July 22, 2026
Mumbai News Kannada
ಮುಂಬಯಿ

ಮುಂಬೈನಲ್ಲಿ ಈದ್ -ಎ -ಮಿಲಾದ್ ರಜೆಯನ್ನು ಸೆಪ್ಟಂಬರ್ 8ಕ್ಕೆ ಬದಲಾಯಿಸಿದ ಮಹಾರಾಷ್ಟ್ರ ಸರಕಾರ







ಮಹಾರಾಷ್ಟ್ರ ಸರಕಾರವು ಮುಂಬೈ ನಗರ ಮತ್ತು ಉಪನಗರ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆಯನ್ನು ಸೆಪ್ಟೆಂಬರ್ 5ರ ಬದಲಿಗೆ ಸೆಪ್ಟೆಂಬರ್ 8ರಂದು ಆಚರಿಸಲಾಗುವುದು ಎಂದು ಘೋಷಿಸಿತು. ಮುಸ್ಲಿಂ ಸಮುದಾಯವು ಸೆಪ್ಟೆಂಬರ್ 6ರಂದು ಅನಂತ ಚತುರ್ದಶಿ ಇರುವುದರಿಂದ, ಸಾರ್ವಜನಿಕ ಮೆರವಣಿಗೆಳ ನಂತರ ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ದಿನವಾಗಿರುವುದರಿಂದ ಸಾಮರಸ್ಯ ಕಾಪಾಡಿಕೊಳ್ಳಲು ಸೆಪ್ಟಂಬರ್ 8ರಂದು ಈದ್ -ಎ -ಮಿಲಾದ್ ಮೆರವಣಿಗೆಯನ್ನು ನಡೆಸಲು ನಿರ್ಧರಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಸಾಮಾನ್ಯ ಆಡಳಿತ ಇಲಾಖೆ ಸುತ್ತೊಲೆಯಲ್ಲಿ ಸೆಪ್ಟೆಂಬರ್ 5 ರಂದು ರಾಜ್ಯದ ಇತರ ಜಿಲ್ಲೆಗಳಿಗೆ ರಜೆ ಬದಲಾಗದೇ ಇರುತ್ತದೆ, ಆದರೆ ಮುಂಬೈ ನಗರ ಮತ್ತು ಉಪನಗರ ಗಳಲ್ಲಿ ಅದನ್ನು ಸೆಪ್ಟೆಂಬರ್ 8ಕ್ಕೆ ಬದಲಾಯಿಸಲಾಗಿದೆ. ಎಂದು ತಿಳಿಸಿದೆ.
ಮುಂಬೈ ನಗರ ಮತ್ತು ಉಪನಗರ ಗಳಲ್ಲಿನ ಸರ್ಕಾರಿ ಕಚೇರಿಗಳು ಸೆಪ್ಟೆಂಬರ್ 5 ರಂದು ಎಂದಿನಂತೆ ತೆರೆದಿರುತ್ತದೆ ಎಂದು ಸುತ್ತೋಲೆ ಸ್ಪಷ್ಟಪಡಿಸಿದೆ.



Related posts

ಫಲಿಮಾರು ಮಠದೀಶರಿಗೆ ವಿಶ್ವ ಬಂಟರ ಕಾರ್ಯಕ್ರಮದ ಆಮಂತ್ರಣ.

Mumbai News Desk

ಹಟ್ಟಿಯಂಗಡಿ ಮೇಳದ ಮುಂಬಯಿ ಪ್ರವಾಸ: ಗಾಣೇಕರ್ ನಾಟ್ಯಾಲಯದಲ್ಲಿ ಉದ್ಘಾಟನೆ

Mumbai News Desk

ಮುಂಬಯಿ ಕನ್ನಡ ಸಂಘದ ದತ್ತಿ ಉಪನ್ಯಾಸ ಕಾರ್ಯಕ್ರಮ

Mumbai News Desk

ಥಾಣೆಯಲ್ಲಿ ಶ್ರೀ ಕ್ಷೇತ್ರ ಒಡಿಯೂರಿನ  ಶ್ರೀ ಗುರುದೇವಾನಂದ ಸ್ವಾಮೀಜಿಯವರಿಗೆ ಗುರುವಂದನೆ –  ತನ್ನನ್ನು ತಾನು ಅರಿತುಕೊಳ್ಳುವುದೇಅಧ್ಯಾತ್ಮಿಕ :ಒಡಿಯೂರು ಶ್ರೀ 

Mumbai News Desk

ಮಕ್ಕಳು ತಮ್ಮ ಮಾತ- ಪಿತರ ಬಗ್ಗೆ ಅಭಿಮಾನವಿಟ್ಟಲ್ಲಿ ಸಮಾಜ ಮತ್ತಷ್ಟು ಸುಧಾರಣೆ ಯಾಗಬಹುದು – ಧರ್ಮದರ್ಶಿ ಅಶೋಕ್ ಶೆಟ್ಟಿ

Mumbai News Desk

ತ್ರಿಶಾ ಉದಯ ಶೆಟ್ಟಿ ಶೇಗೆ   80.00 %

Mumbai News Desk