30.9 C
Mumbai
June 8, 2026
Mumbai News Kannada
ತುಳುನಾಡು

ಮೂಲ್ಕಿ ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್(ರಿ)ಇದರ ಅಧ್ಯಕ್ಷರಾಗಿ ವಾಸು ಎಸ್. ಪೂಜಾರಿ ಕೊಲಕಾಡಿ ಆಯ್ಕೆ





ಮೂಲ್ಕಿಯು ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಪೂರ್ವಿಕರ ಕಾಲದಲ್ಲಿ ಹಲವಾರು ವಿಧಿ ನಿಯಮಗಳು ಇತ್ತು. ಅದರಂತೆ ಕಾಂತು ಸೇವೆಗಾರರ ಮನೆತನದವರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂರ್ವಿಕರ ಕಾಲದಿಂದ ಆಡಳಿತದಲ್ಲಿಯೂ ಇವರ ಸ್ಥಾನಮಾನ ಇತ್ತೆಂದು ತಿಳಿದುಬರುತ್ತದೆ. ಅದರಂತೆ ಕೆಲವು ಸೇವೆಯನ್ನು ಮಾಡುತ್ತಾ ಬಂದಿದ್ದರು. ಆ ಕಾಲದಲ್ಲಿ ಒಂಬತ್ತು ಮಾಗಣೆಯ ಅರಸು ಕಂಬಳದ ಗದ್ದೆಗೆ ಕಾಂತು ಸೇವೆಗಾರರ ಕೋಣಗಳು ಮೊದಲು ಇಳಿಯಬೇಕೆಂಬ ನಿಯಮ ಇದೆ. ಅದು ಈಗಲೂ ನಡೆದುಕೊಂಡು ಬಂದಿದೆ. ಕಾಂತು ಸೇವೆಗಾರರ ಮನೆಯು ಪೂರ್ವಿಕರ ಕಾಲದಲ್ಲಿ ಯಾವುದೋ ಒಂದು ಘಟನೆಯಿಂದ ಅಲ್ಲಿ ನಡೆಯಬೇಕಾಗಿದ್ದ ಧರ್ಮ ದೈವಗಳ ಸೇವೆಗಳು ನಿಂತುಹೋಯಿತು. ಒಂಬತ್ತು ಮಾಗಣೆಯ ಬಿಲ್ಲವರ ಪ್ರಸಿದ್ಧ ಮನೆತನವನ್ನು ಅಜೀರ್ಣ ಅವಸ್ಥೆಯಲ್ಲಿ ಬಿಡುವುದು ಸರಿಯಲ್ಲವೆಂದು ಜೀರ್ಣೋದ್ಧಾರ ಮಾಡುವ ಉದ್ದೇಶದಿಂದ ಊರಿನ ಕೆಲವು ದೈವ ಭಕ್ತರು ಮುಂದೆ ಬಂದು ಕಾಂತು ಸೇವೆಗಾರ ಧರ್ಮ ಚಾವಡಿ ಟ್ರಸ್ಟ್ ಒಂದನ್ನು ಸ್ಥಾಪಿಸಿದರು.
ಇದರ ಸದಸ್ಯರೆಲ್ಲ ಸೇರಿ ಟ್ರಸ್ಟ್ ನ ಅಧ್ಯಕ್ಷರಾಗಿ ವಾಸು ಎಸ್.ಪೂಜಾರಿಯವರನ್ನು ಆಯ್ಕೆ ಮಾಡಿದರು. ಪ್ರಧಾನ ಕಾರ್ಯದರ್ಶಿ : ಹೆಚ್. ವಾಸು ಪೂಜಾರಿ, ಚಿತ್ರಾಪು, ಮತ್ತು ಕೋಶಾಧಿಕಾರಿ : ವಿಶಾಲ್ ಕಕ್ವ-ಕೊಲಕಾಡಿ ಬರ್ಕೆ.
ಗೌರವಾಧ್ಯಕ್ಷರು : ಮಹೇಶ್ ಶಾಂತಿ, ಕಾಂತು ಸೇವೆಗಾರ ಗಡಿ ಪ್ರಧಾನರು, ಜಗನ್ನಾಥ ವಿ. ಕೋಟ್ಯಾನ್, ಸೂರ್ಯಕಾಂತ್ ಜೆ. ಸುವರ್ಣ, ಶರತ್ ಸಾಲ್ಯಾನ್, ದಾಮೋದರ ದಂಡಕೇರಿ, ರಾಜಶೇಖರ ಕೋಟ್ಯಾನ್, ಹರೀಶ್ ಅಮೀನ್ ಮುಂಬೈ, ಲೀಲಾಕ್ಷ ಕರ್ಕೇರ (ನಮ್ಮ ಕುಡ್ಲ), ಡಾ|| ಹರಿಶ್ಚಂದ್ರ ಪಿ ಸಾಲ್ಯಾನ್, ಮುಲ್ಕಿ.
ಉಪಾಧ್ಯಕ್ಷರು: ಸತ್ಯಜೀತ್ ಸುರತ್ಕಲ್, ಮೋಹನ್ ದಾಸ್ ಹೆಜಮಾಡಿ, ಗುರುರಾಜ್ ಎಸ್ ಪೂಜಾರಿ ತೋಕೂರು, ಸತೀಶ್ ಅಂಚನ್ ಬಾಳೆಹಿತ್ಲು, ಧನಂಜಯ ಕೋಟ್ಯಾನ್ ಮಟ್ಟು, ವಾಸುದೇವ ಎಂ ಸಾಲ್ಯಾನ್, ಕೊಲಕಾಡಿ (ಮುಂಬೈ), ಗಂಗಾಧರ ಕೋಟ್ಯಾನ್, ಮುಲ್ಕಿ ನಾಗೇಶ ಪ್ರಸಾದ್(ಚೆನ್ನೈ). ಜತೆ ಕಾರ್ಯದರ್ಶಿ : ಮಹೇಶ್ ಕುಮಾರ್, ಅಶೋಕ್ ಕರ್ಕೇರ, ಭಾಸ್ಕರ್ ಸಾಲ್ಯಾನ್ ಮುಲ್ಕಿ, ದಿವ್ಯಾ ಎಸ್ ಕೋಟ್ಯಾನ್. ಜತೆ ಕೋಶಾಧಿಕಾರಿ : ರಮಾನಂದ ಪಡುಬೈಲ್, ಜನಾರ್ಧನ ಪೂಜಾರಿ, ಕೆ ಎಸ್ ರಾವ್ ನಗರ.



