32.1 C
Mumbai
June 7, 2026
Mumbai News Kannada
ಮುಂಬಯಿ

ಬಂಟರ ಸಂಘ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ, ದತ್ತು ಸ್ವಿಕಾರ, ‘ದಿಶಾ’ ಯಕ್ಷಗಾನ ಪ್ರದರ್ಶನ.





ವಿದ್ಯಾರ್ಥಿಗಳ ಭವಿಷ್ಯಕ್ಕೆ ಬಂಟರ ಸಂಘ ಸದಾ ಸಹಕಾರ: ಪ್ರವೀಣ್ ಭೋಜ ಶೆಟ್ಟಿ

ಮುಂಬಯಿ ಜು17. ಬಂಟರ ಸಂಘದ ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿ ವತಿಯಿಂದ ವಿದ್ಯಾರ್ಥಿ ವೇತನ, ದತ್ತು ಸ್ವಿಕಾರ ‘ದಿಶಾ’ ಕಾರ್ಯಕ್ರಮ ಜು. 13ರಂದು  ಪೊವಾಯಿಯ ಎಸ್.ಎಂ.ಶೆಟ್ಟಿ ಶಿಕ್ಷಣ ಸಂಸ್ಥೆಯ ಸಭಾಂಗಣದಲ್ಲಿ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಂಟರ ಸಂಘದ ಅಧ್ಯಕ್ಷರಾದ ಪ್ರವೀಣ್  ಬೋಜ ಶೆಟ್ಟಿ ಮಾತನಾಡುತ್ತಾ ಸಮಾಜ ಬಾಂಧವರ ಸ್ಫೂರ್ತಿಯಿಂದಈ ಕಾರ್ಯಕ್ರಮವನ್ನು ವರ್ಷ ವರ್ಷ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿಸಿದ. ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ವ್ಯಾಸಂಗವನ್ನು ಮಾಡಬೇಕು ಅದಕ್ಕೆ ಬಂಟರ ಸಂಘ ಸಹಕಾರ ನೀಡುತ್ತದೆ. ವಿದ್ಯಾಭ್ಯಾಸಕ್ಕಾಗಿ ಯಾವುದೇ ಅಡಚಣೆಯಾದರೆ ಸಂಘದ ಮೂಲಕ ಮತ್ತು ಪ್ರಾದೇಶಿಕ ಸಮಿತಿಯ ಮೂಲಕ ಸಹಕಾರ ಮಾಡುತ್ತೇವೆ ಎಂದು ನುಡಿದರು.

ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಾಯೋಜಕರಲ್ಲಿ ಒಬ್ಬರಾಗಿರುವ  ಇಸ್ಸಾರ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈ. ಲಿಮಿಟೆಡ್ ಆಡಳಿತ ನಿರ್ದೇಶಕ.ಡಾ. ಆರ್. ಕೆ. ಶೆಟ್ಟಿಯವರು ಮಾತನಾಡುತ್ತಾ ಈ ಪ್ರಾದೇಶಿಕ ಸಮಿತಿಯಲ್ಲಿ ಈ ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಯುವುದರಿಂದ ಅತಿ ಬಡತನದಲ್ಲಿರುವ ಕುಟುಂಬಗಳಿಗೆ ಇದರ ಫಲ ಲಭಿಸುತ್ತಿದೆ. ನಾನು ಕಾರ್ಯ ಧ್ಯಕ್ಷನಾಗಿ ಇರುವ ಸಂದರ್ಭದಲ್ಲಿ ಕೂಡ ಪರಿಸರದ ಸಮಾಜ ಬಂದುಗಳಿಗೆ ಸಹಕಾರ ನೀಡುವಲ್ಲಿ ಶ್ರಮಿಸಿದ್ದೇನೆ ಎಂದು ನುಡಿದರು .

