30.9 C
Mumbai
June 8, 2026
Mumbai News Kannada
ಸುದ್ದಿ

ಉಡುಪಿ : ಕರ್ನಾಟಕದ ಪಿಯುಸಿ ಪ್ರತಿಭಾನ್ವಿತ ಸ್ಕೌಟ್, ಗೈಡ್ಸ್, ರೋವರ್, ರೆಂಜರ್ ವಿದ್ಯಾರ್ಥಿಗಳಿಗೆ ಸಮ್ಮಾನ





ವಿದ್ಯಾರ್ಜನೆಯೊಂದಿಗೆ ಸೇವಾಮನೋಭಾವನೆ ಬೆಳೆಸಿ – ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ

ಉಡುಪಿ ಯಲ್ಲಿ ಶಿಕ್ಸಣ ಸಂಸ್ಥೆಯಲ್ಲಿ ಅಂಕ ಗಳಿಕೆ ಪ್ರಧಾನ ವಿಷಯವಾದರೂ ಅದರೊಂದಿಗೆ ಸಮಾಜಸೇವೆ, ದೇಶಸೇವೆ, ನಿಸ್ವಾರ್ಥಸೇವೆ ಮಾಡುವುದು ಮುಖ್ಯವಾಗಿದೆ. ಸ್ಕೌಟ್ ಗೈಡ್ಸ್ ವಿದ್ಯಾರ್ಥಿಗಳು ಅಂಕದೊಂದಿಗೆ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫಲರಹಿತವಾಗಿ ಮಾಡುವ ಸೇವೆಯೇ ನಿಜವಾದ ಸೇವೆಯಾಗಿದೆ. ವಿದ್ಯಾರ್ಥಿಗಳು ವಿದ್ಯಾರ್ಜನೆಯೊಂದಿಗೆ ಸೇವಾಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠದ ಶ್ರೀ ಸುಗುಣೆನಂದ್ರತೀರ್ಥ ಶ್ರೀಪಾದರು ಹೇಳಿದರು.

ಅವರು ಪರ್ಯಾಯ ಶ್ರೀ ಪುತ್ತಿಗೆ ಮಠ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಭಾರತ್ ಸ್ಕೌಟ್ಸ್ ಗೈಡ್ಸ್ ಉಡುಪಿ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ರಾಜಾಣ್ಗನದಲ್ಲಿ ಶುಕ್ರವಾರ ಆಯೋಜಿಸಿದ್ದ 2025 ಸಾಲಿನ ಎಸ್ ಎಲ್ ಸಿ ಮತ್ತು ಪಿಯುಸಿ ಪ್ರತಿಭಾನ್ವಿತಾ ಸ್ಕೌಟ್ ಗೈಡ್ಸ್ ರೋವರ್ ರೆಂಜರ್ ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮವನ್ನು ದ್ವೀಪ ಪ್ರಜ್ವಲಿಸಿ ಆಶೀರ್ವಚನ ನೀಡಿದರು.
ಶಿಕ್ಸಣ ಸಂಸ್ಥೆಗಳಲ್ಲಿ ಸಮಾಜ ಸೇವೆ, ನಿಸ್ವಾರ್ಥ ಸೇವೆ ಗುಣ ನಡತೆಗಳ ಅದಾರದಲ್ಲಿಯೂ ಅಂಕ ನೀಡುವ ಪದ್ಧತಿ ಇರಬೇಕು . ಇದರಿಂದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಯಾಗಲು ಸಾಧ್ಯವಿದೆ. ಅಮೇರಿಕಾದಲ್ಲೂ ಇಂತಹ ಪದ್ಧತಿ ಜಾರಿಯಾಗಿದೆ ಎಂದರು.