Related posts

ಮೂಲ್ಕಿ ಅರಮನೆ ವೆಲ್ಫೇರ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ

Mumbai News Desk

ಉದ್ಯಮಿ ಮನೋಹರ ಎಸ್ ಶೆಟ್ಟಿ ದಂಪತಿಗಳಿಗೆ : ಕಾಪು ಬಂಟರ ಸಂಘದಿಂದ ಸನ್ಮಾನ

Mumbai News Desk

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಇಂದಿನಿಂದ ಮಾ. 5ರ ತನಕ ಪ್ರತಿಷ್ಠಾ ಬ್ರಹ್ಮಕಲಶೋತ್ಸವ

Mumbai News Desk

ಮುಲ್ಕಿ ಅರಸು ಪ್ರಶಸ್ತಿ 2025 ಪ್ರಧಾನ ಹಾಗೂ ಸಾಧಕರಿಗೆ ಗೌರವಾರ್ಪಣೆ ಸಮಾರಂಭ: ಪತ್ರಕರ್ತ ಹರಿಶ್ಚಂದ್ರ ಪಿ ಸಾಲ್ಯಾನ್ ರವರಿಗೆ ಸಾಹಿತ್ಯ ಕ್ಷೇತ್ರ ಪ್ರಶಸ್ತಿ.

Mumbai News Desk

ಬಿರುವೆರ್‌ ಕಾಪು ಸೇವಾ ಸಮಿತಿ ವತಿಯಿಂದ ಆಟಿ ಕಷಾಯ ವಿತರಣೆ

Mumbai News Desk

ಸಸಿಹಿತ್ಲು ಶ್ರೀ ಭಗವತೀ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವಿಜೃಂಭಣೆಯ ಮುಷ್ಟಿ ಕಾಣಿಕೆ ಸಮರ್ಪಣೆ

Mumbai News Desk