30 C
Mumbai
April 24, 2026
Mumbai News Kannada
ಸುದ್ದಿ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ (ರಿ.) ಪತ್ರಿಕಾ ಗೋಷ್ಠಿ: ಜಿಲ್ಲೆಗಳ ಶಾಂತಿ ಸೌಹಾರ್ದತೆ, ಘನ ಕೈಗಾರಿಕೋಧ್ಯಮಕ್ಕೆ ಪೂರಕ – ತೋನ್ಸೆ ಜಯಕೃಷ್ಣ ಎ. ಶೆಟ್ಟಿ





ಮಂಗಳೂರು : ಅವಿಭಾಜಿತ ದಕ್ಷಿಣ ಕನ್ನಡ ಜಿಲ್ಲೆಯವರು ಉನ್ನತ ಮಟ್ಟದ ಶಿಕ್ಷಣ ಹೊಂದಿದ್ದು ನಮ್ಮ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ದೇಶದಲ್ಲೇ ಮುಂದುವರಿದ ಜಿಲ್ಲೆಯಾಗಿದ್ದು ದೇಶ ವಿದೇಶದಲ್ಲಿ ನಮ್ಮವರು ನೆಲೆಸಿದ್ದು ವಿವಿಧ ಕ್ಷೇತ್ರಗಳಲ್ಲಿ ಖ್ಯಾತರಾಗಿದ್ದಾರೆ. ಆದರೆ ಅಭಿವೃದ್ಧಿಯ ಬಗ್ಗೆ ನಮ್ಮ ಜಿಲ್ಲೆಗಳಲ್ಲಿ ಇನ್ನೂ ಹಲವಾರು ಕೆಲಸಗಳು ಉಳಿದಿದೆ. ನಮ್ಮ ಜಿಲ್ಲೆಗಳಲ್ಲಿ ಇನ್ನೂ ಉನ್ನತ ಮಟ್ಟದ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆಯಾಗಲು ಇನ್ನು ದೊಡ್ಡ ಮಟ್ಟದ ಹೂಡಿಕೆದಾರರು ನಮ್ಮ ಜಿಲ್ಲೆಗೆ ಆಗಮಿಸುವಂತಾಗಬೇಕು. ಜಿಲ್ಲೆಗಳಲ್ಲಿ ಶಾಂತಿ ಸೌಹಾರ್ದತೆ ಮೂಲಕ ಇಂತಹ ಹೂಡೆಕೆದಾರರನ್ನು ಸ್ವಾಗತಿಸುವಂತಾಗಬೇಕು ಎಂದು ಜಯಶ್ರೀಕೃಷ್ಣ ಪರಿಸರ ಪೇಮಿ (ರಿ.) ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಎ ಶೆಟ್ಟಿ ಯವರು ನುಡಿದರು.
ಜೂ. 16 ರಂದು ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಅವರು ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಸ್ಥಾಪನೆಗೆ ಮೊದಲು ಇಲ್ಲಿ ದೊಡ್ಡಮಟ್ಟದ ಕೈಗಾರಿಕೆಗಳಿಗೆ ಪರಿಸರವಾದಿಗಳ ಸಮಸ್ಯೆಯಿತ್ತು. ನಮ್ಮ ಅವಳಿ ಜಿಲ್ಲೆಗಳಿಗೆ ಕೆಟ್ಟ ಜಿಲ್ಲೆಗಳು ಎಂಬ ಹಣೆಪಟ್ಟಿ ಕಟ್ಟಲಾಗಿತ್ತು. ಜಿಲ್ಲೆಗಳ ಎಲ್ಲಾ ಸುಮುದಾಯದವರ ಪ್ರಮುಖರನ್ನು ಹೊಂದಿದ ಏಕೈಕ ಸರಕಾರೇತರ ಸಂಘಟನೆ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಅಂದಿನ ಕೇಂದ್ರ ಸಚಿವರೂ ಕರಾವಳಿಯವರೇ ಆದ ಜಾರ್ಜ್ ಫರ್ನಾಂಡಿಸ್ ಸೇರಿ ಅನೇಕ ರಾಜ್ಯ ಹಾಗೂ ಕೇಂದ್ರ ರಾಜಕೀಯ ನಾಯಕರುಗಳ ಸಹಕಾರದಿಂದ ಜಿಲ್ಲೆಗಳಲ್ಲಿ ಪರಿಸರಕ್ಕೆ ಯಾವುದೇ ಹಾನಿಯಾಗದೆ ಜಿಲ್ಲೆಗಳ ಅಭಿವೃದ್ದಿಗಾಗಿ ಕಳೆದ 24 ವರ್ಷಗಳಿಂದ ಕ್ರೀಯಾಶೀಲವಾಗಿ ಯಶಸ್ವಿಯಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಜಿಲ್ಲೆ ಸುಧಾರಣೆ ಆಗಬೇಕು. ಜಿಲ್ಲೆಯಲ್ಲಿ ಜನ ಜೀವನಕ್ಕೆ ಇನ್ನು ಹೆಚ್ಚಿನ ಸೌಲಭ್ಯಗಳು ಸಿಗಬೇಕು. ಇದು ಕೇವಲ ಸರಕಾರದ ಜವಾಬ್ಧಾರಿ ಮಾತ್ರವಲ್ಲ ಜಿಲ್ಲೆಗಳ ಪ್ರತಿಯೊಬ್ಬ ನಾಗರಿಕರ ಜವಾಬ್ಧಾರಿಯು ಆಗಿದೆ. ಕರ್ನಾಟಕ ಸರಕಾರದ ಮಾನ್ಯ ಗೃಹ ಸಚಿವರಾದ ಸನ್ಮಾನ್ಯ ಜಿ. ಪರಮೇಶ್ವರ್ ಅವರ ಘನ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸ್ಪೆಷಲ್ ಆಕ್ಷನ್ ಫೋರ್ಸ್ (SAF – ವಿಶೇಷ ಕ್ರಿಯಾ ಪಡೆ) ಸ್ಥಾಪನೆ ಮಾಡುವ ಅವರ ನಿರ್ಧಾರ ವನ್ನು ನಮ ಸಮಿತಿ (ರಿ.)ಸ್ವಾಗತಿಸುತ್ತಿದೆ.ಜಿಲ್ಲೆಗಳ ಅಭಿವೃದ್ದಿಗಾಗಿ ನಮ್ಮ ಸಮಿತಿಯ ವತಿಯಿಂದ ಸಂಪೂರ್ಣ ಬೆಂಬಲವಿದೆ ಎಂದರು.

ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಯವರು ಸುದ್ದಿಗೋಷ್ಥಿಯಲ್ಲಿ ಮಾತನಾಡುತ್ತಾ ಅವಿಭಜಿತ ಜಿಲ್ಲೆಯ ಜನರು ಜಾತಿ ಧರ್ಮ ಬೇಧವಿಲ್ಲದೆ ಅನ್ಯೋನತೆಯಿಂದ ಬಾಳಿದವರು. ಕೇವಲ ಕೆಲವೇ ಮಂದಿಯಿಂದ ತಮ್ಮ ಸ್ವಾರ್ಥಕ್ಕಾಗಿ ಇಲ್ಲಿ ಸೌಹಾರ್ದತೆ ಹಾಗೂ ಶಾಂತಿಗೆ ಧಕ್ಕೆಯಾಗುತ್ತಿದೆ. ಇಲ್ಲಿ ಅಭಿವೃದ್ದಿಯ ವಾತಾವರಣ ನಿರ್ಮಾಣವಾಗಬೇಕಾಗಿದೆ. ಮುಂದೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿಯ ವಾತಾವರಣ ಮರುಸ್ಥಾಪನೆ ಕಾರ್ಯದಲ್ಲಿ ಸಂಬಂಧಿಸಿದ ಜಿಲ್ಲಾಡಳಿತ ಜತೆ ಹಾಗೂ ಪೊಲೀಸರೊಂದಿಗೆ ಸಹಕರಿಸಲು ಪ್ರತೀ ತಾಲೂಕಿನಲ್ಲಿ ತಲಾ 8- 10 ಸದಸ್ಯರ ಸಮಿತಿ ರಚಿಸಲು ಜಯಶ್ರೀಕೃಷ್ಣ ಪರಿಸರ ಪೇಮಿ ಸಮಿತಿ ತೀರ್ಮಾನಿಸಿದೆ. ನಾವೆಲ್ಲರೂ ಬಾರತೀಯರಾಗಿದ್ದು ಒಗ್ಗಟ್ಟಿನಿಂದ ಬಲವಂತರಾಗಿ ಜಿಲ್ಲೆಗಳಲ್ಲಿ ಹೆಚ್ಚಿನ ಉದ್ಯಮಗಳು ಸ್ಥಾಪನೆಯಾಗುದರ ಮೂಲಕ ನಮ್ಮವರಿಗೆ ಇನ್ನೂ ಹೆಚ್ಚಿನ ಉದ್ಯೋಗ ಸಿಗುವಂತಾಗಲಿ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ ಯವರು ಮಾತನಾಡಿ ನಮ್ಮ ಜಿಲ್ಲೆಯ ಎಲ್ಲಾ ವರ್ಗದ ಜನರು ಶಾಂತಿ ಸೌಹಾರ್ದತೆ ವಾತಾವರಣದಲ್ಲಿ ಬದುಕುವಂತಾಗಬೇಕು. ವಿದೇಶದಲ್ಲಿರುವ ನಮ್ಮವರಿಗೆ ನಮ್ಮ ಜಿಲ್ಲೆಯ ಬಗ್ಗೆ ಯಾವುದೇ ರೀತಿಯ ಕಳವಳ ಉಂಟಾಗಬಾರದು. ಎಲ್ಲಾ ಧರ್ಮಗಳ ಆರಾಧನೆ ಸ್ಥಳಗಳ ಜೀರ್ಣೋದ್ಧಾರ, ಧಾರ್ಮಿಕ ಕಾರ್ಯಕ್ರಮಗಳು ಇಲ್ಲಿ ಹೆಚ್ಚಾಗುತ್ತಿದ್ದು ಸುಂದರ ವಾತಾವರಣ ಬೆಳೆಯುತ್ತಿರುವಾಗ ಅಭಿವೃದ್ದಿ ಪಥದಲ್ಲಿರುವ ನಮ್ಮ ಜಿಲ್ಲೆಗಳಲ್ಲಿ
ಶಾಂತಿ ಸೌಹಾರ್ದತೆ ಅತೀ ಅಗತ್ಯ. ಹೂಡಿಕೆದಾರರು ಜಿಲ್ಲೆಗಳಲ್ಲಿ ಹೂಡಿಕೆಯನ್ನು ಮಾಡಲು ಹಿಂಜರಿಯದಂತಾಗಬೇಕು. ಜಿಲ್ಲೆಗಳ ಅಭಿವೃದ್ದಿಗಾಗಿ ಮುಂದಿನ ದಿನಗಳಲ್ಲಿ ನಾವು ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ್ ಎಂದರು.

