32 C
Mumbai
March 7, 2026
Mumbai News Kannada
ಮುಂಬಯಿ

ದಿ. ಕರ್ನಾಟಕ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ 28ನೇ ವಾರ್ಷಿಕ ಮಹಾಸಭೆ





ಮಧ್ಯಮ ವರ್ಗದ ಹೂಡಿಕೆದಾರರು ಮತ್ತು ಸಾಲಗಾರರ ಸಾಂತ್ವನ ಬದುಕಿಗೆ ನೆರವು: ಕಾರ್ಯಾಧ್ಯಕ್ಷ ಭಾಸ್ಕರ್ ಕೆ ಶೆಟ್ಟಿ

ಚಿತ್ರ,ವರದಿ; ರಮೇಶ್ ಉದ್ಯಾವರ

ವಸಯಿ, ಜೂ. 17::    ಸಹಕಾರ ಕ್ಷೇತ್ರದಲ್ಲಿ ಸಮಗ್ರ ಹಣಕಾಸು ಸಂಸ್ಥೆಯಾಗಿ ಹೊರಹೊಮ್ಮಿದ ಈ ಸಂಸ್ಥೆಯಿಂದ ಇನ್ನಷ್ಟು ಸಾಮರ್ಥ್ಯವಾದ ಯೋಜನೆಗಳು ಕೈಗೂಡಲು ಸಾಮಾಜಿಕ ಸಂಶೋಧನೆಯ ಅಗತ್ಯವಿದೆ .  ಮಧ್ಯಮ ವರ್ಗದ ಹೂಡಿಕೆದಾರರಿಗೆ ಮತ್ತು ಸಾಲಗಾರರ ಸಾಂತ್ವನ ಬದುಕಿಗೆ ನೀರೆರೆಯುವ ಕೆಲಸ ಈ ಸಂಸ್ಥೆಯಿಂದ ನಡೆಯುತ್ತಾ ಬಂದಿದೆ.  ಅಂತರಾಷ್ಟ್ರೀಯ ಸಹಕಾರ ವರ್ಷ 25ರ ಅನುಗುಣವಾಗಿ ಈ ಕ್ಷೇತ್ರ ಇನ್ನಷ್ಟು ಸುಭದ್ರವಾಗಿ ಬೆಳೆಯಲು ಇನ್ನಷ್ಟು ಒಳ್ಳೆಯ ಕೆಲಸ ಮಾಡಲು ಈ ಕ್ಷೇತ್ರದಲ್ಲಿ ವಿಪುಲ ಅವಕಾಶವಿದೆ.  ಸಹಕಾರ ಕ್ಷೇತ್ರ ಸಮೃದ್ಧಿಯಾಗಿ ಬೆಳೆಯ ಬೇಕಾದರೆ ಉತ್ತಮ ಯೋಜನೆ ಗಳ ದೃಷ್ಟಿಕೋನ ದ ಮೂಲಕ ಮುಂದೆ ಸಾಗುವ ಅವಶ್ಯಕತೆ ಇದ್ದು ವಿವಿಧ ಯೋಜನೆಗಳ ಮೂಲಕ ಸಫಲತೆ ಪಡೆಯಲಿದ್ದೇವೆ ಎಂದು ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನ ಕಾರ್ಯಾಧ್ಯಕ್ಷ ಭಾಸ್ಕರ್ ಕೆ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದರು. 

ಜೂ 15 ರಂದು ವಸಯಿ ಪೂರ್ವ ದ ಆದಿತ್ಯ ರೆಸಿಡೆನ್ಸಿಯ ಆರಾಧ್ಯ  ಬ್ಯಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ 28ನೇ ವಾರ್ಷಿಕ ಮಹಾಸಭೆಯಲ್ಲಿ ಸಂಸ್ಥೆಯ ಗ್ರಾಹಕರು ಠೇವಣಿದಾರು ಶೇರುದಾರರು ಮತ್ತು  ಉದ್ದೇಶಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ ಮತ್ತೆ ಕೋವಿಡ್ ನಂತಹ  ಇತರ  ಪರಿಸ್ಥಿತಿಗಳು ಎದುರಾದರೆ ಅದನ್ನು ಸುಲಲಿತವಾಗಿ ನಿಭಾಯಿಸುವ ಯೋಜನೆಯ ಅಂಗವಾಗಿ ಕೋರ್ ಬ್ಯಾಂಕಿಂಗ್ ಪದ್ಧತಿಯನ್ನು ಜಾರಿಗೆ ತರುವ ಉದ್ದೇಶ ಸಂಸ್ಥೆ ಹೊಂದಿದೆ. ಬದಲಾವಣೆಯ ಕಾಲಘಟ್ಟದಲ್ಲಿ ಈ ಸಂಸ್ಥೆಯನ್ನು ಇನ್ನಷ್ಟು ಬಲಿಷ್ಟಗೊಳಿಸಲು ಮಧ್ಯಮ ವಯಸ್ಸಿನ ತಲೆಮಾರಿನ ಅಗತ್ಯವಿದೆ ಎಂದು ಹೇಳಿದ ಅವರು  ಸದಸ್ಯರ ಸಹಕಾರ ಗ್ರಾಹಕರ ವಿಶ್ವಾಸ ಸಂಸ್ಥೆಯ ಯಶಸ್ವಿಗೆ ಕಾರಣವಾಗಿದೆ ಎಂದು ಹೇಳಿದರು.

    ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ವಸಯಿ ಕರ್ನಾಟಕ ಸಂಘದ ಗೌರವಾಧ್ಯಕ್ಷ ವಿಶ್ವನಾಥ್ ಪಿ ಶೆಟ್ಟಿ ಮಾತನಾಡಿ 13.5% ಡಿವಿಡೆಂಟ್ ನೀಡುವ ಮೂಲಕ ಸಂಸ್ಥೆಯ ಹಣಕಾಸು ಕ್ಷಮತೆಯನ್ನು ದೃಢೀಕರಿಸಿದೆ. ಭವಿಷ್ಯದಲ್ಲಿ ಇನ್ನಷ್ಟು ಸದುಪಯೋಗ ಯೋಜನೆಗಳು ಹೂಡಿಕೆದಾರರಿಗೆ ದೊರೆಯಲಿದೆ.  ವಿಧೇಯತೆ, ದೂರದೃಷ್ಟಿ ಚಿಂತನೆಯ ಮೂಲಕ ಸಂಸ್ಥೆಯನ್ನು ಉನ್ನತಿಯತ್ತ ಕೊಂಡೊಯ್ಯವಲ್ಲಿ ಕಾರ್ಯಾಧ್ಯಕ್ಷರು ಮತ್ತು ನಿರ್ದೇಶಕರ ಮಂಡಳಿಯ ಕಾರ್ಯಚಿತ್ತ ಶ್ಲಾಘನೀಯ ಎಂದು ಹೇಳಿದರು. 

   @ ವೈವಿಧ್ಯಪೂರ್ಣ ಕಾರ್ಯ ಚಟುವಟಿಕೆಯ ಸೇವೆ ನೀಡುವ ಮೂಲಕ ಹಣಕಾಸು ಕ್ಷೇತ್ರದಲ್ಲಿ ಪ್ರಗತಿ ಪಡೆದ ಸಂಸ್ಥೆ ಯಾಗಿ ಬೆಳೆ ದಿದೆ ಸಂಸ್ಥೆ ನೀಡುವ ಸಾಲ ಇನ್ನಿತರ ಹೂಡಿಕೆಯ ಯೋಜನೆ ಎಲ್ಲರ ಬದುಕಿಗೆ ಮರವಾಗಿ ನೆರಳಾಗಿ ಸಹಾಯ ಮಾಡಿದೆ.ಆಮೂಲಕ ಎಲ್ಲರ ವಿಶ್ವಾಸಕ್ಕೆ ಪಾತ್ರವಾಗಿದೆ . ರಮೇಶ್ ಪ್ರಭು ಅವರ ಬ್ಯಾಂಕಿಂಗ್ ಯೋಜನೆ ಸಂಸ್ಥೆ ಈ ಮಟ್ಟಕ್ಕೆ ಬೆಳೆದಿದೆ ಕಾರ್ಯಾಧ್ಯಕ್ಷರ ಕಾರ್ಯಕ್ಷಮತೆ ಮಾರ್ಗದರ್ಶನ ಸಂಸ್ಥೆ ಎಣಿಕೆಗೆ ಮೀರಿ ಬೆಳೆದಿದೆ.

 *ಪಾಂಡು ಎಲ್ ಶೆಟ್ಟಿ, ಉಪಕಾರ್ಯಾಧ್ಯಕ್ಷರು ಕರ್ನಾಟಕ ಕೋ ಆಪರೇಟಿವ್  ಕ್ರೆಡಿಟ್ ಸೊಸೈಟಿ,ಲಿ ವಸಯಿ 

 @ ನಮ್ಮಲ್ಲಿ ಯಾವ ರೀತಿಯ ಪ್ರಗತಿ ಬೇಕು ಎಂಬುದಕ್ಕೆ ಈ ಸಂಸ್ಥೆ ಮಾದರಿಯಾಗಿದೆ. ಕರ್ಮಭೂಮಿಯಲ್ಲಿ ತುಳು ಕನ್ನಡಿಗರ ಪ್ರಗತಿ ಕಾರ್ಯ ಪ್ರಶಂಸನೀಯ. ಸೇವಾ ಮನೋಭಾವದಿಂದ ಕೆಲಸ ಮಾಡುವವರಿಗೆ ಪ್ರೋತ್ಸಾಹ ದೊರೆಯಲು ಸಾಧ್ಯ ಎಂಬುದಕ್ಕೆ ಈ  ಸಂಸ್ಥೆ ಮಾದರಿಯಾಗಿದೆ. ಮುಂದೆಯೂ ಈ ಸಂಸ್ಥೆಯಿಂದ ಧನಾತ್ಮಕ ಬೆಳವಣಿಗೆ ಕಾಣಲಿದೆ.

