
ಮಂಡಳಿಯ ಜನಪರ ಕಾರ್ಯಗಳು ಶ್ಲಾಘನೀಯ – ಆನಂದ ಶೆಟ್ಟಿ ಎಕ್ಕಾರು
ಚಿತ್ರ ವರದಿ : ಧನಂಜಯ ಪೂಜಾರಿ, ಇನ್ನಂಜೆ ಜಯರಾಮ್
ಶ್ರೀ ಸಾಯಿನಾಥ ಮಿತ್ರ ಮಂಡಳಿ ಡೊಂಬಿವಲಿ ಇದರ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯು ಆಗಸ್ಟ್15 ರ ಶುಕ್ರವಾರ ಡೊಂಬಿವಲಿ ರೈಲ್ವೇ ನಿಲ್ದಾಣದ ಬದಿಯ ರೆತಿ ಭವನ ಸಭಾಗ್ರಹದಲ್ಲಿ ಮಂಡಳಿಯ ಅಧ್ಯಕ್ಷ ಮೋಹನ್ ಸಾಲ್ಯಾನ್ ರವರ ನೇತೃತ್ವದಲ್ಲಿ ಶ್ರದ್ಧೆ, ಭಕ್ತಿಯಿಂದ ನಡೆಯಿತು.

ಮೊದಲಿಗೆ ಮಂಡಳಿಯ ಪದಾಧಿಕಾರಿಗಳು ಮತ್ತು ಸದಸ್ಯರು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮತ್ತು ಸಾಯಿಬಾಬಾರ ಬಾವ ಚಿತ್ರಕ್ಕೆ ಪ್ರಾರ್ಥನೆ ಸಲ್ಲಿಸಿದರು.

ನಂತರ ಅತಿಥಿ ಗಣ್ಯರು ದೀಪ ಪ್ರಜ್ವಲಿಸಿ ಸತ್ಯನಾರಾಯಣ ಮಹಾಪೂಜೆಗೆ ಚಾಲನೆ ನೀಡಿದರು.

ದೇವಾಡಿಗ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಧ್ಯಕ್ಷರಾದ ಹೇಮಾನಂದ್ ದೇವಾಡಿಗ,
ಹೋಟೆಲ್ ಉದ್ಯಮಿ ರತ್ನಾಕರ್ ಹೆಗಡೆ, ಸಮಾಜ ಸೇವಕರಾದ ಪ್ರವೀಣ್ ಆಳ್ವ, ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ ಡೊಂಬಿವಲಿ ಸಮಿತಿಯ ಕಾರ್ಯಾಧ್ಯಕ್ಷ ರಾಜು ಮೊಗವೀರ, ಸಮಾಜ ಸೇವಕಿ ಗೀತಾ ಮೆಂಡನ್, ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಜೊತೆ ಕಾರ್ಯದರ್ಶಿ ಶಿಲ್ಪ ಸಂತೋಷ್ ಶೆಟ್ಟಿ , ಸಮಾಜ ಸೇವಕಿ ಕುಶ ರವಿ ಸನಿಲ್, ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ, ಪಶ್ಚಿಮ ವಿಭಾಗ ಸಾರ್ವಜನಿಕ ನವರೋತ್ರೋತ್ಸವ ಮಂಡಳಿಯ ಅಧ್ಯಕ್ಷರಾದ ಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು .
ಮಂಡಳಿಯ ಪ್ರವೀಣ್ ಆಳ್ವಾ, ದೀಪ್ತಿ ಆಳ್ವಾ ದಂಪತಿಗಳ ಸಂಕಲ್ಪದಲ್ಲಿ ಪುರೋಹಿತ ಪ್ರಕಾಶ್ ಭಟ್ ಕಾನಂಗಿ ಶ್ರೀ ಸತ್ಯನಾರಾಯಣ ಮಹಾಪೂಜೆ ನೆರವೇರಿಸಿದರು.


ತದ ನಂತರ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಸಮಾಜ ಸೇವಕರುಗಳಾದ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಪ್ರಭಾಕರ್ ಆರ್ ಶೆಟ್ಟಿ, ಉದ್ಯಮಿ, ಹೋಟೆಲ್ ವರ್ಷದ ಮಾಲಕರಾದ ರವಿ ಪೂಜಾರಿ, ಕುಲಾಲ ಸಂಘ ಮುಂಬೈಯ ಗೌರವಾಧ್ಯಕ್ಷರಾದ ದೇವದಾಸ್ ಕುಲಾಲ್, ಪಶ್ಚಿಮ ವಿಭಾಗ ನವರತ್ರೋತ್ಸವ ಮಂಡಳಿಯ ಬ್ರಹ್ಮಾನಂದ ಶೆಟ್ಟಿಗಾರ್ ಅವರನ್ನು ಸನ್ಮಾನಿಸಲಾಯಿತು.


