ಕರ್ನಾಟಕ ಸಮಾಜ ಸೂರತ್ ಇದರ ವತಿಯಿಂದ ಪ್ರತಿವರ್ಷ ನಡೆಯುವ “ತುಳು ಪರ್ಬ “ಕಾರ್ಯಕ್ರಮ ಜೂನ್ 29 ರಂದು ಮಧ್ಯಾಹ್ನ ಗಂಟೆ 1 ಗಂಟೆಯಿಂದ ಜೀವನ್ ಭಾರತಿ ಸಭಾಂಗಣ, ನಾನುರ, ಸೂರತ್ ಇಲ್ಲಿ ನಡೆಯಲಿದೆ.
ಕಾರ್ಯಕ್ರಮದ ಮಧ್ಯಾಂತರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ| ವಿರಾರ್ ಶಂಕರ್ ಬಿ. ಶೆಟ್ಟಿ (ಅಧ್ಯಕ್ಷರು, ಪೆಡರೇಷನ್ ಆಫ್ ಹೋಟೆಲ್ ಆಂಡ್ ರೆಸ್ಟೋರೆಂಟ್ ಮಹಾರಾಷ್ಟ್ರ) ಇವರು ವಹಿಸಲಿರುವರು.
ಉದ್ಘಾಟಕರಾಗಿ ಮೋಹನ್ ಸಿ. ಪೂಜಾರಿ (ಇಂಡಸ್ಟ್ರಿಯಲಿಸ್ಟ್ ಅಹಮದಾಬಾದ್), ಮುಖ್ಯ ಅತಿಥಿಗಳು: ಡಾ| ಯಂ. ಅಣ್ಣಯ್ಯ ಕುಲಾಲ್ ಉಳ್ಳೂರ್
(ಇನ್ಸಾರ್ಜ್ ಪಾಲಿಯೋಟಿವ್ ಮೆಡಿಸಿನ್, ಸರಕಾರಿ ಜಿಲ್ಲಾ ವೆಸ್ಲಾಕ್ ಹಾಸ್ಪಿಟಲ್, ಮಂಗಳೂರು) ಇವರು ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ 1 ಗಂಟೆಯಿಂದ ಮನೋರಂಜನಾ ಕಾರ್ಯಕ್ರಮ ಸೂರತ್ ಮತ್ತು ಅಂಕಲೇಶ್ವರ ಕಲಾವಿದರಿಂದ ವೈವಿಧ್ಯಮಯ ನೃತ್ಯ ಕಾರ್ಯಕ್ರಮ, ಬಳಿಕ ಕಿರು ನಾಟಕ “ತುಳುನಾಡ ಸಿರಿ” ನಡೆಯಲಿದ್ದು, ಸಂಜೆ 5:00ಗೆ ಪೆರ್ಮೆದ ಕಲಾವಿದರ್ ಚೇಳ್ಳಾರು ಇವರು ಅಭಿನಯಿಸುವ ರಾಮಚಂದ್ರ ಶೆಟ್ಟಿ ತಡಂಬೈಲ್ ರಚಿಸಿದ
ಸುಕೇಶ್ ಶೆಟ್ಟ ಖಂಡಿಗೆ ನಿರ್ದೇಶನದ
“ಎನ್ನಿಲೆಕ ಇಜ್ಜಿರ್”ತುಳು ಹಾಸ್ಯಮಯ ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ ಪಾಲ್ಗೊಂಡ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದೆ. ಸೂರತ್ ಪರಿಸರದ ತುಳು ಕನ್ನಡಿಗರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ, ಕರ್ನಾಟಕ ಸಮಾಜ ಸೂರತ್ ಇದರ ಅಧ್ಯಕ್ಷರಾದ ರಾಧಾಕೃಷ್ಣ ಶೆಟ್ಟಿ, ಗೌರವ ಅಧ್ಯಕ್ಷರಾದ ರಾಮಚಂದ್ರ ವಿ. ಶೆಟ್ಟಿ, ಉಪಾಧ್ಯಕ್ಷರುಗಳಾದ ಉಮೇಶ್ ಸಪಲಿಗ, ದಿವಾಕರ್ ಬಂಜನ್ ಬಾರ್ಡೋಲಿ, ಅಜಿತ್ ಶೆಟ್ಟಿ ಅಂಕಲೇಶ್ವರ, ಪ್ರಭಾಕರ್ ಶೆಟ್ಟಿ ಕೊಸಂಬಾ, ಸಂತೋಷ್ ವಿ ಶೆಟ್ಟಿ, ನಾಗರಾಜ್ ಶೆಟ್ಟಿ, . ಸಾಧು ಪೂಜಾರಿ, ವನಿತಾ ಜೆ ಶೆಟ್ಟಿ. ಗೌರವ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮೂಲ್ಯ ಕೆ. ಗೌರವ ಕೋಶ ಧಿಕಾರಿ ಚಂದ್ರಹಾಸ್ ಬಿ ಸಪಲಿಗ. ಜೊತೆ ಕಾರ್ಯದರ್ಶಿ ಶಾಂತಿ ಡಿ. ಶೆಟ್ಟಿ . ಜೊತೆ ಕೋಶಾಧಿಕಾರಿ
ಸುಕ್ಷಿತ್ ಯಸ್, ಸಂಘಟನಾ ಕಾರ್ಯದರ್ಶಿ ಗಣೇಶ್ ಶೆಟ್ಟಿ ಮತ್ತು ಆಡಳಿತ ಮಂಡಳಿ ಸದಸ್ಯರು ದಿನೇಶ್ ಬಿ. ಶೆಟ್ಟಿ, ವಿಶ್ವನಾಥ್ ಜಿ. ಪೂಜಾರಿ, ಭೋಜ ಸಪಲಿಗ , ಸುನಿತಾ ಆರ್. ಶೆಟ್ಟಿ, ಕಸ್ತೂರಿ ಯಲ್, ಶೆಟ್ಟಿ, ಅಮಿತಾ ಯು. ಸಪಲಿಗ, ರಂಜನಿ ಪಿ. ಶೆಟ್ಟಿ, ಅಮಿತಾ ಜೆ. ಶೆಟ್ಟಿ, ಗಂಗಾಧರ್ ಶೆಟ್ಟಿಗಾರ್, ಸತೀಶ್ ದೇವಾಡಿಗ, ಶ್ರೇಯ ಪಿ. ಶೆಟ್ಟಿ, ಗೀತಾ ಯಚ್. ಶೆಟ್ಟಿ, ಕವಿತಾ ಬಿ. ಶೆಟ್ಟಿ, ಗಣೇಶ್ ಸಿ. ಪೂಜಾರಿ ಮತ್ತಿತರ ಸದಸ್ಯರು ವಿನಂತಿಸಿಕೊಂಡಿದ್ದಾರೆ.




