28 C
Mumbai
September 18, 2026
Mumbai News Kannada
ಮುಂಬಯಿ

ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ ಭಾಯಂದರ್ ಶಾಖೆಯ ವತಿಯಿಂದ ಪ್ರತಿಭಾ ಪುರಸ್ಕಾರ, ‘ಆಟಿಡೊಂಜಿ ಕೂಟ’ ಕಾರ್ಯಕ್ರಮ





ಮೀರಾ ಭಾಯಂದರ್ ಶಾಖೆಯಲ್ಲಿ ಇನ್ನಷ್ಟು ಸಮಾಜ ಬಾಂಧವರು ಸಕ್ರಿಯರಾಗಬೇಕು: ಗಣೇಶ್ ಕಾಂಚನ್

ಮುಂಬೈ:
ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಮೀರಾ ಭಾಯಂದರ್ ಶಾಖೆಯ ವತಿಯಿಂದ ಜುಲೈ 26 ರಂದು ‘ಪ್ರತಿಭಾ ಪುರಸ್ಕಾರ’ ಮತ್ತು ‘ಆಟಿಡೊಂಜಿ ಕೂಟ’ ಕಾರ್ಯಕ್ರಮವು ‘ಮೌಲಿ ಬ್ಯಾಂಕ್ವೆಟ್’ (Mauli Banquet) ನಲ್ಲಿ ಅದ್ದೂರಿಯಾಗಿ ಜರಗಿತು.
ಆರಂಭದಲ್ಲಿ ಮಹಿಳಾ ವಿಭಾಗದ ಕಾರ್ಯದರ್ಶಿಯಾದ ಅಮೃತ ಸಾಲ್ಯಾನ್ ರವರು ಎಲ್ಲರನ್ನೂ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ಅಧ್ಯಕ್ಷರಾದ ಗಣೇಶ್ ಕಾಂಚನ್ ವಹಿಸಿದ್ದರು.


ವೇದಿಕೆಯಲ್ಲಿ ಉಪಾಧ್ಯಕ್ಷೆ ದಯಾವತಿ ಸುವರ್ಣ, ಟ್ರಸ್ಟಿಗಳಾದ ಪುರುಷೋತ್ತಮ ಕರ್ಕೇರ, ಚಂದ್ರಶೇಖರ, ಜೊತೆ ಕಾರ್ಯದರ್ಶಿ ಪ್ರೀತಿ ಶ್ರೀಯಾನ್, ಕೋಶಾಧಿಕಾರಿ ದೇವರಾಜ್ ಕುಂದರ್, ‘ಮೊಗವೀರ’ ನಿಯತಕಾಲಿಕದ ಸಂಪಾದಕ ಅಶೋಕ್ ಸುವರ್ಣ, ಶಾಖೆಯ ಸಂಯೋಜಕ ಪ್ರಜ್ವಲ್ ಸಾಲ್ಯಾನ್, ಶಾಖೆಯ ಕಾರ್ಯಾಧ್ಯಕ್ಷ ಹರೀಶ್ ಕೋಟ್ಯಾನ್, ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಸುರೇಶ್ ಕುಂದರ್, ಕಾರ್ಯದರ್ಶಿ ತಿಲಕ್ ಸುವರ್ಣ, ಕೋಶಾಧಿಕಾರಿ ಕಿಶೋರ್ ಉಪ್ಪೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಭಾವತಿ ಅಮೀನ್, ಯುವ ವಿಭಾಗದ ಕಾರ್ಯದರ್ಶಿ ಮಾನಸಿ ಪುತ್ರನ್, ಪ್ರಧಾನ ಕಚೇರಿಯ ಮಹಿಳಾ ವಿಭಾಗದ ಸುರೇಖಾ ಪುತ್ರನ್, ದೊಂಬಿವಲಿ ಶಾಖೆಯ ಗೀತಾ ಮೆಂಡನ್ ಮತ್ತು ನೈಗಾಂವ್-ವಿರಾರ್ ಶಾಖೆಯ ಯಶವಂತಿ ಕುಂದರ್ ಉಪಸ್ಥಿತರಿದ್ದರು.
ಪ್ರಭಾವತಿ ಅಮೀನ್ ರವರು ಪ್ರಾಸ್ತಾವಿಕ ಭಾಷಣ ಮಾಡಿದರು. ಅಶೋಕ್ ಸುವರ್ಣ ರವರು ‘ಆಟಿಡೊಂಜಿ ಕೂಟ’ದ ಪ್ರಾಮುಖ್ಯತೆಯ ಬಗ್ಗೆ ವಿವರಿಸಿದರು.


