July 23, 2026
Mumbai News Kannada
ಪ್ರಕಟಣೆ

ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವ ಆಮಂತ್ರಣ ಪತ್ರಿಕೆ ಬಿಡುಗಡೆ.







ಮುಂಬೈಯಲ್ಲಿನ ಕಟೀಲಿನ ಭಕ್ತರ ಸಂಪೂರ್ಣ ಸಹಕಾರವಿರಲಿ:
ಕಮಲಾ ದೇವಿ‌ಪ್ರಸಾದ್ ಆಸ್ರಣ್ಣ

ಕಟೀಲು; ಕೀರ್ತಿ ಶೇಷ ಗೋಪಾಲಕೃಷ್ಣ ಆಸ್ರಣ್ಣ ಸಂಸ್ಮರಣಾ ಸಮಿತಿ‌ ಮುಂಬೈ- ಯು.ಎ.ಇ ವತಿಯಿಂದ ಅಗಸ್ಟ್ 2 ರಂದು ಮುಂಬೈ ಕುರ್ಲ ಬಂಟರ ಭವನದಲ್ಲಿ ಆಸ್ರಣ್ಣ ಸಂಸ್ಮರಣೆ ಮತ್ತು ಯಕ್ಷಗಾನ ಸಮಾರಾಧನೆಯ ತ್ರಿಶಂತ್ ಉತ್ಸವವ ನಡೆಯಲಿದ್ದು ಇದರ ಅಮಂತ್ರಣ ಪತ್ರಿಕೆ ಬಿಡುಗಡೆ ಕಟೀಲು ದೇವಳದಲ್ಲಿ ನಡೆಯಿತು.

ಕಟೀಲು ದೇವಳದ ಪ್ರಧಾನ ಅರ್ಚಕರಾದ ಲಕ್ಷೀ ನಾರಾಯಣ ಆಸ್ರಣ್ಣ ಮತ್ತು ಕಮಲಾ ದೇವಿ‌ಪ್ರಸಾದ್ ಆಸ್ರಣ್ಣ ಅಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.ನಂತರ ಮಾತನಾಡಿದ ಲಕ್ಷೀನಾರಾಯಣ ಆಸ್ರಣ್ಣ ಕಳೆದ 30 ವರ್ಷಗಳಿಂದ
ದಿ. ಗೋಪಾಲಕೃಷ್ಣ ಆಸ್ರಣ್ಣ ಅವರ ಸಂಸ್ಮರಣಾ ಕಾರ್ಯಕ್ರಮವನ್ನು ಆಸ್ರಣ್ಣ ಅಭಿಮಾನಿಗಳು ಹಮ್ಮಿಕೊಂಡು ಬಂದಿದ್ದಾರೆ, ಈ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮುಂಬೈಯಲ್ಲಿನ ಕಟೀಲಿನ ಭಕ್ತರು ಸಂಪೂರ್ಣ ಸಹಕಾರ ನೀಡುತ್ತಿರುವುದು ಅಭಿನಂದನೀಯ ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿಯವರು ಸಂಸ್ಮರಣಾ ಕಾರ್ಯಕ್ರಮವನ್ನು ಪ್ರಾರಂಭದಲ್ಲಿ ಉದ್ಘಾಟನೆ ಮಾಡಿದ್ದು ನಂತರದ ದಿನಗಳಲ್ಲಿ ವರ್ಷದದಿಂದ ವರ್ಷಕ್ಕೆ ವಿಜೃಂಭಣೆಯಿಂದ ಕಾರ್ಯಕ್ರಮ ನಡೆಯುತ್ತಾ ಬಂದಿದೆ ಎಂದರು.
ಈ ಸಂದರ್ಭ ಗೋಪಾಲಕೃಷ್ಣ ಸಂಸ್ಮರಣಾ ಸಮಿತಿ ಪ್ರವರ್ತಕ ಪದ್ಮನಾಭ ಕಟೀಲು ಆಮಂತ್ರಣ ಪತ್ರಿಕೆಯನ್ನು ಕಟೀಲು ಕ್ಷೇತ್ರದಲ್ಲಿ ವಿಶೇಷ ಪೂಜ್ಯ ಸಲ್ಲಿಸಿ ಬಿಡುಗಡೆಗೊಳಿಸಿದರು.
ಲಕ್ಷ್ಮಿ ನಾರಾಯಣ ಆಸ್ರಣ್ಣ ಶ್ರೀ ದುರ್ಗೆಗೆ ವಿಶೇಷ ಪೂಜ್ಯ ಸಲ್ಲಿಸಿ, ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಲಿ,ಪಾಲ್ಗೊಂಡವರಿಗೂ ವೀಕ್ಷಿಸಿದವರಿಗೂ ಶ್ರೀದೇವಿ ಅನುಗ್ರಹಿಸಲು ಎಂದರು.

ಅಗಸ್ಟ್ 2 ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಕಟೀಲು ಮೇಳದ ಆಯ್ದ ಕಲಾವಿದರಿಂದ ಶ್ರೀ ದೇವಿ‌ಮಹಾತ್ಮೆ ಯಕ್ಷಗಾನ ನಡೆಯಲಿದೆ.



Related posts

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ, ಎ. 12ಕ್ಕೆ ಏಕಾಹ ಭಜನೆ

Mumbai News Desk

ಇಂದು ಕಾಪು ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ, ಪತ್ರಕರ್ತ ದಿ. ಜಯಂತ್ ಪಡುಬಿದ್ರಿ ಅವರ ಸಂಸ್ಕರಣೆ

Mumbai News Desk

ಫೆ.7, ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗಣೇಶ್ ಪುರಿ ಪಾದಯಾತ್ರೆ

Mumbai News Desk

ಸೆ. 22 ರಿಂದ ಅ 2 ರ ವರೆಗೆ ಡೊಂಬಿವಲಿ ಶ್ರೀ ಜಗದಂಬಾ ಮಂದಿರದಲ್ಲಿ 11ನೇ ವರ್ಷದ ಶರನ್ನವರಾತ್ರಿ ಮಹೋತ್ಸವ

Mumbai News Desk

ಮಾ.15 ರಂದು ಮಹಾನಗರ ಕನ್ನಡ ಸಂಸ್ಥೆ ಡೊಂಬಿವಲಿ ವತಿಯಿಂದ ಜಾಗತಿಕ ಮಹಿಳಾ ದಿನಾಚರಣೆ

Mumbai News Desk

ಹವ್ಯಕ ವೆಲ್ಫೇರ್ ಟ್ರಸ್ಟ್ ನ ಸಂಯೋಜನೆಯಲ್ಲಿ ಜು. 28ಕ್ಕೆ ಯಕ್ಷಗಾನ ಪ್ರದರ್ಶನ

Mumbai News Desk