
ರಕ್ತದಾನ ಮಾಡುತ್ತಿದ್ದರೆ ಕ್ಯಾನ್ಸರ್, ಹೃದಯಾಘಾತ ಬರುವ ಲಕ್ಷಣ ಕಡಿಮೆ : ಸುಕುಮಾರ ಶೆಟ್ಟಿ
ಚಿತ್ರ ವರದಿ ರವಿ.ಬಿ.ಅಂಚನ್ ಪಡುಬಿದ್ರಿ
ಡೊಂಬಿವಲಿ ಜೂ. 29: ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ ಶೆಟ್ಟಿ ಎಕ್ಕಾರ್ ಇವರ ಮುಂದಾಳುತ್ವದಲ್ಲಿ ಪ್ರಾದೇಶಿಕ ಸಮಿತಿ ಉತ್ತಮ ಕಾರ್ಯಕ್ರಮಗಳನ್ನು ಅಯೋಜಿಸುತ್ತಿರುವುದು ಅಭಿನಂದನೀಯ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ ಯವರಿಗೆ ಯುವ ವಿಭಾಗದಲ್ಲಿ ಕೆಲಸ ಮಾಡಿದ ಬಹಳಷ್ಟು ಅನುಭವಗಳಿವೆ ಅದುದರಿಂದ ಇಂದು ಡಾ ಸ್ವರೂಪ್ ಹೆಗ್ಡೆಯವರ ಮಾರ್ಗದರ್ಶನ, ಪ್ರಾದೇಶಿಕ ಸಮಿತಿ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ.ವಿ.ಎಂ. ಶೆಟ್ಟಿ ಮುಂದಾಳುತ್ವದಲ್ಲಿ ರಕ್ತದಾನ, ಅರೋಗ್ಯ ಶಿಬಿರದಂತಹ ಉತ್ತಮ ಕಾರ್ಯಕ್ರಮ ಅಯೋಜಿಸಿದ್ದಾರೆ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ವರ್ಷದಲ್ಲಿ ರಕ್ತದಾನ ಮಾಡುತ್ತಿದ್ದರೆ ಕ್ಯಾನ್ಸರ್, ಹೃದಯಾಘಾತ ರೋಗ ಬರು ಲಕ್ಷಣ ಕಡೆಮೆ, ಸಂಘ ಸಮಾಜದ ಹಿತದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಇದರ ಲಾಭವನ್ನು ಸಮಾಜ ಬಾಂಧವರು ಪಡೆಯ ಬೇಕು, ಯವ ವಿಭಾಗದ ಮಕ್ಕಳು ಸಂಘದಿಂದ ಸಹಾಯ ಹಸ್ತ ಪಡಕೊಂಡು ಇಂದು ಸಮಾಜಕ್ಕೆ ದಾನ ನೀಡುವಷ್ಟು ಮಟ್ಟಕ್ಕೆ ಬೆಳೆದಿದ್ದಾರೆ ಎನ್ನಲು ಅಭಿಮಾನವಾಗುತ್ತಿದೆ ಎಂದು ಪ್ರಾದೇಶಿಕ ಸಮಿತಿಗಳ ಪೂರ್ವ ವಲಯದ ಸಮನ್ವಯಕ ಸಮಾರಂಭದ ಅಧ್ಯಕ್ಷತೆ ವಹಿಸಿದ ಸುಕುಮಾರ ಶೆಟ್ಟಿ ನುಡಿದರು.
ಅವರು ಜೂ. 29 ರ ಭಾನುವಾರ ಡೊಂಬಿವಲಿ ಪೂರ್ವದ ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನದ ಸುಧರ್ಮ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗದಲ್ಲಿ ಜರಗಿದ ರಕ್ತದಾನ ಶಿಬಿರ ಮತ್ತು ಅರೋಗ್ಯ ಶಿಬಿರದ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.









ಪ್ರಾದೇಶಿಕ ಸಮಿತಿಯ ಹೆಲ್ತ್ ಕೇರ್ ಸಮಿತಿಯ ಕಾರ್ಯಾಧ್ಯಕ್ಷ ಡಾ. ವಿ.ಎಂ. ಶೆಟ್ಟಿ ಮಾತನಾಡುತ್ತಾ ಯುವ ವಿಭಾಗ ಪ್ರತಿ ವರ್ಷ ರಕ್ತದಾನ ಕಾರ್ಯಕ್ತಮವನ್ನು ಅಚ್ಚು ಕಟ್ಟಾಗಿ ಮಾಡುತ್ತಾ ಬರುತ್ತಿದೆ ಈ ವರ್ಷ ವಿಶೇಷವಾಗಿ ಹೃದಯ ಶ್ವಾಸಕೋಶದ ಪುನರುಜ್ಜೀವನದ ಬಗ್ಗೆ ವಿಶೇಷ ಮಾಹಿತಿ, ಕಣ್ಣಿನ ಪರೀಕ್ಷೆ, ಎಲುಬುಗಳ ಪರೀಕ್ಷೆ, ಮಹಿಳೆಯರ ಸ್ರೀರೋಗ ತಪಾಸಣೆ, ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಇದರ ಲಾಭವನ್ನು ಎಲ್ಲರೂ ಪಡೆಯ ಬೇಕು ಈ ಕಾರ್ಯಕ್ರಮದಲ್ಲಿ ಡೊಂಬಿವಲಿ ಪರಿಸರದ ಪ್ರಸಿದ್ಧ ಡಾಕ್ಟರ್ ಗಳಾದ ಕನ್ನಡತಿ ಅರವಳಿಕೆ ತಜ್ಞೆ ಡಾ. ಶ್ರುತಿ ಪತ್ಕಿ, ಡಾ. ಮಕರಂದ ಪಾಟೀಲ, ಡಾ. ಸುಶೀಲಾ ಸಿಂಗ್, ಡಾ. ಸಂದೀಪ್ ದವೆ, ಡಾ. ಅಶೋಕ್ ಬೋಲೆ, ಭಾಗವಹಿಸುತ್ತಿದ್ದಾರೆ ಎಂದರು.
ಬಂಟರ ಸಂಘ ಮುಂಬಯಿ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾದ್ಯಕ್ಷ ಡಾ. ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಯುವ ವಿಭಾಗ ಬಹಳ ಅಚ್ಚುಕಟ್ಟಾಗಿ ಉತ್ತಮ ಕಾರ್ಯಕ್ರಮ ಅಯೋಜಿಸಿದೆ. ವರ್ಷದಲ್ಲಿ ಮೂರು ಅರೋಗ್ಯ ಶಿಬಿರ ಕಾರ್ಯಕ್ರಮ, ಈ ತಿಂಗಳಲ್ಲಿ ನಾಲ್ಕು ವಿವಿಧ ಕಾರ್ಯಕ್ರಮ ಡೊಂಬಿವಲಿ ಪ್ರಾದೇಶಿಕ ಸಮಿತಿ ಅಯೋಜಿಸಿ ದಾಖಲೆ ನಿರ್ಮಿಸಿದೆ ಇಂತಹ ಕಾರ್ಯಕ್ರಮಗಳು ನಡೆದಾಗ ಸಮಾಜ ಬಾಂಧವರು ಸಂಘಟಣೆಯಲ್ಲಿ ಪಾಲ್ಗೊಳ್ಳುತ್ತಾರೆ ಯುವಕರು ಒಗ್ಗಟ್ಟಾಗಿ ಕೆಲಸ ಮಾಡಿದಾಗ ಸಮಾಜ ಇನ್ನಷ್ಟು ಮುಂದೆ ಬರುತ್ತದೆ ಎಂದರು.
ಖ್ಯಾತ ಅರವಳಿಕೆ ತಜ್ಞೆ ಕನ್ನಡತಿ ಡಾ. ಶ್ರುತಿ ಪತ್ಕಿ ಹೃದಯ ಶ್ವಾಸಕೋಶದ ಪುನರುಜ್ಜೀವನದ ಬಗ್ಗೆ ಉತ್ತಮವಾಗಿ ಮನಮುಟ್ಟುವಂತೆ ಮಾಹಿತಿ ನೀಡಿ
ಯಾವುದೇ ವ್ಯಕ್ತಿಗೆ ಹೃದಯಾಘಾತವಾಗು ಸಂಧರ್ಬದಲ್ಲಿ ಸಹಾಯ ಮಾಡಿ ಅವರನ್ನು ಬೆನ್ನಿನ ಆಧಾರದೊಂದಿಗೆ ಮೊಣಕಾಲನ್ನು-ಎದೆಯ ಆರಾಮದಾಯಕ ಭಂಗಿಯಲ್ಲಿ ಕುಳ್ಳರಿಸಿ, ಅವರಿಗೆ ಕುಡಿಯಲು ನೀರನ್ನು ಕೊಡಬೇಡಿ, ಅವರು ಈಗಾಗಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ ಅವರಲ್ಲಿ ಕೇಳಿ ಮತ್ತು ತೆಗೆದುಕೊಳ್ಳಲು ಸಹಾಯ ಮಾಡಿ, ತುರ್ತು ಪ್ರತಿಕ್ರಿಯೆ ಸಂಖ್ಯೆ ಅಥವಾ ಹೃದಯ ಆಂಬ್ಯುಲೆನ್ಸ್‌ಗೆ ಕರೆ ಮಾಡಿ, ಅವರನ್ನು ಹೃದ್ರೋಗ ಕೇಂದ್ರಕ್ಕೆ ತಕ್ಷಣ ತಲುಪಿಸುವುದರಿಂದ ಅವರ ಜೀವ ಉಳಿಸಬಹುದು ಎಂದು ಬಹಳ ಸರಳವಾಗಿ ಹಲವು ನಿರ್ದೇಶನಗಳನ್ನು ನೀಡಿ ತಿಳಿಸಿದರು.
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಣ ಪ್ರಜ್ವಲ್ ಶೆಟ್ಟಿ ಅತಿಥಿ ಗಣ್ಯರನ್ನು ಸ್ವಾಗತಿ ಪ್ರಸ್ತಾವಿಕ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ದಿ.ದಿನೇಶ್ ಶೆಟ್ಟಿಯವರ ಧರ್ಮಪತ್ನಿ ದಿವ್ಯಾ ದಿನೇಶ್ ಶೆಟ್ಟಿಯವರಿಗೆನೆನಪಿನ ಕಾಣಿಕೆ ಅರ್ಥಿಕ ಸಹಾಯ ನೀಡಿ ಸನ್ಮಾನಿಸಲಾಯಿತು ಮತ್ತು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಪ್ರಜ್ವಲ್ ಶೆಟ್ಟಿ ಮತ್ತು ಅವರ ಮಾತೃಶ್ರೀ ಯವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು
ಇದೇ ಸಂದರ್ಭದಲ್ಲಿ ಅತಿಥಿ ಗಣ್ಯರನ್ನು, ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ದಾನಿಗಳನ್ನು ಮತ್ತು ಕರ್ನಾಟಕ ಸಂಘ ಡೊಂಬಿವಲಿ ಇದರ ಮಾಜಿ ಅದ್ಯಕ್ಷ ವಿಠಲ ಶೆಟ್ಟಿ , ಹೇಂಮತ ಶೆಟ್ಟಿ ಯವರನ್ನು ಸತ್ಕರಿಸಲಾಯಿತು.
ಅಶಿಕಾ ರೃ ಯವರ ಪ್ರಾರ್ಥನೆ ಹಾಗೂ ಬಂಟ ಗೀತೆ ಯೊಂದಿಗೆ ವೇದಿಕೆಯ ಮೇಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವೇದಿಕೆಯ ಮೇಲೆ ಸುಕುಮಾರ ಶೆಟ್ಟಿ, ಆನಂದ ಶೆಟ್ಟಿ ಎಕ್ಕಾರ್, ಡಾ. ಸ್ವರೂಪ್ ಹೆಗ್ಡೆ, ಡಾ. ದಿವಾಕರ ಶೆಟ್ಟಿ ಇಂದ್ರಾಳಿ, ಡಾ. ವಿ.ಎಂ. ಶೆಟ್ಟಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ಪ್ರಭಾಕರ ಅರ್ ಶೆಟ್ಟಿ, ಯೊಗೀನಿ ಶೆಟ್ಟಿ, ಪ್ರಜ್ವಲ್ ಶೆಟ್ಟಿ, ಭರತ್ ಶೆಟ್ಟಿ ವಿಕ್ಷೀತ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಬೀನಾ ಶೆಟ್ಟಿ, ಮೊಕ್ಷೀತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಹೇಮಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ವಿಕ್ಷೀತಾ ಶೆಟ್ಟಿ ವಂದಿಸಿದರು.
