September 7, 2026
Mumbai News Kannada
ಪ್ರಕಟಣೆ

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ -ಜೂನ್ 8 ರಂದು ಉಡುಪಿಯಲ್ಲಿ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪದ್ಮವಿಭೂಷಣ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರದಾನ





ಮುಂಬಯಿ : ಕರ್ನಾಟಕದ ಕರಾವಳಿಯ ಪ್ರಸಿದ್ದ ಉಭಯ ಜಿಲ್ಲೆಗಳಾದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಜಿಲ್ಲೆಗಳ ಪ್ರಗತಿಗೆ ಕಳೆದ 25 ವರ್ಷಗಳಿಂದ ಎಲ್ಲಾ ಸಮುದಾಯದವರನ್ನು ಸೇರಿಸಿ ಹೋರಾಟ ನಡೆಸುತ್ತಾ ಬಂದಿರುವ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯು ಪ್ರತೀ ವರ್ಷ ಜಾರ್ಜ್ ಫೆರ್ನಾಂಡೀಸ್ ರವರ ಜನ್ಮ ದಿನದ ಸಂದರ್ಭದಲ್ಲಿ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿನ್ನು ಅರ್ಹ ಸಾಧಕರಿಗೆ ಪ್ರಧಾನಿಸಲಾಗುತ್ತಿದ್ದು, ಈ ಸಲ ಕರ್ನಾಟಕದ ಮಾಜಿ ಲೋಕಾಯುಕ್ತರೂ, ಭಾರತದ ಸರ್ವೋಚ್ಛ ನ್ಯಾಯಾಲಯ ಮಾಜಿ ನ್ಯಾಯಾಧೀಶರೂ ಆಗಿದ್ದ ಜಸ್ಟಿಸ್ ಎನ್. ಸಂತೋಷ್ ಹೆಗ್ಡೆಯವರಿಗೆ ಪ್ರಧಾನಿಸಲಾಗುವುದು.

ಪ್ರಶಸ್ತಿ ಪ್ರಧಾನ ಸಮಾರಂಭವು ಜೂ. 8ರಂದು, ಆದಿತ್ಯವಾರ ಬೆಳಿಗ್ಗೆ 10 ಗಂಟೆಯಿಂದ ಹೋಟೆಲ್ ಓಶಿಯಲ್ ಪರ್ಲ್ ಟೈಮ್ಸ್ ಸ್ಕೊಯರ್ ಬಿಲ್ಡಿಂಗ್, ಕಲ್ಸಂಕ ಉಡುಪಿ ಇಲ್ಲಿ ಅದ್ದೂರಿಯಾಗಿ ನಡೆಯಲಿದೆ. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ಸರಕಾರದ ಕಾನೂನು ಸಚಿವರಾದ ಎಚ್ ಕೆ ಪಾಟೀಲ್ ಇವರು ಆಗಮಿಸಲಿದ್ದು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿರುವರು. ಸಮಿತಿಯ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ದಿಕ್ಸೂಚಿ ಭಾಷಣ ಮಾಡಲಿರುವರು.

ಸಮಾರಂಭಕ್ಕೆ ಗೌರವ ಅತಿಥಿಗಳಾಗಿ ಉಡುಪಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರಿನ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಕರ್ನಾಟಕದ ಎಂ.ಎಲ್.ಸಿ. ಐವನ್ ಡಿ’ಸೋಜಾ, ಬಹುಬಾಷಾ ಚಲನಚಿತ್ರ ನಟ ಸುಮನ್ ತಲ್ವಾರ್ ಪೂಜಾರಿ, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕರ್ನಾಟಕದ ಮಾಜಿ ಎಂ.ಎಲ್.ಸಿ. ಸಮಿತಿಯ ಸಲಹೆಗಾರರೂ ಆದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತು ಎಂ.ಎಲ್.ಸಿ. ಭೋಜೆ ಗೌಡ ಉಪಸ್ಥಿತರಿರುವರು.