ಶಾಸಕ ಯಶಪಾಲ್ ಸುವರ್ಣ ಮಾಜಿ ಸಚಿವ ಪ್ರಮೋದ್ ಮದ್ವಾರಾಜ್ ರಾಜ್ಯ ಮುಖ್ಯ ಆಯುಕ್ತ ಪಿ ಜಿ ಆರ್ ಸಿಂದ್ಯಾ ಜಿಲ್ಲಾಧಿಕಾರಿ ಅಭಿದ್ ಗದ್ಗಲಾ ಗೈಡ್ ಆಯುಕ್ತೆ ಜ್ಯೋತಿ ಪೈ ಡಿ ಡಿ ಪಿ ಐ ಗಣಪತಿ ಡಿ ಡಿ ಪಿ ಯು ಮಾರುತಿ ರಾಜ್ಯ ಸಂಘಟನಾ ಆಯೋಗದ ಪ್ರಭಾಕರ್ ಭಟ್ ಉಡುಪಿ ಸಂಘಟನಾ ಆಯುಕ್ತೆ ಸುಮನಾ ಶೇಖರ್ ಜಿಲ್ಲಾ ಸಂಸ್ಥೆಯ ಉಪಾಧ್ಯಕ್ಷೆ ಗುಣರತ್ನಾ ಜಿಲ್ಲಾ ಕಾರ್ಯದರ್ಶಿ ಆನಂದ್ ಆಡಿಗ ಜಿಲ್ಲಾ ಕೋಶಾಧಿಕಾರಿ ಹರಿಪ್ರಸಾದ್ ರೈ ಡಯಟ್ ಪ್ರಾಸ್ಸು ಪಾಲ ಡಾ ಅಶೋಕ್ ಕಾಮತ್ ಉಡುಪಿ ಸಂಘಟನಾ ಮಾಜಿ ಕಾರ್ಯದರ್ಶಿ ಶೇಖರ್ ಮಾಸ್ಟರ್ ಉಪಸ್ಥಿತರಿದ್ದರು.
ಈ ಸಂಧರ್ಭದಲ್ಲಿ ಸರಿಸುಮಾರು ಇಡೀ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹತ್ತನೇ ಹಾಗೂ ಪಿ ಯು ಸಿ ಪರೀಕ್ಷೆಗಳಲ್ಲಿ 90% ಮೇಲ್ಪಟ್ಟು ಅಂಕ ಪಡೆದ 1200 ಪ್ರತಿಭಾನ್ವಿತಾ ಸ್ಕೌಟ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳನ್ನು ಒಟ್ಟು ಮಾಡಿ ಅವರಿಗೆಲ್ಲ ಶಾಲು ನಗದು ಹಾಗೂ ಪ್ರಮಾಣ ಪತ್ರ ಸನ್ಮಾನ ಮಾಡಿ ಗುರುತಿಸಿದ ಉಡುಪಿ ಜಿಲ್ಲೆಯ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ರಾಜ್ಯ ಸಂಘಟನಾ ಆಯೋಗದ ಪ್ರಭಾಕರ್ ಭಟ್ ಮತ್ತು ಉಡುಪಿ ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್ ಇವರನ್ನು ಭಾರತದ ಸ್ಕೌಟ್ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ರಾಜ್ಯದ ಪ್ರದಾನ ಆಯುಕ್ತ ಪಿ ಆರ್ ಸಿಂದ್ಯಾರವರು ಈ ಮೂವರಿಗೆ ಶಾಲು ಹೊದಿಸಿ ಪೇಟ ತೊಡಿಸಿ ಹಾರ ಹಾಕಿ ಸನ್ಮಾನಿಸಿದರು.
ಆರಂಭದಲ್ಲಿ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ ಸ್ವಾಗತಿಸಿದರು. ಜಿಲ್ಲಾ ಸ್ಕೌಟ್ ಆಯುಕ್ತ ಜನಾರ್ದನ್ ಕೊಡವೂರು ವಂದಿಸಿದರು. ರಾಜ್ಯ ಸಂಘಟನಾ ಆಯೋಗದ ಮಂಜುಳಾ ಪ್ರಸ್ತಾವನೆ ಗೈದರು. ಪ್ರಭಾಕರ್ ಭಟ್ ಕಾರ್ಯಕ್ರಮ ವನ್ನು ನಿರೂಪಿಸಿದರು.

ಜಯ ಸಿ ಪೂಜಾರಿ
ಕೆಳಾರ್ಕಳ ಬೆಟ್ಟು.



Related posts

ಥಾಣೆ  :ಜಯರಾಮ ಸಾಂತ ನಿಧನ

Mumbai News Desk

ಆರ್ಥಿಕ ಕ್ರಾಂತಿಯ ಹರಿಕಾರ, ಸಮಾಜ ಸೇವಕ ವರದ ಉಳ್ಳಾಲ್ ಅಸ್ತಂಗತ : ಮುಂಬೈನಲ್ಲಿ ಇಂದು ಅಂತ್ಯಕ್ರಿಯೆ

Mumbai News Desk

ಮೀರಾ ಡಹಾಣೂ ಬಂಟ್ಸ್ (ರಿ) . ವಾರ್ಷಿಕ ಟರ್ಫ್ ಫುಟ್ ಬಾಲ್ ಟೂರ್ನಮೆಂಟ್.

Mumbai News Desk

ಕೋಡಿಕಲ್: ವಿಶ್ವ ಭಾರತಿ ಫ್ರೆಂಡ್ಸ್ ಸರ್ಕಲ್ (ರಿ) ನೂತನ ಅಧ್ಯಕ್ಷರಾಗಿ ಶೀನ ನಾಯ್ಕ್ ಪರ್ಪುಲಾಡಿ ಆಯ್ಕೆ

Mumbai News Desk

ರಾಜ್ಯವ್ಯಾಪಿ ಕಂಬಳಕ್ಕೆ ಹೈಕೋರ್ಟ್ ಗ್ರೀನ್ ಸಿಗ್ನಲ್ :ಯಾವ ಮೂಲೆಯಲ್ಲಾದ್ರೂ ಕಂಬಳ ನಡೆಸಲು ಆದೇಶ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (06/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk