30 C
Mumbai
April 24, 2026
Mumbai News Kannada
ಪ್ರಕಟಣೆ

ನ 26 : ಕರ್ನಾಟಕ ಸಂಘ ಪನ್ವೆಲ್. ಕರ್ನಾಟಕ ರಾಜ್ಯೋತ್ಸವ ಆಚರಣೆ





   ನವಿ ಮುಂಬಯಿ  ನ 23.  ಕರ್ನಾಟಕ ಸಂಘ ಪನ್ವೆಲ್ ನಲ್ಲಿ ತಾರೀಕು 26 /11 /2023  ರವಿವಾರ ಕರ್ನಾಟಕ ರಾಜ್ಯೋತ್ಸವದ ಆಚರಣೆಯನ್ನು ಸಂಘದ ಅಧ್ಯಕ್ಷರಾದ  ಭಾಸ್ಕರ್ ಶೆಟ್ಟಿ ಪದ್ಮ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಗುವುದು .

ಈ ಪ್ರಯುಕ್ತ ಅದೇ ದಿನ ಬೆಳಿಗ್ಗೆ 8:00 ಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಸಂಘದಲ್ಲಿ ರಕ್ತದಾನ ಶಿಬಿರವು ನೆರವೇರಲಿರುವುದು. ಸಂಜೆ 4:30 ಗಂಟೆಯಿಂದ ಸಂಘದ ಸಭಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ದಿನದ ಆಚರಣೆ ಕಾರ್ಯಕ್ರಮವು ನಡೆಯಲಿದ್ದು, ಸದಸ್ಯರಿಂದ ಹಾಗೂ ಸದಸ್ಯರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಪ್ರತಿಭಾವಂತರಿಗೆ ಪ್ರತಿಭಾ ಪುರಸ್ಕಾರ ಸನ್ಮಾನ  ಕಾರ್ಯಕ್ರಮ ನಡೆಯಲಿರುವುದು. 

ಸಭಾ ಕಾರ್ಯಕ್ರಮದಲ್ಲಿ ಸಭಾಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ  ಭಾಸ್ಕರ್ ಶೆಟ್ಟಿ ಅವರು ವಹಿಸಿಕೊಳ್ಳುವರು .ಮುಖ್ಯ ಅತಿಥಿಗಳಾಗಿ ಗೊರೆಗಾವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷರಾದ  ದೇವಲ್ಕುಂದ ಭಾಸ್ಕರ್ ಶೆಟ್ಟಿ ಅವರು ಹಾಗೂ ಕನ್ನಡ ಭವನ ಎಜುಕೇಶನ್ ಸೊಸೈಟಿಯ ಶಾಲೆಯ ಮುಖ್ಯೋಪಾದಾಯಿನಿ  ಅಮೃತ ಶೆಟ್ಟಿ ಅವರು ಉಪಸ್ಥಿತರಿರುವರು. ಜೊತೆಗೆ ಸಂಘದ ಕಾರ್ಯ ಧ್ಯಕ್ಷರಾಗಿರುವ  ನಗರ ಸೇವಕರಾದ  ಸಂತೋಷ್ .ಜಿ. ಶೆಟ್ಟಿಯವರು, ಸಂಘದ ಪದಾಧಿಕಾರಿಗಳು ಹಾಗೂ ಮಹಿಳಾ ವಿಭಾಗದ ಅಧ್ಯಕ್ಷ  ಶಶಿಕಲಾ ದಾಬ್ಕೆ ಅವರು ಉಪಸ್ಥಿತರಿರುವರು.

 ಇದೇ ಸಂದರ್ಭದಲ್ಲಿ ಸದಸ್ಯರೊಂದಿಗೆ ದೀಪಾವಳಿ ಹಬ್ಬದ ಆಚರಣೆಯ ಕಾರ್ಯಕ್ರಮವು ನಡೆಯಲ್ಪಡುತ್ತದೆ. ಕೊನೆಗೆ ಪ್ರೀತಿ ಭೋಜನದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಸಂಪೂರ್ಣ ಒಂದು ದಿನ ಪೂರ್ತಿಯ ಈ ಎಲ್ಲ ಕಾರ್ಯಕ್ರಮಕ್ಕೆ ಎಲ್ಲಾ ಸದಸ್ಯರು ಹಾಗೂ ಪರಿಸರದ ತುಳು ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಚಂದಗಾಣಿಸಿ ಕೊಡಬೇಕೆಂದು ಕರ್ನಾಟಕ ಸಂಘದ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ವಿನಂತಿಸಿರುತ್ತಾರೆ.



Related posts

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ನ. 12ರಂದು ಕಾಲಭೈರವ ಜಯಂತೋತ್ಸವ

Mumbai News Desk

ಮೈಸೂರು ಅಸೋಸಿಯೇಷನ್, ಮುಂಬೈ ನ.25 ರಂದು ಕನಕ ಜಯಂತಿ ಆಚರಣೆ

Mumbai News Desk

ಅ. 24ರಂದು ಮಾಲಾಡ್ ಪೂರ್ವ  ಓಂ ಶ್ರೀ ಸಾಯಿ ದುರ್ಗಾ ನಿತ್ಯಾನಂದ ಟ್ರಸ್ಟ್  ನವರಾತ್ರಿ ಪೂಜೆ 

Chandrahas

ಮಾ. 24: ಮಹಿಳಾ ದಿನಾಚರಣೆ ಅಂಗವಾಗಿ ಸ್ಟೇಫೈನ್ (Stay Fine) ಸೂಪರ್‌ಮಾರ್ಟ್‌ನಿಂದ ‘ನಾರಿ ಶಕ್ತಿ’ ಸನ್ಮಾನ ಮತ್ತು ಹಳದಿ-ಕುಂಕುಮ ಸಮಾರಂಭ, ಮಹಿಳೆಯರಿಗೆ ಆಕರ್ಷಕ ಉಡುಗೊರೆ

Mumbai News Desk

ಜ. 5, ತುಳು ಸಂಘ ಬೊರಿವಲಿ ಯುವ ವಿಭಾಗದ ವತಿಯಿಂದ ಮ್ಯಾರಥಾನ್

Mumbai News Desk

ಸ್ವಾಮಿ ನಿತ್ಯಾನಂದ ಮಂದಿರ ಬೊಯಿಸರ್. ಡಿ.27 ರಂದು 15 ನೆಯ ವಾರ್ಷಿಕ ಪ್ರತಿಷ್ಟಾಪನೋತ್ಸವ.

Mumbai News Desk