July 23, 2026
Mumbai News Kannada
ಪ್ರಕಟಣೆ

ಜಗಜ್ಯೋತಿ ಕಲಾವೃಂದ ಮುಂಬಯಿ : ಫೆ. 9ರಂದು 38ನೇ ವಾರ್ಷಿಕೋತ್ಸವ, ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ







ಜಗಜ್ಯೋತಿ ಕಲಾವೃಂದ ಮುಂಬೈ ಇದರ 38ನೇ ವಾರ್ಷಿಕೋತ್ಸವ, ಜಗಜ್ಯೋತಿ ಕಲಾ ವೃಂದದ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಕಥಾ ಹಾಗೂ ಕಾವ್ಯ ಪ್ರಶಸ್ತಿ ಪ್ರಧಾನ ಸಮಾರಂಭವು
ರವಿವಾರ ದಿನಾಂಕ 09.02.2025 ಸಾಯಂಕಾಲ 4.00 ಗಂಟೆಗೆ ದೊಂಬಿವಿಲಿ ಪೂರ್ವ ದತ್ತ ನಗರದ ಲೇವಾ ಭವನದಲ್ಲಿ ಡಾ. ದಿವಾಕರ ಶೆಟ್ಟಿ, ಇಂದ್ರಾಳಿ
(ಕಾರ್ಯಾಧ್ಯಕ್ಷರು – ಕರ್ನಾಟಕ ಸಂಘ, ಡೊಂಬಿವಲಿ) ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಅತಿಥಿಗಳಾಗಿ ಶ್ರೀ ಪ್ರಭಾಕರ ಆರ್. ಶೆಟ್ಟಿ
( ಉಪಾಧ್ಯಕ್ಷರು : ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ), ಅರುಣ ಎಸ್. ಶೆಟ್ಟಿ, ಪಡುಕೂಡುರು
( ಕಾರ್ಯಾಧ್ಯಕ್ಷರು : ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಯೋಗಿನಿ ಸುಕುಮಾರ್ ಶೆಟ್ಟಿ
(ಕಾರ್ಯಾಧ್ಯಕ್ಷೆ: ಮಹಿಳಾ ವಿಭಾಗ, ಬಂಟರ ಸಂಘ ಮುಂಬಯಿ, ಡೊಂಬಿವಲಿ ಪ್ರಾದೇಶಿಕ ಸಮಿತಿ) ಅಭಿಜ್ಞಾ ಹೆಗ್ಡೆ (ಭರತನಾಟ್ಯ ಕಲಾವಿದೆ) ಉಪಸ್ಥಿತರಿರುವರು.

ಈ ಸಂದರ್ಭ 2024ರ ಅಖಿಲ ಭಾರತ ಮಟ್ಟದ ನಡೆದ ಜಗಜ್ಯೋತಿ ಕಲಾವೃಂದದ ಸುಶೀಲಾ ಸೀತಾರಾಮ ಕಥಾ ಪ್ರಶಸ್ತಿಯನ್ನು ಸ್ಮಿತಾ ಅಮೃತರಾಜ್‌ ಅವರಿಗೂ ಕಾವ್ಯ ಪ್ರಶಸ್ತಿಯನ್ನು ಅಕ್ಷತಾ ಕೃಷ್ಣಮೂರ್ತಿ ಅವರಿಗೂ ಪ್ರಧಾನಿಸಲಾಗುವುದು.

