
ಪ್ರಾದೇಶಿಕ ಸಮಿತಿಗೆ ಹತ್ತು ಹತ್ತು ಲಕ್ಷ ರೂಪಾಯಿ ನೀಡುವ ಯೋಜನೆ ನಮ್ಮ ಮುಂದಿದೆ– ಪ್ರವೀಣ್ ಭೋಜ ಶೆಟ್ಟಿ
ಚಿತ್ರ ವರದಿ ರವಿ. ಬಿ. ಅಂಚನ್ ಪಡುಬಿದ್ರಿ
ಡೊಂಬಿವಲಿ ಜೂ 22: ಬಂಟ ಸಮಾಜ ಬಾಂಧವರ ಮನೆ ಬಾಗಿಲಿಗೆ ಬಂದು ಕೆಲಸ ಮಾಡುವ ಬಂಟರ ಸಂಘ 97 ವರ್ಷದ ಹಿಂದೆ ಗ್ರಾಂಟ್ ರೋಡ್ ನ ಸಣ್ಣ ಕಚೇರಿಯಲ್ಲಿ ಸ್ಥಾಪನೆಯಾಗಿ ಸಮಾಜ ಸೇವೆಯನ್ನು ಮಾಡುತ್ತಾ ಮೂರು ಬೃಹತ್ ಶಿಕ್ಷಣ ಸಂಸ್ಥೆಗಳನ್ನು ಹೊಂದಿದ ಬಂಟರ ಸಂಘ ಮುಂಬಯಿ ಇಂದು ಸಾವಿರ ಕೋಟಿಗೂ ಮಿಕ್ಕಿ ಅಸ್ತಿಯನ್ನು ಹೊಂದಿದೆ. ಪ್ರತಿಯೊಬ್ಬರೂ ತಮ್ಮ ಜೀವಿತ ಸಮಯದಲ್ಲೇ ದಾನ, ಧರ್ಮಗಳನ್ನು ಮಾಡ ಬೇಕು ಅಗ ಅವರ ಹೆಸರು ಚಿರವಾಗಿ ಉಳಿಯುತ್ತದೆ. ನಮ್ಮ ಸಮಾಜದ ಮಕ್ಕಳು ಸುಶಿಕ್ಷಿತರಾಗ ಬೇಕೆನ್ನುವ ನಿಟ್ಟಿನಲ್ಲಿ ಸಂಘವು ಶಿಕ್ಷಣಕ್ಕೆ ಆದ್ಯತೆಯನ್ನು ನೀಡುತ್ತಿದೆ, ಈ ವರ್ಷ ಸಮಾಜ ಕಲ್ಯಾಣ ಸಮಿತಿಯು ಸುಮಾರು ಒಂದು ಕೋಟಿ ಎಂಬತ್ತು ಲಕ್ಷಕ್ಕೂ ಮಿಕ್ಕಿ ಶಿಕ್ಷಣ ಮತ್ತು ವೃದ್ಯಾಪ್ಯ ವೇತನವನ್ನು ನೀಡಿದೆ ಸಮಾಜ ಕಲ್ಯಾಣ ಸಮಿತಿಯ ಕೆಲಸ ಕಾರ್ಯ ಉತ್ತಮ ರೀತಿಯಲ್ಲಿ ನಡೆಯ ಬೇಕೆನ್ನುವ ನಿಟ್ಟಿನಲ್ಲಿ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮತ್ತು ಅವರ ತಂಡ ಬಹಳಷ್ಟು ಶ್ರಮ ವಹಿಸಿದ್ದಾರೆ ಇಂತಹ ಕಾರ್ಯ ಪ್ರತಿಯೊಬ್ಬರೂ ಮಾಡಿದಾಗ ಸಮಾಜ ಉನ್ನತ ಮಟ್ಟಕೇರುವುದರಲ್ಲಿ ಸಂದೇಹವಿಲ್ಲ, ಬೋರಿವಲಿಯಲ್ಲಿ 170 ಕೋಟಿ ರೂಪಾಯಿ ವೆಚ್ಚದಲ್ಲಿ ಉನ್ನತ ಮಟ್ಟದ ಶಿಕ್ಷಣ ಸಂಸ್ಥೆ ಸಿದ್ದ ಗೊಳ್ಳುತ್ತಿದೆ, ನಮ್ಮಲ್ಲಿ ಅತ್ಯುತ್ತಮ ಗುಣ ಮಟ್ಟದ ಶಿಕ್ಷಣ ಸಂಸ್ಥೆಗಳಿವೆ ಇದರ ಲಾಭವನ್ನು ಸಮಾಜ ಬಾಂಧವರು ಪಡೆಯ ಬೇಕು, ಬಂಟ ಸಮಾಜದ ಮೇಲಿನ ಪ್ರೀತಿಯಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯಲ್ಲಿ ಸುಕುಮಾರ ಶೆಟ್ಟಿ ದಂಪತಿ, ಅನಂದ ಶೆಟ್ಟಿ ದಂಪತಿ, ಹೇಮಂತ ಶೆಟ್ಟಿ ದಂಪತಿ ಕೆಲಸ ಮಾಡುತ್ತಿರುವುದು ಅಭಿನಂದನೀಯ ಇಂತಹ ಕಾರ್ಯ ಪ್ರತಿಯೊಬ್ಬರಿಂದಲೂ ನಡೆಯಲಿ, ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಕ್ಕೆ ಬಹಳಷ್ಟು ವೆಚ್ಚ ತಗಲುತ್ತದೆ ಈ ವೆಚ್ಚವನ್ನು ಕಡಿಮೆ ಮಾಡುವ ಸಲುವಾಗಿ ನಾನು ಅಧ್ಯಕ್ಷ ಗಾದಿಯಿಂದ ಇಳಿಯುವ ಮೊದಲು ಪ್ರತಿಯೊಂದು ಪ್ರಾದೇಶಿಕ ಸಮಿತಿಗೆ ಹತ್ತು, ಹತ್ತು ಲಕ್ಷ ರೂಪಾಯಿ ನೀಡುವ ಯೋಜನೆ ನಮ್ಮ ಮುಂದಿದೆ ಎಂದು ಬಂಟರ ಸಂಘ ಮುಂಬಯಿ ಇದರ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿಯವರು ನುಡಿದರು.
ಅವರು ಜೂ 22 ರ ಬೆಳಿಗ್ಗೆ ಡೊಂಬಿವಲಿ ಪೂರ್ವದ ಮಾನ್ಪಾಡ ರಸ್ತೆಯಲ್ಲಿರುವ ಪ್ಲಾಟಿನಂ ಬ್ಯಾಕ್ವೇಟ್ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಇದರ ಸಮಾಜ ಕಲ್ಯಾಣ ಸಮಿತಿಯ ಮುಂದಾಳುತ್ವದಲ್ಲಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಅಶ್ರಯದಲ್ಲಿ ಶೈಕ್ಷಣಿಕ ಸಹಾಯ, ವಿಧವ ವೇತನ, ಪುಸ್ತಕ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ 18 ವರ್ಷದ ಹಿಂದೆ ಪ್ರಾದೇಶಿಕ ಸಮಿತಿಗಳನ್ನು ಸ್ಥಾಪಿಸಿ ಸಮಾಜದ ಮಕ್ಕಳು ವಿದ್ಯೆಯಿಂದ ವಂಚಿತರಾಗ ಬಾರದು ಎಂಬ ದೃಷ್ಟಿಯಿಂದ ಸಮಾಜ ಬಾಂಧವರ ಕಣ್ಣೀರನ್ನು ಒರೆಸುವ ಕಾರ್ಯ ಪ್ರಾರಂಭವಾಯಿತು ಅ ಸಂದರ್ಭದಲ್ಲಿ 700 ಅರ್ಜಿಗಳು ಬರುತ್ತಿದ್ದು 36 ಲಕ್ಷ ರೂಪಾಯಿ ನೀಡುತ್ತಿದ್ದರು ಇಂದು ನಮ್ಮ ಸಮಾಜ ಬಾಂಧವರು ಅರ್ಥಿಕವಾಗಿ ಸಮೃದ್ಧಿಯನ್ನು ಹೊಂದಿದ್ದಾರೆ ಈಗ ಕೇವಲ 480 ಅರ್ಜಿಗಳು ಬರುತ್ತಿದ್ದು ಸುಮಾರು 25 ಲಕ್ಷ ರೂಪಾಯಿ ಪ್ರಾದೇಶಿಕ ಸಮಿತಿಗೆ ನೀಡಿದೆ ಸಮಾಜ ಬಾಂಧವರು ಸಮಾಜದ ಶಾಲೆ, ಕಾಲೇಜಿನಲ್ಲಿ ರಿಯಾತಿ ದರದಲ್ಲಿ ಪ್ರವೇಶ ಪಡೆದು ತಮ್ಮ ಶಿಕ್ಷಣವನ್ನು ಪೂರೈಸ ಬಹುದು ಎಂದರು.

