September 6, 2026
Mumbai News Kannada
ಪ್ರಕಟಣೆ

ತುಳು ಸಂಘ ಬೋರಿವಲಿ ವತಿಯಿಂದ ನ. 16ರಂದು ಸ್ವಚ್ಛತಾ ಅಭಿಯಾನ





ಮುಂಬಯಿ: ತುಳು ಸಂಘ ಬೋರಿವಲಿ 2010ರಲ್ಲಿ ಸ್ಥಾಪನೆಯಾಗಿ ಬೋರಿವಲಿ ಹಾಗೂ ಅದರ ಸುತ್ತಮುತ್ತಲಿನ ಹಿಂದುಳಿದ ಹಾಗೂ ಅಲ್ಪಸಂಖ್ಯಾತ ವರ್ಗಗಳ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದೆ. ಈ ಸಂಘವು ತನ್ನ “ಯುವ ತುಳು, ಬೋರಿವಲಿ” ಯುವ ವಿಭಾಗದ ಮೂಲಕ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿದೆ.

ನವೆಂಬರ್ 16ರಂದು (ಭಾನುವಾರ) ಬೆಳಿಗ್ಗೆ 8.00 ರಿಂದ 10.00 ಗಂಟೆಯವರೆಗೆ ಬೋರಿವಲಿ ಪಶ್ಚಿಮದ ಎಸ್.ವಿ. ರಸ್ತೆ ಪ್ರದೇಶದಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಮಹಾನಗರಪಾಲಿಕೆಯ ಸಹಯೋಗದಲ್ಲಿ ನಡೆಯಲಿದೆ.

ಈ ಅಭಿಯಾನದಲ್ಲಿ ರೋಟರಿ ಕ್ಲಬ್ ಆಫ್ ಬೋರಿವಲಿ, ಬೋರಿವಲಿ ಅಡ್ವೋಕೇಟ್ಸ್ ಬಾರ್ ಅಸೋಸಿಯೇಶನ್, ಮತ್ತು ಮುಂಬೈ ಮಾರ್ಚ್ ತಂಡ ಸೇರಿದಂತೆ ಅನೇಕ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಸುಮಾರು 500–600 ಸ್ವಯಂಸೇವಕರು ಭಾಗವಹಿಸಲಿದ್ದಾರೆ. ಭಾಗವಹಿಸುವ ಎಲ್ಲರಿಗೂ ಟಿ-ಶರ್ಟ್‌ಗಳು, ಗ್ಲೌಸ್‌ ಇತ್ಯಾದಿಗಳು, ಲಘು ಉಪಹಾರ ಮತ್ತು ಪ್ರಮಾಣಪತ್ರಗಳನ್ನು ವಿತರಿಸಲಾಗುತ್ತದೆ.

ಮಾನ್ಯ ಸಂಸದರು ಹಾಗೂ ಕೇಂದ್ರ ಮಂತ್ರಿ ಪಿಯೂಷ್ ಗೋಯಲ್ ಮತ್ತು ಶಾಸಕ ಸಂಜಯ ಉಪಾಧ್ಯಾಯ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನವೆಂಬರ್ 4ರಂದು ನಡೆದ ಪೂರ್ವಭಾವಿ ಸಭೆಯಲ್ಲಿ ಸಂಘದ ಅಧ್ಯಕ್ಷ ಹರೀಶ್ ಮೈಂದನ್, ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ, ಕೋಶಾಧಿಕಾರಿ ದಿವಾಕರ ಕರ್ಕೇರ, ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜೊತೆ ಕಾರ್ಯದರ್ಶಿ ತಿಲೋತ್ತಮ ವೈದ್ಯ, ಮಹಿಳಾ ಕಾರ್ಯದರ್ಶಿ ವಿಜಯಲಕ್ಷ್ಮಿ ದೇವಾಡಿಗ, ಅನಿಲ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಹಾಗೂ ಸ್ವಚ್ಛತೆಯ ಸಂದೇಶವನ್ನು ಹರಡಲು ತುಳು ಹಾಗೂ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ತುಳು ಸಂಘ ಬೋರಿವಲಿ ಪರವಾಗಿ ಅಧ್ಯಕ್ಷ ಗೌರವ ಅಧ್ಯಕ್ಷರಾದ ವಿರಾರ್ ಶಂಕರ್ ಶೆಟ್ಟಿ, ಹರೀಶ್ ಮೈಂದನ್ ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷ ನ್ಯಾ. ರಾಘವ ಎಂ. ಮಹಿಳಾ ಕಾಯಾಧ್ಯಕ್ಷೆ ಶೋಭಾ ಶೆಟ್ಟಿ ವಿನಂತಿಸಿದ್ದಾರೆ.



Related posts

ಅನಿತಾ ಪಿ. ತಾಕೊಡೆ ಅವರ ಕವನ ಸಂಕಲನದ ಹಸ್ತಪ್ರತಿಗೆ ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ

Mumbai News Desk

ಶ್ರೀಚಕ್ರ ಪೀಠ ಸುರಪೂಜಿತೆ ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ, ಮಾ  28 :ನಿಧಿ ಕುಂಭ ಪ್ರತಿಷ್ಠಾಪನ ಮಹೋತ್ಸವ .

Mumbai News Desk

ಅ 26 ,27: ಸಾಂತಾಕ್ರೂಜ್ ಪೂರ್ವದ ಶ್ರೀ ಪೇಜಾವರ ಮಠದಲ್ಲಿ ಕೃಷ್ಣ ಜಯಂತಿ ಉತ್ಸವ.

Mumbai News Desk

ಅಜ್ದೆಪಾಡ ಶ್ರೀ ಅಯ್ಯಪ್ಪ ದೇವಸ್ಥಾನ ಡೊಂಬಿವಲಿಯಲ್ಲಿ 3ನೇ ಸಹಸ್ರ ಕಲಶ ಅಷ್ಟಬಂಧ ಬ್ರಹ್ಮ ಕಲಶೋತ್ಸವದ ಸಂಭ್ರಮ

Mumbai News Desk

ಬಿಲ್ಲವ ಸಮಾಜ ಸೇವಾ ಸಂಘ (ರಿ) ಕೊಡೇರಿ: ನವೆಂಬರ್ 21ರಂದು ಕೊಡೇರಿಯಲ್ಲಿ ಹಕ್ರೆಮಠ ಶ್ರೀ ಜೈನಜಟ್ಟಿಗೇಶ್ವರ ದೇವರ 79ನೇ ವರ್ಷದ ಕಂಬಳೋತ್ಸವ

Mumbai News Desk

ವಿಶ್ವಬಂಟರ ಸಮ್ಮೇಳನದಲ್ಲಿ  ಸ್ವಾಮೀಜಿಗಳ ಸಮಾಗಮ.

Chandrahas