September 6, 2026
Mumbai News Kannada
ಸುದ್ದಿ

ಅನಿತಾ ಪಿ. ತಾಕೊಡೆಯವರಿಗೆ ಕರ್ನಾಟಕ ಲೇಖಕಿಯರ ಸಂಘದ ದತ್ತಿ ಪ್ರಶಸ್ತಿ ಪ್ರದಾನ





ಮುಂಬಯಿ: ಕರ್ನಾಟಕ ಲೇಖಕಿಯರ ಸಂಘವು ಬೆಂಗಳೂರಿನ ಕನ್ನಡ ಭವನದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಯನ ಸಭಾಂಗಣದಲ್ಲಿ ಏಪ್ರಿಲ್ 9ರಂದು ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಮುಂಬಯಿಯ ಕವಯಿತ್ರಿ ಹಾಗೂ ಲೇಖಕಿ ಅನಿತಾ ಪಿ. ತಾಕೊಡೆ ಅವರಿಗೆ ‘ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪಡೆದ ಕೃತಿ ‘ಮೇಣಕ್ಕಂಟಿದ ಬತ್ತಿ’, ಮುಂಬಯಿಯ ತಾಕೊಡೆ ಎಂಟರ್‌ಪ್ರೈಸಸ್ ಮೂಲಕ ಪ್ರಕಟವಾದ ಅವರ ಪ್ರಥಮ ಕೃತಿಯಾಗಿದೆ.

​ಅಪರಾಹ್ನ ಮೂರರಿಂದ ಸಂಜೆ ಆರರವರೆಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಮತ್ತು ಖ್ಯಾತ ಪತ್ರಕರ್ತ, ‘ಅವಧಿ ಡಾಟ್ ಕಾಮ್’ನ ಜಿ.ಎನ್. ಮೋಹನ್ ಅವರು ಅನಿತಾ ಪಿ. ತಾಕೊಡೆ ಸೇರಿದಂತೆ ಪುರಸ್ಕೃತ ಲೇಖಕಿಯರಿಗೆ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಮಾಡಿದರು. ವೇದಿಕೆಯಲ್ಲಿ ಕಲೇಸಂ ಅಧ್ಯಕ್ಷೆ ಡಾ. ಆರ್. ಸುನಂದಮ್ಮ, ಸಾಹಿತಿ ಡಾ. ಎನ್. ಗಾಯತ್ರಿ, ಸಮಾ ಸತೀಶ್ ಮತ್ತಿತರರು ಉಪಸ್ಥಿತರಿದ್ದರು.



Related posts

ಮಹಾರಾಷ್ಟ್ರ, ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ : ನ. 20 ರಂದು ರಾಜ್ಯದಲ್ಲಿ ಮತದಾನ

Mumbai News Desk

ಜಯಪ್ರಕಾಶ್ ಪೂಜಾರಿ, ಮುಂಬೈ ಅವರಿಗೆ ತುಳುವರ್ಲ್ಡ್ ಸಮ್ಮಾನ್

Mumbai News Desk

ಮೂಲತ್ವ ಫೌಂಡೇಶನ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು : ಸಡಗರದ ದೀಪಾವಳಿ ಹಬ್ಬದ ಆಚರಣೆ

Mumbai News Desk

ವಸಯಿ ತಾಲೂಕ ಹೋಟೆಲ್ ಎಸೋಸಿಯೇಶನಿಂದ  ಪ್ರತಿಭಟನೆ

Mumbai News Desk

ಬೊಯಿಸರ್ ಶ್ರೀ ಸ್ವಾಮಿ ನಿತ್ಯಾನಂದ ಮಂದಿರದಲ್ಲಿ ಶ್ರೀ ದೇವೀ ಜಪಪಾರಾಯಣ ಸಂಪನ್ನ

Mumbai News Desk

ಒಕ್ಕೂಟದ ಮೂಲ್ಕಿಯ ನಿವೇಶನದಲ್ಲಿ ಕಟ್ಟಡ ನಿರ್ಮಿಸಲು ಸರಕಾರದಿಂದ ಅನುಮತಿ

Mumbai News Desk