September 6, 2026
Mumbai News Kannada
ಮುಂಬಯಿ

ಕುಂದರ್ ಮೂಲಸ್ಥಾನ ಸಭಾ ಮುಂಬಯಿ : ವಾರ್ಷಿಕ ಮಹಾಸಭೆ





ಕುಂದರ್ ಮೂಲಸ್ಥಾನ ಸಭಾ ಮುಂಬಯಿ,ಇದರ 89ನೇ ವಾರ್ಷಿಕ ಮಹಾಸಭೆ ಅಗಸ್ಟ್ 10ರಂದು ಗಣೇಶ್ ಕೆ ಕಾಂಚನರವರ ಅಧ್ಯಕ್ಷತೆಯಲ್ಲಿ ಅಂಧೇರಿ ಪಶ್ಚಿಮದ ಎಂ ವಿ ಎಂ ಶಾಲೆಯ ಸಭಾಭವನದಲ್ಲಿ ನೆರವೇರಿತು.
ದೇವತಾ ಪ್ರಾರ್ಥನೆಯೊಂದಿಗೆ ಸಭೆ ಆರಂಭವಾಯಿತು, ಅಧ್ಯಕ್ಷರು ಉಪಸ್ಥಿತರಿದ್ದ ಸದಸ್ಯರನ್ನು ಸ್ವಾಗತಿಸಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ವಸಂತಿ ಯು ಸಾಲ್ಯಾನ್ ಸುತ್ತೋಲೆಯನ್ನು ಓದಿ ಹೇಳಿದರು.
ಪ್ರಧಾನ ಕಾರ್ಯದರ್ಶಿಯವರಾದ ನೀಲಾದರ್ ಎಸ್ ಕುಂದರ್ 88ನೇ ವಾರ್ಷಿಕ ಮಹಾಸಭೆಯ ಟಿಪ್ಪಣಿ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ವಾಚಿಸಿದರು. ವರದಿಯಲ್ಲಿ ನಮೂದಿಸಿದಂತೆ 2023 – 24ರ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪಿಯುಸಿ, ಪದವಿ ಹಾಗೂ ಉನ್ನತ ಪರೀಕ್ಷೆಯಲ್ಲಿ ಅತಿ ಉತ್ತಮ ಅಂಕ ಗಳಿಸಿದ 81 ಮಂದಿ ಕುಂದರ್ ಬಂಧುಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.
ಪ್ರಧಾನ ಕೋಶಾಧಿಕಾರಿ ಸಂತೋಷ್ ಐ ಸುವರ್ಣರು 31- 3- 25 ರಂದು ಅಂತ್ಯಗೊಂಡ ವಾರ್ಷಿಕ ಆಯವ್ಯಯ ಹಾಗೂ ಆಸ್ತಿಯ / ಸ್ವತ್ತುಗಳ ವಿವರವನ್ನು ಸಭೆಯ ಮುಂದಿಟ್ಟರು.
ಮೊಗವೀರ ವ್ಯವಸ್ಥಾಪಕ ಮಂಡಳಿಯ 2025 – 28ರ ಅವಧಿಗೆ ಆಡಳಿತ ಮಂಡಳಿಗೆ ಚುನಾಯಿತರಾದ ಗಣೇಶ್ ಕೆ ಕಾಂಚನ್ ಅಂಬಲಪಾಡಿ, ದಿಲೀಪ್ ಕುಮಾರ್ ಮೂಲ್ಕಿ, ದೇವರಾಜ್ ಎಚ್ ಕುಂದರ್ ಕದಿಕೆ, ದಯಾವತಿ ಎಂ ಸುವರ್ಣ ಪೊಲಿಪು, ರವಿರಾಜ್ ಕುಂದರ್ ಎರ್ಮಾಳ್ ಬಡಾ , ಕಿರಣ್ ಎಸ್ ಮೆಂಡನ್ ಹೆಜಮಾಡಿ ಹಾಗೂ ಮಹೇಂದ್ರ ಜಿ ಕಾಂಚನ್ ಕಾಡಿಪಟ್ನ ಇವರನ್ನು ಗೌರವಿಸಲಾಯಿತು.


