September 6, 2026
Mumbai News Kannada
ಮುಂಬಯಿ

ಮೊಗವೀರ ಮಹಾಜನ ಸೇವಾ ಸಂಘ,ಬಗ್ವಾಡಿ ಹೋಬಳಿ ಮುಂಬಯಿ : ಸ್ನೇಹ ಸಮ್ಮಿಲನ.





 ನೂತನ ಅಧ್ಯಕ್ಷರಾದ ಸಂತೋಷ್ ಕೆ ಪುತ್ರನ್ ರಿಂದ ಸಂಘ, ಸಮಾಜದ ಅಭಿವೃದ್ಧಿಗೆ ಯೋಜನೆಗಳ ಘೋಷಣೆ.

ಮೊಗವೀರ ಮಹಾಜನ ಸೇವಾ ಸಂಘ (ಬಗ್ವಾಡಿ ಹೋಬಳಿ), ಮುಂಬಯಿ ಇದರ ಸ್ನೇಹ ಸಮ್ಮಿಲನ ಕಾರ್ಯಕ್ರಮ ಅ.12ರಂದು ಥಾಣೆ ಘೋಡ್‌ಬಂದರ್ ನ ಹೋಟೆಲ್ ಸಿಲ್ವೆರಾಡರ್  ಬ್ಯಾಂಕ್ವೆಟ್ ಹಾಲ್  ನಲ್ಲಿ ಸಂಘದ ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್  ಅವರ ಉಪಸ್ಥಿತಿಯಲ್ಲಿ, ನೂತನ ಅಧ್ಯಕ್ಷರಾದ ಸಂತೋಷ್ ಕೃಷ್ಣ ಪುತ್ರನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಗೌರವ ಪ್ರಧಾನ ಕಾರ್ಯದರ್ಶಿ ಗಣೇಶ್ ಮೆಂಡನ್ ಸ್ವಾಗತಿಸಿದರು. 

ಗೌರವ ಅಧ್ಯಕ್ಷರಾದ ಸುರೇಶ್ ಕಾಂಚನ್ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ ಅಕ್ಟೋಬರ್ 20ರಂದು 50 ವರ್ಷ ಪೂರ್ತಿಗೊಳ್ಳಲಿರುವ ನೂತನ ಅಧ್ಯಕ್ಷರಾದ ಸಂತೋಷ್ ಕೃಷ್ಣ ಪುತ್ರನ್ ಸಂಘದ ಜವಾಬ್ದಾರಿಯನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿ ಸಮಾಜ ಬಾಂಧವರಿಗೆ ಮಹತ್ತರವಾದ ಯೋಜನೆಗಳು ಅವರಿಂದ ರೂಪುಗೊಳ್ಳಲಿ ಇಂದು ಶುಭ ಹಾರೈಸಿದರು.

