ಷದ ಕಾರ್ಯಚಟುವಟಿಕೆಗಳ  ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಅಶೋಕ್ ಪಾಟ್ಕರ್ ಮತ್ತು  ಕಳೆದ ಸಾಲಿನ ಆಯವ್ಯಯ ಪಟ್ಟಿಯನ್ನು  ಕೋಶಾಧಿಕಾರಿ ನಾಗರಾಜ್ ಪಾಟ್ಕರ್ ಸಭೆಯಲ್ಲಿ ಮಂಡಿಸಿದರು.

ಸಭೆಯಲ್ಲಿ    ಉಪಸ್ಥಿತರಿದ್ದ ಸದಸ್ಯರ ವತಿಯಿಂದ ಶ್ರೀಮತಿ. ಜ್ಯೋತಿ ವಿ.ನಾಯಕ್ , ಶ್ರೀ ರಾಘವೇಂದ್ರ .ಎಸ್.ನಾಯಕ್, ಶ್ರೀ ಚಂದ್ರ ಪ್ರಭು, ಮತ್ತು ಶ್ರೀ ಪ್ರಭಾಕರ.ಡಿ.ಬೋರ್ಕರ್ ಇವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು. 

      ಅಧ್ಯಕ್ಷ ಶ್ರೀ ಮಾಧವ್ ಪಿ.ನಾಯ್ಕ್ ಮಾತನಾಡಿ  ” ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳವು ವರ್ಷದುದ್ದಕ್ಕೂ ಸಮಾಜಪರ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಜರಗಿಸುತ್ತಾ ಬಂದಿದೆ. ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳನ್ನು ಪ್ರೋತ್ಸಾಹಿಸುತ್ತದೆ. ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಪುಲ ಸ್ಥಳಾವಕಾಶವಿರುವ ಹಾಗೂ ವಿವಾಹ ಇನ್ನಿತ್ಯಾದಿ ಧಾರ್ಮಿಕ ಸಂಸ್ಕಾರಗಳಿಗೆ ಮಂಡಲದಲ್ಲಿ ಯೋಗ್ಯ ಸಭಾಭವನಗಳಿವೆ.

ಆಡಳಿತ ಮಂಡಳಿಯು ತನ್ನ ಉತ್ತಮ ಕಾರ್ಯವೈಖರಿಯಿಂದ ಜನರ ವಿಶ್ವಾಸ ಗಳಿಸಬೇಕು. ಆಗ ಎಲ್ಲರ ಬೆಂಬಲ ದೊರೆತು ಸಂಸ್ಥೆಯು ಇನ್ನೂ ಉತ್ತಮ ಹೆಸರು ಗಳಿಸುವುದು ” ಎಂದು ಅಭಿಪ್ರಾಯ ಪಟ್ಟರು. 

   ಪದಾಧಿಕಾರಿಗಳಾದ ಶ್ರೀ. ಮಾಧವ.ಪಿ.ನಾಯ್ಕ್ , ಶ್ರೀ.ಸದಾಶಿವ ನಾಯಕ್ , ಶ್ರೀ ಅಶೋಕ್ ಪಾಟ್ಕರ್ , ಶ್ರೀಮತಿ ವರ್ಷಾ ಎಸ್. ನಾಯಕ್ , ಶ್ರೀ ನಾಗರಾಜ ಪಾಟ್ಕರ್ ಹಾಗೂ ಶ್ರೀ ಮನೋಹರ್ ಪಾಟ್ಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು

        ಸುಕುಮಾರ್ ಪ್ರಭು ಸಭಾ ಕಾರ್ಯಕ್ರಮ  ನಿರೂಪಣೆಯನ್ನು ಮಾಡಿ ಕಳೆದ ಮೂರು ವರ್ಷಗಳ ಮಂಡಲದ ಚಟುವಟಿಕೆಗಳು ಹಾಗೂ ಭವಿಷ್ಯದ ಯೋಜನೆಗಳ ಬಗ್ಗೆ ವಿವರಿಸಿದರು.

ರಾಷ್ಟ್ರಗೀತೆಯೊಂದಿಗೆ ವಾರ್ಷಿಕ ಮಹಾಸಭೆಯು ಮುಕ್ತಾಯವಾಯಿತು.

ಸಭೆಯಲ್ಲಿ ಮುಂದಿನ ಐದು ವರ್ಷದ (2026 – 2031) ಆಡಳಿತ ಮಂಡಳಿಯ ಆಯ್ಕೆಯ ಪ್ರಕ್ರಿಯೆ ಜರಗಿತು. ಶ್ರೀ. ಮಾಧವ್ ಪಿ.ನಾಯ್ಕ್ : ಅಧ್ಯಕ್ಷರು , ಶ್ರೀಮತಿ ವರ್ಷಾ ಸುಬ್ರಾಯ ನಾಯಕ್ : ಉಪಾಧ್ಯಕ್ಷರು , ಶ್ರೀ ಸುಕುಮಾರ್ ಪ್ರಭು : ಕಾರ್ಯದರ್ಶಿ , ಶ್ರೀ ಅಶೋಕ್ ಪಾಟ್ಕರ್ : ಸಹ ಕಾರ್ಯದರ್ಶಿ , ಶ್ರೀ ನಾಗರಾಜ್ ಪಾಟ್ಕರ್ : ಖಜಾಂಚಿ ಹಾಗೂ ಶ್ರೀ ಮನೋಹರ್ ಪಾಟ್ಕರ್ ಸಹ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ.

ಸುದ್ದಿ ವಿವರ : ಪಿ.ಆರ್.ರವಿಶಂಕರ್

8483980035



Related posts

ತುಳು ಸಂಘ ಬೊರಿವಲಿ ; ಕನ್ನಡ ಶಾಲಾ ಮಕ್ಕಳಿಗೆ ನೋಟು ಪುಸ್ತಕ ವಿತರಣೆ

Mumbai News Desk

ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೀರಾಗಾಂವ್ 35ನೇ ವಾರ್ಷಿಕ ಮಹಾಪೂಜೆ

Mumbai News Desk

ಮಲಾಡ್ ಕನ್ನಡ ಸಂಘದ ವತಿಯಿಂದ ಯಕ್ಷಗಾನ ತಾಳಮದ್ದಳೆ ಸುಧನ್ವ ಮೋಕ್ಷ

Mumbai News Desk

ವಸಾಯಿ ತಾಲೂಕ ಹೋಟೆಲ್ ಅಸೋಸಿಯೇಷನ್ ಇದರ ನೂತನ ಅಧ್ಯಕ್ಷರಾಗಿ ಮೋಹನ್ ವಿ. ಶೆಟ್ಟಿ ಕಾಪು ಆಯ್ಕೆ,

Mumbai News Desk

ಮೂರನೇ ದಿನವೇ ಗರೀಬ್ ನಗರದ ಶೇ. 90 ರಷ್ಟು ಅತಿಕ್ರಮಣಗಳನ್ನು ತೆರವುಗೊಳಿಸಿದ ಪಶ್ಚಿಮ ರೈಲ್ವೆ

Mumbai News Desk

ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಶೈಕ್ಷಣಿಕ ನೆರವು, ದತ್ತು ಸ್ವೀಕಾರ ಕಾರ್ಯಕ್ರಮ

Mumbai News Desk