
ಮುಂಬಯಿ, ಜು. 14.: ಶ್ರೀ ಗುರುದೇವದತ್ತ ಸಂಸ್ಥಾನಮ್, ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಜು. 16ರಿಂದ ಜು. 27ರ ವರೆಗೆ ಮುಂಬಯಿ ಭೇಟಿ ನೀಡಲಿದ್ದು, ಈ ಅವಧಿಯಲ್ಲಿ ನಗರದ ವಿವಿಧ ಭಾಗಗಳಲ್ಲಿ ಆಶೀರ್ವಚನ. ಗುರುವಂದನೆ ಕಾರ್ಯಕ್ರಮಗಳು ನಡೆಯಲಿವೆ.
ಜು. 16ರಂದು ಮುಂಬಯಿಗೆ ಆಗಮಿಸುವ ಪರಮ ಪೂಜ್ಯರಿಗೆ ನವಿಮುಂಬಯಿಯಲ್ಲಿ ಸಂಜೆ ಪಾದುಕಾ ಪೂಜೆ, ಜು. 17ರ ಸಂಜೆ 4ರಿಂದ ಶ್ರೀ ಗುರುದೇವಾನಂದ ಸ್ವಾಮಿ ಸಭಾಗೃಹ, ಶ್ರೀ ಗಣಪತಿ, ಅಯ್ಯಪ್ಪ ದುರ್ಗಾದೇವಿ ಮಂದಿರ, ದಿ|ಶ್ರೀಮತಿ ಭವಾನಿ ದೇರಣ್ಣ ಶೆಟ್ಟಿ ಜ್ಞಾನ ಮಂದಿರ, ಸೆಕ್ಟರ್ 29. ಬಿಇಎಸ್‌ಟಿ ಡಿಪ್ಪೋ ಎದುರು ನೆರುಲ್ ಪೂರ್ವ, ನವಿಮುಂಬಯಿ ಇಲ್ಲಿ .
ಈ ದಿನ ಸಂಜೆ 4 ಗಂಟೆಯಿಂದ 5ರ ತನಕ ಶ್ರೀ ಗಣಪತಿ, ಅಯ್ಯಪ್ಪ, ದುರ್ಗಾದೇವಿ ಭಜನ ಮಂಡಳಿ ನೆರುಲ್ ಇವರಿಂದ ಭಜನೆ, ಸಂಜೆ 5ರಿಂದ 6ರ ವರೆಗೆ ಶ್ರೀ ಶನಿಶ್ವರ ಭಜನ ಮಂಡಳಿ ನೆರೂಲ್ ಇವರಿಂದ ಭಜನೆ, ಸಂಜೆ 6ರಿಂದ ಜೈ ಗುರುದೇವ್ ನವಿಮುಂಬಯಿ ಮಕ್ಕಳ ಭಜನ ಮಂಡಳಿಯಿಂದ ಭಜನೆ, 7ರಿಂದ ಪಾದಪೂಜೆ, ಸ್ವಾಮೀಜಿಯವರಿಂದ ಆಶೀರ್ವಚನ, ಅಕ್ಷತೆ ಮತ್ತು ಅನ್ನಪ್ರಸಾದ ಕಾರ್ಯಕ್ರಮಗಳು ಜರಗಲಿದೆ.
ಜು. 18ರಂದು ನವಿಮುಂಬಯಿಯಲ್ಲಿ ಬೆಳಗ್ಗೆ ಪಾದುಕಾ ಪೂಜೆ, ಸಂಜೆ 7ರಿಂದ 9ರ ವರೆಗೆ ಸಾರ್ವಜನಿಕ ಆಶೀರ್ವಚನ ಕಾರ್ಯಕ್ರಮವು ದಾಮೋದರ್ ಆರ್. ಶೆಟ್ಟಿ, ಎ. 602 ಅಂಬಿಕಾ ಹೇರಿಟೇಜ್, ಖಾರ್ಘರ್ ಇಲ್ಲಿ ಜರಗಲಿದೆ.
