
ಮೂಲ್ಕಿ: ಅಂಚೆಯಣ್ಣನಾಗಿ ಗ್ರಾಮೀಣ ಜನರಿಗೆ ಸಹಕಾರಿಯಾಗಿ, ಅತ್ಯಂತ ನಿಷ್ಠೆಯಿಂದ ಕೆಲಸ ಮಾಡಿ ತಮ್ಮ ಮೇಲಾಧಿಕಾರಿಗಳಿಂದ ಪ್ರಶಂಸೆಯನ್ನು ಪಡೆದಿರುವ ಪೋಸ್ಟ್‌ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್‌ರವರ ಸೇವೆ ಎಲ್ಲರಿಗೂ ಮಾದರಿಯಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ, ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.
ಇಲ್ಲಿನ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ‘ಹೊಸ ಅಂಗಣ’ದ ‘ತಿಂಗಳ ಬೆಳಕು’ ಕಾರ್ಯಕ್ರಮದಡಿ, ಅಂಚೆ ಇಲಾಖೆಯಲ್ಲಿ 38 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾದ ಪೋಸ್ಟ್‌ಮ್ಯಾನ್ ಪ್ರಕಾಶ್ ಕೆ. ಸಾಲ್ಯಾನ್ ಚಿತ್ರಾಪು ಅವರನ್ನು ಸಾಧಕರ ನೆಲೆಯಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹರಿಕೃಷ್ಣ ಪುನರೂರು, “ಪ್ರಕಾಶ್ ಸಾಲ್ಯಾನ್ ಅವರು ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಬಂದಿದ್ದು, ಮುಂದೆಯೂ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಕೇಶವಾನಂದ ಗುರೂಜಿ ಚಿತ್ರಾಪು, ಬಂಕಿ ನಾಯಕರು, ‘ತುಳು ವರ್ಲ್ಡ್ ಫೌಂಡೇಶನ್’ ಅಧ್ಯಕ್ಷೆ ಭಾನುವತಿ ಶೆಟ್ಟಿ ಕಕ್ವಗುತ್ತು, ರೋಟರಿ ಕಾರ್ಯದರ್ಶಿ ಭುಜಂಗ ಕವತ್ತಾರು, ಗುರು ನಾರಾಯಣ ಸಂಘ ಕೆ. ಎಸ್. ರಾವ್ ನಗರದ ಅಧ್ಯಕ್ಷ ಮಹಾಬಲ ಸನಿಲ್, ಜಾನ್ ಕ್ವಾಡ್ರಾಸ್, ಅತಿಕಾರಿಬೆಟ್ಟು ಗ್ರಾ.ಪಂ. ಮಾಜಿ ಅಧ್ಯಕ್ಷ ಮನೋಹರ್ ಕೋಟ್ಯಾನ್, ವಲೇರಿಯನ್ ರೋಡ್ರಿಗಸ್, ಸುರೇಂದ್ರ ಜಿ. ಶೆಣೈ, ನಗರ ಪಂಚಾಯತ್ ಮಾಜಿ ಅಧ್ಯಕ್ಷೆ ಸರೋಜಿನಿ ಸುವರ್ಣ, ‘ಹೊಸ ಅಂಗಣ’ದ ಸಂಪಾದಕ ಹರಿಶ್ಚಂದ್ರ ಪಿ. ಸಾಲ್ಯಾನ್, ಉಮೇಶ್ ಮಾನಂಪಾಡಿ, ವಾಸು ಪೂಜಾರಿ ಚಿತ್ರಾಪು, ವಿಜಯ ಹರಿಶ್ಚಂದ್ರ ಸಾಲ್ಯಾನ್, ಶ್ವೇತಾ, ಗೀತಾ ಚಿತ್ರಾಪು ಮುಂತಾದವರು ಉಪಸ್ಥಿತರಿದ್ದರು.
ಹರಿಶ್ಚಂದ್ರ ಪಿ. ಸಾಲ್ಯಾನ್ ಸ್ವಾಗತಿಸಿದರು. ವಾಸು ಪೂಜಾರಿ ವಂದಿಸಿದರು. ದಿನೇಶ್ ಕೊಲ್ನಾಡು ಕಾರ್ಯಕ್ರಮ ನಿರೂಪಿಸಿದರು.