ಗೌರವ ಅಧ್ಯಕ್ಷರಾದ ಲೋಕನಾಥ್ ಕುಂದರ್ ಮಾತನಾಡುತ್ತಾ ಕುಂದರ್ ಮೂಲಸ್ಥಾನ 1892 ರಲ್ಲಿ ಹೆಜಮಾಡಿ ಗುಂಡಿಯಲ್ಲಿ ಸ್ಥಾಪನೆಯಾಗಿ ಕಳೆದ 133 ವರ್ಷಗಳಿಂದ ನಾಗಬ್ರಹ್ಮ ದೇವರು ಹಾಗೂ ಮೂಲಮೈಸಂದಾಯ, ಪರಿವಾರ ದೈವಗಳಿಗೆ ಪೂಜೆ- ಪುನಸ್ಕಾರ ಮಾಡುತ್ತಾ ಬಂದಿರುತ್ತದೆ. ಪ್ರತಿ ವರ್ಷವೂ ಸಾವಿರಾರು ಕುಂದರ್ ಬಂಧುಗಳು ತಮ್ಮ ಕುಟುಂಬ ಸಮೇತ ವಾರ್ಷಿಕ ಪೂಜೆಗೆ ಬಂದು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ ಎಂದು ತಿಳಿಸಿದರು.
ಜೊತೆ ಕಾರ್ಯದರ್ಶಿ ನಾಗೇಶ್ ಕುಂದರ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಪುರಂದರ ಕಾಂಚನ್, ಪುರುಷೋತ್ತಮ ಕಾಂಚನ್, ದಾಮೋದರ್ ಸುವರ್ಣ, ಮಹಿಳಾ ವಿಭಾಗದ ಕೋಶಧಿಕಾರಿ ಗೌರಿ ಪನಿಯಾಡಿ ಅವರು ಮೂಲಸ್ಥಾನದ ಸರ್ವತೋಮುಖ ಅಭಿವೃದ್ಧಿಗಾಗಿ ಸೂಕ್ತ ಸಲಹೆ ಸೂಚನೆ ನೀಡಿದರು.
ಬಳಿಕ ಬರುವ ಮೂರು ವರ್ಷದ ಅವಧಿಗೆ ಲೋಕನಾಥ್ ಕುಂದಾರ್ ಗೌರವಾಧ್ಯಕ್ಷರಾಗಿ, ಅಧ್ಯಕ್ಷರಾಗಿ ಹೇಮಾನಂದ ಕುಂದರ್, ಉಪಧ್ಯಕ್ಷರಾಗಿ ಗಣೇಶ್ ಕಾಂಚನ್, ಪ್ರಧಾನ ಕಾರ್ಯದರ್ಶಿಯಾಗಿ ನೀಲಾಧರ್ ಎಸ್ ಕುಂದರ್,
ನಾಗೇಶ್ ಕುಂದರ್ ಜೊತೆ ಕಾರ್ಯದರ್ಶಿಯಾಗಿ, ಸಂತೋಷ ಐ ಸುವರ್ಣ ಪ್ರಧಾನ ಕೋಶಾಧಿಕಾರಿಯಾಗಿ ಆಯ್ಕೆಯಾದರು.


