30.5 C
Mumbai
June 8, 2026
Mumbai News Kannada
ಸುದ್ದಿ

ಡಾ| ಆರ್ ಕೆ ಶೆಟ್ಟಿಯವರಿಗೆ ಎಲ್ಐಸಿ ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ





​ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಹಾಗೂ ಪ್ರಸಿದ್ಧ ಜೀವವಿಮಾ ಸಲಹೆಗಾರರಾದ ಇಸ್ಸಾರ್ ಫೈನಾನ್ಸಿಯಲ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆರ್. ಕೆ. ಶೆಟ್ಟಿ ಆಂಡ್ ಕಂಪನಿಯ ಆಡಳಿತ ನಿರ್ದೇಶಕರಾದ ಡಾ. ಆರ್. ಕೆ. ಶೆಟ್ಟಿ ಅವರಿಗೆ ಭಾರತೀಯ ಜೀವವಿಮಾ ನಿಗಮದಿಂದ (ಎಲ್ಐಸಿ) ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಸಾಧಕ ಗೌರವ ಪುರಸ್ಕಾರ ಲಭಿಸಿದೆ.

​ಭಾರತೀಯ ಜೀವವಿಮಾ ನಿಗಮದ ಕೇಂದ್ರ ಕಚೇರಿ ವತಿಯಿಂದ ಮುಂಬೈನ ನರಿಮಾನ್ ಪಾಯಿಂಟ್‌ನಲ್ಲಿರುವ ಯೋಗ ಕ್ಷೇಮ ಸಭಾಗೃಹದಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಗೌರವವನ್ನು ಪ್ರದಾನ ಮಾಡಲಾಯಿತು. ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನ ಅಧ್ಯಕ್ಷ ಆಲಿಸ್ಟೇರ್ ರಿಚರ್ಡ್ಸ್ ಸಹಿ ಹಾಕಿರುವ ಪ್ರಮಾಣಪತ್ರವನ್ನು ಎಲ್ಐಸಿ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಸಿದ್ಧಾರ್ಥ ಮೋಹಂತಿ ಅವರು ಡಾ. ಆರ್. ಕೆ. ಶೆಟ್ಟಿ ಅವರಿಗೆ ಹಸ್ತಾಂತರಿಸಿ ಅಭಿನಂದಿಸಿದರು.

​ಡಾ. ಆರ್. ಕೆ. ಶೆಟ್ಟಿ ಅವರು ಈ ಹಿಂದೆ ಗ್ಲೋಬಲ್ ಇಂಡಿಯನ್ ಅವಾರ್ಡ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಂದ ಗೌರವ, 2024ರ ಸಾಲಿನ ಬಂಟರತ್ನ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಠಿತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಈ ಸಾಧನೆಯ ಮೂಲಕ ಅವರು ಭಾರತೀಯ ಜೀವವಿಮಾ ನಿಗಮದಲ್ಲಿ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿ, ತಮ್ಮ ಹೆಸರನ್ನು ವಿಶ್ವದಾಖಲೆಯಲ್ಲಿ ದಾಖಲಿಸಿಕೊಂಡ ಭಾರತೀಯರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

​2025ರ ಜನವರಿ 20ರಂದು ಕೇವಲ 24 ಗಂಟೆಗಳ ಒಳಗೆ ದೇಶದಾದ್ಯಂತ ಒಟ್ಟು 5,88,107 ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡುವ ಮೂಲಕ ಅವರ ಸೇವೆ ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದೆ. ಒಂದೇ ದಿನದಲ್ಲಿ ಅತಿ ಹೆಚ್ಚು ಜೀವ ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿದ್ದು, ಸಂಸ್ಥೆಯ ಸಾಮರ್ಥ್ಯ ಮತ್ತು ವಿಶ್ವಾಸಾರ್ಹತೆಗೆ ಮತ್ತೊಂದು ಸಾಕ್ಷಿಯಾಗಿದೆ.

​ಶತಮಾನದ ಇತಿಹಾಸದಲ್ಲೇ ಎಂಡಿಆರ್‌ಟಿ ವಿಭಾಗೀಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೊದಲ ಭಾರತೀಯ ಡಾ. ಆರ್. ಕೆ. ಶೆಟ್ಟಿ ಅವರು 2025ರ ಆಗಸ್ಟ್‌ನಲ್ಲಿ ಚೀನಾದ ಮಕಾವುನಲ್ಲಿ ನಡೆದ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮ್ಮೇಳನದಲ್ಲಿ ಪ್ರಧಾನ ಭಾಷಣಕಾರರಾಗಿ ಆಯ್ಕೆಯಾಗಿ ವಿಶ್ವದ ಗಮನ ಸೆಳೆದಿದ್ದರು. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಸಾಧನ ಪುರಸ್ಕಾರ ಸೇರಿದಂತೆ ನೂರಾರು ಪ್ರಶಸ್ತಿ-ಗೌರವಗಳಿಗೆ ಅವರು ಪಾತ್ರರಾಗಿದ್ದಾರೆ.



Related posts

ರಂಗಚಾವಡಿ” ವರ್ಷದ ಹಬ್ಬ, ಹಿರಿಯ ರಂಗಕರ್ಮಿ ಲಯನ್ ಕಿಶೋರ್ ಡಿ.ಶೆಟ್ಟಿ ಅವರಿಗೆ ರಂಗಚಾವಡಿ ಪ್ರಶಸ್ತಿ ಪ್ರದಾನ* 

Mumbai News Desk

ವಿಧಾನ ಪರಿಷತ್ ಉಪಚುನಾವಣೆ – ಬಿಜಿಪಿಯ ಕಿಶೋರ್ ಕುಮಾರ್ ಬೊಟ್ಯಾಡಿ ಗೆಲುವು

Mumbai News Desk

ಕೇಂದ್ರ ಬಜೆಟ್ 2026 : ವಿಕಸಿತ ಭಾರತ – 2047ಕ್ಕೆ ಭದ್ರ ಬುನಾದಿ

Mumbai News Desk

ಪತ್ರಕರ್ತರ ಸಂಘದಿಂದ ಐಕಳ ಹರೀಶ್ ಶೆಟ್ಟಿ ಅವರಿಗೆ ಗೌರವ

Mumbai News Desk

ಪುತ್ತೂರು :ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಮೂರನೇ ಬಾರಿ ಗಡಿಪಾರು ಆದೇಶ!

Mumbai News Desk

ಶಿಕ್ಷಣತಜ್ಞ ಶ್ರೀಧರ್ ಸುವರ್ಣರಿಗೆ ‘ಭಾರತ ರತ್ನ ಐಕಾನಿಕ್ ಪ್ರಶಸ್ತಿ 2025’

Mumbai News Desk