ಈ ವಿಶೇಷ ಸಂದರ್ಭದಲ್ಲಿ ಸಂತೋಷ ಕೃಷ್ಣ ಪುತ್ರನ್ ಅವರ ಪತ್ನಿ ಸುಚಿತ್ರಾ ಪುತ್ರನ್ ಮತ್ತು ಪರಿವಾರದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ 50ನೇ ವರ್ಷದ ಹುಟ್ಟುಹಬ್ಬದ ಆಚರಣೆಯ ಸಂಕೇತಿಕವಾಗಿ ಕೇಕ್ ಕತ್ತರಿಸಿ ಮಾತನಾಡಿದ ಸಂತೋಷ್ ಪುತ್ರನ್ ಒಗ್ಗಟ್ಟಿನಿಂದ  ನಾವೆಲ್ಲರೂ ಸಂಘವನ್ನು ಬಲಿಷ್ಠ ಗೊಳಿಸೋಣ ತಮಗೆಲ್ಲರಿಗೂ ಮಾರ್ಗದರ್ಶಕರಾಗಿರುವ ಡಾ. ಜಿ ಶಂಕರ್ ಮತ್ತು ಹಿರಿಯರ ಮಾರ್ಗದರ್ಶನದಲ್ಲಿ ಸಂಘವನ್ನು ಸಮಾಜವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸುವ. ಎಲ್ಲಾ ಪದಾಧಿಕಾರಿಗಳು ಸದಸ್ಯರು ಸಹಕಾರ ನೀಡಬೇಕು ಎಂದು ಮೊಗವೀರ ಮಹಾಜನ ಸೇವಾ ಸಂಘದ ಮುಂದಿನ ಮೂರು ವರ್ಷಗಳ ಕಾಲ ಸರಿಯಾದ ಮಾರ್ಗಸೂಚಿಯ  ತನ್ನ ಯೋಜನೆಗಳಾದ ಮಹಿಳಾ ಸಬಲೀಕರಣ, ವಿದ್ಯಾರ್ಥಿಗಳ ವೃತ್ತಿ ಮಾರ್ಗದರ್ಶನ, ಯುವಕರಿಗೆ ಉದ್ಯಮಶೀಲತೆ, ನಿಯಮಿತ ವಿಚಾರ ಸಂಕಿರಣಗಳು, ಕಾರ್ಯಾಗಾರಗಳು, ಸದಸ್ಯತ್ವಕ್ಕಾಗಿ ಸಮಾಲೋಚನಾ ಕಾರ್ಯಕ್ರಮಗಳು, ಆನ್‌ಲೈನ್ ಸದಸ್ಯತ್ವ ನೋಂದಣಿ, ಆರೋಗ್ಯ ಕಾರ್ಯಕ್ರಮ , ವಿಮೆ , ಸರ್ಕಾರಿ ಯೋಜನೆಗಳ ದಾಖಲಾತಿ, ಕೌಶಲ್ಯ ಅಭಿವೃದ್ಧಿ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಕಾರ್ಯಕ್ರಮ,ಸಂಘದ ವೆಬ್‌ಸೈಟ್ ಹಾಗೂ
 ಯುವ ವಿಭಾಗ ರೂಪಗೊಳ್ಳುವ ಬಗ್ಗೆ ತಿಳಿಸಿದರು.

ಗೌರವ ಕೋಶಾಧಿಕಾರಿ ನಾಗರಾಜ್ ಶ್ರೀಯಾನ್, ಉಪಾಧ್ಯಕ್ಷ ಮಹಾಬಲ ಕುಂದರ್, ಜೊತೆ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿ ನಾಯ್ಕ್ ಮತ್ತು ಅಶೋಕ್ ಮೆಂಡನ್,
ಜೊತೆ ಕೋಶಾಧಿಕಾರಿ ಪ್ರವೀಣ್ ನಾಯ್ಕ್,
ಕಾಂಚಿನೀ ಕಲಾಕೇಂದ್ರ ಹಾಗೂ ವಾಗ್ವರ್ಧಿನಿ ಸಭಾ ಕಾರ್ಯದರ್ಶಿ ಭಾಸ್ಕರ್ ಶ್ರೀಯಾನ್,
ಕ್ರೀಡಾ ಸಮಿತಿಯ ಕಾರ್ಯದರ್ಶಿಗಳಾದ ರಘುರಾಮ್ ಮೆಂಡನ್ ಮತ್ತು ಸುನಿಲ್ ಕುಂದರ್,
ಸೇವಾ ದಳದ ದಳಪತಿ ದಿನೇಶ್ ಮೊಗವೀರ,
ಹಾಗೂ ಆಡಳಿತ ಸಮಿತಿಯ ಸದಸ್ಯರುಗಳಾದ ರಾಜೇಂದ್ರ ಚಂದನ್, ಸುರೇಶ್ ತೋಳಾರ್, ಎನ್‌.ಎಚ್‌. ಬಗ್ವಾಡಿ, ರಾಘವೇಂದ್ರ ಮೊಗವೀರ, ಮಾದವ್ ಸುವರ್ಣ, ಉಮೇಶ್ ಮೊಗವೀರ, ಉದಯಕುಮಾರ್ ಪುತ್ರನ್, ರಾಘವೇಂದ್ರ ಚಂದನ್, ರಾಜೀವ್ ನಾಯ್ಕ್, ಮಂಜುನಾಥ ನಾಯ್ಕ್, ಮತ್ತು ಸತೀಶ್ ಶ್ರೀಯಾನ್ ಮತ್ತಿತರರು ಉಪಸ್ಥರಿದ್ದರು.

