30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ನಿತ್ಯಾನಂದ ಸೇವಾ ಸಂಸ್ಥೆ ಮೀರಾಭಾಯಂದರ್-ಗುರುಪೂರ್ಣಿಮೆ ಆಚರಣೆ.





ವರದಿ- ಉಮೇಶ್ ಕೆ.ಅಂಚನ್

ಮುಂಬಯಿ,ಜು.11: ಶ್ರೀ ನಿತ್ಯಾನಂದ ಸ್ವಾಮಿ ಸೇವಾ ಸಂಸ್ಥೆ ಮೀರಾಭಾಯಂದರ್ ವತಿಯಿಂದ ಗುರು ಪೂರ್ಣಿಮೆಯ ಉತ್ಸವವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗುರುವಾರ ಜು.10ರಂದು
ಮೀರಾ ರೋಡ್ ಪೂರ್ವದ ಜಹಾಂಗೀರ್ ಕಾಂಪ್ಲೆಕ್ಸ್ ರಸ್ತೆಯ ವಿಜಯಾ ಪಾರ್ಕ್ ಸಮೀಪದ ಸ್ವಸ್ತಿಕ್ ಅಂಬರ್ ಪ್ಲಾಝಾ ಸಭಾಗ್ರಹದಲ್ಲಿ ವಿಜ್ರಂಭಣೆಯಿಂದ ನಡೆಯಿತು.


ಮೀರಾ ರೋಡ್ ಶ್ರೀ ಚಾಮುಂಡೇಶ್ವರಿ ಸನ್ನಿಧಿಯ ಅರ್ಚಕ ಲಕ್ಷ್ಮಣ್ ಶೆಟ್ಟಿಯವರ ಪೌರೋಹಿತ್ಯದಲ್ಲಿ ಗುರು ಪೂಜೆ, ಮಹಾಮಂಗಳಾರತಿ ನಡೆಯಿತು. ನಾರಾಯಣ ಶೆಟ್ಟಿ ಸಹಕರಿಸಿದರು. ಗುರು ಪೂರ್ಣಿಮೆಯ ಮಹತ್ವ ಹಾಗೂ ಗುರುಗಳ ಬಗ್ಗೆ ಜಯಪ್ರಕಾಶ್ ಅಮೀನ್ ಮಾತನಾಡಿದರು.
ಆರಂಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಅಲಂಕೃತ ಗುರುಸ್ವಾಮಿಯವರ ಭಾವಚಿತ್ರಕ್ಕೆ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಬೆಳಿಗ್ಗೆ ಗಂಟೆ 10ರಿಂದ ಮಧ್ಯಾಹ್ನದ ತನಕ ಪರಿಸರದ ಆಮಂತ್ರಿಸಿ ಭಜನಾ ಮಂಡಳಿಗಳಾದ ಲಕ್ಷ್ಮೀ ನಾರಾಯಣ ಭಜನಾ ಮಂಡಳಿ ಮೀರಾ ರೋಡ್, ದುರ್ಗಾ ಭಜನಾ ಮಂಡಳಿ ಸಿಲ್ವರ್ ಪಾರ್ಕ್, ಅಯ್ಯಪ್ಪ ಆರಾಧನಾ ಭಜನಾ ಮಂಡಳಿ ಭಾಯಂದರ್, ಕರ್ನಾಟಕ ಮಹಾಮಂಡಲ ಭಜನಾ ಮಂಡಳಿ ಮೀರಾ ಭಾಯಂದರ್, ತುಳುನಾಡ ಸೇವಾ ಸಮಾಜ ಭಜನಾ ಮಂಡಳಿ ಮೀರಾಭಾಯಂದರ್
ಮೀರಾ ಗಾಂವ್ ಮಹಾಲಿಂಗೇಶ್ವರ ಭಜನಾ ಮಂಡಳಿ, ಬಂಟ್ಸ್ ಫೋರಮ್ ಭಜನಾ ಮಂಡಳಿ ಮೀರಾಭಾಯಂದರ್,ಕಟೀಲೇಶ್ವರಿ ಭಜನಾ ಮಂಡಳಿ ಭಾಯಂದರ್ ,ಹನುಮಾನ್ ಭಜನಾ ಮಂಡಳಿ ಭಾಯಂದರ್ , ಮೊಗವೀರ ಭಜನಾ ಮಂಡಳಿ ಮೀರಾ ಭಾಯಂದರ್ ಹಾಗೂ ಬಂಟರ ಸಂಘ ಮೀರಾ ಭಾಯಂದರ್ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮ ನಡೆಯಿತು. ಭಜನಾ ಗುರು ಶ್ರೀಧರ್ ಶೆಟ್ಟಿ ಹಾರ್ಮೋನಿಯಂನಲ್ಲಿ ಹಾಗೂ ಶ್ರೇಯಸ್ ಶೆಟ್ಟಿ ತಬುಲಾ ವಾದನದಲ್ಲಿ ಸಹಕರಿಸಿದ್ದರು.