   *ರಮೇಶ್ ಎಸ್ ಪ್ರಭು, ಸಿಎ.

 ನಿರ್ದೇಶಕರು ಮತ್ತು ಸಲಹೆಗಾರರು , ಕರ್ನಾಟಕ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿ. ವಸಯಿ  

      ವಸಯಿ-ವಿರಾರ್ ಮಹಾನಗರ ಪಾಲಿಕೆ ಮಾಜಿ ಮೆಯರ್ ಪ್ರವೀಣ್ ಶೆಟ್ಟಿ,   ಥಾಣೆ ವಿಭಾಗದ ಸಹಕಾರಿ ಕ್ಷೇತ್ರದ ಅಭಿವೃದ್ಧಿ ಅಧಿಕಾರಿ ಪಿ. ಕೆ. ಪನಾಸ್ಕರ್ ಸಂಸ್ಥೆಯ ಕಾರ್ಯಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. 

ವೇದಿಕೆಯಲ್ಲಿ ವಸಯಿ ಕರ್ನಾಟಕ ಸಂಘದ ಅಧ್ಯಕ್ಷ  ಹಾಗೂ ಸಂಸ್ಥೆಯ ನಿರ್ದೇಶಕರಾದ ದೇವೇಂದ್ರ ಬುನ್ನನ್, ನಿರ್ದೇಶಕಿ ಜಯಂತಿ ಎಸ್ ಕೋಟ್ಯಾನ್ ಉಪಸ್ಥಿತರಿದ್ದರು. 

    ಕಾರ್ಯಕ್ರಮದಲ್ಲಿ  ಸಂಸ್ಥೆಯ ಉಪ ಕಾರ್ಯಾಧ್ಯಕ್ಷ ಪಾಂಡು ಎಲ್ ಶೆಟ್ಟಿ ಪದ್ಮಾವತಿ ಶೆಟ್ಟಿಯವರ ದಾಂಪತ್ಯ ಜೀವನದ ಸ್ವರ್ಣ ಮಹೋತ್ಸವದ ಆಚರಣೆಯ ಅಂಗವಾಗಿ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

     ಕಾರ್ಯಕ್ರಮದ ಪ್ರಾರಂಭದಲ್ಲಿ ಮಹಾಸಭೆಗೆ ದೀಪ ಪ್ರಜ್ವಲಿಸಿ ಚಾಲನೆ ನೀಡಲಾಯಿತು. ನಿರ್ದೇಶಕಿ ಪ್ರಮೀಳಾ ಎನ್ ಅಮೀನ್ ಪ್ರಾರ್ಥನೆ ಹಾಡಿದರು. 

    ಪದಾಧಿಕಾರಿಗಳು ಗ್ರಾಹಕರು ಸದಸ್ಯರನ್ನು ಸ್ವಾಗತಿಸಿದ ನಿರ್ದೇಶಕ ಸಲಹೆಗಾರ ಮುಕುಂದ್ ಎಸ್ ಶೆಟ್ಟಿ, ದೃಢಸಂಕಲ್ಪದ ಸಂಸ್ಥೆಯೊಂದು ಪಾರದರ್ಶಕತೆಯಿಂದ ಉನ್ನತ ಮಟ್ಟಕ್ಕೆ ಬೆಳೆದಿದೆ ಎಂದು ಹೇಳಿದ ಅವರು ಸಂಸ್ಥೆ ಬಗ್ಗೆ ಪ್ರಸ್ತಾವನೆಗೖದರು. ಅತಿಥಿ ಹಾಗೂ ಪದಾಧಿಕಾರಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷರು ಗೌರವಿಸಿದರು ಗೌರವ ಕಾರ್ಯದರ್ಶಿ ಓ ಪಿ ಪೂಜಾರಿ ವಾರ್ಷಿಕ ವರದಿ ವಾಚಿಸಿದರು ಗೌರವಕೋಶಾಧಿಕಾರಿ ಕರ್ನೂರು ಶಂಕರ್ ಆಳ್ವ ವಾರ್ಷಿಕ ಲೆಕ್ಕಪತ್ರ ಸಭೆಯಲ್ಲಿ ಮಂಡಿಸಿದರು.

