28 C
Mumbai
September 19, 2026
Mumbai News Kannada
ಮುಂಬಯಿ

ಕಲ್ವಾದಲ್ಲಿ ವಿಜೃಂಭಣೆಯಿಂದ ಜರುಗಿದ ‘ಆಟಿಡೊಂಜಿ ದಿನ’ ಸಂಭ್ರಮ





ಚಿತ್ರ: ಧನಂಜಯ್ ಪೂಜಾರಿ, ವರದಿ: ಇನ್ನಂಜೆ ಜಯರಾಮ್

ಮುಂಬೈ: ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಕಲ್ವಾ ಸ್ಥಳೀಯ ಕಚೇರಿಯ ವತಿಯಿಂದ ತುಳುನಾಡಿನ ವೈಭವ, ಜಾನಪದ ಸಿರಿ ಹಾಗೂ ಪರಂಪರೆಯನ್ನು ಮರುಕಳಿಸುವ ‘ಆಟಿಡೊಂಜಿ ದಿನ’ ಕಾರ್ಯಕ್ರಮವು ಕಲ್ವಾ ರೇತಿ ಬಂದರ್‌ನ ಅಮಿತ್ ಗಾರ್ಡನ್ ಹೋಟೆಲ್ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು.

ಕಾರ್ಯಕ್ರಮಕ್ಕೆ ದೀಪ ಪ್ರಜ್ವಲಿಸಿ, ಕಲ್ಪವೃಕ್ಷದ ಹೂ ಅರಳಿಸಿ ಹಾಗೂ ತುಳಸಿಕಟ್ಟೆಗೆ ನೀರೆರೆಯುವ ಮೂಲಕ ತುಳುನಾಡಿನ ಸಾಂಪ್ರದಾಯಿಕ ವೈಭವದೊಂದಿಗೆ ಚಾಲನೆ ನೀಡಲಾಯಿತು.

ಯುವ ಪೀಳಿಗೆಯನ್ನು ಸಂಘಟಿತರನ್ನಾಗಿ ಮಾಡಲು ಇಂತಹ ಕಾರ್ಯಕ್ರಮಗಳು ಅಗತ್ಯ: ಹರೀಶ್ ಸಾಲ್ಯಾನ್ ಭಜಗೋಳಿ

ಸಭಾ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದ ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ ಹರೀಶ್ ಡಿ. ಸಾಲ್ಯಾನ್ ಭಜಗೋಳಿ ಅವರು, “ಮುಂಬೈ ನಗರದಲ್ಲಿ ನಮ್ಮ ಸಮಾಜದ ಬಂಧುಗಳನ್ನು, ವಿಶೇಷವಾಗಿ ಯುವ ಪೀಳಿಗೆಯನ್ನು ಸಂಘಟಿತರನ್ನಾಗಿ ಮಾಡಲು ಮತ್ತು ತುಳುನಾಡಿನ ವೈಭವೋಪೇತ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಆಟಿಡೊಂಜಿ ದಿನದಂತಹ ಕಾರ್ಯಕ್ರಮಗಳು ಅತ್ಯಂತ ಅಗತ್ಯ. ನಮ್ಮ ಸಂಘಟನೆಯು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಪ್ರತಿಯೊಬ್ಬರ ಸಹಕಾರ ಮುಖ್ಯ” ಎಂದು ಹೇಳಿದರು.

ವಿದ್ಯಾಸಂಸ್ಥೆಯ ಕನಸಿಗೆ ಬೆಂಬಲಿಸಿ: ಹರೀಶ್ ಜಿ. ಅಮೀನ್

ಬಿಲ್ಲವರ ಅಸೋಸಿಯೇಷನ್ ಮುಂಬೈ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಜಿ. ಅಮೀನ್ ಅವರು ಅಧ್ಯಕ್ಷೀಯ ಭಾಷಣ ಮಾಡುತ್ತಾ, “ಮುಂಬೈನಲ್ಲಿ ಬಿಲ್ಲವ ಸಮಾಜದ ಸ್ವಂತ ವಿದ್ಯಾಸಂಸ್ಥೆಯ ಸ್ಥಾಪನೆಯ ದೊಡ್ಡ ಕನಸಿದೆ. ಈ ಕನಸನ್ನು ನನಸು ಮಾಡಲು ಪ್ರತಿಯೊಬ್ಬ ಸಮಾಜ ಬಾಂಧವರೂ ಕೈಜೋಡಿಸಬೇಕು. ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಿಂದ ಮಾತ್ರ ನಮ್ಮ ಮುಂಬರುವ ಪೀಳಿಗೆ ಉತ್ತಮ ಭವಿಷ್ಯ ಕಂಡುಕೊಳ್ಳಲು ಸಾಧ್ಯ” ಎಂದು ಪ್ರತಿಪಾದಿಸಿದರು.