ಕಾರ್ಯಕ್ರಮದ ಮತ್ತೊಬ್ಬ ಪ್ರಯೋಜಕರಾದ ಎಸ್ ಎಂ ಶೆಟ್ಟಿ ಶಿಕ್ಷಣ ಸಂಸ್ಥೆಯು ಕಾರ್ಯಾಧ್ಯಕ್ಷ.ಶ್ರೀನಾಥ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈ. ಲಿಮಿಟೆಡ್ ಆಡಳಿತ ನಿರ್ದೇಶಕ.ರತ್ನಾಕರ್ ಶೆಟ್ಟಿ, ಮುಂಡ್ಕೂರು ಮಾತನಾಡುತ್ತಾ ಅರ್ಥಪೂರ್ಣ ಕಾರ್ಯಕ್ರಮವನ್ನು ಈ ಪ್ರಾದೇಶಿಕ ಸಮಿತಿ ಆಯೋಜಿಸಿದೆ ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡುವ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಬದುಕಿಗೆ ಆಧಾರವಾಗಿದೆ ಎಂದು ನುಡಿದರು.

ಬಂಟರ ಸಂಘದ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ ಮಾತನಾಡುತ್ತಾ ಪರಿಸರದ ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ಯೋಜನೆ ಅರ್ಥಪೂರ್ಣವಾಗಿದೆ ಸಂಘ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಮೂಲಕ ಕೂಡ ಬಹಳಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಕಾರವನ್ನು ನೀಡುತ್ತಾ ಬಂದಿದೆ ಎಂದು ನುಡಿದರು.

ಪ್ರಾದೇಶಿಕ ಸಮಿತಿಯ ಕಾರ್ಯಯಧ್ಯಕ್ಷ  ಸೂರಜ್ ಶೆಟ್ಟಿ ಸ್ವಾಗತಿಸುತ್ತಾ ಈ ಪರಿಸರದ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಗುಣ ಪಾಲ್ ಶೆಟ್ಟಿ ಐಕಳ ಅವರ ಕಾಲಾವಧಿಯಲ್ಲಿ ಪ್ರಾರಂಭಗೊಂಡ ಕಾರ್ಯಕ್ರಮ ನಿರಂತರ ವಾಗಿ ನಡೆಯುತ್ತಿದೆ. ದಾನಿಗಳ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಹಕಾರಿಯಾಗಿದೆ ಅವರೆಲ್ಲರ ಸಹಕಾರಗಳು ಮುಂದಿನ ದಿನದಲ್ಲೂ ಅಗತ್ಯ ಎಂದು ನುಡಿದರು..

ದಿಶ ಕಾರ್ಯಕ್ರಮಕ್ಕೆ ರತ್ನಾಕರ್ ಶೆಟ್ಟಿ, ಮುಂಡ್ಕೂರು ( ಶ್ರೀನಾಥ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈ). ಮಹೇಶ್ ಶೆಟ್ಟಿ,( ಬಾಬಾ ಗ್ರೂಪ್ ಆಫ್ ಕಂಪನೀಸ್ ). ಡಾ. ಆರ್ ಕೆ ಶೆಟ್ಟಿ (ಇಸ್ಸಾರ್ ಫೈನಾನ್ಷಿಯಲ್ ಸರ್ವೀಸಸ್ ಪ್ರೈ. ಲಿಮಿಟೆಡ್) ಇವರ ಸಹಕಾರದಿಂದ ನಡೆಯಿತು.

ಈ ಕಾರ್ಯಕ್ರಮದ ವೇದಿಕೆಯಲ್ಲಿ ಬಂಟರ ಸಂಘದ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ದಿವಾಕರ ಶೆಟ್ಟಿ ಇಂದ್ರಾಳಿ . ಉಪಕಾರ್ಯ ಧ್ಯಕ್ಷ.ಸುಬ್ಬಯ್ಯ ಶೆಟ್ಟಿ .ಪ್ರಾದೇಶಿಕ ಸಮಿತಿಗಳ ಪಶ್ಚಿಮ ವಲಯದ ಸಮನ್ವಯಕ ರವೀಂದ್ರನಾಥ ಭಂಡಾರಿ, ಪ್ರಾದೇಶಿಕ ಸಮಿತಿಯ ಉಪಾಧ್ಯಕ್ಷರಾಗಳದ ಯಶವಂತ ಶೆಟ್ಟಿ ಬನ್ನಂಜೆ,  ರಮೇಶ್ ರೈ. ಕಾರ್ಯದರ್ಶಿ ತಾರಾನಾಥ ಶೆಟ್ಟಿ, ಕೋಶಾಧಿಕಾರಿ ಮೋಹನದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಅಮರನಾಥ ಶೆಟ್ಟಿ, ಜೊತೆ ಕೋಶಾಧಿಕಾರಿ ಅಭಿಷೇಕ್ ಶೆಟ್ಟಿ, 

ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶೋಭಾ ಅಮರನಾಥ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷೆ ಭಾರತಿ ಶೆಟ್ಟಿ,  ದತ್ತು ಸಮಿತಿಯ ಕಾರ್ಯಧ್ಯಕ್ಷ ಲಕ್ಷ್ಮಣ್ ಶೆಟ್ಟಿ.  ಉಪಸ್ತರಿದ್ದರು .

ಸಭಾ ಕಾರ್ಯಕ್ರಮದ ಬಳಿಕ ಉದ್ಯಮಿ. ರೌನಕ್ ಕಿಚನ್ ಆಡಳಿತ ನಿರ್ದೇಶಕ ಶಂಕರ್ ಶೆಟ್ಟಿ ಅವರ ಪ್ರಾಯೋದಲ್ಲಿ ಬಾಲ ಪ್ರತಿಭೆಗಳಿಂದ ‘ಸುದರ್ಶನ ಗರ್ವಭಂಗ’ ಎಂದು ತುಳು ಯಕ್ಷಗಾನ ಯಕ್ಷ ಗುರು ಸದಾನಂದ ಶೆಟ್ಟಿ ಕಟೀಲ್ ಅವರ ನಿರ್ದೇಶನದಲ್ಲಿ ನಡೆಯಿತು.

ಕಾರ್ಯಕ್ರಮದ  ನಿರೂಪಣೆಯನ್ನು ನಟ ಸಂಘಟಕ ಬಾಬಾ ಪ್ರಸಾದ್ ಅರಸ್ ನಿರೂಪಿಸಿದರು. ಸುಚಿತಾ ಶೆಟ್ಟಿ ಪ್ರಾರ್ಥನೆ ಮಾಡಿದರು. ಕಾರ್ಯದರ್ಶಿ ತಾರನಾಥ್ ಶೆಟ್ಟಿ ಧನ್ಯವಾದ ನೀಡಿದರು

B. Dinesh Kulal

Mob.: 9821868674



Related posts

ಕರ್ನಾಟಕ ಸಂಘ ಪನ್ವೆಲ್ ವಾರ್ಷಿಕೋತ್ಸವ,

Mumbai News Desk

ಶಹಾಡ್: ಶ್ರೀ ಮೂಕಾಂಬಿಕಾ ದೇವಸ್ಥಾನದ 64ನೇ ವಾರ್ಷಿಕ ಮಹಾಪೂಜೆ ಸಂಪನ್ನ

Mumbai News Desk

ಸಾಫಲ್ಯ ಸೇವಾ ಸಂಘ ಮುಂಬಯಿ (ರಿ ) ಮಹಿಳಾ ವಿಭಾಗದ ವತಿಯಿಂದ ಖಾರ್ ಘರ್ ನಲ್ಲಿರುವ ಗಿರಿಜಾ ವೆಲ್ಫೇರ್ ಅನಾಥಾಶ್ರಮಕ್ಕೆ ಭೇಟಿ

Mumbai News Desk

ಅಂಧೇರೀ ಪಶ್ಚಿಮದ ಶ್ರೀ ಲಕ್ಷ್ಮಿ ನಾರಾಯಣ ಮಂದಿರದಲ್ಲಿ ಗೋವಿಂದ ಪುತ್ರನ್ ಒಡೆಯರಬೆಟ್ಟು ಆಯೋಜನೆಯಲ್ಲಿ ಕುಳಿತು ಹಾಗೂ ಕುಣಿತ ಭಜನೆ ಸ್ಪರ್ಧೆ .

Mumbai News Desk

ಮುಂಬೈ: ಬೋರಿವಲಿ ಶ್ರೀ ಜಗದೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮಕಲಶ ಸಂಭ್ರಮ ಸಂಪನ್ನ

Mumbai News Desk

ಡೊಂಬಿವಲಿಯಲ್ಲಿ ಶ್ರೀ ಲಕ್ಷ್ಮೀ ಭಜನಾ ಮಂಡಳಿಯ 20ನೇ ವಾರ್ಷಿಕ ಮಂಗಳೋತ್ಸವ

Mumbai News Desk