ಸನ್ಮಾನಿತರು ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಅತಿಥಿಗಳಾದ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಕಲ್ವಾ ಸ್ಥಳೀಯ ಕಚೇರಿಯ ಕಾರ್ಯಾಧ್ಯಕ್ಷರಾದ
ಹರೀಶ್ ಸಾಲ್ಯಾನ್ ಬಜಗೋಳಿ ಮಾತನಾಡುತ್ತಾ ” ಸನ್ಮಿತ್ರರು ಸೇರಿ ಪ್ರಾರಂಭಿಸಿದ ಸಾಯಿನಾಥ ಮಿತ್ರ ಮಂಡಳಿ, ಸಾಯಿಬಾಬಾರ ತತ್ವದಂತೆ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಇದೇ ರೀತಿ ಉತ್ತಮ ಕೆಲಸ ಮಾಡುತ್ತಾ ಮಂಡಳಿ ರಜತ ಮಹೋತ್ಸವ, ಸುವರ್ಣ ಮಹೋತ್ಸವ, ಶತಮಾನೋತ್ಸವವನ್ನು ಆಚರಿಸುವಂತಾಗಲಿ ಎಂದರು.

ಇನ್ನೋರ್ವ ಅತಿಥಿ,ಉದ್ಯಮಿ ಚಂದ್ರಕ್ರಷ್ಣ ಶೆಟ್ಟಿ ಬೆರ್ಮೋಟ್ಟು ತನ್ನ ಅನಿಸಿಕೆ ತಿಳಿಸುತ್ತಾ “ಮಂಡಳಿಯ ಎಲ್ಲ ಸದಸ್ಯರಿಗೂ ಅಭಿನಂದನೆಗಳು, ಈ ಮಹಾರಾಷ್ಟ್ರದ ಮಣ್ಣಿನಲ್ಲಿ ಮಂಗಳೂರು, ಉಡುಪಿಯ ತುಳು, ಕನ್ನಡಿಗರು ಮಾಡುವಷ್ಟು ಸೇವಾ ಕಾರ್ಯಗಳನ್ನು ಬೇರೆ ಯಾರು ಮಾಡಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಕೇವಲ ಸತ್ಯನಾರಾಯಣ ಪೂಜೆ ಮಾತ್ರವಲ್ಲ ನೇಮ, ಬಲಿ, ಉತ್ಸವ ತುಳು ನಾಡಿನಂತೆ ಇಲ್ಲಿಯೂ ನಡೆಯುತ್ತಿದೆ. ಧರ್ಮ ಕಾರ್ಯವೇ ಆಗಲಿ, ದೇವತಾ ಕಾರ್ಯವೆ ಆಗಲಿ ಮಹಾರಾಷ್ಟ್ರದಲ್ಲಿ ನಡೆಯುವಷ್ಟು ಇನ್ನೆಲ್ಲೂ ನಡೆಯಲಿಕ್ಕಿಲ್ಲ. ಎಲ್ಲಾ ಕಡೆಗಳಲ್ಲಿ ಹವಮಾನ ವೈಪರಿತ್ಯವಾಗಿ ನಡೆಯುತ್ತಿದ್ದರೂ, ಮಹಾರಾಷ್ಟ್ರದಲ್ಲಿ ಮಾತ್ರ ಕಾಲ ಕಾಲಕ್ಕೆ ಮಳೆಯಾಗುತ್ತಿದೆ. ಏಕೆಂದರೆ ಇಲ್ಲಿ ದೇವರ ಕೆಲಸ ಹೆಚ್ಚು ನಡೆಯುತ್ತಿದೆ. ಧರ್ಮವನ್ನು ರಕ್ಷಿಸುವ ಕಾರ್ಯಕ್ಕಿಂತ, ಧರ್ಮವನ್ನು ಪಾಲನೆ ಮಾಡುವ ಕೆಲಸ ನಡೆಯಬೇಕಾಗಿದೆ ಎಂದು ನುಡಿದರು.