ಪುರಂದರ ಕೆ ಕಾಂಚನ್, ಪುರುಷೋತ್ತಮ ಕೆ ಕಾಂಚನ್, ದಾಮೋದರ್ ಸುವರ್ಣ ಸತೀಶ್ ಮೂಲ್ಕಿ, ನಾಗೇಶ್ ಸಾಲಿಯಾನ್, ಕಿರಣ್ ಎಸ್ ಮೆಂಡನ್, ವಿಠಲ್ ಕರ್ಕೇರ, ಕಿಶೋರ್ ಕುಂದರ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಆಯ್ಕೆಯಾದರು.
ಮಹಿಳಾ ವಿಭಾಗದ ಅಧ್ಯಕ್ಷರಾಗಿ ವೇದಾವತಿ ಕೆ ಪುತ್ರನ್ ಉಪಾಧ್ಯಕ್ಷರಾಗಿ ಸುನೀತಿ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ ಯು, ಸಾಲ್ಯಾನ್, ಪ್ರಧಾನ ಕೋಶಾಧಿಕಾರಿಯಾಗಿ ಗೌರಿ ಡಿ ಪನಿಯಾಡಿ, ದಯಾವತಿ ಎಮ್ ಸುವರ್ಣ, ಸುಜಾತ ಕೋಟ್ಯಾನ್, ಪುಷ್ಪ ಬಂಗೇರ, ಉಷಾ ತಿಂಗಳಾಯ,ಕಾವ್ಯ ಕೋಟ್ಯಾನ್, ಬಾವಿಕಾ ತಿಂಗಳಾಯ ಹನ್ಸಿಕಾ ಕಾಂಚನ್ ಸದಸ್ಯರುಗಳಾಗಿ ಆಯ್ಕೆಯಾದರು.
ಲೆಕ್ಕ ಪರಿಶೋಧಕರಾಗಿ ರಮೇಶ್ ಕುಂದರ್, ಭವಾನಿ ಶಂಕರ್ ಮಂಡನ್ ನೇಮಕಗೊಂಡರು.
ಅಧ್ಯಕ್ಷತೆ ವಹಿಸಿದ್ದ ಗಣೇಶ್ ಕಾಂಚನ್ ಮಾತನಾಡುತ್ತಾ ಸದಸ್ಯರ ಉಪಯುಕ್ತ ಸಲಹೆ -ಸೂಚನೆಗೆ ಅಬಾರ ವ್ಯಕ್ತಪಡಿಸಿದರಲ್ಲದೆ, ಯುವಕ ಯುವತಿಯರು ಮುಂದೆ ಬಂದು ಕಾರ್ಯವೆಸಗುವಂತೆ ವಿನಂತಿಸಿಕೊಂಡರು.

ಪ್ರಧಾನ ಕಾರ್ಯದರ್ಶಿ ನೀಲಾಧರ್ ಎಸ್ ಕುಂದರ್ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು.



Related posts

ವಸಾಯಿ ಕರ್ನಾಟಕ ಸಂಘ  38ನೇ ವಾರ್ಷಿಕ ಮಹಾಸಭೆ,

Mumbai News Desk

ಶ್ರೀ ಜೈ ಭವಾನಿ ಶನೀಶ್ವರ ದೇವಸ್ಥಾನ, ಡೊಂಬಿವಲಿಯ ನೂತನ ಅಧ್ಯಕ್ಷರಾಗಿ ಸೂರಜ್ ಡಿ. ಸಪಲಿಗ ಆಯ್ಕೆ 

Mumbai News Desk

ಯಕ್ಷ ಪ್ರಿಯ ಬಳಗ ಮೀರಾ ಭಯಂದರ್ ಇದರ ವತಿಯಿಂದ* ಶ್ರೀ ರಾಮ*  ಯಕ್ಷಗಾನ

Mumbai News Desk

ಬಂಟರ ಸಂಘ,  ಅಂಧೇರಿ-ಬಾಂದ್ರಾ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಆಟಿದ ಪೊರ್ಲ ತಿರ್ಲ್ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೇಳೈವಿಸಿದ ಜಾನಪದ ಸಂಸ್ಕೃತಿ

Mumbai News Desk

HSC ಪರೀಕ್ಷೆ ಯಲ್ಲಿ ನಿಧಿ ಜಗದೀಶ ಶೆಟ್ಟಿ 90 ಶೇಕಡಾ ಅಂಕ

Mumbai News Desk

ಬಿಲ್ಲವರ  ಎಸೋಸಿಯೇಶನ್, ಮುಂಬಯಿ ಇದರ 2024-27ನೇ ಸಾಲಿನ ಆಡಳಿತ ಮಂಡಳಿ ಚುನಾವಣೆ, ಹರೀಶ್ ಜಿ. ಅಮೀನ್, ನೇತೃತ್ವದ ಸ್ವಾಭಿಮಾನಿ ಬಿಲ್ಲವವರು ಬಣಕ್ಕೆ ಜಯ

Mumbai News Desk