30.9 C
Mumbai
June 8, 2026
Mumbai News Kannada
ಪ್ರಕಟಣೆ

ಮಲಾಡ್ ಕುರಾರ ಶ್ರೀ ಶನಿ ಮಹಾತ್ಮ ಚಾರಿಟೇಬಲ್ ಟ್ರಸ್ಟ್. ಜೂ22. ಶೈಕ್ಷಣಿಕ ನೆರವು.ಉಚಿತ ಶಾಲಾ ಪರಿಕರ ವಿತರಣೆ.





ಮಹಾನಗರದ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗಳಲ್ಲಿ ಒಂದಾದ ಮಲಾಡ್ ಪೂರ್ವದ ಕುರಾರ ವಿಲೇಜಿನ ಲಕ್ಷಣ ನಗರದ ಶ್ರೀ ಮಹತೋಭಾರ ಶ್ರೀ ಶನಿಶ್ವರ ದೇವಸ್ಥಾನದ ಆಡಳಿತ ಸಂಸ್ಥೆ ಶ್ರೀ ಶನಿ ಮಹಾತ್ಮ ಪೂಜಾ ಸಮಿತಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಿರಂತರವಾಗಿ ಸಾಮಾಜಿಕ,ಸಾಂಸ್ಕ್ರತಿಕ ಹಾಗು ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಗರದ ಪ್ರತಿಷ್ಠಿತ ಸಂಸ್ಥೆಯಾಗಿದೆ.
ಪ್ರತೀ ವರುಷ ಪರಿಸರದ ಸುಮಾರು ೮೦೦-೧೦೦೦ ಸಾವಿರ ವಿದ್ಯಾರ್ಥಿಗಳಿಗೆ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ, ಬ್ಯಾಗ್ ಮತ್ತು ಶಾಲಾ ಪರಿಕರ ನೀಡುತ್ತಾ ಧಾರ್ಮಿಕ ಹಾಗು ಶೈಕ್ಷಣಿಕ ಬೆಳವಣಿಗೆಗೆ ಒತ್ತು ನೀಡುತ್ತಾ ಬರುತ್ತಿದೆ. ಶನಿ ಮಹಾತ್ಮ ಪೂಜಾ ಸಮಿತಿಯ ಉಪ ಸಮಿತಿಗಳಲ್ಲೊಂದಾದ ಶ್ರೀ ಶನಿಮಹಾತ್ಮ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಸಹ ಪರಿಸರದ ಸುಮಾರು ಒಂದು ಸಾವಿರಕ್ಕೂ ಮಿಗಿಲಾದ ಶಾಲಾ ವಿಧ್ಯಾರ್ಥಿಗಳಿಗೆ ಶಾಲಾ ಪರಿಕರಗಳನ್ನು ಆದಿತ್ಯವಾರ 22-6-2025 ರಂದು ಮುಂಜಾನೆ 9 ಗಂಟೆಯಿಂದ ಉಚಿತವಾಗಿ ವಿತರಿಸಲಾಗುವುದು.
ಅಂದಿನ ಕಾರ್ಯಕ್ರಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಪ್ರಭಾಕರ ಶೆಟ್ಟಿ ಇನ್ನಂಜೆಯವರ ಉಪಸ್ಥಿತಿಯಲ್ಲಿ ನೆರವೇರಲಿರುವುದು. ಸಭೆಗೆ ಮುಖ್ಯ ಅತಿಥಿಯಾಗಿ ಮುಂಬಯಿ ಪ್ರೇಂಡ್ಸ ಚಾರಿಟೇಬಲ್ ಸಮಿತಿಯ ಅಧ್ಯಕ್ಷ, ಹೋಟೆಲ್ ಹಾಗು ಉದ್ಯಮಿ ಸತೀಶ್ ಶೆಟ್ಟಿ ಅಜೆಕಾರು,ಪೂಜಾ ಸಮಿತಿ ಅಧ್ಯಕ್ಷ ಶ್ರೀನಿವಾಸ ಪಿ ಸಾಫ಼ಲ್ಯ, ಉದ್ಯಮಿ ಉದಯ ಮೋಗವೀರ, ಉದ್ಯಮಿ ನರೇಶ್ ಸಮಾಜ ಸೇವಕ ಭಾವೇಶ್ ಷಹ ಮೊದಲಾದವರು ಭಾಗವಹಿಸಲಿರುವರು.ಅಂದಿನ ಈ ಕಾರ್ಯಕ್ರಮದ ಲಾಭವನ್ನು ಪರಿಸರದ ಎಲ್ಲಾ ವಿದ್ಯಾರ್ಥಿಗಳು ( ೩ – ರಿಂದ ೬ ನೇ ತರಗತಿ ಪಾಸಾದವರು) ಪಡೆಯಬಹುದೆಂದು ಚಾರಿಟೇಬಲ್ ಟ್ರಸ್ಟ್, ಕಾರ್ಯದರ್ಶಿ ಶ್ರೀ ಮಹೇಶ್ ಸಾಲಿಯಾನ್ ಮತ್ತು ಎಲ್ಲಾ ಕಾರ್ಯಕಾರಿ ಸದಸ್ಯರು ಶನಿ ಮಹಾತ್ಮ ಪೂಜಾ ಸಮಿತಿ, ಮತ್ತು ಮಹಿಳಾ ವಿಭಾಗದವರು ವಿನಂತಿಸಿರುವರು.

B. Dinesh Kulal
Mob.: 9821868674



Related posts

ಶ್ರೀ ಮಕ್ಕೆಕಟ್ಟು ಮೇಳ ಮತ್ತು ಶ್ರೀ ಹಟ್ಟಿಯಂಗಡಿ ಮೇಳದ ಪ್ರಮುಖ ಕಲಾವಿದರು ತಂಡ, ಜುಲೈ 9 ರಿಂದ 20 ರವರೆಗೆ  ಮಹಾನಗರದ ವಿವಿಧ ಉಪ ನಗರಗಳಲ್ಲಿ    ವೈಶಿಷ್ಟ್ಯ ಪೂರ್ಣವಾದ ಯಕ್ಷಗಾನ ಪ್ರದರ್ಶನ

Mumbai News Desk

ಮಾ. 1: ಬೆಳ್ಮಣ್ ಸರ್ಕಾರಿ ಪದವಿಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಮಾವೇಶ

Mumbai News Desk

ವರ್ಲಿ ಶ್ರೀ ಸಿದ್ದೇಶ್ವರ ಅನ್ನದಾತ ಅಪ್ಪಾಜಿಬೀಡು ಪೌಂಡೇಶನ್, ಡಿ.22ರಂದು 30ನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ, ಅನ್ನಸಂತರ್ಪಣೆ, ಗುರುವಂದನೆ,

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಥಾಣೆ : ಡಿ. 15ರಂದು ಕಲ್ಲುರ್ಟಿ -ಪಂಜುರ್ಲಿ -ಗುಳಿಗ ದೈವದ ನೇಮ (ಕೋಲ )

Mumbai News Desk

ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎ. 4: ಮಾಜಿ ಮುಖ್ಯಮಂತ್ರಿ ಡಾ. ವೀರಪ್ಪ ಮೊಯ್ಲಿ ಅವರಿಂದ ‘ಧೀಮಂತ ಧರ್ಮಪಾಲ’ ಆತ್ಮಕಥನ ಕೃತಿ ಲೋಕಾರ್ಪಣೆ

Mumbai News Desk

ಅಖಿಲ ಗಾಂವ್ದೇವಿ ಕನ್ನಡ ಮಿತ್ರ ಮಂಡಳಿ ಮುಂಬಯಿ – ಸೆ. 7 ರಂದು 94 ನೇ ವರ್ಷದ ಗಣೇಶೋತ್ಸವ ಆಚರಣೆ

Mumbai News Desk