ಧರ್ಮದರ್ಶಿ ಅಶೋಕ್ ದಾಸು ಶೆಟ್ಟಿ ತನ್ನ ಅಭಿಪ್ರಾಯ ತಿಳಿಸುತ್ತಾ ಯಾರು ಧರ್ಮವನ್ನು ರಕ್ಷಿಸುವರೋ, ಅವರನ್ನು ಧರ್ಮವೇ ರಕ್ಷಿಸುತ್ತದೆ. ಅವರಿಗೆ ದೇವರ ಅನುಗ್ರಹ ಖಂಡಿತ ಇರುತ್ತದೆ. ಧರ್ಮ ನಿಷ್ಠರನ್ನು ದೇವರು ಎಂದಿಗೂ ಕೈಬಿಡುವುದಿಲ್ಲ. ನಾವು ಜೀವನದಲ್ಲಿ ಯಾರಿಗೂ ತೊಂದರೆ ಆಗದಂತೆ ಬದುಕೋಣ ಅದುವೇ ನಮ್ಮ ಧರ್ಮ. ಮಂಡಳಿಯ ಎಲ್ಲರೂ ಒಂದೇ ಪ್ರಾಯದವರು, ಒಂದೇ ಮನಸ್ಸಿನವರು, ಈ ಸಂಸ್ಥೆಗೆ ಖಂಡಿತ ಭವಿಷ್ಯವಿದೆ ಎಂದರು.
ಕಮಲ ಕಲಾ ವೇದಿಕೆಯ ರೂವಾರಿ ನವೀನ್ ಪಡುಇನ್ನ ಮಾತನಾಡುತ್ತ ಮೋಹನ್ ಸಾಲ್ಯಾನ್, ಚಿನ್ಮಯ್ ಸಾಲ್ಯಾನ್ ಅವರ ಸಂಘಟನಾ ಚತುರರು . ಅವರ ಕಾರ್ಯವನ್ನು ಕಂಡು ಅವರ ಅಭಿಮಾನಿಗಳಾಗಿದ್ದಾರೆ, ಅರ್ಹರನ್ನು ಸನ್ಮಾನ ಮಾಡಿದ್ದು ಸಂತಸವಾಗಿದೆ ಎಂದರು.
ಅತಿಥಿ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಆನಂದ ಶೆಟ್ಟಿ ಎಕ್ಕಾರು ತನ್ನ ಅನಿಸಿಕೆ ತಿಳಿಸುತ್ತಾ ಸಾಯಿನಾಥ ಮಿತ್ರ ಮಂಡಳಿ ಮಾಡುವ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಗೆ, ಅವರ ವಾರ್ಷಿಕೋತ್ಸವಕ್ಕೆ ನನ್ನನ್ನು ಪ್ರತಿವರ್ಷ ಪ್ರೀತಿಯಿಂದ ಕರೆಯುತ್ತಾರೆ. ಈ ಸಂಸ್ಥೆ ಬಹಳ ಉತ್ತಮ ಕೆಲಸ ಮಾಡುತ್ತಿದೆ, ಇಲ್ಲಿ ಸೇರಿರುವ ಇಷ್ಟೊಂದು ಸಂಖ್ಯೆಯ ಜನರನ್ನು ಕಂಡಾಗ ಮಂಡಳಿಯ ಬಗ್ಗೆ ಅವರಿಗೆ ಎಷ್ಟು ಪ್ರೀತಿ ಇದೆ ಎಂದು ತಿಳಿಯುತ್ತದೆ. ಸಾಯಿನಾಥ ಮಿತ್ರ ಮಂಡಳಿ ಎಲ್ಲ ಕ್ಷೇತ್ರಗಳಲ್ಲೂ ಜನಪರ ಕಾರ್ಯಗಳನ್ನು ಮಾಡುತ್ತಿದ್ದು ಮುಂದಕ್ಕೂ ಈ ಕಾರ್ಯ ನಡೆಯುತ್ತಿರಲಿ ಎಂದರು.

ಆಶೀರ್ವಚನ ನೀಡಿದ ಪ್ರಕಾಶ್ ಭಟ್ ಕಾನಂಗಿ ಅವರು
ಒಂದು ಕಡೆ ದೇವರ ಜನ್ಮದಿನ ಇನ್ನೊಂದು ಕಡೆ ಸ್ವಾತಂತ್ರ್ಯೋತ್ಸವದ ಪರ್ವ ದಿನ. ಸಾಯಿನಾಥ ಮಂಡಳಿಯ ಒಂದು ಪುಣ್ಯ ಕರ್ಮಭಾಗ ಎಂದರೆ ಶ್ರೀ ಸತ್ಯನಾರಾಯಣ ದೇವರ ಪೂಜೆ. ದೇವರಿಗೆ ನೀವು ಹೂ ನೀಡಿ, ಹಣ್ಣು ಹಂಪಲು ನೀಡಿ ದೇವರು ಯಾವುದನ್ನು ಸ್ವೀಕರಿಸುವುದಿಲ್ಲ. ಆದರೆ ಭಕ್ತರ ಹೃದಯದ ಪ್ರೀತಿಯನ್ನು ದೇವರು ಸ್ವೀಕಾರ ಮಾಡುತ್ತಾರೆ. ಮೋಹನ್ ಸಾಲ್ಯಾನ್ ಅನಾರೋಗ್ಯ ಪೀಡಿತರಾದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ, ಅವರ ಮುಂದಾಳತ್ವದಲ್ಲಿ ಮಂಡಳಿಯು ಶ್ರೀ ಸತ್ಯನಾರಾಯಣ ಪೂಜೆಯ ಮೂಲಕ ಇತರರಿಗೆ ಸೇವೆ ಮಾಡುವ ಅವಕಾಶವನ್ನು ಕೊಡುತ್ತಾರೆ. ನಾವು ಅನವಶ್ಯಕವಾಗಿ ದುಡ್ಡು ದುಂಡು ವೆಚ್ಚ ಮಾಡೋದಕ್ಕಿಂತ ಇಂತಹ ಸಾಮೂಹಿಕ ಪೂಜೆಯಲ್ಲಿ ಭಾಗವಹಿಸುವುದು ಒಂದು ಪುಣ್ಯದ ಕಾರ್ಯ. ಇಂತಹ ಪುಣ್ಯ ಕಾರ್ಯವನ್ನು ಸಾಯಿನಾಥ ಮಿತ್ರ ಮಂಡಳಿ 19 ವರ್ಷಗಳಿಂದ ಮಾಡುತ್ತ ಬಂದಿರುವುದು ನಿಜಕ್ಕೂ ಅಭಿನಂದನನೀಯಾ ಎಂದು ನುಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ್ದ ಮೋಹನ್ ಸಾಲಿಯನ್ “ನನ್ನ ಮೇಲೆ ಹಾಗೂ ಸಾಯಿನಾಥ ಮಿತ್ರ ಮಂಡಳಿಯ ಮೇಲೆ ಪ್ರೀತಿ ಇಟ್ಟು ಬಂದ ಎಲ್ಲ ಬಂಧುಗಳಿಗೆ ನನ್ನ ಕೃತಜ್ಞತೆಗಳು, ನನ್ನ ಅನಾರೋಗ್ಯದಿಂದಾಗಿ ನನ್ನ ಪುತ್ರ ಚಿನ್ಮಯ್ ಸಾಲಿಯನ್, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಉತ್ತಮವಾಗಿ ಮುನ್ನಡೆಸಿದ್ದಾರೆ. ಜೀವನದಲ್ಲಿ ಹಣ ಮುಖ್ಯವಲ್ಲ, ಅವರು ಮಾಡಿದ ಕೆಲಸವನ್ನು ಜನರು ನೆನಪಿಸುತ್ತಾರೆ. ನನ್ನ ಬಳಿ ಜನ ಬಲ ಬಹಳಷ್ಟು ಇದೆ, ಕೇವಲ ಫೋನಿನ ಮುಖೇನ ಕೆಲಸ ಮಾಡುವ ವಿಶ್ವಾಸ ನನಗಿದೆ. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಹಾಗೂ ಆಗಮಿಸಿದ ಎಲ್ಲರಿಗೂ ಶ್ರೀ ಸಾಯಿಬಾಬ ದೇವರು ಮತ್ತು ಶ್ರೀ ದುರ್ಗಾ ಪರಮೇಶ್ವರಿ ಅನುಗ್ರಹ ಸದಾ ಇರಲಿ.
ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷರಾದ ರಾಜೀವ ಭಂಡಾರಿ, ಎಂ ಎಸ್ ಸುಮಂಗಲ ಮಿಷನರಿಯ ನಾರಾಯಣ ರಾಮ ಪೂಜಾರಿ, ಬಿಲ್ಲವರ ಅಸೋಸಿಯೇಷನ್ ಮುಂಬಯಿಯ ಗೌರವ ಪ್ರಧಾನ ಕೋಶಾಧಿಕಾರಿ ರವಿ ಸನಿಲ್, ಉದ್ಯಮಿಗಳಾದ ಶಿವರಾಮ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಗೌರವಿಸಲಾಯಿತು.
ಪ್ರಾರಂಭದಲ್ಲಿ ವಾಸು ಮೊಗವೀರ ಸ್ವಾಗತ ಕೋರಿದರು.
ಯುವ ಕಲಾವಿದ, ನಿರೂಪಕ ಚಿನ್ಮಯ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ನಂತರ ಪಲ್ಲ ಪೂಜೆ ಸಲ್ಲಿಸಿ, ಶ್ರೀ ಸತ್ಯನಾರಾಯಣ ದೇವರಿಗೆ ಮಹಾ ಮಂಗಳಾರತಿ ಬೆಳಗಲಾಯಿತು.

