30.9 C
Mumbai
June 8, 2026
Mumbai News Kannada
ಮುಂಬಯಿ

ಶ್ರೀ ರಜಕ ಸಂಘ ಮುಂಬಯಿಯ ಮಹಿಳಾ ವಿಭಾಗದಿಂದ ವರಮಹಾಲಕ್ಷ್ಮಿ ಪೂಜೆ





ಶ್ರೀ ರಜಕ ಸಂಘ ಮುಂಬಯಿಯ ಸಾಂಸ್ಕೃತಿಕ ವಿಭಾಗ ಹಾಗೂ ಮಹಿಳಾ ವಿಭಾಗದ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಆ. 8 ರ ಶುಕ್ರವಾರದಂದು ಮಧ್ಯಾಹ್ನ 3.00 ಗಂಟೆಯಿಂದ ಸಾಂತಕ್ರೂಜ್ ಪೂರ್ವದ ಪ್ರಭಾತ್ ಕಾಲೊನಿಯಲ್ಲಿರುವ ಪೇಜಾವರ ಮಠದ ಸಭಾಗೃಹದಲ್ಲಿ ನೆರವೇರಿತು. 

 ವನಿತ ಕುಂದರ್ ರವರು ನೆರೆದಿದ್ದ ಭಕ್ತ ಬಾಂಧವರನ್ನು ಸ್ವಾಗತಿಸಿದ ನಂತರ ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷ, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗದ ಅಧ್ಯಕ್ಷೆ, ಹಾಗೂ ಹಿರಿಯ ಸದಸ್ಯರು ದೀಪ ಪ್ರಜ್ವಲನೆ ಮಾಡಿದರು. ತದನಂತರ ಸಮಾಜದ ಮಹಿಳೆಯರು, ಮಕ್ಕಳು ಹಾಗೂ ಪುರುಷರು ಭಜನಾ ಸಂಕೀರ್ತನೆಯನ್ನು ನಡೆಸಿಕೊಟ್ಟರು. ಶ್ರೀಮತಿ ಉಷಾ ಸಾಲಿಯಾನರು ವರಮಹಾಲಕ್ಷ್ಮಿ ಪೂಜೆಯ ಕಥೆ, ವ್ರತದ ಮಹತ್ವ, ಆಚರಣೆ ಹಾಗೂ ವಿಶೇಷತೆಗಳ ಬಗ್ಗೆ ಸೇರಿದ ಭಕ್ತ ಬಾಂಧವರಿಗೆ ಓದಿ ತಿಳಿಸಿದರು. ಶ್ರೀಮತಿ ಗೀತಾ ಬಿ ಸಾಲ್ಯಾನ್ ರವರ ಮಾರ್ಗದರ್ಶನದಲ್ಲಿ ಶ್ರೀಮತಿ ಪ್ರೀತಿ ಮಹೇಶ್ ಸಾಲ್ಯಾನ್ ದಂಪತಿಯ

ರು ಗಣಪತಿ ಪೂಜೆ ಯನ್ನು ಮಾಡಿದರು. ಅಪಾರ ಸಂಖ್ಯೆಯಲ್ಲಿ ಸೇರಿದ ಮಹಿಳೆಯರು ಸಾಮೂಹಿಕವಾಗಿ ಲಲಿತಾ ಸಹಸ್ರನಾಮ ಸ್ತೋತ್ರ ಪಠಣೆಯೊಂದಿಗೆ ವರಮಹಾಲಕ್ಷ್ಮಿ ದೇವಿಗೆ ಕುಂಕುಮಾರ್ಚನೆಯನ್ನು ಮಾಡಿ ಮಹಾಮಂಗಳಾರತಿ ಯನ್ನು ಮಾಡಿದರು. 