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಎಲ್ಲಾ ಸದಸ್ಯರು, ಅಭಿಮಾನಿಗಳು ಉಪಸ್ಥಿತರಿದ್ದು ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ – 2025 ಪ್ರಧಾನ ಸಮಾರಂಭವನ್ನು ಯಶಸ್ವಿಗೊಳಿಸಬೇಕಾಗಿ ಸಮಿತಿಯ ಪರವಾಗಿ ಗೌರವ ಅಧ್ಯಕ್ಷರಾದ ಪದ್ಮವಿಭೂಷಣ ಡಾ. ಬಿ. ಎಂ. ಹೆಗ್ಡೆ, ಗೌರವ ಪ್ರಧಾನ ಕಾರ್ಯದರ್ಶಿ ಮುಂಡ್ಕೂರು ಸುರೇಂದ್ರ ಸಾಲ್ಯನ್,ಗೌರವ ಕೋಶಾಧಿಕಾರಿ ಸದಾನಂದ ಆಚಾರ್ಯ, ಜಿಲ್ಲಾ ಕಾರ್ಯಾಧ್ಯಕ್ಷರಾದ ಹರೀಶ್ ಕುಮಾರ್ ಎಂ. ಶೆಟ್ಟಿ, ಸಂಚಾಲಕರಾದ ಕೆ. ಪಿ. ಜಗದೀಶ್ ಅಧಿಕಾರಿ, ಜಿಲ್ಲಾ ಉಪಕಾರ್ಯಾಧ್ಯಕ್ಷರಾದ ರಾಮಚಂದ್ರ ಬೈಕಂಪಾಡಿ, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಜಿ. ಟಿ. ಆಚಾರ್ಯ ಮತ್ತು ಸುರೇಂದ್ರ ಮೆಂಡನ್ ಹಾಗೂ ಸಮಿತಿಯ ಎಲ್ಲಾ ಪದಾಧಿಕಾರಿಗಳು ವಿನಂತಿಸಿದ್ದಾರೆ.
ಸಮಿತಿಯ ಬಗ್ಗೆ :

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ
ಪರಿಸರ ಸಂರಕ್ಷಣೆ ಮತ್ತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಸಮಸ್ತ ಕೈಗಾರೀಕರಣ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಿಗೆ ಆಹ್ವಾನ ಎಂಬ ಉದ್ದೇಶ ದೊಂದಿಗೆ ಅವಳಿ ಜಿಲ್ಲೆಗಳ ಶ್ರೇಯೋಭಿವೃದ್ಧಿಗಾಗಿ ಕಳೆದ 25 ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿರುವ ಜಯಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯು ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳ ಸಮಗ್ರ ಅಭಿವೃದ್ಧಿಗಾಗಿ ಸಮಾಜ ಸೇವಕ, ಸಂಘಟಕ, ಉದ್ಯಮಿ , ಪರಿಸರ ಪ್ರೇಮಿ ತೋನ್ಸೆ ಜಯಕ್ರಷ್ಣ ಎ ಕೃಷ್ಣ ಅವರ ನೇತೃತ್ವದಲ್ಲಿ ಸ್ಥಾಪನೆಗೊಂಡ ಸಮಿತಿಯು ಹಲವಾರು ಸಮಾಜಪರ ಕಾರ್ಯಕ್ರಮಗಳೊಂದಿಗೆ ಜಿಲ್ಲೆಗಳ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದೆ ಸಮಿತಿಯ ಏಳಿಗೆಯಲ್ಲಿ ಮಾಜಿ ಅಧ್ಯಕ್ಷರುಗಳಾದ, ನ್ಯಾ ಪ್ರಕಾಶ್ ಎಲ್. ಶೆಟ್ಟಿ, ನ್ಯಾ. ಸುಭಾಷ್ ಶೆಟ್ಟಿ, ವಿಶ್ವನಾಥ ಮಾಡ, ಹರೀಶ್ ಕುಮಾರ್ ಶೆಟ್ಟಿ, ಧರ್ಮಪಾಲ ಯು. ದೇವಾಡಿಗ, ಎಲ್. ವಿ. ಅಮೀನ್ ಇವರ ಪಾತ್ರ ಅಪಾರವಾಗಿದೆ. ಪ್ರಸ್ತುತ ನಿತ್ಯಾನಂದ ಡಿ. ಕೋಟ್ಯಾನ್ ಹಾಗೂ ಕಾರ್ಯಕಾರಿ ಸಮಿತಿಯ ಎಲ್ಲಾ ಸದಸ್ಯರು ಸಮಿತಿಯ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಾಧನೆಗಳು :

ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿ ಯ ಅವಿರತ ಪ್ರಯತ್ನದ ಫಲವಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ ಹೊತ್ತು ವಿಮಾನಗಳ ಹಾರಾಟಕ್ಕೆ 2006 ರಿಂದ ಅನುಮತಿ ದೊರಕಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣ ವನ್ನಾಗಿಸಿ ಪರಿವರ್ತಿಸುವುದು ಸಮಿತಿಯ ಹೆಗ್ಗಳಿಕೆಯಾಗಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳು, ರಾಜ್ಯ ಹಾಗೂ ಕೇಂದ್ರ ಸಚಿವರೊಂದಿಗಿನ ಚರ್ಚೆ ಬಳಿಕ ಸಮಿತಿಯ ಶಿಫಾರಸಿನ ಮೇರೆಗೆ 2003 ರಲ್ಲಿ 55.26 ಕೋಟಿ ರೂಪಾಯಿಗಳೊಂದಿಗೆ ಈ ಯೋಜನೆಗೆ ಅನುವು ನೀಡಲಾಗಿದ್ದು ಇದು ಸಮಿತಿಯ ಸಾಧನೆಯ ಬಹುದೊಡ್ಡ ಮೇಲುಗಲ್ಲಾಗಿದೆ.
ಸರಕಾರದ ಅಧೀನದಲ್ಲಿರುವ ಕುದುರೆಮುಖದ ಕಬ್ಬಿಣದ ಅದಿರಿನ ಕಂಪನಿಯ ಲೀಸ್ ಅನ್ನು 20 ವರ್ಷಗಳಿಗೆ ವಿಸ್ತರಿಸುವಲ್ಲೂ ಸಮಿತಿಯ ಪಾತ್ರ ಮಾತ್ರವಾದುದು ಆ ಸಮಯದಲ್ಲಿ ಕೇಂದ್ರ ಪರಿಸರ ಸಚಿವರು ಇತರ ಸಚಿವರು ಹಾಗೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಅಂದಿನ ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡೀಸ್ ನೇತೃತ್ವದಲ್ಲಿ ಸಮಿತಿಯು ಮಾತುಕತೆ ನಡೆಸಿ ಈ ಮಹತ್ವದ ಯೋಜನೆಯಲ್ಲಿ ಯಶಸ್ಸನ್ನು ಕಂಡಿದೆ.

ಜಿಲ್ಲೆಗಳ ಸಾವಿರಾರು ಮಂದಿಗೆ ಉದ್ಯೋಗ ಸೃಷ್ಟಿ
ದಕ್ಷಿಣ ಕನ್ನಡದಲ್ಲಿ ಕಗ್ಗಂಟಾಗಿದ್ದ ಬಹಳಷ್ಟು ವಿರೋಧ ಹೋರಾಟಗಳಿಗೆ ಸಾಕ್ಷಿಯಾಗಿದ್ದ ನಾಗಾರ್ಜುನ ಥರ್ಮಲ್ ಪವರ್ ಪ್ರಾಜೆಕ್ಟ್ ನ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿ ಜನತೆಯಲ್ಲಿದ್ದ ಆತಂಕವನ್ನು ದೂರಗೊಳಿಸಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಿ ಗೊಳಿಸುವಲ್ಲಿ ಸಮಿತಿಯ ಪಾತ್ರ ಹಿರಿದು. ಪ್ರಸ್ತುತ ಯೋಜನೆಯಿಂದ ಅವಳಿ ಜಿಲ್ಲೆಗಳ ಸಾವಿರಾರು ಮಂದಿ ಉದ್ಯೋಗ ಪಡೆದಿದ್ದು, ಬೆಂಗಳೂರು ಸಹಿತ ಅವಳಿ ಜಿಲ್ಲೆಗಳ ಜನತೆ ಎದುರಿಸುತ್ತಿದ್ದ ವಿದ್ಯುತ್ ಸಮಸ್ಯೆಯಿಂದಲೂ ನಿಟ್ಟುಸಿರು ಬಿಡುವಂತಾಗಿದೆ. ನಾಗಾರ್ಜುನ ಕಂಪನಿಯ ಅಂದಿನ ಸಿಇಒ ಪ್ರವೀರ್ ಸಿನ್ಹಾ ಅವರು ಸಮಿತಿಯ ಒಪ್ಪಂದಕ್ಕೆ ಸಹಿ ಹಾಕಿದ್ದು 5040 ಕೋಟಿ ರೂಪಾಯಿಗಳ ಯೋಜನೆಯ ಯಶಸ್ಸಿಗೆ ಸಮಿತಿ ಶ್ರಮಿಸಿರುವುದು ಇತಿಹಾಸ. 2001ರಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಹಲವಾರು ನೈಸರ್ಗಿಕ ಪರವಾದ ಕೈಗಾರಿಕೋದ್ಯಮ ಸ್ಥಾಪಿಸುವಲ್ಲಿ ಬಹಳಷ್ಟು ಶ್ರಮಿಸಿದೆ.

