30.9 C
Mumbai
June 8, 2026
Mumbai News Kannada
ಮುಂಬಯಿ

ಭಾರತ್ ಬ್ಯಾಂಕ್‌ನ ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ 47ನೇ ಸಂಸ್ಥಾಪನಾ ದಿನಾಚರಣೆ






​ಮುಂಬಯಿ: ಭಾರತ್ ಬ್ಯಾಂಕ್ ತನ್ನ 47ನೇ ಸಂಸ್ಥಾಪನಾ ದಿನವನ್ನು ಗೋರೆಗಾಂವ್ ಪಶ್ಚಿಮ ಶಾಖೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಿತು. ಈ ಸಂದರ್ಭದಲ್ಲಿ ಬ್ಯಾಂಕಿನ ಹಿರಿಯ ಗ್ರಾಹಕರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಭಾಗವಹಿಸಿದ್ದರು.
​ಕಾರ್ಯಕ್ರಮದ ಆರಂಭದಲ್ಲಿ, ಕೇಕ್ ಕತ್ತರಿಸುವ ಮೂಲಕ ಸಂಸ್ಥಾಪನಾ ದಿನಾಚರಣೆಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಯಾಂಕಿನ ಹಿರಿಯ ಗ್ರಾಹಕ ಗುರುಬಿಂದರ್ ರೆಶಿ ಸಿಂಗ್, ಕಳೆದ 30 ವರ್ಷಗಳಿಂದ ಭಾರತ್ ಬ್ಯಾಂಕ್‌ನ ಸಹಕಾರದಿಂದ ತನ್ನ ಉದ್ಯಮವು ಬೆಳೆದಿದೆ ಎಂದು ನೆನಪಿಸಿಕೊಂಡರು. “ಗೋರೆಗಾಂವ್ ಪಶ್ಚಿಮದ ಗುರುದ್ವಾರದ ಬಹುತೇಕ ಜನರ ಮುಖ್ಯ ಬ್ಯಾಂಕ್ ಭಾರತ್ ಬ್ಯಾಂಕ್ ಆಗಿದೆ. ಜಯ ಸಿ. ಸುವರ್ಣ ಅವರ ಆತ್ಮೀಯ ವರ್ತನೆ ಮತ್ತು ಸಮಯಕ್ಕೆ ಸರಿಯಾದ ಸ್ಪಂದನೆಯಿಂದಾಗಿ ನಮ್ಮ ಪರಿವಾರಕ್ಕೆ ಭಾರತ್ ಬ್ಯಾಂಕ್ ಎಂದಿಗೂ ಮರೆಯಲಾಗದ ಸಂಸ್ಥೆಯಾಗಿದೆ. ಇಲ್ಲಿನ ಸಿಬ್ಬಂದಿ ವರ್ಗದವರ ಸ್ನೇಹಪರತೆಯು ಎಲ್ಲರನ್ನೂ ಬ್ಯಾಂಕಿನತ್ತ ಆಕರ್ಷಿಸುತ್ತದೆ,” ಎಂದು ಅವರು ಹೇಳಿದರು.
​ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯ ನಿತ್ಯಾನಂದ ಕೋಟ್ಯಾನ್ ಅವರು ಬ್ಯಾಂಕಿನ ಕಾರ್ಯವೈಖರಿ ಮತ್ತು ಪ್ರಗತಿಯ ಕುರಿತು ವಿವರಿಸಿದರು. ಸಭೆಯಲ್ಲಿ ಹಾಜರಿದ್ದ ಎಲ್ಲ ಗ್ರಾಹಕರಿಗೆ ಧನ್ಯವಾದ ಅರ್ಪಿಸಿದ ಅವರು, ಬ್ಯಾಂಕ್‌ನೊಂದಿಗೆ ಸದಾ ವ್ಯವಹರಿಸುವಂತೆ ವಿನಂತಿಸಿದರು.
​ಶಾಖಾ ಪ್ರಮುಖರಾದ ಪ್ರಿಯಾ ಡಿ. ಪೂಜಾರಿ ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು. ಉಪ ಶಾಖಾ ಪ್ರಮುಖರಾದ ಸುಮಿತ್ರ ಸಫಲಿಗ ಅವರು ವಂದನಾರ್ಪಣೆ ಮಾಡಿದರು.
​ಈ ಸಂದರ್ಭದಲ್ಲಿ ಹರ್ಷಿತಾ ಸುವರ್ಣ, ಶ್ರುತಿ ಕೋಟ್ಯಾನ್, ಪ್ರತಿಕ್ಷಾ ಸಿಂಗ್, ಸೂರಜ್ ಸಾಲ್ಯಾನ್, ದಿಶಾ ಛಗ್, ದರ್ಶನ್ ಜೋಶಿ, ಮೋಹನ್ ಅಮಿನ್, ಲಾಲ್ ಜಿ ರಾವರಿಯಾ, ಜಗನ್ನಾಥ ಕೋಟ್ಯಾನ್, ವಾಸುದೇವ ಭಟ್, ರಾಮೇಶ್ ಸುವರ್ಣ, ಕೇಶವ ಕೋಟ್ಯಾನ್, ವಿವೇಕ್ ಖಾನ್ವಿಲ್ಕರ್, ರಾಜೇಶ್ ಶರ್ಮಾ, ಶ್ರೀಮತಿ ಮಣೀಂದರ್ ಕೌರ್ ಸಹಾನಿ, ಶ್ರೀಮತಿ ನೀಲಂ ಭಾನುಶಾಲಿ, ಜಸ್ಮೀತ್ ಸಿಂಗ್ ಸಹಾನಿ, ಅನಿಲ್ ಕುಮಾರ್ ಬರೋಟ್, ಗಂಗಾರಾಂ ಚಿತ್ಯಲ, ನಾರಾಯಣ ತಿಂಗಳಾಯ ಸೇರಿದಂತೆ ಹಲವು ಗಣ್ಯರು ಹಾಗೂ ಗ್ರಾಹಕರು ಉಪಸ್ಥಿತರಿದ್ದರು.



Related posts

ತುಳು ಸಂಘ ಬೊರಿವಲಿ ; ಕನ್ನಡ ಶಾಲಾ ಮಕ್ಕಳಿಗೆ ನೋಟು ಪುಸ್ತಕ ವಿತರಣೆ

Mumbai News Desk

ಕರ್ನಾಟಕ ವಿಶ್ವಕರ್ಮ ಅಸೋಸಿಯೇಷನ್: 80ನೇ ವಾರ್ಷಿಕೋತ್ಸವ ಸಮಾರೋಪ ಹಾಗೂ ಸಾಧಕರಿಗೆ ಸನ್ಮಾನ

Mumbai News Desk

ಪಡುಬಿದ್ರಿ ನಡಿಪಟ್ಣ ಮೊಗವೀರ ಸಭಾ ಮುಂಬಯಿ – ವಾರ್ಷಿಕ ವಿಹಾರ ಕೂಟ

Mumbai News Desk

ಬಿಲ್ಲವರ ಅಸೋಸಿಯೇಶನ್ ಮಲಾಡ್ ಸ್ಥಳೀಯ ಕಚೇರಿ – 170ನೇ ಗುರು ಜಯಂತಿ ಆಚರಣೆ.

Mumbai News Desk

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 

Mumbai News Desk

9 ಹ್ಯಾಂಡ್ಸ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Mumbai News Desk