ಪಾಲ್ಘರ್ ತಾ: 14.07.2025

ಸುದ್ದಿ ವಿವರ :ಪಿ.ಆರ್.ರವಿಶಂಕರ್
ವ್ಯಾಟ್ ಮತ್ತು ಅಬಕಾರಿ ಪರವಾನಗಿ ತೆರಿಗೆಯಲ್ಲಿ ಹೆಚ್ಚಳ ಹಾಗೂ ಉದ್ಯಮದಲ್ಲಿ ಆಗುವ ವ್ಯತಿರಿಕ್ತ ಪರಿಣಾಮವನ್ನು ಸರಕಾರದ ಗಮನಕ್ಕೆ ತರುತ್ತಾ ಇಂಡಿಯನ್ ಹೋಟೆಲ್ಸ್ ಅಂಡ್ ರೆಸ್ಟೋರೆಂಟ್ ಅಸೋಸಿಯೇಶನ್ ( ಆಹಾರ್) ಮಹಾರಾಷ್ಟ್ರದಾದ್ಯಂತ ಒಂದು ದಿನದ ಬಂದ್ ಗೆ ಕರೆ ನೀಡಿದ್ದು ಇಂದು ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ಸದಸ್ಯರು ಇಲ್ಲಿನ ಹುತಾತ್ಮ ಚೌಕ್ ಪರಿಸರದಲ್ಲಿ ಜಮಾಯಿಸಿ ತಮ್ಮವಿರೋಧವನ್ನು ಘೋಷಣೆಗಳೊಂದಿಗೆ ವ್ಯಕ್ತಪಡಿಸಿದರು.
ಈ ನಿಟ್ಟಿನಲ್ಲಿ ಪರಿಸರದ ಎಲ್ಲಾ ಬಾರ್ ಮತ್ತು ಪರ್ಮಿಟ್ ರೂಮ್ ಗಳನ್ನು ಬಂದ್ ಮಾಡಿದ್ದು , ಒಂದೇ ವರ್ಷದ ಅವ ಧಿಯಲ್ಲಿ ಮೂರನೆಯ ಬಾರಿಗೆ ತೆರಿಗೆ ಹೆಚ್ಚಳದಿಂದ ಹೋಟೆಲ್ ಉದ್ಯಮದ ಮೇಲೆ ಉಂಟಾಗುವ ಅತೀ ತೊಂದರೆ ಹಾಗೂ ಹಿನ್ನಡೆ ಕುರಿತು ಗಮನಕ್ಕೆ ತರುವಲ್ಲಿ ಪ್ರತಿಭಟನಾ ರೂಪದಲ್ಲಿ ಒಂದು ದಿನದ ಬಂದ್ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪಾಲ್ಘರ್ ಹೋಟೆಲ್ ಅಸೋಸಿಯೇಶನ್ ನ ನಿತಾಂತ್ ಚವ್ಹಾಣ್ , ಸತೀಶ್ ಶೆಟ್ಟಿ , ಗಿರೀಶ್ ಶೆಟ್ಟಿ , ಮಂಗೇಶ್ ಆವಸ್ಥಿ , ಸಿದ್ದೇಶ್ ಶೆಟ್ಟಿ , ಅಭಿ ಷೇಕ್ ಶೆಟ್ಟಿ , ಕೌಶಿಕ್ ಶೆಟ್ಟಿ , ಪ್ರವೀಣ್ ಶೆಟ್ಟಿ , ಮ್ಯಾಕ್ಸಿ ಡಿಸಿಲ್ವ ಮತ್ತು ರಮೇಶ್ ಪೂಜಾರಿ ಹಾಗೂ ಹೋಟೆಲ್ ಕಾರ್ಮಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು .
ಆ ಬಳಿಕ ಹೋಟೆಲ್ ಅಸೋಸಿಯೇಶನ್ ಸದಸ್ಯರು ಉಪಜಿಲ್ಲಾಧಿಕಾರಿ ಕಛೇರಿಗೆ ತೆರಳಿ ತಮ್ಮ ಅಹವಾಲು ಪತ್ರವನ್ನು ಸಮರ್ಪಿಸಿದರು
ಸುದ್ದಿ ವಿವರ : ಪಿ.ಆರ್.ರವಿಶಂಕರ್
Cell No. 8483980035




