September 6, 2026
Mumbai News Kannada
ಪ್ರಕಟಣೆ

ಜೂನ್ 15: ಶ್ರೀ ಭುವನೇಶ್ವರಿ ಸೇವಾ ಸಮಿತಿ ಕೋಟೆ, ಮುಂಬಯಿ – 42ನೇ ವಾರ್ಷಿಕ ಮಹಾಪೂಜೆ





ಕೋಟೆ ಮುಂಬಯಿಯಲ್ಲಿ ಶ್ರೀ ಭುವನೇಶ್ವರಿ ಅಮ್ಮನ ಆರಾಧನೆಯೊಂದಿಗೆ ಸಾಮಾಜಿಕ ಕ್ಷೇತ್ರದಲ್ಲೂ ಸಕ್ರಿಯವಾಗಿರುವ ಶ್ರೀ ಭುವನೇಶ್ವರಿ ಸಮಿತಿಯ ಆಶ್ರಯದಲ್ಲಿ 42ನೇ ವಾರ್ಷಿಕ ಮಹಾಪೂಜೆ (ಮೂರ್ತಿ ಪ್ರತಿಷ್ಠಾ ಮಹೋತ್ಸವ ) ಜೂನ್ 15ರಂದು, ರವಿವಾರ ಕೋಟೆ ಮುಂಬೈ ಮಿಂಟ್ ರೋಡ್ ನ ಕಾಂಜಿ ಕೇಷ್ಟಿ ಭಾಟಿಯಾ ವಾಡಿ ಸಭಾಗ್ರಹದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಅಂದು ನಡೆಯಲಿರುವ ಕಾರ್ಯಕ್ರಮಗಳು :

ಬೆಳಿಗ್ಗೆ ಗಣಪತಿ ಹೋಮ, ಕಲಶ, ಸುವರ್ಣ ವಸ್ತ್ರ ಪೂಜೆ.
ಬೆಳಿಗ್ಗೆ 10.30 ಗಂಟೆಗೆ ಭಜನೆ ( ವಿದ್ಯಾದಾಯಿನಿ ಭಜನಾ ಮಂಡಳಿ ಕೋಟೆ, ಇವರಿಂದ )
ಬಳಿಕ ಮಹಾ ಅಭಿಷೇಕ, ಮಂಗಳಾರತಿ
12.45 ಗಂಟೆಗೆ : ಶ್ರೀ ದೇವಿ ಆವೇಶ
1.30ರಿಂದ ತೀರ್ಥ ಪ್ರಸಾದ, ಅನ್ನ ಸಂತರ್ಪಣೆ

ಸಂಜೆ 4ರಿಂದ ಧಾರ್ಮಿಕ ಸಭೆ :

ಅಧ್ಯಕ್ಷತೆ – ಡಾ. ಪ್ರಕಾಶ್ ಮೂಡಬಿದ್ರಿ ( ಅಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )
ಆಶೀರ್ವಚನ : ರಾಜೇಶ್ ಭಟ್ (ಪ್ರಧಾನ ಅರ್ಚಕರು, ದೇವಿ ಪಾತ್ರಿ)
ಮುಖ್ಯ ಅತಿಥಿ – ಎಲ್ ವಿ ಅಮೀನ್ ( ಗೌರವ ಅಧ್ಯಕ್ಷರು,ಬಿಲ್ಲವರ ಎಸೋಸಿಯೇಷನ್ ಮುಂಬೈ )
ಗೌರವ ಅತಿಥಿಗಳು :
ಚಂದ್ರಶೇಖರ್ ಬೆಲ್ಚಡ( ಉದ್ಯಮಿ, ಮಾಜಿ ಅಧ್ಯಕ್ಷರು, ತೀಯಾ ಸಮಾಜ ಮುಂಬೈ )
ನಾರಾಯಣ ಆರ್ ಪೂಜಾರಿ (ಮಾಲಕರು, ಸುಮಂಗಲ ಮೆಶಿನರಿಸ್ )
ಅಡ್ವಕೇಟ್ ರಾಜೀವ ವರ್ಮ( ನ್ಯಾಯಾಧೀಶರು ಹೈಕೋರ್ಟ್ )
ಸನ್ಮಾನ :
ಹರೀಶ್ ಜಿ ಅಮೀನ್ ( ಅಧ್ಯಕ್ಷರು, ಬಿಲ್ಲವರ ಎಸೋಸಿಯೇಷನ್, ಮುಂಬೈ )
ಪುರುಷೋತ್ತಮ ಕೋಟ್ಯಾನ್( ಅಧ್ಯಕ್ಷರು, ವಿದ್ಯಾದಾಯಿನಿ ಸಭಾ ಮುಂಬೈ )
ಪ್ರಭಾಕರ್ ಬೆಳುವಾಯಿ (ಸ್ಥಾಪಕರು, ನಮನ ಫ್ರೆಂಡ್ಸ್ )
ಸಂಜೀವ ಬಂಗೇರ ಮತ್ತು ಸುಮಿತ್ರ ಎಸ್ ಬಂಗೇರ (ಉಪಾಧ್ಯಕ್ಷರು, ಶ್ರೀ ಭುವನೇಶ್ವರಿ ಸೇವಾ ಸಮಿತಿ )