ಸುರೇಶ್ ಕುಂದರ್ ಅವರು ಶಾಖೆಯ ಅಭಿವೃದ್ಧಿಯ ಬಗ್ಗೆ ಮಾತನಾಡಿ, ಇತ್ತೀಚೆಗೆ ನಿಧನರಾದ ಶಾಖೆಯ ಮಾಜಿ ಕಾರ್ಯಾಧ್ಯಕ್ಷ ಗಂಗಾಧರ್ ಬಂಗೇರ ರವರನ್ನು ಸ್ಮರಿಸಿದರು.
ಹರೀಶ್ ಕೋಟ್ಯಾನ್ ರವರು ಕಾರ್ಯಕ್ರಮಕ್ಕೆ ಸಹಕರಿಸಿದ ಮಹಿಳಾ ವಿಭಾಗ ಮತ್ತು ಯುವ ವಿಭಾಗದವರನ್ನು ಅಭಿನಂದಿಸಿದರು. ಪ್ರಜ್ವಲ್ ಸಾಲ್ಯಾನ್ ಅವರು ಮಾತನಾಡುತ್ತಾ, “ಯುವ ವಿಭಾಗದವರು ಬಹಳ ಮುತುವರ್ಜಿಯಿಂದ ಈ ಕಾರ್ಯಕ್ರಮದ ಯಶಸ್ವಿಗಾಗಿ ಸಹಕರಿಸಿದ್ದಾರೆ. ಮುಂದೆಯೂ ಅವರಿಂದ ಇದೇ ರೀತಿಯ ಸಹಕಾರವನ್ನು ಬಯಸುತ್ತೇನೆ” ಎಂದರು.
ಮಂಡಳಿಯ ಅಧ್ಯಕ್ಷರಾದ ಗಣೇಶ್ ಕಾಂಚನ್ ರವರು ಮಾತನಾಡುತ್ತಾ ಮಂಡಳಿಯ ಒಂದು ವರ್ಷದ ಸಾಧನೆಗಳನ್ನು ವಿವರಿಸಿದರು. ಮಂಡಳಿಯ 125ನೇ ವರ್ಷದ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರವನ್ನು ಕೋರಿದರು. ಮೀರಾ ಭಾಯಂದರ್ ಶಾಖೆಯ ‘ಆಟಿಡೊಂಜಿ ಕೂಟ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ್ದಕ್ಕಾಗಿ ಶಾಖೆಯನ್ನು ಅಭಿನಂದಿಸಿದ ಅವರು, ಶಾಖೆಯ ಮುಂದಿನ ಅಭಿವೃದ್ಧಿಗೆ ಪ್ರಧಾನ ಕಚೇರಿಯ ಸಂಪೂರ್ಣ ಸಹಕಾರ ಇರುವುದಾಗಿ ತಿಳಿಸಿದರು.


ಈ ಸಂದರ್ಭದಲ್ಲಿ 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಮೀರಾ ಭಾಯಂದರ್ ಪರಿಸರದ ವಿದ್ಯಾರ್ಥಿಗಳಿಗೆ ಪ್ರಜ್ವಲ್ ಸಾಲ್ಯಾನ್ ರವರ ‘ಯಶೋದೇವ ಫೌಂಡೇಶನ್’ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಇತ್ತೀಚೆಗೆ ಸಿಎ (CA) ಪೂರ್ಣಗೊಳಿಸಿದ ಯುವ ವಿಭಾಗದ ಕಾರ್ಯಾಧ್ಯಕ್ಷೆ ಆಶಿಕಾ ಕಾಂಚನ್ ರವರ ತಂದೆ-ತಾಯಿಯನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.


ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲನೆಯ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾರ್ಥನೆಯನ್ನು ಕಲಾವತಿ ತಿಂಗಳಾಯ, ದೇವಕಿ ಕೋಟ್ಯಾನ್ ಮತ್ತು ಶಾಂಭವಿ ಕೋಟ್ಯಾನ್ ನೆರವೇರಿಸಿದರು.
ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ಮತ್ತು ಮಹಿಳೆಯರಿಂದ ನೃತ್ಯ, ಹುಲಿ ನೃತ್ಯ ಹಾಗೂ ‘ಆಟಿ ಕಳಂಜ’ ವೇಷ ಪ್ರದರ್ಶನ ನಡೆದು ಸಭೆಯಲ್ಲಿದ್ದವರನ್ನು ರಂಜಿಸಿತು. ಕಾರ್ಯಕ್ರಮದ ಕೊನೆಯಲ್ಲಿ ಮಹಿಳಾ ವಿಭಾಗದವರಿಂದ ಸಿದ್ಧಪಡಿಸಿದ ಬಗೆಬಗೆಯ ತಿಂಡಿ-ತಿನಿಸುಗಳನ್ನು ಹಾಜರಿದ್ದ ಎಲ್ಲರಿಗೂ ವಿತರಿಸಲಾಯಿತು.
ಅಮೃತ ಸಾಲ್ಯಾನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವ ಸಮುದಾಯಕ್ಕೆ ತಿಳಿಯಪಡಿಸುವ ಕಾರ್ಯ ಅರ್ಥಪೂರ್ಣ:
– ಪ್ರಜ್ವಲ್ ದೇವದಾಸ್ ಸಾಲ್ಯಾನ್
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಶೋದೇವ ಫೌಂಡೇಶನ್‌ನ ಪ್ರವರ್ತಕ ಪ್ರಜ್ವಲ್ ದೇವದಾಸ್ ಸಾಲ್ಯಾನ್ ಮಾತನಾಡಿ, “ಈ ಪರಿಸರದ ಸಮಾಜ ಬಾಂಧವರು ಯಾವುದೇ ಕಾರ್ಯಕ್ರಮ ನಡೆದರೂ ಬಹಳ ಉತ್ಸಾಹದಿಂದ ಅಪಾರ ಸಂಖ್ಯೆಯಲ್ಲಿ ಒಗ್ಗೂಡುತ್ತಾರೆ. ಆಸಕ್ತ ಬಂಧುಗಳಿಗೆ ಸಹಕಾರ ನೀಡುವ ಮಂಡಳಿಯ ಯೋಜನೆಯೊಂದಿಗೆ ನಮ್ಮ ಫೌಂಡೇಶನ್ ಕೂಡ ಕೈಜೋಡಿಸುತ್ತದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಮಾಡಿ ಸಮಾಜಕ್ಕೂ ತಮ್ಮ ಸೇವೆಯನ್ನು ನೀಡಬೇಕು. ನಮ್ಮ ನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಯುವ ಸಮುದಾಯಕ್ಕೆ ಪರಿಚಯಿಸುವ ಇಂತಹ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ” ಎಂದರು.



Related posts

ಮುಂಬಯಿ ನ್ಯೂಸ್ ವೀಕ್ಷಕರ /ಓದುಗರ ಮನೆ, ಮನೆ ಗಣಪತಿ

Mumbai News Desk

ಜಿ.ಎಸ್.ಬಿ.ಎಸ್. ಮೆಡಿಕಲ್ ಟ್ರಸ್ಟ್ ಸುವರ್ಣ ಮಹೋತ್ಸವ ಯೋಜನೆ, ಮಾಹಿಮ್ ಘಟಕದ ವಿಸ್ತರಣೆಯ ಉದ್ಘಾಟನೆ

Mumbai News Desk

ಭವನ್ಸ್ ಕಾಲೇಜು ಕ್ಯಾಂಪಸ್‌ನಲ್ಲಿ ಅಯ್ಯಪ್ಪ ಸ್ವಾಮಿಯ 28ನೇ ವಾರ್ಷಿಕ ಮಹಾಪೂಜೆ

Mumbai News Desk

ಮೀರಾರೋಡ್ ನಲ್ಲಿ ಕೀರ್ತಿಶ್ರೀ ಭಾಸ್ಕರ್ ಮೂಲ್ಯ ಅವರ ಶ್ರೀ ಕಟೀಲೇಶ್ವರಿ ನಾಟ್ಯ ಕಲಾ ಮಂದಿರದ 2ನೇ ವಾರ್ಷಿಕೋತ್ಸವ ಸಂಭ್ರಮ

Mumbai News Desk

ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು,  ಮಹಾರಾಷ್ಟ್ರ ಘಟಕದ ರಜತ ಮಹೋತ್ಸವ ಸಂಭ್ರಮಾಚರಣೆಯ ಪತ್ರಿಕಾಗೋಷ್ಠಿ, 

Mumbai News Desk

ಪಶ್ಚಿಮ ವಿಭಾಗ ಸಾರ್ವಜನಿಕ ನವರಾತ್ರೋತ್ಸ ಮಂಡಳಿ ಮಂಗಳವಾರದ ಸಾಂಸ್ಕೃತಿಕ ಕಾರ್ಯಕ್ರಮ

Mumbai News Desk