ಪೂರ್ವ ವಲಯ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಸುಕುಮಾರ ಶೆಟ್ಟಿ ಮಾತನಾಡುತ್ತಾ ನಮ್ಮ ಅಧ್ಯಕ್ಷರು ಪ್ರಾದೇಶಿಕ ಸಮಿತಿಗಳಿಗೆ ಬಹಳಷ್ಟು ಸಹಕಾರ ನೀಡುತ್ತಿದ್ದಾರೆ ಮೊದಲು 20 ಸಾವಿರ ನೀಡುತ್ತಿದ್ದ ಧನ ಸಹಾಯವನ್ನು 30 ಸಾವಿರಕ್ಕೆ ಹಾಗೂ ಕ್ಯಾನ್ಸರ್ ರೋಗಿಗಳಿಗೆ 30 ಸಾವಿರ ನೀಡುತ್ತಿದ್ದ ಸಹಾಯವನ್ನು 50 ಸಾವಿರಕ್ಜೆ ಏರಿಸಿದ್ದಾರೆ ಹಾಗೂ ಪ್ರಾದೇಶಿಕ ಸಮಿತಿಗಳಲ್ಲಿ ಹಲವಾರು ಬದಲಾವಣೆ ತರುವ ಯೋಜನೆ, ಯೋಚನೆ ಅಧ್ಯಕ್ಷರಲ್ಲಿರುವುದು ಸಂತೋಷದ ವಿಷಯ ಎಂದರು.

ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ ಪಡುಕುಡೂರು ಮಾತನಾಡುತ್ತಾ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಡೊಂಬಿವಲಿಗರಾಗಿದ್ದು ಡೊಂಬಿವಲಿ ಪರಿಸರದ ಸಮಾಜ ಬಾಂಧವರ ಕಷ್ಟ ಸುಖಗಳನ್ನು ಚೆನ್ನಾಗಿ ಅರಿತಿದ್ದಾರೆ ಅದುದರಿಂದ ನಮ್ಮ 480 ಅರ್ಜಿಗಳನ್ನು ಪರಿಶೀಲಿಸಿ ಯಾವುದನ್ನು ಹಿಂತಿರುಗಿಸದೆ 26 ಲಕ್ಷ ರೂಪಾಯಿ ನಮಗೆ ನೀಡಿದ್ದಾರೆ.ಅದರೊಂದಿಗೆ ಪ್ರಾದೇಶಿಕ ಸಮಿತಿಯ ಹೃದಯ ಶ್ರೀಮಂತ ದಾನಿಗಳ ಸಹಕಾರದಿಂದ 62 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮಾಡಿದ್ದಾರೆ ಅದರೊಂದಿಗೆ ಹೇಮಂತ ಶೆಟ್ಟಿಯವರು ಈ ಸಭಾಗೃಹವನ್ನು ಉಚಿತವಾಗಿ ನೀಡಿ ಸಹಕಾರ ನೀಡಿದ್ದಾರೆ ಎಂದರು.