ಜಿಲ್ಲೆಗಳ ಅಭಿವೃದ್ಧಿ ಕಾರ್ಯಗಳಿಗೆ ಮೊದಲ ಆದ್ಯತೆ
14 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಮಂಗಳೂರು – ಬೆಂಗಳೂರು ರೈಲ್ವೆ ಸಂಪರ್ಕ ಯೋಜನೆಯನ್ನು ಮೀಟರ್ ಗೇಜಿನಿಂದ ಬ್ರಾಡ್ ಗೇಜ್ ಗೆ ಪರಿವರ್ತಿಸಿ ಯೋಜನೆಯನ್ನು ಮರು ಪ್ರಾರಂಭಿಸುವಲ್ಲಿ ಸಮಿತಿಯು ಮಹತ್ವದ ಸಾಧನೆ ಮಾಡಿದೆ. ಈ ಯೋಜನೆಗೆ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಮತ್ತು ಕೇಂದ್ರ ರೈಲ್ವೆ ಸಚಿವ ನಿತೀಶ್ ಕುಮಾರ್ ಸಹಕರಿಸಿದ್ದರು. ಸಮಿತಿಯ ಶಿಫಾರಸಿನ ಮೇರೆಗೆ ಕೊಂಕಣ್ ರೈಲ್ವೆಯ ರೂವಾರಿ ಜಾರ್ಜ್ ಫರ್ನಾಂಡಿಸ್ ಅವರ ಸಹಕಾರದೊಂದಿಗೆ ಅಂದಿನ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಮುಂಬಯಿ – ಮಂಗಳೂರು ಗರೀಭ್ ರಥ್ ರೈಲಿನ ಚಾಲನೆಗೆ ನೀಡಿರುವುದು ಸಮಿತಿಯ ಸಮಾಜ ಪರ ಕಾರ್ಯಗಳಿಗೆ ಸಂದ ಗೌರವವಾಗಿದೆ.
ಸಮಿತಿಯ ನಿಸ್ವಾರ್ಥ ಸೇವೆಯಿಂದ ಪ್ರಸ್ತುತ ಅವಳಿ ಜಿಲ್ಲೆಗಳು ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ಹೆಮ್ಮೆಯ ಸಂಗತಿ. ಸಮಿತಿಯು ಮುಂಬಯಿ ತುಳು – ಕನ್ನಡಿಗರ ಹಾಗೂ ವಿವಿಧ ಜಾತಿಯ ಸಂಘಟನೆಗಳ ಅಧ್ಯಕ್ಷರ ಒಕ್ಕೂಟದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು ಅವಳ ಜಿಲ್ಲೆಗಳ ಅಭಿವೃದ್ಧಿ ಪರ ಕಾರ್ಯಕ್ರಮಗಳಿಗೆ ಶ್ರಮಿಸುತ್ತಿದೆ. ಪರಿಸರ ಸಂರಕ್ಷಣೆಯೊಂದಿಗೆ ಅವಿಭಜಿತ ದಕ್ಷಣ ಕನ್ನಡ ಜಿಲ್ಲೆಯ ಸಮಸ್ತ ಕೈಗಾರೀಕರಣ, ಸಣ್ಣ ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳೊಂದಿಗೆ ಸ್ಥಳೀಯರಿಗೆ ಉದ್ಯೋಗ, ಅಭಿವೃದ್ಧಿ ಕಲ್ಪಿಸುವ ಧ್ಯೇಯದೊಂದಿಗೆ ಸಮಿತಿಯು ಸದಾ ಕ್ರಿಯಾಶೀಲವಾಗಿದೆ.



Related posts

ಬಾಂಬೆ ಬಂಟ್ಸ್ ಅಸೋಸಿಯೇಶನ್ ನ ಉನ್ನತ ಶಿಕ್ಷಣ ಸಂಸ್ಥೆ,ಫೆ. 26. ವಾರ್ಷಿಕೋತ್ಸವ, ಪದವಿ ಪ್ರಧಾನ ಸಮಾರಂಭ

Mumbai News Desk

ನೈನ್ ಹ್ಯಾಂಡ್ಸ್ ಫೌಂಡೇಶನ್ ಮುಂಬಯಿ: ಜು. 13ಕ್ಕೆ ಮಕ್ಕಳ ವಾರ್ಷಿಕ ಶಾಲಾ ಶುಲ್ಕ ವಿತರಣಾ ಕಾರ್ಯಕ್ರಮ

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ : ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ

Mumbai News Desk

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ಸೇವಾ ಸಮಿತಿ ಘಾಟ್ಕೊಪರ್ ಪಶ್ಚಿಮ : ಜ. 4ಕ್ಕೆ 45ನೇ ವಾರ್ಷಿಕ ಮಹಾಪೂಜಾ ಉತ್ಸವ

Mumbai News Desk