ಜು. 19ರ ಬೆಳಗ್ಗೆ ಮತ್ತು ಸಂಜೆ ನವಿ ಮುಂಬಯಿಯಲ್ಲಿ ಪಾದುಕಾಪೂಜೆ, ಜು. 20 ಬೆಳಗ್ಗೆ 11.30ರಿಂದ ಸಯಾನ್ ಪಶ್ಚಿಮದ ಮುಖ್ಯ ಅಧ್ಯಾಪಕ ಭವನದ ಸ್ವಾಮಿ ನಿತ್ಯಾನಂದ ಸಭಾ ಗೃಹದಲ್ಲಿ ಆಶೀರ್ವಚನ ಕಾರ್ಯಕ್ರಮ, , ಜು. 21ರ ಬೆಳಗ್ಗೆ ಮತ್ತು ಸಂಜೆ ಥಾಣೆಯಲ್ಲಿ ಪಾದುಕಾ ಪೂಜೆ, ಜು. 22ರ ಬೆಳಗ್ಗೆ ಪಾದುಕಾ ಪೂಜೆ. ಸಂಜೆ 7.30ರಿಂದ ಥಾಣೆ ಪಶ್ಚಿಮದ ವುಡ್ ಲ್ಯಾಂಡ್ ರಿಟ್ರಿಟ್ ಹೊಟೇಲ್ ಇಲ್ಲಿ ಆಶೀರ್ವಚನ ಕಾರ್ಯಕ್ರಮ, ಜು. 23ರ ಬೆಳಗ್ಗೆ ಮತ್ತು ಸಂಜೆ ಪಾದುಕಾ ಪೂಜೆ, ಜು. 24ರ ಬೆಳಗ್ಗೆ ಮಲಾಡ್, ಬೊರಿವಲಿಯಲ್ಲಿ ಪಾದುಕಾ ಪೂಜೆ, ಸಂಜೆ 7ರಿಂದ ಅಂಧೇರಿ ಪಶ್ಚಿಮದ ಶ್ರೀ ಮಹಾಲಕ್ಷ್ಮೀ ಕಾಲೋನಿ ವೀರಾದೇಸಾಯಿ ರಸ್ತೆಯ ಶ್ರೀ ಮಹಾಲಕ್ಷ್ಮೀ ಭಜನ ಮಂಡಳಿ ಯಲ್ಲಿ ಆಶೀರ್ವಚನ ಕಾರ್ಯಕ್ರಮ, ಜು. 25ರ ಬೆಳಗ್ಗೆ 11.30ರಿಂದ ಶ್ರೀ ಮಹಿಷಾ ಮರ್ದಿನಿ ದೇವಸ್ಥಾನ, ಜಯರಾಜ್ ನಗರ, ಬೊರಿವಲಿ.
ಪಶ್ಚಿಮ ಇಲ್ಲಿ ಆಶೀರ್ವಚನ ಕಾರ್ಯಕ್ರಮ, , ಜು. 26ರ ಬೆಳಗ್ಗೆ ಪಾದುಕಾ ಪೂಜೆ, ಸಂಜೆ 7ರಿಂದ ಆಶೀರ್ವಚನ ಕಾರ್ಯಕ್ರಮ ನ್ಯಾಯವಾದಿ ಕೆ. ಪಿ. ಪ್ರಕಾಶ್ ಎಲ್ ಶೆಟ್ಟಿ ನಿವಾಸ ಎ/701 ಮಹಾವೀರ ಪ್ಲಾಟಿನಮ್, ಘಾಸ್ಕೋಪರ್ ಮುನ್ಸುರ್ದ್ ಲಿಂಕ್ ರೋಡ್, ಚೆಂಬೂರ್ ಇಲ್ಲಿ ಜರಗಲಿದೆ.