     ಆಂತರಿಕ ಲೆಕ್ಕಪರಿಶೋಧಕರಾಗಿ ಸಿಎ ವಿಜಯ ಕುಂದರ್ ಇವರನ್ನು ನೇಮಕಗೊಳಿಸಲಾಯಿತು.  ಈ ಸಂದರ್ಭದಲ್ಲಿ ಶೇರುದಾರರಿಗೆ 13.5% ಡಿವಿಡೆಂಟ್ ಘೋಷಿಸಲಾಯಿತು. ಮಾತೃಭೂಮಿ ಕೋಆರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯದರ್ಶಿ ಕಿಶೋರ್ ಕುಮಾರ್ ಶೆಟ್ಟಿ ಕುತ್ಯಾರು, ಭೋಜ ಅಂಚನ್, ರತ್ನದೀಪ್ ಮುಂಗೇಕರ್  ಸಂಸ್ಥೆಯ ಕಾರ್ಯ ವೈಖರಿಗೆ ಶ್ಲಾಘನೆ ವ್ಯಕ್ತಪಡಿಸಿ ಸಲಹೆ ಸೂಚನೆ ನೀಡಿದರು. 

 ಗಣ್ಯರನ್ನು ಸಂಘದ ಸಂಸ್ಥೆಯ ಪದಾಧಿಕಾರಿಗಳನ್ನು ಹಾಗೂ ಸಂಸ್ಥೆಯ ಕಾರ್ಯನಿರತ ಸಿಬಂದ್ಧಿಗಳಾದ ಕಾರ್ಯನಿರ್ವಾಹಣ ಅಧಿಕಾರಿ  

 ರಮೇಶ್ ಶಿರೋಳೆ ಮುಖ್ಯ ಪ್ರಬಂಧಕ ರವಿಕಾಂತ್  ನಾಯ್ಕ್ (naik) ಸಹಾಯಕ ಪ್ರಬಂಧಕಿ ಸೋನಿ ವೈ ಶೆಟ್ಟಿ,  ಲೋನ್ ಮ್ಯಾನೇಜರ್ ಸಾಗರ್ ಎ ಪಾಟೀಲ್ ಡೈಲಿ ಡಿಪೋಸಿಟ್  ಸಂಗ್ರಹಗಾರರಾದ ರಾಮಚಂದ್ರ ಡಿ ಹೆಗ್ಡೆ ಪುರಂದರ ಕೆ ಶೆಟ್ಟಿ  ಯೋಗಿತಾ ವೈ ನಾಯಕ್ ಜ್ಯೋತಿ ಆರ್ ನಾಯ್ಕ್(naik) ಕೆ. ಟಿ ಬಂಗೇರ ಲೋಕೇಶ್ ವಿ ರೈ ಅವರನ್ನು ಗೌರವಿಸಲಾಯಿತು. ವಸಯಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಠೇವಣಿ ದಾರರು, ಹೂಡಿಕೆದಾರರು, ಶೇರುದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಉಪಸ್ಥಿತರಿದ್ದರು.

    ವಸಯಿ ಕರ್ನಾಟಕ ಸಂಘದ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಸುಕೇಶ್ ವಿ. ರೈ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.



Related posts

ಬಿಲ್ಲವರ ಅಸೋಸಿಯೇಷನ್ ಮುಂಬಾಯಿ ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಆರ್ಥಿಕ ನೆರವು ನೀಡುವ ಕಾರ್ಯಕ್ರಮ.

Mumbai News Desk

ಕುಲಾಲ ಸಂಘದ ಗುರುವಂದನಾ ಭಜನಾ ಮಂಡಳಿಯ ಗುರು ಪೂರ್ಣಿಮೆಯ ಆಚರಣೆ.

Mumbai News Desk

ಶಹಾಡ್‌ ಶ್ರೀ ಮೂಕಾಂಬಿಕಾ ದೇವಸ್ಥಾನದ ಶರನ್ನವರಾತ್ರಿ ಮಹೋತ್ಸವ ವಿಜೃಂಭಣೆಯಿಂದ ಸಂಪನ್ನ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿಯ 84ನೇ ವಾರ್ಷಿಕೋತ್ಸವ

Mumbai News Desk

ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯಿಂದ 15 ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆ, ಸಾಂಸ್ಕೃತಿಕ ವೈಭವ, ಯಕ್ಷಗಾನ, ಸನ್ಮಾನ, ಸಮಾರೋಪ ಸಮಾರಂಭ .

Mumbai News Desk

ಚಿಣ್ಣರಬಿಂಬ ಮುಂಬಯಿ : 22ನೇ ವಾರ್ಷಿಕ ಮಕ್ಕಳ ಉತ್ಸವದ ನಾಟಕೋತ್ಸವ ಸಮಾರೋಪ

Mumbai News Desk