ಪರಿಸರದ ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಶ್ರೀ ಸತ್ಯನಾರಾಯಣ ದೇವರ ಮಹಾಪೂಜೆ ಯಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದ ಸ್ವೀಕರಿಸಿ, ಅನ್ನ ಪ್ರಸಾದ ದಲ್ಲಿ ಪಾಲ್ಗೊಂಡರು..
ಬಳಿಕ ಪಶ್ಚಿಮ ವಿಭಾಗ ನವರತ್ರೋತ್ಸವ ಮಂಡಳಿಯ ಸದಸ್ಯರಿಂದ ಭಜನೆ ನಡೆಯಿತು.
ಶ್ರೀ ಸಾಯಿನಾಥ ಮಿತ್ರಮಂಡಳಿಯು ಕಳೆದ ಹಲವಾರು ವರ್ಷಗಳಿಂದ ತನ್ನ ಸಮಾಜಪರ ಕಾರ್ಯಗಳಿಂದ ಡೊಂಬಿವಲಿ ಪರಿಸರದಲ್ಲಿ ಜನಾನುರಾಗಿಯಾಗಿದೆ. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳ ಜೊತೆಗೆ ಪ್ರತಿಭಾನ್ವಿತರನ್ನು ಗುರುತಿಸಿ ಗೌರವಿಸುವ ಮಹತ್ವದ ಕಾರ್ಯವನ್ನು ಈ ಮಂಡಳಿಯು ನಿರಂತರವಾಗಿ ಮಾಡುತ್ತಿದೆ. ಪ್ರಸ್ತುತ ಈ ಮಂಡಳಿಯ ಶ್ರೀ ಸಾಯಿನಾಥ ಮಿತ್ರ ಮಂಡಲದ ಗೌರವಾಧ್ಯಕ್ಷ
ಗಣೇಶ ಮೊಗವೀರ, ಅಧ್ಯಕ್ಷ ಮೋಹನ ಜಿ. ಸಾಲಿಯಾನ್, ಉಪಾಧ್ಯಕ್ಷರುಗಳಾದ ಮೋಹನ್ ಪೂಜಾರಿ, ಆನಂದ ಶೆಟ್ಟಿ, ಗೌ.ಪ್ರ.ಕಾರ್ಯದರ್ಶಿ ಸುರೇಶ ಮೊಗವೀರ, ಕೋಶಾಧಿಕಾರಿ ವಾಸು ಮೊಗವೀರ, ಜತೆ ಕಾರ್ಯದರ್ಶಿ ದಿನಕರ್ ಸಾಲ್ಯಾನ್,ಪೂಜಾ ಸಮಿತಿ ಅಧ್ಯಕ್ಷ
ರಘುರಾಮ ಎನ್. ಶೆಟ್ಟಿ, ಉಪಾಧ್ಯಕ್ಷ ಸೋಮನಾಥ ಡಿ. ಪೂಜಾರಿ, ಸದಸ್ಯರುಗಳಾದ ವಸಂತ್ ಶೆಟ್ಟಿ, ಅರುಣ್ ಶೆಟ್ಟಿ, ಸುರೇಶ್ ಎನ್.ಬಿ, ಜಗದೀಶ್ ಎಸ್. ಸಾಲ್ಯಾನ್, ಯೋಗೇಶ್ ಶೆಟ್ಟಿಗಾರ್, ಪುರುಷೋತ್ತಮ್ ಪೂಜಾರಿ, ರಮೇಶ್ ಶೆಟ್ಟಿ, ಯಾದವ್ ಕರ್ಕೇರ, ಚಿನ್ನಯ್ ಸಾಲಿಯಾನ್, ಅಭಿಷೇಕ್ ಮೊಗವೀರ, ಕೃಷ್ಣ ಪೂಜಾರಿ, ಚಂದ್ರಹಾಸ್ ಕೋಟ್ಯಾನ್, ರಾಜೇಶ್ ಕೋಟ್ಯಾನ್ ಮತ್ತು ರಾಜು ಮೊಗವೀರ, ಪುಷ್ಪರಾಜ್ ಶೆಟ್ಟಿ, ಬಾಲಕೃಷ್ಣ ಎಸ್. ಶೆಟ್ಟಿ, ಭಾಸ್ಕರ ಶೆಟ್ಟಿ ಮುಂತಾದವರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದುಕೊಂಡು ಮಂಡಳಿಯ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.