. ಜು27 ರಂದು ಬೆಳಗ್ಗೆ ಪಾದುಕಾ ಪೂಜೆ ಮತ್ತು ಗುರುದೇವಾ ಸೇವಾ ಬಳಗ ಮುಂಬಯಿ, ಮಹಾರಾಷ್ಟ್ರ ಘಟಕ ಇದರ ರಜತ ಮಹೋತ್ಸವ ಪ್ರಯುಕ್ತ ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಮಧ್ಯಾಹ್ನ 2 ಗಂಟೆಯಿಂದ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ್ ಕೇಂದ್ರ ಮುಂಬಯಿ ಮತ್ತು ಜೈ ಗುರುದೇವ್ ಮಕ್ಕಳ ಭಜನ ಮಂಡಳಿ ನವಿಮುಂಬಯಿ ವತಿಯಿಂದ ಭಜನೆ ಕಾರ್ಯಕ್ರಮ, ರಂಗಭೂಮಿ ಫೈನ್ ಆರ್ಟ್ ನವಿಮುಂಬಯಿ ವತಿ ಯಿಂದ” ಶಾಪ ವಿಮೋಚನೆ” ತುಳು
ನಾಟಕ, ಸಂಜೆ 6ರಿಂದ ಗುರು ವಂದನೆ, ಧಾರ್ಮಿಕ ಸಭೆ, ಶ್ರೀ ಗುರುದೇವಾ ನಂದ ಸ್ವಾಮೀಜಿ ಮತ್ತು ಸಾದ್ವಿ ಶ್ರೀ ಮಾತಾನಂದಾಮಯಿ ಅವರಿಂದ ಆಶೀರ್ವಚನ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.
ಈ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ ಮುಂಬಯಿ, ಮಹಾರಾಷ್ಟ್ರ ಘಟಕದ ಅಧ್ಯಕ್ಷ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಮತ್ತು ರಜತ ಮಹೋತ್ಸವ ಸಮಿತಿ ಅಧ್ಯಕ್ಷರು, ಸದಸ್ಯರು, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸಮಿತಿಯ ಸದಸ್ಯರು, ಒಡಿಯೂರು ಶ್ರೀ ಸೇವಾ ಬಳಗ ಮುಂಬಯಿ ಸದಸ್ಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9892435643
——-

ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ತಮ್ಮ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಸಮಾಜದಲ್ಲಿ ಧರ್ಮ, ಜಾತಿ, ಸಮುದಾಯದ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಾಣುವರು. ಅವರು ತಮ್ಮ ಪ್ರಸಿದ್ಧ ಕಾರ್ಯಕ್ರಮಗಳಾದ ಗ್ರಾಮ ವಿಕಾಸ್ ಮತ್ತು ವಿವಿಧ ಧಾರ್ಮಿಕ ಚಟುವಟಿಕೆಗಳ ಮೂಲಕ ಜನರನ್ನು ತಲುಪಲು ಶ್ರಮಿಸುವ ಮೂಲಕ ಜನರ ಹೃದಯವನ್ನು ಗೆದ್ದಿದ್ದಾರೆ. ಮೂರು ದಶಕಗಳ ಹಿಂದೆ ವಿಟ್ಲದ ಒಡಿಯೂರು ಗ್ರಾಮ ಕೇವಲ ಪಾಲು ಭೂಮಿಯಾಗಿತ್ತು. ಆದರೆ ಸ್ವಾಮೀಜಿಯವರು