ಕನ್ನಡ ಸಂಘ ವರ್ತಕ್‌ನಗರ ಠಾಣೆಯ ಅಧ್ಯಕ್ಷರಾದ ಶೇಖರ್ ಕೆ. ಶೆಟ್ಟಿ ಅವರು ಮಾತನಾಡಿ, “ಮಹಾನಗರ ಮುಂಬೈನಲ್ಲಿ ನಮ್ಮ ನಾಡಿನ ಮೂಲ ಜಾನಪದ ಕಲೆ ಮತ್ತು ಆಚಾರ-ವಿಚಾರಗಳನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ” ಎಂದರು.

ಗೋಡಬಂದರ್ ಕನ್ನಡ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ಚಂದ್ರಶೇಖರ್ ವಿ. ಶೆಟ್ಟಿ ಮಾತನಾಡಿ, “ಸಂಘ-ಸಂಸ್ಥೆಗಳು ಯುವಜನತೆಯನ್ನು ಸಂಸ್ಕೃತಿಯ ಕಡೆಗೆ ಆಕರ್ಷಿಸಲು ಇಂತಹ ಹಬ್ಬಗಳು ಸೇತುವೆಯಾಗಿ ಕೆಲಸ ಮಾಡುತ್ತವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶ್ರೀ ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ದೀಪಕ್ ಕೋಟ್ಯಾನ್ ಅವರು ಕೂಡ ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು.

ರೈಲು ಪ್ರಯಾಣದ ವೇಳೆ ಸ್ವಂತ ಪ್ರಾಣದ ಹದಗೆಡದೆ ಸಾಹಸ ಮೆರೆದು ಸಮಯಪ್ರಜ್ಞೆ ತೋರಿದ ನಾಗರಾಜ್ ಅವರನ್ನು ವೇದಿಕೆಯಲ್ಲಿ ಪ್ರಮುಖ ಗಣ್ಯರ ಉಪಸ್ಥಿತಿಯಲ್ಲಿ ಶಾಲ ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿ ಸನ್ಮಾನಿಸಲಾಯಿತು.

ಪ್ರಮುಖ ಗಣ್ಯರ ಉಪಸ್ಥಿತಿ

ಕಾರ್ಯಕ್ರಮದ ವೇದಿಕೆಯಲ್ಲಿ ಬಿಲ್ಲವರ ಅಸೋಸಿಯೇಷನ್ ಮುಂಬಯ ಅಧ್ಯಕ್ಷ ಹರೀಶ್ ಜಿ. ಅಮೀನ್, ಉಪಾಧ್ಯಕ್ಷರಾದ ಪುರುಷೋತ್ತಮ ಎಸ್. ಕೋಟ್ಯಾನ್, ಮೋಹನ್ ಸಿ. ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿ ಹರೀಶ್ ಜಿ. ಸಾಲ್ಯಾನ್, ಗೌರವ ಕೋಶಾಧಿಕಾರಿ ರವಿ ಎಸ್. ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ. ಕೋಟ್ಯಾನ್ ಉಪಸ್ಥಿತರಿದ್ದರು.

ಹಾಗೆಯೇ ಕನ್ನಡ ಸಂಘ ವರ್ತಕ್‌ನಗರ ಠಾಣೆ ಅಧ್ಯಕ್ಷ ಶೇಖರ್ ಕೆ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಗಂಧಿ ಎಸ್. ಶೆಟ್ಟಿ, ಗೋಡಬಂದರ್ ಕನ್ನಡ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಚಂದ್ರಶೇಖರ್ ವಿ. ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ವಂದನಾ ಡಿ. ಶೆಟ್ಟಿ, ಹೊಟೇಲ್ ಉದ್ಯಮಿ ಚಂದ್ರಹಾಸ್ ಶೆಟ್ಟಿ, ಸಮಾಜ ಸೇವಕ ಮಹೇಶ್ ಕರ್ಕೇರ, ಶ್ರೀ ಗೆಜ್ಜೆಗಿರಿ ಕ್ಷೇತ್ರದ ಉಪಾಧ್ಯಕ್ಷ ದೀಪಕ್ ಕೋಟ್ಯಾನ್, ಬಿಲ್ಲವರ ಅಸೋಸಿಯೇಷನ್ ಭಿವಂಡಿ ಸ್ಥಳೀಯ ಕಚೇರಿ ಮಾಜಿ ಕಾರ್ಯಾಧ್ಯಕ್ಷ ರತ್ನಾಕರ್ ಜಿ. ಪೂಜಾರಿ, ಪೂಜಾರಿ ಟ್ರಾವೆಲ್ಸ್ ಭಿವಂಡಿ ಮಾಲಕ ರಾಜೇಶ್ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಕಲ್ವಾ ಸ್ಥಳೀಯ ಕಚೇರಿಯ ಗೌರವ ಕಾರ್ಯಾಧ್ಯಕ್ಷರುಗಳಾದ ಬಿಸಿ ಅಮೀನ್, ಆರ್. ಕೆ. ಅಮೀನ್, ಉಪಾಧ್ಯಕ್ಷ ಉಮೇಶ್ ಕರ್ಕೇರ, ಗೌರವ ಕಾರ್ಯದರ್ಶಿ ಮಮತಾ ಅಮೀನ್ ಹಾಗೂ ಗೌರವ ಕೋಶಾಧಿಕಾರಿ ಆನಂದ್ ಬಂಗೇರ ಉಪಸ್ಥಿತರಿದ್ದರು.