ಸಂಜೆ 6.30ಕ್ಕೆ ಶ್ರೀ ದೇವರಿಗೆ ಮಹಾಪೂಜೆಯೊಂದಿಗೆ ವಾರ್ಷಿಕ ಪೂಜೆ ಸಂಪನ್ನಗೊಳ್ಳಲಿದೆ.

ಶ್ರೀ ಭುವನೇಶ್ವರಿ ಸೇವಾ ಸಮಿತಿಯ 42ನೇ ವಾರ್ಷಿಕ ಮಹಾಪೂಜೆಯಲ್ಲಿ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಶ್ರೀ ಭುವನೇಶ್ವರಿ ಮಾತೆಯ ಕೃಪೆಗೆ ಪಾತ್ರರಾಗುವಂತೆ ಸಮಿತಿಯ ಮುಖ್ಯ ಅರ್ಚಕ ಮತ್ತು ದೇವಿ ಪಾತ್ರ ರಾಜೇಶ್ ಭಟ್, ಗೌರವಾಧ್ಯಕ್ಷ ಆರ್ ಕೆ ಮುಲ್ಕಿ, ಅಧ್ಯಕ್ಷ ಡಾ.ಪ್ರಕಾಶ್ ಮೂಡಬಿದ್ರಿ, ಕಾರ್ಯದರ್ಶಿ ಅಶೋಕ್ ಸೈನಿ, ಕೋಶಾಧಿಕಾರಿ ಭಾಸ್ಕರ್ ಪೂಜಾರಿ, ಮತ್ತು ಎಲ್ಲ ಸದಸ್ಯರು ವಿನಂತಿಸಿದ್ದಾರೆ.



Related posts

ಶ್ರೀ ಹಟ್ಟಿಯಂಗಡಿ ಮೇಳದ ಹನ್ನೆರಡನೇ ವರ್ಷದ ಮುಂಬಯಿ ಪ್ರವಾಸ: ಜುಲೈ 10 ರಿಂದ 25 ರವರೆಗೆ ಯಕ್ಷಗಾನ ವೈಭವ

Mumbai News Desk

ಆಗಸ್ಟ್ 9 ರಂದು ಶ್ರೀ ಜಗದಂಬ ಮಂದಿರ(ರಿ), ದಲ್ಲಿ ನಾಗರ ಪಂಚಮಿ ಉತ್ಸವ

Mumbai News Desk

ಶ್ರೀ ಮದ್ಭಾರತ ಮಂಡಳಿ ಮುಂಬೈ : ಫೆ. 21-22ರಂದು “148ನೇ ವಾರ್ಷಿಕ ಮಂಗಳೋತ್ಸವ” ಮತ್ತು “ಕುಮಾರವ್ಯಾಸ ಭಾರತ” ಗ್ರಂಥ ಪಾರಾಯಣದ ಸಮಾಪ್ತಿ ಮಂಗಳೋತ್ಸವ, 24ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk

 ವರ್ಲಿ :ಅಪ್ಪಾಜಿ ಬೀಡು ಫೌಂಡೇಶನ್  ಶ್ರೀ ಅನ್ನಪೂರ್ಣೇಶ್ವರಿ ಮಹಿಳಾ ವಿಭಾಗ ಜು 28:ಆಟಿದ ಕೂಟ.

Mumbai News Desk

ಡಿ.9 ರಂದು ಶ್ರೀ ಸದ್ಗುರು ಶನೇಶ್ವರ ಸೇವಾ ಸಮಿತಿ ಕಾಂದಿವಲ ಇದರ ವತಿಯಿಂದ 49ನೇ ವಾರ್ಷಿಕ ಶ್ರೀ ಶನೀಶ್ವರ ಗ್ರಂಥಪಾರಾಯಣ ಮಹೋತ್ಸವ 

Mumbai News Desk