ಸಂತೋಷ್ ಕೃಷ್ಣ ಪುತ್ರನ್ ಅವರನ್ನು ಸಂಘದ ಗೌರವಾಧ್ಯಕ್ಷ ಸುರೇಶ್ ಕಾಂಚನ್, ಮಾಜಿ ಅಧ್ಯಕ್ಷರುಗಳಾದ ಗೋಪಾಲ್ ಪುತ್ರನ್, ಮಹಾಬಲ ಕುಂದರ್, ರಾಜು ಮೆಂಡನ್ ವಂಡ್ಸೆ, ಮತ್ತಿತರ ಮೊಗವೀರ ಮುಖಂಡರು ಅಭಿನಂದಿಸಿದರು.



Related posts

ಮಲಾಡ್ ಶ್ರೀ ಮಹಮ್ಮಾಯಿ  ದೇವಸ್ಥಾನದಲ್ಲಿ ಭಕ್ತಿ ಸಂಭ್ರಮದೊಂದಿಗೆ ದಸರಾ ಮಹೋತ್ಸವ ಸಂಪನ್ನ

Mumbai News Desk

ಬೈಂಗನ್ ವಾಡಿ, ಗೋವಂಡಿ ಶ್ರೀ ದುರ್ಗಾಪರಮೇಶ್ವರಿ ಮಾತಾ ಮಂದಿರ;ವಿಜೃಂಭಣೆಯ 45 ನೇ ವಾರ್ಷಿಕೋತ್ಸವ: ಕಲ್ಕುಡ -ಕಲ್ಲುರ್ಟಿ- ಗುಳಿಗ ದೈವಗಳ ಕೋಲ

Mumbai News Desk

ಬಿಲ್ಲವರ ಅಸೋಸಿಯೇಶನ್ ಮುಂಬೈ ಇದರ ಭಾಂಡುಪ್ ಸ್ಥಳೀಯ ಕಚೇರಿಯ ಸಂಯೋಜನೆಯಲ್ಲಿ ಬಾಬು ಶಿವ ಪೂಜಾರಿ ಅವರ “ಬಿಲ್ಲವರ ಗುತ್ತು” ಗ್ರಂಥದ ಮುಂಬಯಿ ಅವೃತಿ ಬಿಡುಗಡೆ.

Mumbai News Desk

ಬಿಲ್ಲವರ ಅಸೋಸಿಯೇಷನ್ ಮುಂಬೈ ಇದರ ಡೊಂಬಿವಲಿ ಸ್ಥಳೀಯ ಕಚೇರಿಯಲ್ಲಿ ಸಾಮೂಹಿಕ ಶನಿ ಪೂಜೆ ಮತ್ತು ತಾಳಮದ್ದಳೆ.

Mumbai News Desk

 ಅಂದೇರಿ ಮೊಗವೀರ ಭವನದಲ್ಲಿ ಯಕ್ಷ ಅಭಿಮಾನಿಗಳನ್ನು ರಂಜಿಸಿದ ಚಂದ್ರಾವಳಿ ವಿಲಾಸ’ ‘ಗದಾಯುದ್ಧ’ ಪೌರಾಣಿಕ ಯಕ್ಷಗಾನ,

Mumbai News Desk

ಜಿ ಎಸ್ ಬಿ ಸಭಾ, ಮುಲುಂಡ್, ಸಾಂಸ್ಕೃತಿಕ ಸ್ನೇಹ ಸಮ್ಮಿಲನ, ಪ್ರತಿಭಾವಂತ ಮಕ್ಕಳಿಗೆ ಪುರಸ್ಕಾರ

Mumbai News Desk