September 6, 2026
Mumbai News Kannada
ಸುದ್ದಿ

ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ಸದಸ್ಯರಿಂದ ಯಕ್ಷಗಾನ ತಾಳಮದ್ದಳೆ, ಕಟೀಲ್ ಕ್ಷೇತ್ರದಲ್ಲಿ ವಿಶೇಷ ಪೂಜೆ.





ಮಂಗಳೂರು ಜೂ13.; ಮಲಾಡ್ ಪೂರ್ವದ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಯ 16ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆಗಸ್ಟ್ 10ರಂದು ಮಲಾಡ್ ದತ್ತ ಮಂದಿರ್  ರೋಡ್ ನ ಸ್ವಾಮಿ ನಾರಾಯಣ ಸಭಾಂಗಣದಲ್ಲಿ ನಡೆಯಲಿದೆ.

ಅಂದು ಮಧ್ಯಾಹ್ನ 3:30 ಕ್ಕೆ ಪೂಜಾ ಸಮಿತಿಯ ಮಹಿಳಾ ಸದಸ್ಯರಿಂದ ಶ್ರೀ ಶನೀಶ್ವರ ಮಹಾತ್ಮೆ ಎಂಬ ಯಕ್ಷಗಾನ ತಾಳಮದ್ದಲೆ, ಯಕ್ಷ ಗುರು ನಾಗೇಶ್ ಪೂಳಲಿ ಅವರ ಮಾರ್ಗದರ್ಶನದಲ್ಲಿ ನಡೆಯಲಿದ್ದು ಈ ಬಗ್ಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಸನ್ನಿಧಿಯಲ್ಲಿ ಸಮಿತಿಯ ಅಧ್ಯಕ್ಷರಾದ ನ್ಯಾಯವಾದಿ ಜಗನ್ನಾಥ್ ಶೆಟ್ಟಿ  ಮತ್ತು ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಕೆ ಆಚಾರ್ಯ ಅವರ ಉಪಸ್ಥಿತಿಯಲ್ಲಿ ಕಟೀಲು ಶ್ರೀ ದುರ್ಗೆಗೆ ವಿಶೇಷ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು  ನಡೆಸಿ ಪ್ರಸಾದವನ್ನು ಸ್ವೀಕರಿಸಲಾಯಿತು.

 ಈ ಸಂದರ್ಭದಲ್ಲಿ ಪೂಜಾ ಸಮಿತಿಯ ಉಪಾಧ್ಯಕ್ಷರುಗಳಾದ ಕುಮಾರೇಶ್ ಆಚಾರ್ಯ, ದಿನೇಶ್ ಪೂಜಾರಿ ನಿಂಜೂರು, ದಿನೇಶ್ ಕುಲಾಲ್, ಲಾಸ್ಯ ಕುಲಾಲ್, ಚೇತನ ಪೂಜಾರಿ.ಪಾಲ್ಗೊಂಡಿದ್ದರು.

ಇತ್ತೀಚೆಗೆ ತಾಳ ಮದ್ದಳೆಯ ಮೂಹೂರ್ತ ಮಲಾಡಿನಲ್ಲಿ ನಡೆಯಿತು. 



Related posts

77ನೇ ಗಣರಾಜ್ಯೋತ್ಸವದ ಸಂಭ್ರಮ: ಭಾರತದ ಶಕ್ತಿ ಮತ್ತು ಸಾಂಸ್ಕೃತಿಕ ವೈಭವ

Mumbai News Desk

ದ್ವಿತೀಯ ಪಿಯುಸಿ ಫಲಿತಾಂಶ : ವಾಣಿಜ್ಯ ವಿಭಾಗದಲ್ಲಿ ಕುಮಾರಿ ಖುಷಿ ಲಕ್ಷ್ಮಣ್ ಕುಕ್ಯಾನ್ ಗೆ 91% ಅಂಕ.

Mumbai News Desk

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಕಳ ತಾಲೂಕು  ಯುವ ಪತ್ರಕರ್ತ ಹರಿಪ್ರಸಾದ್ ನಂದಳಿಕೆ  ಅತ್ಯುತ್ತಮ ವರದಿಗಾರ ಪ್ರಸಸ್ತಿ,

Mumbai News Desk

ವಿಶ್ವ ದೇವಾಡಿಗ ಮಹಾಮಂಡಳದ ಮಹಾಧಿವೇಶನದ ಪೂರ್ವಭಾವಿ ಸಭೆ ಸಂಪನ್ನ

Mumbai News Desk

ಜಾಗತಿಕ, ರಾಷ್ಟ್ರೀಯ, ರಾಜ್ಯ ಮತ್ತು ಮುಂಬೈ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ (07/06/26)ಪ್ರಮುಖ ವಿದ್ಯಮಾನಗಳ ಸಂಕ್ಷಿಪ್ತ ಸುದ್ದಿ ಸಂಕಲನ

Mumbai News Desk

ಉದ್ಯಮಿ ಕಾಂತಿ ಶೆಟ್ಟಿಯವರಿಗೆ ‘ಉದ್ಯೋಗ ಯೋಗದಾನ ಪುರಸ್ಕಾರ’

Mumbai News Desk