ಡಾ. ಆರ್. ಕೆ. ಶೆಟ್ಟಿಯವರ ಅನುಪಸ್ಥಿತಿಯಲ್ಲಿ
ಪೂರ್ವ ವಲಯದ ಸಮನ್ವಯಕ ಸುಕುಮಾರ ಶೆಟ್ಟಿ ಸಂಜೀವಿನಿ ಸ್ಕಿಲ್ ಡೆವಲಪ್ಮೆಂಟ್ ಕೊಡಮಾಡುವ ಸಹಾಯದ ಮಾಹಿತಿ ನೀಡುತ್ತಾ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮುಂದಾಳುತ್ವದಲ್ಲಿ ಭಾರತ ಸರಕಾರ ಟಾಟಾ ಕಂಪನಿಯ ಸಮೂಹದೊಂದಿಗೆ ಸ್ಕಿಲ್ ಡೆವಲಪ್ಮೆಂಟ್ ಕುಶಲತೆಯನ್ನು ನೀಡುತ್ತಿದ್ದು ಇದಕ್ಕೆ 12 ಸಾವಿರದಿಂದ 50 ಸಾವಿರ ವೆಚ್ಚ ತಗಲುತ್ತದೆ ಈ ಹಣವನ್ನು ಭರಿಸಲಾಗದೆ ಇರುವ ಬಂಟ ಬಾಂಧವರ ಈ ವೆಚ್ಚವನ್ನು ಸಂಜೀವಿನಿ ಸ್ಕಿಲ್ ಡೆವಲಪ್ಮೆಂಟ್ ಸಂಸ್ಥೆ ಭರಿಸುವುದು ಎಂಬ ಭರವಸೆಯನ್ನು ನೀಡಿದರು

ಅನಂದ ಶೆಟ್ಟಿ ಎಕ್ಕಾರ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು
ಇದೇ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಮೀನಾಕ್ಷಿ ವಿಠಲ ಶೆಟ್ಟಿ ಮತ್ತು ಕೆಮ್ರಾಲ್ ಶ್ಯಾಮ ಶೆಟ್ಟಿ ದಂಪತಿಯನ್ನು ಸೀನಿಯರ್ ಸಿಟಿಜನ್ ವೇಲ್ ಫೇರ್ ಸಮಿತಿಯ ವತಿಯಿಂದ ವೇದಿಕೆಯ ಮೇಲೆ ಸನ್ಮಾನಿಸಲಾಯಿತು.
ಬಂಟರ ಸಂಘದ ವತಿಯಿಂದ ವಿಶೇಷವಾಗಿ ಪ್ರಾದೇಶಿಕ ಸಮಿತಿಯ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಅರುಣ್ ಶೆಟ್ಟಿ ಪಡುಕುಡೂರು ಮತ್ತು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಅನಂದ ಶೆಟ್ಟಿ ಎಕ್ಕಾರ ಇವರನ್ನು ಸತ್ಕರಿಸಲಾಯಿತು

ಪ್ರಾದೇಶಿಕ ಸಮಿತಿಯ ಯುವ ವಿಭಾಗದ ವತಿಯಿಂದ ಸಮಾಜದ ಮಕ್ಕಳಿಗೆ ಶೈಕ್ಷಣಿಕ ಕಿಟ್ ಗಳನ್ನು ವಿತರಿಸಲಾಯಿತು
ವಿಶೇಷ ದಾನಿಗಳಾದ ಹರೀಶ್ ಶೆಟ್ಟಿ ಪಡುಕುಡೂರು,ಅನಂದ ಶೆಟ್ಟಿ ಎಕ್ಕಾರ್ ದಂಪತಿ, ಸುಕುಮಾರ್ ಶೆಟ್ಟಿ ದಂಪತಿ, ರಾಜೀವ್ ಭಂಡಾರಿ, ನವೀನ್ ಶೆಟ್ಟಿ, ಅಜೆಕಾರ್ ವಿಜಯ ಶೆಟ್ಟಿ, ಹೇಮಂತ ಶೆಟ್ಟಿ ದಂಪತಿ ಇವರನ್ನು ವೇದಿಕೆಯ ಗಣ್ಯರು ಸತ್ಕರಿಸಿದರು. ಹಾಗೂ ವಿದ್ಯಾರ್ಥಿಗಳನ್ನು ದತ್ತು ಪಡೆದ ದಾನಿಗಳನ್ನು ಹೂ ಗುಚ್ಚ ನೀಡಿ ಸತ್ಕರಿಸಲಾಸಯಿತು.
