September 6, 2026
Mumbai News Kannada
ಸುದ್ದಿ

ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ ಮಠ, ಉಡುಪಿ : ಭಕ್ತಿ, ಶ್ರದ್ದೆಯಿಂದ ಜರಗಿದ ಗುರುಪೂರ್ಣಿಮಾ ಮಹೋತ್ಸವ.





ಉಡುಪಿಯ ಹೃದಯ ಭಾಗ, ಕೆ. ಎಂ. ರೋಡ್ ಬಳಿಯ, ಶ್ರೀ ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ಗುರುಪೂರ್ಣಿಮ ಮಹೋತ್ಸವ ಜುಲೈ 10ರಂದು ಗುರು ಭಕ್ತರ ಕೂಡುವಿಕೆಯಿಂದ ಭಕ್ತಿ, ಸಡಗರದಿಂದ ನಡೆಯಿತು. ಬೆಳ್ಳಿಗೆ 5 ಕಾಕಡ ಆರತಿ,ಭಕ್ತರಿಂದ ಗುರುದೇವರಿಗೆ ಸೀಯಾಳ ಅಭಿಷೇಕ ನೆರವೇರಿತು.


ಬಳಿಕ ನಡೆದ ಭಜನಾ ಮಹೋತ್ಸವಕ್ಕೆ ಹರ್ಷದ ಪ್ರಕಾಶ್ ರಿಟೇಲ್ ಸಂಸ್ಥೆಯ ಆಡಳಿತ ನಿರ್ದೇಶಕರ ಸೂರ್ಯಪ್ರಕಾಶ್ ದೀಪ ಬೆಳಗಿ ಚಾಲನೆ ನೀಡಿದರು. ಹರ್ಷ ಬಳಗದವರಿಂದ ಆರಂಭವಾದ ಭಜನೆ ರಾತ್ರಿ ತನಕ ನಡೆಯಿತು.
ಮಧ್ಯಾಹ್ನ ಮಹಾಪೂಜೆಯಾದ ಬಳಿಕ
ಬಾಲಾಭೋಜನ ಮತ್ತು ಸಾರ್ವಜನಿಕ ಅನ್ನಸಂತರ್ಪಣ ಜರುಗಿತು.
ತಡ ಸಂಜೆ ಪಲ್ಲಕ್ಕಿ ಉತ್ಸವ, ರಾತ್ರಿ ಗಂಟೆ 8ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ ಮಾಡಲಾಯಿತು.
ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಟ್ರಸ್ಟಿಗಳಾದ ಕೆ ದಿವಾಕರ ಶೆಟ್ಟಿ ತೋಟದಮನೆ, ತೋನ್ಸೆ ನವೀನ್ ಶೆಟ್ಟಿ, ಈಶ್ವರ್ ಚಿತ್ಪಾಡಿ, ಮೋಹನ್ ಚಂದ್ರ ನಂಬಿಯಾರ್, ತಾರಾನಾಥ್ ಮೇಸ್ತ ಮತ್ತು ಸದಸ್ಯರು, ಗುರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



Related posts

ಕರಾವಳಿಯ ಬಹುಮುಖ ಪ್ರತಿಭೆಯ ಸಂಘಟಕ, ಹೋರಾಟಗಾರ, ಮೀನುಗಾರ ಮುಖಂಡ ರಾಮಚಂದ್ರ ಬೈಕಂಪಾಡಿ ನಿಧನ

Mumbai News Desk

ಶಿವಸೇನಾ ದಕ್ಷಿಣ ಭಾರತಿಯ ಘಟಕದಿಂದ ಪ್ರಧಾನಮಂತ್ರಿ ಆತ್ಮನಿರ್ಭರ ಯೋಜನೆಯ ಬಗ್ಗೆ ಶಿಬಿರ.

Mumbai News Desk

ಉಡುಪಿಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ  ಸಮಾಲೋಚನಾ ಸಭೆ.

Mumbai News Desk

ಕೆಜಿಎಫ್, ಓಂ ಚಿತ್ರದ ಖ್ಯಾತ ನಟ ಹರೀಶ್ ರೈ ಥೈರಾಯ್ಡ್ ಕ್ಯಾನ್ಸರ್ ನಿಂದ ನಿಧನ.

Mumbai News Desk

ಶ್ರೀ ಶಂಕರಪುರ ಕ್ಷೇತ್ರದಲ್ಲಿ ಭಕ್ತರ ದುಃಖ ,ನೋವು ಕಷ್ಟಗಳನ್ನು ಸ್ವೀಕರಿಸುವ ಪಾನ ಪ್ರಿಯ ಕಾಲಭೈರವ ಸ್ವಾಮಿ.(ಮೇ 19ರಂದು ನಡೆದ ಘಟನೆಯಾದರೂ ಏನು )

Mumbai News Desk

ಗೋರೆಗಾಂವ್ ; ಜೈ ಹಿಂದ್ ಸ್ಪೋರ್ಟ್ಸ್ ಕ್ಲಬ್ ನ ಆಧ್ಯಕ್ಷ, ಸಮಾಜಸೇವಕ ಪುರುಷೋತ್ತಮ ಕೆ. ಐಲ್ ನಿಧನ

Mumbai News Desk