ಈ ಶುಭ ಸಂದರ್ಭದಲ್ಲಿ ವೈವಾಹಿಕ ಜೀವನದ ಸುವರ್ಣ ಮಹೋತ್ಸವವನ್ನು ಆಚರಿಸಿದ ಶ್ರೀಮತಿ ಹೇಮಲತಾ ಮತ್ತು ಶ್ರೀ ಜಿ ಕೆ ಮಡಿವಾಳ ದಂಪತಿಯ ರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ ಪದಾಧಿಕಾರಿಗಳು ಶಾಲು ಹೊದಿಸಿ, ಸ್ಮರಣಿಕೆ ಫಲಪುಷ್ಪ ನೀಡಿ ಅಭಿನಂದಿಸಿದರು. ಶ್ರೀಮತಿ ಶಾಂತಿ ಸಾಲ್ಯಾನ್ ರವರು ಈ ದಂಪತಿಯರ ಪರಿಚಯವನ್ನು ಸಭೆಗೆ ಓದಿ ತಿಳಿಸಿದರು. ವೇದಿಕೆಯಲ್ಲಿ ಶ್ರೀ ರಜಕ ಸಂಘ ಮುಂಬಯಿಯ ಅಧ್ಯಕ್ಷ ಸಿ ಎ ವಿಜಯ್ ಕುಂದರ್, ಉಪಾಧ್ಯಕ್ಷ ಹರೀಶ್ ಸಾಲ್ಯಾನ್, ಕಾರ್ಯದರ್ಶಿ ಸುಮಿತ್ರಾ ಪಲಿಮಾರ್, ಕೋಶಾಧಿಕಾರಿ ಜಯ ಕುಂದರ್, ಸಾಂಸ್ಕೃತಿಕ ವಿಭಾಗದ ಉಪಕಾರ್ಯಾಧ್ಯಕ್ಷೆ ಪ್ರವೀಣ ಕುಂದರ್, ಸಮಿತಿಯ ಸದಸ್ಯರಾದ ಸುಂದರ್ ಮಡಿವಾಳ್, ಪ್ರಕಾಶ್ ಗುಜರನ್, ಶ್ರೀನಿವಾಸ್ ಮಡಿವಾಳ್, ಉಮೇಶ್ ಸಾಲ್ಯಾನ್, ಮಹಿಳಾ ವಿಭಾಗದ ಅಧ್ಯಕ್ಷೆ ಶುಭ ಡಿ ಗುಜರನ್, ಮಾಜಿ ಅಧ್ಯಕ್ಷ ರಾದ ಪಿ ಎಮ್ ಸಾಲ್ಯಾನ್, ಡಿ ಸಿ ಸಾಲ್ಯಾನ್, ಪಿ ಕೃಷ್ಣ, ಹಿರಿಯ ಸದಸ್ಯ ರಮೇಶ್ ಪಲಿಮಾರ್, ಮಹಿಳಾ ವಿಭಾಗದ ಸ್ಥಾಪಕ ಅಧ್ಯಕ್ಷೆ ಸುಮಿತ್ರ ಗುಜರನ್ ಇವರೆಲ್ಲರೂ ಉಪಸ್ಥಿತರಿದ್ದರು.

ತದನಂತರ ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತ ಬಾಂಧವರಿಗೆ ವರಮಹಾಲಕ್ಷ್ಮಿ ಪೂಜೆಯ ತೀರ್ಥಪ್ರಸಾದ, ಮಹಾ ಪ್ರಸಾದವನ್ನು ನೀಡಲಾಯಿತು. 

ಕಾರ್ಯದರ್ಶಿ ಸುಮಿತ್ರಾ ಪಲಿಮಾರ್ ರವರು ಕಾರ್ಯಕ್ರಮ ದ ಯಶಸ್ಸಿಗೆ ಸಹಕರಿಸಿದವರೆಲ್ಲರಿಗೂ ವಂದನೆಗೈದು ಕಾರ್ಯಕ್ರಮ ವನ್ನು ಮುಕ್ತಾಯಗೊಳಿಸಿದರು. 



Related posts

 ಶ್ರೀ ಮಹಿಷಮರ್ದಿನಿ ದೇವಸ್ಥಾನ ಟ್ರಸ್ಟ್ ಬೊರಿವಿಲಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜೆ

Mumbai News Desk

ಬಿಲ್ಲವರ ಅಸೋಸಿಯೇಶನ್, ಮುಂಬಯಿ ವತಿಯಿಂದ ಡಾ. ಹರಿಶ್ಚಂದ್ರ ಸಾಲ್ಯಾನರಿಗೆ ಗೌರವಾರ್ಪಣೆ.

Mumbai News Desk

ಮುಂಬೈ ಕುಲಾಲ ಸಂಘ ಮುಂಬೈ ಇದರ ಮೀರಾ ರೋಡ್ – ವಿರಾರ್ ಸ್ಥಳೀಯ ಸಮಿತಿಯ ಆಶ್ರಯದಲ್ಲಿ ಮಾತಾ ವೈಷ್ಣೋದೇವಿ ದರ್ಶನ: ಭಕ್ತಿ-ಒಗ್ಗಟ್ಟಿನ ಸಮಾಗಮ

Mumbai News Desk

ಜಯ ಸಿ. ಸುವರ್ಣರ ಆದರ್ಶ ಪಾಲನೆಯಿಂದ ಸಮಾಜದ ಪ್ರಗತಿ ಸಾಧ್ಯ – ಸೂರ್ಯಕಾಂತ್ ಜಯ ಸುವರ್ಣ

Mumbai News Desk

ಕಲಾತಂತ್ರ ಪ್ರೊಡಕ್ಷನ್ ಲೋಕಾರ್ಪಣೆ : ಜು. 28ರಂದು ‘ತುಡರ್’ ತುಳು ಚಿತ್ರ ಬಿಡುಗಡೆ.

Mumbai News Desk

ಮುಂಬೈನ ಬಾಂದ್ರಾ ಗರೀಬ್ ನಗರದಲ್ಲಿ ಪಶ್ಚಿಮ ರೈಲ್ವೆಯಿಂದ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಬುಲ್ಡೋಜರ್ ಘರ್ಜನೆ, ನಿವಾಸಿಗಳ ಆಕ್ರೋಶ

Mumbai News Desk