ಸಮಿತಿಯ ಜಿಲ್ಲಾ ಉಪಕಾರ್ಯಾಧ್ಯಕ್ಷರಾದ ಅರುಣ್ ಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಶಂಕರ್ ಸುವರ್ಣ, ಕಾರ್ಯದರ್ಶಿ ಸುರೇಂದ್ರ ಮೆಂಡನ್, ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



Related posts

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಹೊರ ರಾಜ್ಯದಲ್ಲೂ ಅಸಾಯಕರಿಗೆ ಸಹಾಯ ಹಸ್ತ

Mumbai News Desk

ಮಾಜಿ ಶಾಸಕ ಗೋಪಾಲ್ ಭಂಡಾರಿ ಅವರ ಪುತ್ರ ಸುದೀಪ್ ಆತ್ಮಹತ್ಯೆಗೆ ಶರಣು

Mumbai News Desk

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ಉಡುಪಿಯಲ್ಲಿ ಜರಗಿದ ಯಶಸ್ವಿ ಸರಣಿ ಕಾರ್ಯಕ್ರಮಗಳು

Mumbai News Desk

ದ್ವಿತೀಯ ಪಿಯುಸಿ ಪರೀಕ್ಷೆ : 96% ಅಂಕ ಪಡೆದ ಸೃಜನ್ ಬಿ ಮೊಗವೀರ

Mumbai News Desk

ಬೆಳ್ಮಣ್: ಕುಂಭ ನಿಧಿ ಕ್ರೆಡಿಟ್ ಕೋ ಅಪರೆಟಿವ್ ಸೂಸೈಟಿ ಉದ್ಘಾಟನೆಗೆ ಸಿದ್ಧತೆ ,

Mumbai News Desk

ನಟ ದರ್ಶನ್‌ ಸೇರಿ 7 ಆರೋಪಿಗಳ ಜಾಮೀನು ರದ್ದು, ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ

Mumbai News Desk