ಸಂಸ್ಥೆಯ ಅಧ್ಯಕ್ಷ ಗೋಪಾಲಕೃಷ್ಣ ಜಿ.ಗಾಣಿಗ, ಸಂಚಾಲಕ ಆನಂದ ಶೆಟ್ಟಿ ಕುಕ್ಕುಂದೂರು, ಉಪಾಧ್ಯಕ್ಷರುಗಳಾದ ವಸಂತಿ ಶೆಟ್ಟಿ, ರವೀಂದ್ರ ಶೆಟ್ಟಿ ದೇರಳಕಟ್ಟೆ, ಗೌ.ಕಾರ್ಯದರ್ಶಿ ಸೀತಾರಾಮ ಶೆಟ್ಟಿ ಅಮಾವಾಸ್ಯೆಬೈಲು, ಕೋಶಾಧಿಕಾರಿ ಶೈಲೇಶ್ ಶೆಟ್ಟಿ ಸೂಡ, ಜೊತೆ ಕೋಶಾಧಿಕಾರಿ ಮಲ್ಲಿಕಾ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯಶ್ರೀ ಬಿ.ಶೆಟ್ಟಿ, ಕಾರ್ಯದರ್ಶಿ ಗೀತಾ ಸಿ.ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ರಾಜೇಶ್ ಶೆಟ್ಟಿ ಕಾಪು,ಭಜನಾ ಸಮಿತಿಯ ಕಾರ್ಯಾಧ್ಯಕ್ಷೆ ಲತಾ ಪುತ್ರನ್ , ಮುಖ್ಯ ಸಲಹೆಗಾರರಾದ ಗುಣಪಾಲ್ ಉಡುಪಿ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು.
ವಿವಿಧ ಸಂಘಸಂಸ್ಥೆಗಳ, ಸಮುದಾಯ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಉದ್ಯಮಿಗಳಾದ ಕಾಶಿ ಮೀರಾ ಭಾಸ್ಕರ್ ಶೆಟ್ಟಿ, ಜಯಪ್ರಕಾಶ್ ಆರ್ ಭಂಡಾರಿ, ರವೀಂದ್ರ ಶೆಟ್ಟಿ ಕೊಟ್ರಪಾಡಿ, ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿಗುತ್ತು, ಸಂತೋಷ್ ರೈ ಬೆಳ್ಳಿಪ್ಪಾಡಿ,ಉದಯ ಎಮ್. ಶೆಟ್ಟಿ ಮಲಾರ್ ಬೀಡು,ದಿವಾಕರ್ ಶೆಟ್ಟಿ ಪೊಸ್ರಾಲ್, ಹರ್ಷ ಕುಮಾರ್ ಡಿ.ಶೆಟ್ಟಿ ಪಾಂಗಾಳ, ಮಧುಕರ್ ಕೆ .ಶೆಟ್ಟಿ, ಅತ್ತೂರು ಭಾಸ್ಕರ್ ಎಮ್.ಶೆಟ್ಟಿ,ಪ್ರಸಾದ್ ಶೆಟ್ಟಿ ನೀರೆ ಬೈಲೂರು,ಜಿ.ಕೆ.ಕೆಂಚನಕೆರೆ, ಚಂದ್ರಶೇಖರ ಎಸ್.ಶೆಟ್ಟಿ, ಮನ್ಮಥ ಕಡಂಬ, ಡಾ.ರವಿರಾಜ್ ಸುವರ್ಣ, ಸಂಪತ್ ಶೆಟ್ಟಿ ಪಂಜದಗುತ್ತು, ಸತೀಶ್ ಶೆಟ್ಟಿ ಮುಂಡ್ಕೂರು, ಕಿಶೋರ್ ಶೆಟ್ಟಿ ಕುತ್ಯಾರು, ಹರೀಶ್ ರೈ ಕುಂಬ್ಳೆ ಮೊದಲಾದವರು ಉಪಸ್ಥಿತರಿದ್ದು ಸಹಕರಿಸಿದ್ದರು.



Related posts

ಧರೆಗಿಳಿದ ಮಳೆಹನಿ, ಮಿನುಗಿದ ಮುಂಬೈ: ಪ್ರಕೃತಿಯ ವಿಶೇಷ ಸಿರಿಯಲ್ಲಿ 2026ರ ಉದಯ

Mumbai News Desk

ಮುಂಬಯಿಯಲ್ಲಿ ಮೊಹಮ್ಮದ್ ಗೌಸ್‌ ನೇತೃತ್ವದ ಯಕ್ಷಗಾನ ಪ್ರವಾಸಕ್ಕೆ ಚಾಲನೆ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಕರ್ನಾಟಕ ಸಂಘ ಕಲ್ಯಾಣ:ಸಂಭ್ರಮದ ಕರ್ನಾಟಕ ರಾಜ್ಯೋತ್ಸವ ಹಾಗೂ 22ನೇಯ ವಾರ್ಷಿಕೋತ್ಸವ

Mumbai News Desk

ಶ್ರೀಮದ್ಭಾರತ ಮಂಡಳಿಯ ೧೪೬ ನೇ ಮಂಗಳೋತ್ಸವ

Mumbai News Desk

ಭಾಂಡೂಪ್ ಶ್ರೀ ಶನೀಶ್ವರ ಭಕ್ತವೃಂದ ಮಿತ್ರ ಮಂಡಳಿಯ ವತಿಯಿಂದ ನಾಗೇಶ್ ಸುವರ್ಣ ಅವರಿಗೆ ಸನ್ಮಾನ

Mumbai News Desk