ಅಂದು ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮಗಳು :
ನೃತ್ಯ ಕಾರ್ಯಕ್ರಮದಲ್ಲಿ ಭಾಗವಹಿಸುವ ತಂಡಗಳು
1) ಪೂಜಾ ನೃತ್ಯ : ಕುಮಾರಿ ನಿಶಿಕಾ ಪದ್ಮನಾಭ ಶೆಟ್ಟಿ
2) ಚಿಣ್ಣರ ಬಿಂಬದ ಚಿಣ್ಣರಿಂದ
3) ಪವಿ ಆರ್ಟ್ಸ್ ವಿಜುವಲ್ ಇನ್ಸಿಟ್ಯೂಟ್‌ನ ವಿದ್ಯಾರ್ಥಿಗಳಿಂದ
4) ತುಳು ವೆಲ್‌ಫೇರ್ ಅಸೋಸಿಯೇಷನ್
5) ಶ್ರೀ ವಿಷ್ಣು ಮಂದಿರ (ಸಂಚಾಲಕರು : ಮುಂಬ್ರಾ ಮಿತ್ರ ಭಜನಾ ಮಂಡಳಿ) 6) ಕುಲಾಲ ಸಂಘ ಥಾಣೆ, ಬದ್ಲಾಪುರ, ಭಿವಂಡಿ ಸ್ಥಳೀಯ ಸಮಿತಿಯವರಿಂದ
ಮತ್ತು
ಹೆಜಮಾಡಿ ಮನೋಜಕುಮಾರ್‌ರವರ ಸಂಯೋಜನೆಯಲ್ಲಿ
ತುಳು ವೆಲ್‌ಫೇರ್ ಎಸೋಸಿಯೇಷನ್ ಯಕ್ಷಗಾನ ತರಬೇತಿ ಶಿಬಿರದ ವಿದ್ಯಾರ್ಥಿ ಹಾಗೂ ಮುಂಬಯಿಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ
ಭಾರ್ಗವ ವಿಜಯ್‌
ಎಂಬ ತುಳು ಯಕ್ಷಗಾನ ಪ್ರಸಂಗವನ್ನು ಆಡಿತೋರಿಸಲಾಗುವುದು.
ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಸಮಾರಂಭದಲ್ಲಿ ಭಾಗವಹಿಸುವಂತೆ ಸಮಿತಿಯ ಅಧ್ಯಕ್ಷ ರಮೇಶ್‌ ಎ. ಶೆಟ್ಟಿ
ಕೋಶಾಧಿಕಾರಿ ಚಂದ್ರ ಎನ್. ನಾಯ್, ಗೌರವ ಪ್ರಧಾನ ಕಾರ್ಯದರ್ಶಿ ಸಂತೋಷ ಪಿ. ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಬಾಬು ಕೆ. ಮೊಗವೀರ, ಸಲಹೆಗಾರರಾದ
ಸುಕುಮಾರ ಎನ್. ಶೆಟ್ಟಿ, ಪ್ರಶಸ್ತಿ ಸಮಿತಿಯ ಸಲಹೆಗಾರ ಶ್ರೀ ಶೇಖರ ಆರ್. ಶೆಟ್ಟಿ, ಇನ್ನ ಹಾಗೂ ಸರ್ವ ಸದಸ್ಯರು ವಿನಂತಿಸಿದ್ದಾರೆ.



Related posts

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ಸೆ. 7 ರಂದು 94 ನೇ ವರ್ಷದ ಗಣೇಶೋತ್ಸವ ಆಚರಣೆ

Mumbai News Desk

ಶ್ರೀ ಮಹಿಷಮರ್ಧಿನಿ ದೇವಸ್ಥಾನ ಬೊರಿವಿಲಿ 35ನೇ ವಾರ್ಷಿಕ ಶರನ್ನವರಾತ್ರಿ ಉತ್ಸವ.

Mumbai News Desk

ದೋಲ್ಗೊಟ್ಟು, ಕೆಲ್ಲಪುತ್ತಿಗೆ, ಶ್ರೀ ಧರ್ಮಶಾಸ್ತ ಭಕ್ತವೃಂದ,ಜ.11 ರಂದು 23ನೇ ಅಯ್ಯಪ್ಪ ಮಹಾಪೂಜೆ ಅನ್ನಸಂತರ್ಪಣೆ,

Mumbai News Desk

ಶ್ರೀ ರಜಕ ಸಂಘ ಮುಂಬಯಿ – ಅ. 6ಕ್ಕೆ ವಸಯಿ ಘಟಕದಆಶ್ರಯದಲ್ಲಿ ಶಾರದ ಪೂಜೆ

Mumbai News Desk

ವಿದ್ಯಾವಿಹಾರದ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ತಾಳಮದ್ದಳೆ ಮುಂದೂಡಿಕೆ: ಜುಲೈ 11 ರಂದು ಪ್ರದರ್ಶನ

Mumbai News Desk

ಮಲಾಡ್ ಕನ್ನಡ ಸಂಘ ತುಳು ಸಾಂಸ್ಕೃತಿಕ ಕಾರ್ಯಕ್ರಮ ಆಟಿಡೊಂಜಿ ದಿನ

Mumbai News Desk