
ಶ್ರೀ ರಾಧಾಕೃಷ್ಣ ಭಜನಾ ಮಂಡಳಿಯ 66 ನೇ ವಾರ್ಷಿಕ ಮಹಾಸಭೆಯು ಶ್ರೀ ರಾಧಾಕೃಷ್ಣ ಶನೀಶ್ವರ ಮಂದಿರದ ವಠಾರದಲ್ಲಿ ಅಧ್ಯಕ್ಷರಾದ ಸೋಮನಾಥ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.
ಮಹಾಸಭೆಯಲ್ಲಿ ಮಂದಿರದ ಗೌರವ ಪ್ರದಾನ ಕಾರ್ಯದರ್ಶಿ ಶ್ರೀ ರಾಜೇಶ್ ಸಿ ಕೋಟ್ಯಾನ್ ರವರು ಸ್ವಾಗತಿಸಿ, ಮಂದಿರದ ಭುವಾಜಿ ಪುರಂದರ ಕೋಟ್ಯಾನ್ ಮತ್ತು ಬಳಗದವರ ಪ್ರಾರ್ಥನೆ ಯೊಂದಿಗೆ ಸಭೆ ಆರಂಭಿಸಲಾಯಿತು. ಮೊದಲಿಗೆ ಮಂದಿರದ ಮಾಜಿ ಅಧ್ಯಕ್ಷರಾದ ಎಸ್ ಟಿ ವಿಜಯ ಕುಮಾರ್ ತಿಂಗಳಯಾರವರು ದೈವಾಧೀನರಾದ್ದರಿಂದ 2 ನಿಮಿಷದ ಮೌನ ಪ್ರಾರ್ಥನೆ ಸಮರ್ಪಿಸಲಾಯಿತು. ತದನಂತರ ಕಾರ್ಯದರ್ಶಿಯವರು ಓದಿದ ಮಹಾಸಭೆಯ ವರದಿಯಯನ್ನು ಮಂಜೂರು ಮಾಡಲಾಯಿತು. ಕೋಶಾಧಿಕಾರಿ ಶ್ರೀ ಪ್ರಸಾದ್ ಪೂಜಾರಿ ಆಯವಯ ಪಟ್ಟಿಯನ್ನು ಮಂಡಿಸಿದರು.

ಈ ಸಂದರ್ಭದಲ್ಲಿ 2025 ರಿಂದ 2028 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸೋಮನಾಥ ಆರ್ ಪೂಜಾರಿಯವರು, ಗೌರವ ಅಧ್ಯಕ್ಷರಾಗಿ ಉದ್ಯಮಿ ಡಾ ದಿವಾಕರ್ ಶೆಟ್ಟಿ ಇಂದ್ರಾಳಿ, ಉಪಾಧ್ಯಕ್ಷರಾಗಿ ರವಿ ಸನಿಲ್ ಹಾಗೂ ಪುರಂದರ ಕೋಟ್ಯಾನ್, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಸಿ ಕೋಟ್ಯಾನ್, ಜತೆ ಕಾರ್ಯದರ್ಶಿಯಾಗಿ ಭರತ್ ಕುಮಾರ್ ಪುಂಜಾಲಕಟ್ಟೆ, ಕೋಶಾಧಿಕಾರಿಯಾಗಿ ಪ್ರಸಾದ್ ಪೂಜಾರಿ, ಜತೆ ಕೋಶಾಧಿಕಾರಿಯಾಗಿ ಕಾರ್ತಿಕ್ ದೇವಾಡಿಗ, ಸಲಹೆಗಾರ ಸಮಿತಿ ಕಾರ್ಯಾಧ್ಯಕ್ಷರಾಗಿ ಉದ್ಯಮಿ ಸುಬ್ಬಯ್ಯ ಶೆಟ್ಟಿ ಹಾಗೂ ಸಲಹೆಗಾರಾಗಿ ಉದ್ಯಮಿ ಸುಕುಮಾರ್ ಶೆಟ್ಟಿ, ರಾಜೀವ ಭಂಡಾರಿ, ಉದ್ಯಮಿ ಆನಂದ್ ಶೆಟ್ಟಿ ಎಕ್ಕಾರು, ರವೀಂದ್ರ ವೈ ಶೆಟ್ಟಿ, ಯು ಎಲ್ ಸುವರ್ಣ, ವಸಂತ್ ಎನ್ ಸುವರ್ಣ, ಭಜನೆಯ ಪ್ರಧಾನ ಭುವಾಜಿಯಾಗಿ ಸಂಸ್ಥೆಯ ಸ್ಥಾಪಕ ಸದಸ್ಯ ಶೇಖರ್ ಕೋಟ್ಯಾನ್ ಹಾಗೂ ಸಹಭುವಜೀಯಾಗಿ ಪುರಂದರ ಕೋಟ್ಯಾನ್, ಶರತ್ ಮೆಂಡನ್, ಗಂಗಾಧರ್ ಕಾಂಚನ್, ಅಶೋಕ್ ಮೆಂಡನ್, ಜಗದೀಶ್ ನಿಟ್ಟೆ, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಹಿರಿಯ ಸದಸ್ಯ ಆನಂದ ಎಸ್ ಬಂಗೇರ, ಮಾಧವ ಪೂಜಾರಿ, ಭಾಸ್ಕರ್ ಸಾಲ್ಯಾನ್, ಸುಧಾಕರ್ ಮೆಂಡನ್, ಲಲಿತಚಂದ್ರ ಸುವರ್ಣ, ಪ್ರಕಾಶ್ ಭಂಡಾರಿ, ರಜತ್ ದೇವಾಡಿಗ, ಸುಜಾತ ಪೂಜಾರಿ, ಆಶಾ ಕೋಟ್ಯಾನ್, ಹಾಗೂ ಪ್ರಧಾನ ಅರ್ಚಕರಾಗಿ ಪ್ರಕಾಶ್ ಭಟ್ ಕಾನಂಗಿ, ವಿಶೇಷ ಅಮಾತ್ರಿತರಾಗಿ ಮಮತಾ ಸುವರ್ಣ, ಪುಷ್ಪಲತಾ ದೇವಾಡಿಗ, ಸುಜಾತ ಶೆಟ್ಟಿ, ಶೈಲಜಾ ಶೆಟ್ಟಿ, ಯುವ ವಿಭಾಗದ ಪ್ರತಿನಿಧಿಯಾಗಿ ವಿಹಾನ್ ಸುವರ್ಣ ಹಾಗೂ ಅಭಿಷೇಕ್ ಭಾರತ್ ಕುಮಾರ್, ಪೂಜಾ ಸಮಿತಿಯ ಕಾರ್ಯಾಧ್ಯಕ್ಷರಾಗಿ ಮಾಧವ ಪೂಜಾರಿ, ಕಾರ್ಯದರ್ಶಿಯಾಗಿ ಗಂಗಾಧರ್ ಕಾಂಚನ್ ರವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಮಂದಿರದ ಕಾರ್ಯಕಲ್ಪದ ಬಗ್ಗೆ ಸದಸ್ಯರು ತಮ್ಮ ತಮ್ಮ ವಯಕ್ತಿಕ ಸಲಹೆ ಸೂಚನೆಯನ್ನು ನೀಡಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮಂದಿರದ ಅಭಿವೃದ್ಧಿಯ ಬಗ್ಗೆ ಮಾತನಾಡಿದರು ನಂತರ ಜೊತೆ ಕಾರ್ಯದರ್ಶಿಯಾದ ವಸಂತ ಸುವರ್ಣನವರು ಸರ್ವರಿಗೂ ಧನ್ಯವಾದ ನೀಡಿದರು.




