September 6, 2026
Mumbai News Kannada
ಪ್ರಕಟಣೆ

ಬಿಲ್ಲವರ ಅಸೋಸಿಯೇಷನ್ ಭಾಯಂದರ್ ‌ ಸ್ಥಳೀಯ ಕಚೇರಿ:ಸೆ.13 ರಂದು ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತಿ ಆಚರಣೆ





ಭಾಯಂದರ್ ,ಸೆ.10- ಬಿಲ್ಲವ ಅಸೋಸಿಯೇಶನ್ ಇದರ ಭಾಯಂದರ್ ಸ್ಥಳೀಯ ಕಚೇರಿಯ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಉತ್ಸವವನ್ನು ಸೆ.13, ಶನಿವಾರ ಭಾಯಂದರ್ ಪೂರ್ವದ ಫಾಟಕ್ ಬಳಿಯ ಸೇಕ್ರೆಡ್ ಹಾರ್ಟ್ ಕ್ಯಾಥೋಲಿಕ್ ಚರ್ಚಿನ ಸಭಾಗ್ರಹದಲ್ಲಿ ಸಾಯಂಕಾಲ ಗಂಟೆ 3ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ಆಚರಿಸಲಾಗುವುದು.
ಅಂದು ಸಾಯಂಕಾಲ ಗಂಟೆ 3ಕ್ಕೆ ಬಿ.ಪಿ.(ಕ್ರಾಸ್)ರೋಡ್ ಸಾಯಿಬಾಬಾ ಮಂದಿರ ಮತ್ತು ರಾಧಾಕೃಷ್ಣ ಮಂದಿರದ ಸಮೀಪ, ಶೀತಲ್ ಶಾಪಿಂಗ್ ಸೆಂಟರ್ ಹಿಂದುಗಡೆ ಇರುವ (ಶ್ರೀ ಮಹಾದೇವ ನಗರ ವಸತಿ ಸಂಕೀರ್ಣ) ಬಿಲ್ಲವರ ಅಸೋಸಿಯೇಶನಿನ ಸ್ಥಳೀಯ ಕಚೇರಿಯಿಂದ ಗುರುಗಳ ಭಾವಚಿತ್ರ ಹಾಗೂ ಪೂಜಾ ಕಲಶದೊಂದಿಗೆ ಸಭಾಗ್ರಹಕ್ಕೆ ಮೆರವಣಿಗೆ ನಡೆಯಲಿದೆ.
ಪುರೋಹಿತ್ ಹರೀಶ್ ಶಾಂತಿಯಲ್ಲಿ ಪೌರೋಹಿತ್ಯದಲ್ಲಿ ಕಲಶ ಪ್ರತಿಷ್ಠೆ, ಗುರು ಪೂಜೆ ನಡೆಯಲಿದ್ದು ಜತೀಶ್ ಕುಂದರ್ ಬಳಗದವರಿಂದ ಭಜನೆ,ಶೈಲಾ ಹೆಗ್ಡೆ ನೇತೃತ್ವದಲ್ಲಿ ದಯಾನಂದ್ ಮೆಂಡನ್ ರವರ ಭಜನಾ ಮಕ್ಕಳಿಂದ ಕುಣಿತ ಭಜನೆ, ಓಂ ನಮೋ ನಾರಾಯಣಾಯ ಜಪ ಹಾಗೂ ಗಂಟೆ 8ಕ್ಕೆ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.
ಗುರುಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರು ಕೃಪೆಗೆ ಪಾತ್ರರಾಗಬೇಕಾಗಿ ಬಿಲ್ಲವರ ಅಸೋಸಿಯೇಷನ್ ಮುಂಬಯಿ ಪರವಾಗಿ ಗೌರವಾಧ್ಯಕ್ಷರು ಎಲ್ ವಿ ಅಮೀನ್, ಅಧ್ಯಕ್ಷರು ಹರೀಶ್ ಜಿ .ಅಮೀನ್, ಗೌ. ಪ್ರಧಾನ ಕಾರ್ಯದರ್ಶಿ ಹರೀಶ್ ಜಿ ಸಾಲಿಯಾನ್, ಗೌರವ ಕೋಶಾಧಿಕಾರಿ ರವಿ ಎಸ್ ಸನಿಲ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಕುಂತಲಾ ಕೆ .ಕೋಟ್ಯಾನ್, ಕೇಂದ್ರ ಕಚೇರಿ ಉಸ್ತುವಾರಿ ಮೋಹನ್ ಸಿ. ಕೋಟ್ಯಾನ್, ಕೇಂದ್ರ ಕಚೇರಿ ಪ್ರತಿನಿಧಿ ಗೋಪಾಲಕೃಷ್ಣ ಆರ್. ಸಾಲಿಯಾನ್,ಭಾಯಂದರ್ ಸ್ಥಳೀಯ ಕಚೇರಿಯ ಪರವಾಗಿ ಗೌ. ಕಾರ್ಯಾಧ್ಯಕ್ಷ ಪ್ರಮೋದ್ ಕೆ ಕೋಟ್ಯಾನ್, ಕಾರ್ಯಾಧ್ಯಕ್ಷ ಶೇಖರ್ ಆರ್ ಪೂಜಾರಿ, ಉಪಕಾರ್ಯ್ಯಾಧ್ಯಕ್ಷರುಗಳಾದ ಸುಧಾಕರ್ ಜಿ ಪೂಜಾರಿ, ಸತೀಶ್ ಜೆ ಪೂಜಾರಿ, ಕಾರ್ಯದರ್ಶಿ ಜ್ಯೋತಿ ಆರ್ ಪೂಜಾರಿ, ಕೋಶಾಧಿಕಾರಿ ಹರೀಶ್ ಎ ಸಾಲಿಯಾನ್ ಪಲಿಮಾರ್, ಜೊತೆ ಕಾರ್ಯದರ್ಶಿಗಳಾದ ಜಯಶ್ರೀ ಎಸ್ ಕರ್ಕೇರ,ದೀಪಕ್ ಎಸ್.ಕರ್ಕೇರ ಜೊತೆ ಕೋಶಾಧಿಕಾರಿಗಳಾದ ನಾಗೇಶ್ ಎನ್ ಪೂಜಾರಿ, ಅಶೋಕ್ ಟಿ. ಪೂಜಾರಿ, ಮುಖ್ಯ ಸಲಹೆಗಾರ ಚಿತ್ರಾಪು ಕೆ.ಎಮ್.ಕೋಟ್ಯಾನ್, ಅರ್ಚಕರಾದ ರಾಕೇಶ್ ಅಮೀನ್ ಮತ್ತು ಬಾಲಕೃಷ್ಣ ಸುವರ್ಣ ಹಾಗೂ ಎಲ್ಲಾ ಸಮಿತಿ ಸದಸ್ಯರು ವಿಶೇಷ ಆಮಂತ್ರಿತರು ಮಹಿಳಾ ವಿಭಾಗ, ಯುವ ವಿಭಾಗದವರು ವಿನಂತಿಸಿಕೊಂಡಿದ್ದಾರೆ