ಶ್ರೀ ಗುರುದೇವದತ್ತ ಸಂಸ್ಥಾನದ ಮೂಲಕ ಅಲ್ಪಾವಧಿಯಲ್ಲಿ ಭೂಮಿಯನ್ನು ಬಹುಮುಖಿ ಕೇಂದ್ರವನ್ನಾಗಿ ಪರಿವರ್ತಿಸಿದೆ. ದಕ್ಷಿಣದ “ಗಾಣಗಾಪುರ’ ಎಂದು ಕರೆಯಲ್ಪಡುವ ಇದು ಕೋಮು ಸೌಹಾರ್ದತೆಯ ನೆಲೆಯಾಗಿದೆ. ಶ್ರೀ ಗುರುದೇವಾನಂದ ಸ್ವಾಮೀಜಿಯವರ ದೈವಿಕ ಶಕ್ತಿ, ಯಶಸ್ಸು, ಸಾಧನೆ, ತ್ಯಾಗ, ಧೈರ್ಯ, ಆಧ್ಯಾತ್ಮಿಕತೆ, ಸಾಮಾಜಿಕ ಚಿಂತನೆ ಮತ್ತು ವಿನಮ್ರ ಸೇವೆಯು ಶ್ರೀ ಗುರುದೇವದತ್ತ ಸಂಸ್ಥಾನದ ಯಶಸ್ಸಿಗೆ ಸಾಕಷ್ಟು ಕೊಡುಗೆ ನೀಡಿದೆ. ಜಗತ್ತಿನಾದ್ಯಂತ ಲಕ್ಷಾಂತರ ಭಕ್ತರನ್ನು ಹೊಂದಿರುವ ಸ್ವಾಮೀಜಿ, ಮುಂಬಯಿ ಮಹಾನಗರದಲ್ಲಿ 25 ವರ್ಷಗಳ ಹಿಂದೆ ಶ್ರೀ ಗುರುದೇವ ಸೇವಾ ಬಳಗ ಮುಂಬಯಿ ಮತ್ತು ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಎಂಬ ಸಂಸ್ಥೆ ಮೂಲಕ ಸಾವಿರಾರು ಭಕ್ತರಿಗೆ ಆಧ್ಯಾತ್ಮಿಕ ನಡೆಯಲ್ಲಿ ನಡೆಯಲು ಪ್ರೇರಣೆ ಶಕ್ತಿಯಾದವರು. ಭಕ್ತರಿಂದ ಸಂಗ್ರಹಿಸಿದ ದೇಣಿಗೆಯನ್ನು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವು, ಮನೆ ನಿರ್ಮಾಣಕ್ಕೆ, ಮದುವೆಯ ಶುಭ ಕಾರ್ಯಗಳಿಗೆ, ಶಿಕ್ಷಣಕ್ಕೆ ವೈದ್ಯಕೀಯ, ಜಿಲ್ಲೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಕ್ಷೇತ್ರಗಳಿಗೆ ವಿನಯೋಗಿಸಿಕೊಂಡು ಬಂದವರು.

ಶ್ರೀ ಕ್ಷೇತ್ರ ಒಡಿಯೂರು
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲ್ಲೂಕಿನ ಒಡಿಯೂರು ಕ್ಷೇತ್ರವನ್ನು ದಕ್ಷಿಣದ ‘ಗಾಣಗಾಪುರ’ ಎಂದೂ ಕರೆಯುತ್ತಾರೆ. ಇದು ರಮಣೀಯ ಪ್ರಕೃತಿಯ ಮಧ್ಯೆ ಬೆಟ್ಟ ಗುಡ್ಡಗಳಿಂದ ಆವೃತ್ತವಾಗಿದ್ದು ಅಪಾರ ಭಕ್ತರನ್ನು ಆಕರ್ಷಿಸುತ್ತಿದೆ. ಶ್ರೀ ಕ್ಷೇತ್ರವನ್ನು ಪ್ರವೇಸುವಾಗ ನಲವತ್ತು ಅಡಿ ಎತ್ತರದ ಭವ್ಯ ಗೋಪುರ ಎದುರಾಗುತ್ತದೆ. ಇದರಲ್ಲಿನ ಪುರಾಣ, ಇತಿಹಾಸ, ನೀತಿ ಬೋಧಕ ಚಿತ್ರಗಳು ಕಣ್ಮನ ಸೆಳೆಯುತ್ತವೆ. ಪೂರ್ವ ಭಾಗದಲ್ಲಿ ಹನುಮದ್ವಿಲಾಸದ ಕಥಾನಕ, ದಕ್ಷಿಣ ಭಾಗದಲ್ಲಿ ಶಿವಲೀಲೆಯ ಕಥೆಗಳು ಚಿತ್ರದ ರೂಪ ತಳೆದಿವೆ. ಗೋಪುರದಲ್ಲಿ ಗುರು ದತ್ತಾತ್ರೇಯರ ಮಹಿಮೆ ಸಾರುವ ಕಲಾಕೃತಿಗಳು ಮತ್ತು ಪೌರಾಣಿಕ ವರ್ಣಚಿತ್ರಗಳಿವೆ. ಒಡಿಯೂರು ಕ್ಷೇತ್ರದ ಶಿಲ್ಪಕಲೆಯು ವೈಷ್ಣವ ಶೈಲಿಯಲ್ಲಿದ್ದು, ಅಷ್ಟ ಪಟ್ಟಿಯಾಕಾರದಲ್ಲಿ ರಚಿತವಾಗಿದೆ. ಶಿಲಾಮಯ ಗರ್ಭಗುಡಿಯ ನಾಲ್ಕು ದಿಕ್ಕಿನಲ್ಲಿ ಚತುರ್ವೇದಗಳ ಸ್ವರೂಪವನ್ನು ಚಿತ್ರಿಸಲಾಗಿದೆ. ಶಿಖರ ಭಾಗದಲ್ಲಿ ವಿರಾಜಮಾನವಾಗಿರುವ 5 ಕಲಶಗಳು ಪಂಚಭೂತ, ಪಂಚತತ್ವದ ಪ್ರತೀಕವಾಗಿವೆ. ಗುರು ಶ್ರೀ ದತ್ತಾತ್ರೇಯ ಮತ್ತು ಆಂಜನೇಯ ಸ್ವಾಮಿ ಇಲ್ಲಿನ ಪ್ರಧಾನ ದೇವರು. ಮತ್ತೊಂದು ವಿಶೇಷವೆಂದರೆ ವಿಷ್ಣು ಮತ್ತು ಶಿವನ ಸ್ವರೂಪವನ್ನು ಇಲ್ಲಿ ಒಂದೇ ಕಡೆ ಆರಾಧಿಸಲಾಗುತ್ತದೆ. ಗರ್ಭಗುಡಿಯಲ್ಲಿ ಇರುವ ದತ್ತಾತ್ರೇಯರ ಸ್ಪಟಿಕ ವಿಗ್ರಹ ಹಾಗೂ ಕೃಷ್ಣ ಶಿಲೆಯಿಂದ ರೂಪುಗೊಂಡ ಐದು ಅಡಿ ನಾಲ್ಕು ಇಂಚು ಎತ್ತರದ ಆಂದಿದೆ ಸ್ವಾಮಿ ವಿಗ್ರಹ ಎಂಥವರಲ್ಲೂ ಪೂಜ್ಯ ಭಾವನೆ ಮೂಡಿಸುತ್ತದೆ. ಇಲ್ಲಿ ನಾಗಾರಾಧನೆಗೂ ಅವಕಾಶವಿದೆ. ಪರಿವಾರ ದೇವತೆಗಳಾಗಿ ಬಲಮುರಿ ಗಣಪ, ಸ್ಕಂದಾನುಗ್ರಹಕಾರ, ಸುಬ್ರಹ್ಮಣ್ಯ, ವಜ್ರಮಾತೆ, ಭದ್ರಕಾಳಿಯನ್ನು ಆರಾಧಿಸುತ್ತಾರೆ. ಇಲ್ಲಿನ ಶ್ರೀ ನಿತ್ಯಾನಂದ ಗುಹೆಯ ತಳಭಾಗದಲ್ಲಿ ಕಿವಿಗೊಟ್ಟು ಆಲಿಸಿದರೆ ಓಂಕಾರ ಪ್ರತಿಧ್ವನಿಸುತ್ತದೆ. ಈ ಕ್ಷೇತ್ರದಲ್ಲಿ ಹನುಮ ಜಯಂತಿ, ಲಲಿತಾ ಪಂಚಮಿ, ನಾಗರ ಪಂಚಮಿ, ಪ್ರತಿಷ್ಠಾ ವರ್ಧಂತಿ ಸೇರಿದಂತೆ ವಿಶೇಷ ಉತ್ಸವ, ಪರ್ವಗಳು ನಡೆಯುತ್ತವೆ. ಶ್ರೀ ಸಂಸ್ಥಾನದ ಗುರುದೇವಾನಂದ ಸ್ವಾಮೀಜಿಯವರ ಆಸಕ್ತಿಯ ಪ್ರತೀಕವಾಗಿ ವಿಶಾಲ ಗೋಶಾಲೆಯಿದ್ದು ನೂರಕ್ಕೂ ಮಿಕ್ಕಿ ಗೋವುಗಳಿವೆ. ಸಂಸ್ಕಾರಯುತ ಶಿಕ್ಷಣಕ್ಕೆಂದು ಗುರುದೇವ ವಿದ್ಯಾಪೀಠ, ಗುರುಕುಲ ಸಂಗೀತ ಶಾಲೆಯಿದ್ದು ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಕ್ಷೇತ್ರಕ್ಕೆ ಬರುವ ಭಕ್ತರಿಗಾಗಿ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಅನ್ನದಾನದ, ಹೊರ ರಾಜ್ಯದ ಭಕ್ತಾದಿಗಳಿಗೆ ರಾತ್ರಿ ವಸತಿ ವ್ಯವಸ್ಥೆಯಿದೆ.
. ದಿನೇಶ್ ಕುಲಾಲ್
Show quoted text




