September 6, 2026
Mumbai News Kannada
ಪ್ರಕಟಣೆ

ಮುಂಬಯಿ: ವಡಾಲಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಇಂದು (ಮಾ. 22) ಶ್ರೀ ಮಹಾವೀರ ಕಾಲೇಜು ಹಳೆಯ ವಿದ್ಯಾರ್ಥಿಗಳ ವಿಶೇಷ ಸ್ನೇಹ ಮಿಲನ





ಮುಂಬಯಿಯ ವಡಾಲಾ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಶ್ರೀ ಮಹಾವೀರ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಹಾಗೂ ವಜ್ರ ಮಹೋತ್ಸವ ಸಂಘಟನಾ ಸಮಿತಿಯ ವಿಶೇಷ ಸ್ನೇಹ ಮಿಲನ ಕಾರ್ಯಕ್ರಮವು ಇಂದು ಸಂಜೆ 4ಗಂಟೆಗೆ ಜರುಗಲಿದೆ. ಹಳೆಯ ನೆನಪುಗಳನ್ನು ಮೆಲುಕು ಹಾಕುವ ಮತ್ತು ಬಾಂಧವ್ಯವನ್ನು ಮರುಸ್ಥಾಪಿಸುವ ಉದ್ದೇಶದಿಂದ ಹಾಗೂ 2026ರ ಏಪ್ರಿಲ್ ನಲ್ಲಿ ನಡೆಯಲಿರುವ ವಜ್ರ ಮಹೋತ್ಸವದ ಸಿದ್ಧತೆ ಬಗ್ಗೆ ಚರ್ಚಿಸಲು ಆಯೋಜಿಸಲಾಗಿರುವ ಈ ಸಮಾವೇಶದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳು ಹಾಗೂ ವಜ್ರ ಮಹೋತ್ಸವ ಸಂಘಟನಾ ಸಮಿತಿಯ ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಸುಚರಿತ ಶೆಟ್ಟಿ, ಪ್ರೊ. ಹರೀಶ್, ನಿರಂಜನ್ ರಾವ್ ಹಾಗೂ ಹರಿಪ್ರಸಾದ್ ನಾಯಕ್ ಅವರು ಉಪಸ್ಥಿತರಿರಲಿದ್ದಾರೆ. ಸಂಘಟನಾ ತಂಡದ ಪ್ರಮುಖರಾದ ಮೋಹನ್‌ದಾಸ್ ಶೆಟ್ಟಿ, ಸತೀಶ್ ಬಂಗೇರ ಹಾಗೂ ಮೋಹನ್ ಸುವರ್ಣ ಅವರ ನೇತೃತ್ವದಲ್ಲಿ ಕಾರ್ಯಕ್ರಮವು ಆಯೋಜನೆಗೊಂಡಿದ್ದು, ಇಂದು ಸಂಜೆ 4:00 ರಿಂದ 7:00 ರವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಾವೀರ ಕಾಲೇಜ್ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತ್ತೆ ಆಯೋಜಕರು ವಿನಂತಿಸಿದ್ದಾರೆ.



Related posts

ಎ. 12ರಂದು ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಪಾದುಕಾ ಪ್ರದಾನ, ಪಂಚವಟಿ ತಾಳಮದ್ದಳೆ ಹಾಗೂ ಸಮ್ಮಾನ

Mumbai News Desk

ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ವತಿಯಿಂದಮೇ 19 ರಂದು ತವರೂರಲ್ಲಿ ಧಾರ್ಮಿಕ ಮುಂದಾಳುಗಳಿಗೆ ಸನ್ಮಾನ

Mumbai News Desk

ಶ್ರೀ ಜಗದಂಬಾ ಕಾಲಭೈರವ ದೇವಸ್ಥಾನ ಜೋಗೇಶ್ವರಿ ಪೂರ್ವ : ಜ. 27ಕ್ಕೆ ವಾರ್ಷಿಕ ಮಹೋತ್ಸವದ ಸಂಭ್ರಮ:

Mumbai News Desk

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಇದರ ಡೊಂಬಿವಲಿ ಸ್ಥಳೀಯ ಸಮಿತಿಯ ವತಿಯಿಂದ ಸಮಾಜದ ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆ :

Mumbai News Desk

ಪಲಾವಾ ಕನ್ನಡಿಗರ ಫೌಂಡೇಶನ್ ಪಲಾವಾ, ಡೊಂಬಿವಲಿ : ನ. 30ಕ್ಕೆ 5ನೇ ವರ್ಷದ ಕನ್ನಡ ರಾಜ್ಯೋತ್ಸವ ಆಚರಣೆ

Mumbai News Desk

ಜ.17ರಿಂದ 19 ರ ತನಕ ಭುವಾಜಿ ರವೀಂದ್ರ ಶಾಂತಿ ಹಾಗೂ ತಂಡದವರಿಂದ 11ನೇ ವರ್ಷದ ತಿರುಪತಿ ಯಾತ್ರೆ: ಪುರಂದರದಾಸರ ಆರಾಧನಾ ಮಹೋತ್ಸವದಲ್ಲಿ ಸಹಭಾಗಿ

Mumbai News Desk