ತೃಷಾ ಅಳ್ವರವರ ಪ್ರಾರ್ಥನೆ ಹಾಗೂ ಬಂಟ ಗೀತೆಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

ವೇದಿಕೆಯ ಮೇಲೆ.ಪ್ರವೀಣ್ ಭೋಜ ಶೆಟ್ಟಿ, ಮಹೇಶ್ ಎಸ್. ಶೆಟ್ಟಿ, ಡಾ. ದಿವಾಕರ ಶೆಟ್ಟಿ ಇಂದ್ರಾಳಿ,ಸಿಎ ರಮೇಶ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಶಶಿಧರ ಶೆಟ್ಟಿ ಇನ್ನಂಜೆ, ಚಿತ್ರಾ ಅರ್. ಶೆಟ್ಟಿ, ಅನಂದ ಶೆಟ್ಟಿ ಎಕ್ಕಾರ್ ಸುಕುಮಾರ್ ಶೆಟ್ಟಿ, ಸುಬ್ಬಯ್ಯ ಎ. ಶೆಟ್ಟಿ, ಅರುಣ್ ಶೆಟ್ಟಿ ಪಡುಕುಡೂರು. ಕಲ್ಲಡ್ಕ ಕರುಣಾಕರ ಶೆಟ್ಟಿ, ಪ್ರಭಾಕರ ಅರ್. ಶೆಟ್ಟಿ, ಸಚಿನ್ ಶೆಟ್ಟಿ, ಜಯಂತ್ ಶೆಟ್ಟಿ, ಪ್ರಭಾಕರ್ ವಿ. ಶೆಟ್ಟಿ ಕಲ್ಲಡ್ಕ, ಸಿ.ಎಸ್. ಉತ್ತಮ್ ಶೆಟ್ಟಿ, ಜಯಪ್ರಕಾಶ್ ಶೆಟ್ಟಿ, ಯೋಗಿನಿ ಎಸ್. ಶೆಟ್ಟಿ, ಪ್ರಜ್ವಲ್ ಬಿ. ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹೇಮಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.






ಬಂಟರ ಸಂಘದ. ಕೇಂದ್ರ ಕಾರ್ಯಾಲಯ ಪ್ರಾದೇಶಿಕ ಸಮಿತಿಯ ಪ್ರತಿಯೊಂದು ವಿನಂತಿಯನ್ನು ಪರಿಗಣಿಸಿ ಸಹಾಯವನ್ನು ನೀಡುತ್ತಿದೆ. ಪ್ರಾದೇಶಿಕ ಸಮಿತಿಯ 62 ವಿದ್ಯಾರ್ಥಿಗಳನ್ನು ದತ್ತು ಸ್ವೀಕಾರ ಮತ್ತು ಕುಟುಂಬ ದತ್ತು ಸ್ವೀಕಾರ ಕಾರ್ಯಕ್ರಮಕ್ಕೆ ಡೊಂಬಿವಲಿಯ ಹೃದಯ ಶ್ರೀಮಂತ ಬಂಟರ ಸಂಪೂರ್ಣ ಸಹಕಾರವನ್ನು ನೀಡುತ್ತಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ. ನಮ್ಮ ಮಹಿಳಾ ವಿಭಾಗ ಮತ್ತು ಯುವ ವಿಭಾಗ ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರವನ್ನು ನೀಡುತ್ತಿದೆ. ಮಹಿಳಾ ವಿಭಾಗ ಯೋಗ ದಿನಾಚರಣೆಯನ್ನು ವಿಶಿಷ್ಠ ರೀತಿಯಲ್ಲಿ ಅಚರಿಸಿ ಸಂಸ್ಥೆಗೆ ಮಾದರಿಕತೆಯನ್ನು ತೋರಿದೆ ಜೂನ್ 29 ರ ಭಾನುವಾರದಂದು ಯುವ ವಿಭಾಗ ರಕ್ತದಾನ ಶಿಬಿರ ಮತ್ತು ಸಮಾಜ ಬಾಂಧವರ ಅರೋಗ್ಯದ ದೃಷ್ಟಿಯಿಂದ ವಯೋಮಿತಿಯ ಅನುಸಾರವಾಗಿ ವಿವಿದ ಪರೀಕ್ಷೆ ಗಳನ್ನು ಮಾಡುವ ಯೋಜನೆಯನ್ನು ಹಾಕಿ ಕೊಂಡಿದ್ದಾರೆ.ನಮ್ಮ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಲು ಈ ಸಭಾಗೃಹವನ್ನು ಹೇಮಂತ ಶೆಟ್ಟಿ ಉಚಿತವಾಗಿ ನೀಡಿದ್ದಾರೆ . ಅನಂದ ಶೆಟ್ಟಿ ಎಕ್ಕಾರ್ ( ಕಾರ್ಯಾಧ್ಯಕ್ಷರು ಪ್ರಾದೇಶಿಕ ಸಮಿತಿ )