ಸಾಂಸ್ಕೃತಿಕ ಮೆರುಗು ಮತ್ತು ತುಳುನಾಡ ಖಾದ್ಯ

ಸುಕನ್ಯಾ ಪೂಜಾರಿ, ಚಿನ್ಮಯ್ ಸಾಲ್ಯಾನ್ ಹಾಗೂ ರವಿ ಸನಿಲ್ ಅವರ ನಿರೂಪಣೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು. ಕೋಳಿ ಅಂಕದ ಪ್ರಾತ್ಯಕ್ಷಿಕೆ, ತೆಂಗಿನಕಾಯಿ ಕಟ್ಟುವ ಸ್ಪರ್ಧೆ, ತುಳುನಾಡಿನ ಸಾಂಪ್ರದಾಯಿಕ ಆಟಿ ಕಳಂಜಿ ಕುಣಿತ ಹಾಗೂ ಮಹಿಳಾ ವಿಭಾಗದ ನೃತ್ಯ ರೂಪಕಗಳು ಸಭಿಕರ ಮನಸೂರೆಗೊಂಡವು. ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ಸಭಾ ಕಾರ್ಯಕ್ರಮದ ಕೊನೆಯಲ್ಲಿ ತುಳುನಾಡಿನ ಆಟಿ ತಿಂಗಳ ವೈವಿಧ್ಯಮಯ ಸಾಂಪ್ರದಾಯಿಕ ಅಡುಗೆಗಳ ಸವಿಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.



Related posts

ವರ್ಲಿ ಶ್ರೀ ಅಪ್ಪಾಜಿ ಬೀಡು ಫೌಂಡೇಶನ್: ರಮೇಶ್ ಗುರುಸ್ವಾಮಿ ಗೆ ನುಡಿ ನಮನ.

Mumbai News Desk

ಶ್ರೀ ಬಾಲಾಜಿ ಕೋ-ಆಪರೇಟಿವ್ ಸೊಸೈಟಿಯ 36ನೇ ವಾರ್ಷಿಕ ಮಹಾಸಭೆ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ )ಥಾಣೆ ಸಮಿತಿಯ ಅಧ್ಯಕ್ಷರಾಗಿ ಗೋಪಾಲ ಎಸ್ ಚಂದನ್ ಆಯ್ಕೆ.

Mumbai News Desk

ಮರಾಠ ಕೋಟಾ ಬೇಡಿಕೆಗೆ ಸರ್ಕಾರದ ಒಪ್ಪಿಗೆ, ಪ್ರತಿಭಟನೆ ಅಂತ್ಯ

Mumbai News Desk

ಕುಲಾಲ ಸಂಘ ಮುಂಬಯಿ: ಮಂಗಳೂರು ಕುಲಾಲ ಭವನ ಉದ್ಘಾಟನೆ: ಸಿಎಸ್‌ಟಿ-ಮುಲುಂಡ್-ಮಾನ್ಖುರ್ದ್ ಸ್ಥಳೀಯ ಸಮಿತಿಯವರಿಂದ ಆಮಂತ್ರಣ ಪತ್ರಿಕೆ ವಿತರಣಾ ಸಮಾರಂಭ

Mumbai News Desk

ಜಾಗತಿಕ ಬಂಟರ ಸಂಘಗಳ ಒಕ್ಕೂಟ: ಡಾ. ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ ಸಭಾಭವನದ ಕಾಮಗಾರಿಯ ಕುರಿತು ವಿಶೇಷ ಸಭೆ

Mumbai News Desk