ಡಾ. ಸ್ವರೂಪ್ ಹೆಗ್ಡೆ ಅನಿಸಿಕೆ
ಮಳೆಗಾಲದಲ್ಲಿ ಮಲೇರಿಯಾ, ಟೈಪಾರ್ಡ್, ಡೆಂಗೂ, ಜ್ವರದಿಂದ ಬಹಳಷ್ಟು ಜನರು ಬಳಲು ತ್ತಿದ್ದು ಅವರಿಗೆ ಐಸಿಯೂ ನಲ್ಲೂ ಜಾಗದ ಕೊರತೆ ಇದೆ ಹಾಗೂ ಅಸ್ಪತ್ರೆಗಳು ರಕ್ತದ ಅಭಾವವನ್ನು ಎದುರಿಸುತ್ತಿದೆ. ಇವರಿಗೆ ಹಾಗೂ ಕ್ಯಾನ್ಸರ್ ನಿಂದ ಬಳಲುತ್ತಿರುವ ರೋಗಿಗಳಿಗೆ ರಕ್ತದ ಅವಶ್ಯಕತೆಗಳಿವೆ ಅದುದರಿಂದ ಎಲ್ಲರೂ ರಕ್ತದಾನ ಮಾಡಿ ನಿಮ್ಮ ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವ ಉಳಿಸ ಬಹುದು 11.50 % ಹಿಮೋಗ್ಲೋಬಿನ್ ಇರುವವರು 60 ವರ್ಷದ ವರೆಗಿನ ಹಿರಿಯರು ವರ್ಷದಲ್ಲಿ ಮೂರು ಬಾರಿ ರಕ್ತದಾನವನ್ನು ಮಾಡಬಹುದು, ನೀವು ರಕ್ತ ನೀಡಿದ ಕೆಲವೇ ಘಂಟೆಗಳಲ್ಲಿ ಪುನಃ ದೇಹದಲ್ಲಿ ರಕ್ತ ತಯಾರಾಗುತ್ತದೆ, ಹೃದಯ ಶ್ವಾಸಕೋಶದ ಪುನರುಜ್ಜೀವನ ( ಸಿ.ಪಿ.ಅರ್) ಬಗ್ಗೆ ಮಾಹಿತಿಯನ್ನು ಅಯೋಜಿಸಿದ್ದು ಉತ್ತಮ ಕೆಲಸ ಪರ ರಾಷ್ಟ್ರಗಳಲ್ಲಿ ಮಕ್ಕಳಿಗೆ ಇದನ್ನು ಸಣ್ಣ ವಯಸ್ಸಿನಲ್ಲಿ ಕಲುಸಿ ಕೊಡಲಾಗುತ್ತದೆ ಇಂತಹ ಕಾರ್ಯ ನಮ್ಮಲ್ಲೂ ಮಾಡುವ ಅವಶ್ಯಕತೆ ಇದೆ, ಅಗಸ್ಟ್10 ರಂದು ಬಂಟರ ಸಂಘದ ಸಭಾಗೃಹದಲ್ಲಿ ಬಂಟ್ಸ್ ಡಾ ಅಸೋಸಿಯೇಷನ್ ಕಾರ್ಯಕ್ರಮ ಅಯೋಜಿಸಿದೆ ಇದರ ಲಾಭವನ್ನು ತಾವೆಲ್ಲರೂ ಪಡೆಯ ಬೇಕು ( ಬಂಟ್ ಹೆಲ್ತ್ ಕೇರ್ ಕಾರ್ಯಾಧ್ಯಕ್ಷರು )
ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರ ಮಾತು
ಪ್ರಾದೇಶಿಕ ಸಮಿತಿಯ ಪ್ರತಿಯೊಂದು ಕಾರ್ಯಕ್ರಮಗಳನ್ನು ಮಹಿಳಾ ವಿಭಾಗ ಯುವ ವಿಭಾಗ ಯಶಸ್ವಿ ಗೊಳಿಸುತ್ತದೆ ಈ ಎಲ್ಲಾ ಕಾರ್ಯಕ್ರಮಗಳಿಗೆ ಹಿತೈಷಿಗಳ ಮತ್ತು ದಾನಿಗಳ ಸಹಕಾರ ಬಹಳಷ್ಠಿದೆ ದಾನಗಳಲ್ಲಿ ಶ್ರೇಷ್ಠ ದಾನ ರಕ್ತದಾನ ಈ ದಾನವನ್ನು ಎಲ್ಲರೂ ಮಾಡ ಬಹುದು ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಿ ಇತರರ ಜೀವ ಉಳಿಸುವ ಕಾರ್ಯವನ್ನು ಮಾಡೋಣಾ, ಪ್ರಾದೇಶಿಕ ಸಮಿತಿಯ ಹೆಲ್ತ್ ಕೇರ್ ಸಮಿತಿಯ ಕಾರ್ಯಾದ್ಯಕ್ಷ ಡಾ. ವಿ.ಎಂ. ಶೆಟ್ಟಿ ಅರೋಗ್ಯ ಶಿಬಿರವನ್ನ ಅಯೋಜಿಸಿದ್ದಾರೆ. ಇಂದು ಡಾ. ಶ್ರುತಿ ಪತ್ಕಿ ಹೃದಯ ಶ್ವಾಸಕೋಶದ ಪುನರುಜ್ಜೀವನದ ( ಸಿ.ಪಿ.ಅರ್.) ಬಗ್ಗೆ ಬಹಳ ಅಚ್ಚುಕಟ್ಟಾಗಿ ತಿಳಿಸಿದ್ದಾರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಡಾಕ್ಟರ್ ಗಳಿಗೆ ಮನದಾಳದ ಕೃತಜ್ಞತೆಗಳು ( ಆನಂದ ಶೆಟ್ಟಿ ಎಕ್ಕಾರ್, ಕಾರ್ಯಾಧ್ಯಕ್ಷರು ಪ್ರಾದೇಶಿಕ ಸಮಿತಿ )




