29 C
Mumbai
September 24, 2026
Mumbai News Kannada
ನಿಧನ ಸುದ್ದಿ

ಖಾಸಗಿ ಹೋಟೆಲ್ ಉದ್ಯೋಗಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಕಲ್ಮಾಡಿ ನಿವಾಸಿ ಕೃತಿ ಬಂಗೇರಾ ಆತ್ಮಹತ್ಯೆ



ಉಡುಪಿಯ ಕಲ್ಮಾಡಿ ನಿವಾಸಿ ರತ್ನಾ ಅವರ ಪುತ್ರಿ, ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಕೃತಿ ಬಂಗೇರಾ (27) ಎಂಬ ಯುವತಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಡಿಯಾಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಕಳೆದ ಸುಮಾರು ಐದು ತಿಂಗಳಿಂದ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡಿದ್ದರು. ಆಗಸ್ಟ್ 6 ರಂದು ತಾಯಿ ರತ್ನಾ ಅವರು ಕೆಲಸದ ನಿಮಿತ್ತ ಮಲ್ಪೆಗೆ ಹಾಗೂ ಎರಡನೇ ಪುತ್ರಿ ಉಡುಪಿಗೆ ತೆರಳಿದ್ದರು. ಮಧ್ಯಾಹ್ನ ಸುಮಾರು 1 ಗಂಟೆಗೆ ತಾಯಿ ಮನೆಗೆ ಹಿಂದಿರುಗಿದಾಗ, ಕೃತಿ ಅವರನ್ನು ಮನೆಯ ಹೊರಗೆ ಕಳುಹಿಸಿ ಒಳಗಿನಿಂದ ಬಾಗಿಲು ಹಾಕಿಕೊಂಡಿದ್ದರು. ತಾಯಿ ಎಷ್ಟೇ ಬಾಗಿಲು ತಟ್ಟಿದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಅವರು ತಕ್ಷಣ ತಮ್ಮ ಸಹೋದರ ಚಂದ್ರ ಅವರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಬಳಿಕ ಬಾಗಿಲು ಒಡೆದು ಒಳಗೆ ಪ್ರವೇಶಿಸಿ ನೋಡಿದಾಗ, ಬೆಡ್‌ರೂಮ್‌ನಲ್ಲಿ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕೃತಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.



Related posts

ಕಲಾವಿದ, ಜೈ ಕರ್ನಾಟಕ ಸಂಸ್ಥೆಯ ಸ್ಥಾಪಕ ಸದಸ್ಯ ಉದಯ ಕುಮಾರ್ ಹೆಜಮಾಡಿ ನಿಧನ

Mumbai News Desk

ಸಾಂತಾಕ್ರೂಜ್ ಪ್ರಭಾತ್ ಕಾಲೋನಿಯ ಸಮಾಜ ಸೇವಕ ಶ್ರೀ ಅಶೋಕ್ ಪೂಜಾರಿ ನಿಧನ

Mumbai News Desk

ಚಂದ್ರಾವತಿ ಬಿ. ಅಮೀನ್ (ಚಂದ್ರಮುಖಿ) ನಿಧನ

Mumbai News Desk

ಹೆಜಮಾಡಿ: ಆಶಾ ಕಾರ್ಯಕರ್ತೆ, ಧಾರ್ಮಿಕ ಮುಖಂಡೆ ಸರೋಜಿನಿ ಸಂಜೀವ ಮಾಸ್ಟರ್ ನಿಧನ

Mumbai News Desk

ಜೋಗೇಶ್ವರಿ: ಹೋಟೆಲ್ ಉದ್ಯಮಿ, ಸಂಘಟಕ ನಾರಾಯಣ ಪೂಜಾರಿ ನಿಧನ

Mumbai News Desk

ಹಿರಿಯ ರಂಗನಟಿ ಚಂದ್ರಪ್ರಭಾ ಸುಧಾಕರ ಉದ್ಯಾವರ ನಿಧನ

Mumbai News Desk