Related posts

ವರ್ಲಿ    ಶ್ರೀ ಸಿದ್ಧೇಶ್ವರ ಅನ್ನದಾತ ಅಪ್ಪಾಜಿ ಬೀಡು ಪೌಂಡೇಶನ್, ನ. 16 ರಂದು ಮಾಲೆ ಧಾರಣೆ , ಶಿಬಿರದಲ್ಲಿ ಅನ್ನದಾನ, ಪೂಜಾ ಕಾರ್ಯಗಳು ಪ್ರಾರಂಭ 

Mumbai News Desk

ಭಾಯಂದರ್: ಏಪ್ರಿಲ್ 12 ರಂದು ಶ್ರೀ ಮೂಕಾಂಬಿಕಾ ಶಾಂತದುರ್ಗಾ ದೇವಸ್ಥಾನದ ವಾರ್ಷಿಕ ಮಹಾಪೂಜೆ

Mumbai News Desk

ಕುಲಾಲ ಸಂಘ ಮುಂಬಯಿ, ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಮಹಿಳಾ ವಿಭಾಗ. ಅ. 4 ರಂದು ”ಆಟಿದ ಒಂಜಿ ಪೊರ್ಲು” ಕಾರ್ಯಕ್ರಮ.

Mumbai News Desk

ಶ್ರೀ ಉಮಾಮಹೇಶ್ವರಿ ದೇವಸ್ಥಾನ ಕಾಜುಪಾಡ, ಕುರ್ಲಾ (ಪ ) : ಅ.25ರಂದು ಸಂಪೂರ್ಣ ಶ್ರೀ ದೇವಿ ಮಹಾತ್ಮೆ ಯಕ್ಷಗಾನ

Mumbai News Desk

ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಸಾವರ್ಕರ್ ನಗರ್ -ಥಾಣೆ: ಅಕ್ಟೋಬರ್ 17ರಂದು ಮಾಸಿಕ ಸಂಕ್ರಮಣ ಪೂಜೆ

Mumbai News Desk

ಡೊಂಬಿವಲಿ ಮಹಾವಿಷ್ಣು ಮಂದಿರದ ಸುವರ್ಣ ಮಹೋತ್ಸವ: ಸೆ. 20ರಂದು ಮಕ್ಕಳ ಚಿತ್ರಕಲಾ ಸ್ಪರ್ಧೆ

Mumbai News Desk