
ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ (ಪ.)
ಇವರ ವ್ಯವಸ್ಥಾಪಕತ್ವ ಹಾಗೂ ಸಂಯೋಜನೆಯಲ್ಲಿ
ಶ್ರೀ ಮಾರಣಕಟ್ಟೆ ಮೇಳದ ಕಲಾವಿದರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ
‘ಚತುರ್ಜನ್ಮ ಮೋಕ್ಷ‘ ಎಂಬ ಪೌರಾಣಿಕ ಪ್ರಸಂಗ
ದಿನಾಂಕ : 10.08.2025 ಭಾನುವಾರ ಮಧ್ಯಾಹ್ನ 4:00 ಕ್ಕೆ ಜನ ಗಣ ಮನ ಸ್ಕೂಲ್, ನೆಮಾಡೆ ಗಲ್ಲಿ, ಜೂನಾ ಡೊಂಬಿವಲಿ (ಪ.) ಇಲ್ಲಿ ನಡೆಯಲಿದೆ.
ಯಕ್ಷಗಾನದ ಮಧ್ಯಂತರದಲ್ಲಿ ನಡೆಯುವ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ಆನಂದ ಶೆಟ್ಟಿ ಎಕ್ಕಾರು (ಅಧ್ಯಕ್ಷರು-ಬಂಟರ ಸಂಘ ಡೊಂಬಿವಲಿ, ಪ್ರಾದೇಶಿಕ ಸಮಿತಿ) ವಹಿಸಲಿರುವರು, ಶ್ರೀ ಪ್ರಕಾಶ ಭಟ್ ಕಾನಂಗಿ (ಪ್ರಧಾನ ಅರ್ಚಕರು-ರಾಧಾಕೃಷ್ಣ ಶನೀಶ್ವರ ಮಂದಿರ, ಡೊಂಬಿವಲಿ ಪ.) ಶುಭ ಆಶೀರ್ವಚನ ನೀಡಲಿರುವರು.






ಅಂದು ನಮ್ಮ-ನಿಮ್ಮೊಂದಿಗೆ ಅತಿಥಿಗಣ್ಯರುಗಳಾಗಿ :
ಶ್ರೀ ಹರೀಶ್ ಶೆಟ್ಟಿ (ಗೌ, ಅಧ್ಯಕ್ಷರು – ಶ್ರೀ ಜಗದಂಬಾ ಮಂದಿರ, ಡೊಂಬಿವಲಿ), ಶ್ರೀ ಲಕ್ಷ್ಮಣ ಪೂಜಾರಿ (ಪ್ರೀತಿ ಬ್ಯಾಂಕ್ವೆಟ್ ಹಾಲ್, ಗೌ| ಅಧ್ಯಕ್ಷರು ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿ) ಶ್ರೀ ರವೀಂದ್ರ ವೈ. ಶೆಟ್ಟಿ (ಸಲಹೆಗಾರರು, ಮಾಜಿ ಅಧ್ಯಕ್ಷರು – ಬಂಟರ ಸಂಘ, ಭಿವಂಡಿ-ಬದ್ಲಾಪುರ ಕಮಿಟಿ), ಶ್ರೀ ರವಿ ಸನಿಲ್ (ಕೋಶಾಧಿಕಾರಿ-ಬಿಲ್ಲವರ ಅಸೋಶಿಯೇಷನ್, ಮುಂಬಯಿ), ಶ್ರೀ ರಾಜು ಮೊಗವೀರ (ಅಧ್ಯಕ್ಷರು, ಮೊಗವೀರ ಮಹಾಜನ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆ), ಶ್ರೀ ರತ್ನಾಕರ ಚಂದನ್ (ಹೊಟೇಲ್ ಸ್ಟೇಟಸ್, ಲೊವರ ಪರೇಲ್), ಶ್ರೀ ಸತೀಶ್ ಶೆಟ್ಟಿ ಅಜೆಕಾರು (ಖ್ಯಾತ ಉದ್ಯಮಿ-ಹೊಟೇಲ್ ಫ್ರೆಂಡ್ಸ್, ಡೊಂಬಿವಲಿ), ಶ್ರೀ ಗಣೇಶ್ ಶೆಟ್ಟಿ (ಹೊಟೇಲ್ ರಂಜಿತ್ ಪ್ಯಾಲೇಸ್, ಡೊಂಬಿವಲಿ), ಶ್ರೀ ಸುನಿಲ್ ಕುಂದರ್ (ಮಾನಸ್ವಿಕೇಟರಿಂಗ್ ಸರ್ವಿಸ್, ಮುಂಬಯಿ, ಡೊಂಬಿವಲಿ), ಶ್ರೀ ದಿನೇಶ್ ಪೂಜಾರಿ (ಉಪಾಧ್ಯಕ್ಷರು-ಜಗದಂಬಾ ಮಂದಿರ,ಡೊಂಬಿವಲಿ), ಶ್ರೀ ರಾಜೇಶ್ ಕೋಟ್ಯಾನ್ (ಪ್ರಧಾನ ಕಾರ್ಯದರ್ಶಿ, ಜಗದಂಬಾ ಮಂದಿರ, ಡೊಂಬಿವಲಿ), ಶ್ರೀ ಸೂರಜ್ ಸಫಲಿಗ (ಅಧ್ಯಕ್ಷರು – ಜೈ ಭವಾನಿ ಶನೀಶ್ವರ ಮಂದಿರ, ಡೊಂಬಿವಲಿ), ಶ್ರೀ ಸಂತೋಷ್ ಪುತ್ರನ್ (ಕಾರ್ಯದರ್ಶಿ, ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ, ಡೊಂಬಿವಲಿ ಶಾಖೆ), ಶ್ರೀ ಶೇಖರ್ ಚಂದನ್ (ಕಲಾಪೋಷಕರು, ಉದ್ಯಮಿ – ಡೊಂಬಿವಲಿ), ಶ್ರೀಮತಿ ಸುಮತಿ ರಾಜು ಮೊಗವೀರ (ಕಲಾ ಪೋಷಕಿ, ಡೊಂಬಿವಲಿ), ಶ್ರೀ ಸತೀಶ್ ಸುವರ್ಣ (ದಿವ್ಯಾ ಕೇಟರಿಂಗ್ ಸರ್ವಿಸ್, ದಿವಾ) ಶ್ರೀ ಜಯಕರ್ ಶೆಟ್ಟಿ (ಕಲಾಪೋಷಕರು, ದಿವಾ), ಉಪಸ್ಥಿತರಿರುವರು.

ಈ ಸಭಾಕಾರ್ಯಕ್ರಮದಲ್ಲಿ ಅತಿಥಿ ಗಣ್ಯರ ಸಮ್ಮುಖದಲ್ಲಿ, ಕಲಾಸಂಘಟಕ, ಕಲಾಪೋಷಕ ಹಾಗೂ ಹೋಟೆಲ್ ಉದ್ಯಮಿ, ಶ್ರೀ ಆರ್ಡಿ ಉದಯ ಶೆಟ್ಟಿ ಇವರನ್ನು ಸನ್ಮಾನಿಸಲಾಗುವುದು.
ಶ್ರೀ ಆರ್ಡಿ ಉದಯ ಶೆಟ್ಟಿ :
ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಪರಮ ಪವಿತ್ರ ಮಣ್ಣಾದ ಬೇಳಂಜೆ ಹಾನಾಡಿ ಕೃಷ್ಣಪ್ಪ ಶೆಟ್ಟಿ ಮತ್ತು ಆರ್ಡಿ ಬೈಲುಮನೆ ಕಮಲ ಕೃಷ್ಣಪ್ಪ ಶೆಟ್ಟಿ ದಂಪತಿಗಳ ಸುಪುತ್ರರಾಗಿ ಈ ಭೂಮಿಯ ಬೆಳಕನ್ನು ಕಂಡು. ಹುಟ್ಟೂರಿನಲ್ಲಿ ಹೈಸ್ಕೂಲ್ ಶಿಕ್ಷಣವನ್ನು ಪೂರೈಸಿ ಜೀವನೋಪಾಯಕ್ಕಾಗಿ ಮುಂಬಯಿ ಮಹಾನಗರಕ್ಕೆ ಕೆಲಸ ಹುಡುಕುತ್ತಾ ಬಂದ ಮೊದಲು ಎಲ್ಲರಂತೆ ಹೊಟೇಲ್ ನಲ್ಲಿ ಕೆಲಸಮಾಡುತ್ತ ಮುಂದೊಮ್ಮೆ ನಾನೊಬ್ಬ ಹೊಟೇಲ್ ಉದ್ಯಮಿಯಾಗಬೇಕೆಂದು ಛಲವನ್ನು ಹೊತ್ತು ಆ ದಾರಿಯತ್ತ ಮುನ್ನೆಡೆದು ನಿಷ್ಠಾವಂತ ಹಾಗೂ ಪರಮ ದೈವಭಕ್ತರಾದ ಇವರು, ತಾವು ನಂಬಿದ ದೈವ ದೇವರುಗಳು ಅವರ ಕನಸನ್ನು ಈಡೇರಿಸಿ, ಹಂತ ಹಂತವಾಗಿ ಅವರು ಅವರ ಗುರಿಯತ್ತ ಸಾಗಿರುವರು. ಮುಂಬೈಯ ಉಲ್ಲಾಸ್ ನಗರವನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಹಲವಾರು ಸ್ವಂತ ಹೊಟೇಲುಗಳನ್ನು ಹಾಗೂ ಇನ್ನೂ ಕೆಲವು ಪಾಲುದಾರಿಕೆಯಲ್ಲಿ ಹೊಟೇಲುಗಳನ್ನು ಹೊಂದಿರುವರು. ಉಧ್ಯಮದಲ್ಲಿ ದೊರೆತ ಲಾಭದ ಕೆಲವಂಶವನ್ನು ಸಮಾಜಸೇವೆಗಾಗಿ ವಿನಿಯೋಗಿಸುತ್ತಾ, ಬಡ ಹೆಣ್ಣುಮಕ್ಕಳ ಮದುವೆಗೆ, ವಿದ್ಯಾಭ್ಯಾಸಕ್ಕೆ, ಮನೆಕಟ್ಟಲು ಹೀಗೆ ಹಲವಾರು ಬಗೆಯಲ್ಲಿ ಸಹಕರಿಸುತ್ತಾ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದೆಂಬಂತೆ, ಊರಿನಿಂದ ಬರುವ ಯಾವುದೇ ಕಲಾತಂಡಗಳಿಗೆ, ಇಲ್ಲಿ ನಡೆಯುವ ಯಾವುದೇ ಸಾಮಾಜಿಕ, ಧಾರ್ಮಿಕ,ಶೈಕ್ಷಣಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಇವರ ಪ್ರೋತ್ಸಾಹ ಆಧರಣೀಯ.
ಪದವಿ ಸನ್ಮಾನಕ್ಕೆ ಹಿಂದೇಟು ಹಾಕುತ್ತಾ ಇನ್ನೊಬ್ಬರಿಗೆ ಸನ್ಮಾನ ಮಾಡಿ ಅವರ ಸಂತೋಷದಲ್ಲಿ ತನ್ನ ಸಂತೋಷ ಕಾಣುವ ಇವರದ್ದು ಮೇರು ವ್ಯಕ್ತಿತ್ವ. ಸಾಂಸಾರಿಕವಾಗಿ ಶ್ರೀಮತಿ ಕ್ಷಮಾ ಶೆಟ್ಟಿಯವರೊಂದಿಗೆ ವಿವಾಹವಾಗಿ ತಮ್ಮ ದಾಂಪತ್ಯ ಜೀವನದಲ್ಲಿ ‘ಉನ್ನತ್, ಉಶಾಂತ್ ಮತ್ತು ದಿಗಂತ್ ‘ ಎಂಬ ಮೂವರು ಪುತ್ರರತ್ನರನ್ನು ಪಡೆದಿರುವರು. ಇವರು ನಂಬಿದ ದೈವ ದೇವರು ಹಾಗೂ ನಮ್ಮ ಆರಾಧ್ಯದೇವ ಶ್ರೀ ಅಯ್ಯಪ್ಪ ಸ್ವಾಮಿಯು ಇವರ ಜೀವನದಲ್ಲಿ ಸುಖ ಶಾಂತಿ ಆಯುರಾರೋಗ್ಯ ಕರುಣಿಸಲಿ, ಉದ್ಯೋಗದಲ್ಲಿ ಯಶಸ್ವಿಯಾಗಿ ಮುನ್ನೆಡಸಲಿ ಮುತ್ತು ನಿಮಗೆ ಇನ್ನಷ್ಟು ಹೆಚ್ಚು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಶಕ್ತಿ ಕೊಡಲೆಂದು ಪ್ರಾರ್ಥಿಸುತ್ತಾ ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿಯವರ ವತಿಯಿಂದ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯಾತಿಗಣ್ಯರು ಹಾಗೂ ಯಕ್ಷಕಲಾಭಿಮಾನಿಗಳ ಸಮ್ಮುಖದಲ್ಲಿ ಈ ಸನ್ಮಾನವನ್ನು ಪ್ರಧಾನಿಸಾಲಾಗುವುದು.
ಕಲಾ ರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರಬೇಕಾಗಿ
ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಲಿ (ಪ.), ಇದರ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಲಾ ಸಂಘಟಕ ಸೀತಾರಾಮ ಶೆಟ್ಟಿ ಆರೂರು ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.




