September 6, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್ : ಕುರ್ಲಾ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ






ಸಹಕಾರಿ ಸಂಘದ ಜನಪ್ರಿಯ ಬ್ಯಾಂಕುಗಳಲ್ಲಿ ಒಂದಾದ ಭಾರತ್ ಬ್ಯಾಂಕ್‌ನ ಎಲ್.ಬಿ.ಎಸ್. ಮಾರ್ಗ, ಕಾಮಾನಿ, ಕುರ್ಲಾ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಶಾಖೆಯ 12ನೇ ವಾರ್ಷಿಕೋತ್ಸವವನ್ನು ಭವ್ಯವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಬ್ಯಾಂಕ್‌ನ ಗ್ರಾಹಕರು, ಉದ್ಯಮಿಗಳು ಹಾಗೂ ಗಣ್ಯರಾದ ಅಡ್ವೊಕೆಟ್ ಎಸ್. ಕೆ. ದುಬೆಜ್, ವಿಜಯಕುಮಾರ್ ಪಾಲ್, ನವೀನ್ ಪೂಜಾರಿ, ಶಿಂಮ್ಶನ್ ಗಾಲ್ಸುರ್ಕರ್, ಸಂತೋಷ ಸಲೂಂಕೆ, ರತ್ನಾಕರ್ ಶೆಟ್ಟಿ ಮತ್ತು ಸಾದಿಕ್ ಶೇಖ್‌ರವರು ಉಪಸ್ಥಿತರಿದ್ದರು.

ಜ್ಞಾನ ಮತ್ತು ಸಮೃದ್ಧಿಯ ಪ್ರತೀಕವಾದ ದೀಪವನ್ನು ಬೆಳಗಿಸಿ, ನಂತರ ಕೇಕ್‌ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬ್ಯಾಂಕ್‌ ಪ್ರಬಂಧಕರು ಹಾಗೂ ಸಿಬ್ಬಂದಿಗಳ ಸೇವೆಯನ್ನು ಶ್ಲಾಘಿಸಿ, ಎಲ್ಲರಿಗೂ ಶುಭಾಶಯ ಕೋರಲಾಯಿತು.

ಶಾಖಾ ಪ್ರಬಂಧಕ ಮೋಹನದಾಸ್ ಪೂಜಾರಿ ಸ್ವಾಗತಿಸಿದರು. ಉಪಪ್ರಬಂಧಕಿ ಆಶಾ ಆರ್. ಕೋಟ್ಯಾನ್ ಹಾಗೂ ಇತರ ಸಿಬ್ಬಂದಿ ವರ್ಗದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.




Related posts

ಮೀರಾ- ಬಾಯಂದರ್ ನ  ರೈ  ಸುಮತಿ  ಎಜ್ಯುಕೇಶನ್ ಟ್ರಸ್ಟ್(ರಿ)   ನ ಸೈಂಟ್  ಆಗ್ನೆಸ್ ಇಂಗ್ಲಿಷ್ ಹೈ ಸ್ಕೂಲ್ ಗೆ  100% ಫಲಿತಾಂಶ.

Mumbai News Desk

ಯಕ್ಷಪ್ರಿಯ ಬಳಗ ಮೀರಾಭಾಯಂದರ್’ ಇದರ ‘ಯಕ್ಷ ನವಮಿ’ ಕಾರ್ಯಕ್ರಮ

Mumbai News Desk

ಮೊಗವೀರ ಮಹಾಜನ ಸೇವಾ ಸಂಘ, ಬಗ್ವಾಡಿ ಹೋಬಳಿ, ಡೊಂಬಿವಲಿ ಸ್ಥಳೀಯ ಸಮಿತಿಯ ಕುಂದರಂಜನಿ – 2024

Mumbai News Desk

ಶ್ರೀ ಶಬರಿ ಅಯ್ಯಪ್ಪ ಭಜನಾ ಮಂಡಳಿ, ಡೊಂಬಿವಿಲಿ, ಇದರ ದಶಮಾನೋತ್ಸವ ಕಾರ್ಯಕ್ರಮ.

Mumbai News Desk

2023-24ರ ಎಸ್ ಎಸ್ ಸಿ ಪರೀಕ್ಷೆಯಲ್ಲಿ ಸಮೀಕ್ಷಾ ಪ್ರಶಾಂತ್ ಬಾಗಲ್ ಗೆ ಶೇ 86.4 ಅಂಕ.

Mumbai News Desk

ಬಂಟ್ಸ್ ಮೆಡಿಕಲ್ ಪ್ರಾಕ್ಟೀಶನರ್ಸ್ ಎಸೋಸಿಯೇಶನ್ ಮುಂಬಯಿ 2ನೇ ವೈಜ್ಞಾನಿಕ ಸಭೆ, ಉಪನ್ಯಾಸ.

Mumbai News Desk